'ಭೈರತಿ ರಣಗಲ್' ಅವತಾರವೆತ್ತಿ ನರ್ತಕಿಗೆ ಬಂದ ಡಾಲಿ; ಬ್ಲ್ಯಾಕ್ ಅಂಡ್ ಬ್ಲ್ಯಾಕ್‌ನಲ್ಲಿ ಮಿಂಚಿದ 'ನಟರಾಕ್ಷಸ'

ರಾಜವಂಶದ ಅಭಿಮಾನಿಗಳಿಗೆ ಇವತ್ತು ಹಬ್ಬವೋ ಹಬ್ಬ. ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ನಟನೆಯ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾ 'ಭೈರತಿ ರಣಗಲ್' ಸಿನಿಮಾ ಇಂದು (ನವೆಂಬರ್ 14) ಥಿಯೇಟರ್‌ಗೆ ಲಗ್ಗೆ ಇಟ್ಟಿದೆ. ಬೆಳ್ಳಂಬೆಳಗ್ಗೆಯಿಂದಾನೇ ರಾಜ್ ಕುಟುಂಬದ ಅಭಿಮಾನಿಗಳು ಥಿಯೇಟರ್ ಮುಂದೆ ಜಮಾಯಿಸಿದ್ದಾರೆ.

'ಭೈರತಿ ರಣಗಲ್' ಸಿನಿಮಾದ ಫಸ್ಟ್ ಡೇ ಫಸ್ಟ್ ಶೋ ನೋಡಿ ಎಂಜಾಯ್ ಮಾಡಿದ್ದಾರೆ. ಶಿವಣ್ಣನ ಖದರ್‌, ಮ್ಯಾನರಿಸಂಗೆ ಮತ್ತೊಮ್ಮೆ ಫಿದಾ ಆಗಿದ್ದಾರೆ. 'ಮಫ್ತಿ' ಬಳಿಕ ಮತ್ತೆ ಶಿವಣ್ಣನನ್ನು ಅದೇ ಅವತಾರದಲ್ಲಿ ನೋಡಬೇಕು ಅಂತಿದ್ದ ಫ್ಯಾನ್ಸ್‌ ಕಾಲುಗಳಂತೂ ಇಂದು ಭೂಮಿ ಮೇಲೆ ನಿಲ್ಲುತ್ತಿಲ್ಲ. ಥಿಯೇಟರ್ ಒಳಗೆ ಚಾವಣೆನೇ ಕಿತ್ತು ಹೋಗುವ ಹಾಗೆ ಶಿವಣ್ಣನಿಗೆ ಶಿಳ್ಳೆಗಳನ್ನು ಹಾಕುತ್ತಿದ್ದಾರೆ.

Daali Dhananjay came to watch Shivarajkumar movie in Bhairathi Ranagal Avatar

ಕಿಕ್ಕಿರಿದು ಸೇರಿದ್ದ ಅಭಿಮಾನಿಗಳ ಮಧ್ಯೆ ಡಾಲಿ ಧನಂಜಯ್ 'ಭೈರತಿ ರಣಗಲ್' ಅವತಾರವೆತ್ತಿ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದಾರೆ. ಇದು ದೊಡ್ಮೆನೆ ಅಭಿಮಾನಿಗಳಿಗೆ ಮತ್ತಷ್ಟು ಕಿಕ್ ಕೊಟ್ಟಂತೆ ಆಗಿದೆ. ಫಸ್ಟ್ ಡೇ ಫಸ್ಟ್ ಶೋನಲ್ಲಿ 'ಭೈರತಿ ರಣಗಲ್' ಪ್ರೇಕ್ಷಕರ ಮನಸ್ಸನ್ನು ಗೆದ್ದಾಗಿದೆ. ಹಾಗೇ ಥಿಯೇಟರ್‌ಗೆ ಡಾಲಿ ಧನಂಜಯ್ ಕೊಟ್ಟ ಎಂಟ್ರಿ ಹೇಗಿತ್ತು? ಅನ್ನೋದನ್ನು ತಿಳಿಯಲು ಮುಂದೆ ಓದಿ.

ಶಿವಣ್ಣ 'ಮಫ್ತಿ' ಲುಕ್‌ಗೆ ಕೇವಲ ಅಭಿಮಾನಿಗಳು, ಸಿನಿಮಾ ಪ್ರೇಮಿಗಳಷ್ಟೇ ಫ್ಯಾನ್ ಅಲ್ಲ. ಡಾಲಿ ಧನಂಜಯ್ ಕೂಡ ದೊಡ್ಡ ಅಭಿಮಾನಿ ಅನ್ನೋದು ಇವತ್ತು ಮತ್ತೊಮ್ಮೆ ಪ್ರೂವ್ ಆಗಿದೆ. ಅದಕ್ಕೆ ಡಾಲಿ ಥೇಟ್ ಶಿವಣ್ಣನ 'ಭೈರತಿ ರಣಗಲ್' ಅವತಾರದಂತೆಯೇ ಡ್ರೆಸ್ ಮಾಡಿಕೊಂಡು, ಕಪ್ಪು ಬಣ್ಣ ಶರ್ಟ್ ಹಾಗೂ ಪಂಚೆಯುಟ್ಟು ಥಿಯೇಟರ್‌ಗೆ ಎಂಟ್ರಿ ಕೊಟ್ಟಿದ್ದರು. ಇದು ಅಭಿಮಾನಿಗಳಿಗೆ ಸಿಕ್ಕಾಪಟ್ಟೆ ಕಿಕ್ ಕೊಟ್ಟಿದೆ.

Daali Dhananjay came to watch Shivarajkumar movie in Bhairathi Ranagal Avatar

"ಭೈರತಿ ರಣಗಲ್.. ಮಫ್ತಿಯಲ್ಲಿ ಎಷ್ಟು ಚೆನ್ನಾಗಿ ಆ ಪಾತ್ರವನ್ನು ಎಂಜಾಯ್ ಮಾಡಿದ್ವಿ. ಅಷ್ಟೇ ಚೆನ್ನಾಗಿ ಆ ಪಾತ್ರದ ಇತಿಹಾಸವನ್ನು ನರ್ತನ್ ಅವರು ಕಟ್ಟಿದ್ದಾರೆ. ಅವರಿಗೆ ಥ್ಯಾಂಕ್ಸ್ ಹೇಳುತ್ತೇನೆ. ರವಿ ಬಸ್ರೂರು ಹೇಳಿದಂತೆ ಇಂಟರ್‌ವಲ್‌ನಲ್ಲಿ ಸ್ಕ್ರೀನ್ ಬೆಂಕಿ ಹೊತ್ತಿಕೊಳ್ಳುತ್ತೆ ಅಂತ. ಅದಕ್ಕೆ ನಾವು ಇವತ್ತು ಸಾಕ್ಷಿಯಾಗಿದ್ವಿ. ಅಷ್ಟು ಅದ್ಬುತವಾಗಿದೆ. ಭೈರತಿ ರಣಗಲ್ ಸೆಲೆಬ್ರೆಟ್ ಮಾಡುವವರಿಗೆ, ಶಿವಣ್ಣನನ್ನು ಸೆಲೆಬ್ರೆಟ್ ಮಾಡುವವರಿಗೆ ಹಬ್ಬದೂಟ" ಎಂದು ಸಿನಿಮಾ ವೀಕ್ಷಿಸಿದ ಬಳಿಕ ಹೇಳಿದ್ದಾರೆ.

"ಅಭಿಮಾನಿಗಳಲ್ಲಿ ಒಂದು ಮನವಿ. ಥಿಯೇಟರ್‌ನಲ್ಲಿ ಶೂಟ್ ಮಾಡಿ ಅದನ್ನು ಹಾಳು ಮಾಡಬೇಡಿ. ಥಿಯೇಟರ್‌ನಲ್ಲಿಯೇ ಬಂದು ಸಿನಿಮಾ ನೋಡಿ. ಇಡೀ ಥಿಯೇಟರ್‌ನಲ್ಲಿ ಶೇ.60ರಷ್ಟು ಮಂದಿ ಅದೇ ಕಾಸ್ಟ್ಯೂಮ್‌ನಲ್ಲಿ ಬಂದಿದ್ದಾರೆ. ನಾನು ಅದಕ್ಕೆ ಹಾಗೇ ಬಂದಿದ್ದೇನೆ. ಈ ಸಿನಿಮಾವನ್ನು ತುಂಬಾನೇ ಎಂಜಾಯ್ ಮಾಡಿದ್ದೇನೆ." ಎಂದು ಡಾಲಿ ಧನಂಜಯ್ ಹೇಳಿದ್ದಾರೆ.

More from Filmibeat

English summary
Daali Dhananjay came to watch Bhairathi Ranagal movie in black shirt and lungi;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X