Dhananjay Wedding: ಡಾಲಿ ಭಾವಿ ಪತ್ನಿಯ ಹುಟ್ಟೂರು ಯಾವುದು? ಧನಂಜಯ್ ಯಾವ ಸಿನಿಮಾ ಇಷ್ಟ?
ಸ್ಯಾಂಡಲ್‌ವುಡ್‌ನ ಮತ್ತೊಬ್ಬ ನಟ ಡಾಲಿ ಧನಂಜಯ್ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ಕಳೆದ ಎರಡು ತಿಂಗಳಿಂದ ಡಾಲಿ ಧನಂಜಯ್ ಮದುವೆಯ ಆಮಂತ್ರಣ ಪತ್ರಿಕೆಗಳನ್ನು ಹಂಚುವುದರಲ್ಲಿ ಬ್ಯುಸಿಯಾಗಿದ್ದಾರೆ. ಈಗಾಗಲೇ ಚಿತ್ರರಂಗದ ಗಣ್ಯರು, ರಾಜಕೀಯ ಮುಖಂಡರು ಹಾಗೂ ಮಠಾಧೀಶರಿಗೆ ಆಹ್ವಾನವನ್ನು ಕೊಡುತ್ತಿದ್ದಾರೆ. ಇನ್ನೇನು ಕೆಲವೇ ದಿನಗಳಲ್ಲಿ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ.
ಈ ಸಂದರ್ಭದಲ್ಲಿ ಡಾಲಿ ಧನಂಜಯ್ ಭಾವಿ ಪತ್ನಿಯನ್ನು ಮಾಧ್ಯಮಗಳಿಗೆ ಪರಿಚಯಿಸಿದ್ದಾರೆ. ಅವರೊಂದಿಗೆ ತಮ್ಮ ಲವ್ ಸ್ಟೋರಿ, ಮದುವೆ ಸಿದ್ಧತೆ, ಮುಂದಿನ ಯೋಜನೆಗಳನ್ನು ಹಂಚಿಕೊಂಡಿದ್ದಾರೆ. ಅಭಿಮಾನಿಗಳಿಗೆ ಮದುವೆ ಆಗಮಿಸಿ, ಆಶೀರ್ವಾದ ಮಾಡಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ. ತನ್ನ ಭಾವಿ ಪತ್ನಿಯ ಬಗ್ಗೆ ಮುದ್ದಾದ ಮಾತುಗಳನ್ನು ಆಡಿದ್ದಾರೆ.

ಇದೇ ವೇಳೆ ಧನಂಜಯ ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಡುತ್ತಿರುವ ಧನ್ಯತಾ ಕೂಡ ತಮ್ಮ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ತಮ್ಮ ಹುಟ್ಟೂರು, ಶಿಕ್ಷಣ, ಧನಂಜಯ ಅವರ ಯಾವ ಸಿನಿಮಾ ಇಷ್ಟ? ಡಾಲಿಯ ಸ್ವಭಾವ ಸೇರಿದಂತೆ ಹಲವು ಸಂಗತಿಗಳನ್ನು ಮಾಧ್ಯಮಗಳ ಜೊತೆ ಶೇರ್ ಮಾಡಿಕೊಂಡಿದ್ದಾರೆ. ಹಾಗಿದ್ದರೆ ಧನ್ಯತಾ ಅವರು ಎಲ್ಲಿಯವರು? ಅವರ ಶಿಕ್ಷಣ ಎಲ್ಲಾಯ್ತು? ಅನ್ನೋದನ್ನು ನೋಡುವುದಾರೆ.
ಡಾಲಿ ಧನಂಜಯ್ ವೈವಾಹಿಕ ಜೀವನಕ್ಕೆ ಕಾಲಿಡುತ್ತಿರುವ ಸುದ್ದಿ ಅವರ ಅಭಿಮಾನಿಗಳಿಗೆ ಖುಷಿ ಕೊಟ್ಟಿತ್ತು. ತಮ್ಮ ಅಭಿಮಾನಿಗಳಿಗೆ ಮದುವೆ ಆಗುತ್ತಿರುವ ವಿಷಯವನ್ನು ವಿಶಿಷ್ಟವಾಗಿ ಅನೌನ್ಸ್ ಮಾಡಿದ್ದರು. ಭಾವಿ ಪತ್ನಿ ಧನ್ಯತಾ ಅವರೊಂದಿಗೆ ಫೋಟೋಶೂಟ್ ಅನ್ನು ಮಾಡಿಸಿದ್ದರು. ಕವಿತೆಯೊಂದನ್ನು ಬರೆದು ಆ ಮೂಲಕ ತನ್ನ ಭಾವಿ ಪತ್ನಿಯ ವರ್ಣನೆ ಮಾಡಿದ್ದರು. ಧನ್ಯತಾ ವೃತ್ತಿಯಲ್ಲಿ ವೈದ್ಯರು. ಅದರಲ್ಲೂ ಪ್ರಸೂತಿ ತಜ್ಞರಾಗಿದ್ದಾರೆ.
ಧನ್ಯತಾ ಮೂಲತ: ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನಲ್ಲಿ ಮಲ್ಲಾಡಿಹಳ್ಳಿಯಲ್ಲಿರುವ ಶಿವಪುರ ಅನ್ನು ಚಿಕ್ಕ ಗ್ರಾಮ. ಇವರು ವೈದ್ಯಕೀಯ ಶಿಕ್ಷಣವನ್ನೆಲ್ಲ ಪಡೆದಿದ್ದು ಚಿತ್ರದುರ್ಗದಲ್ಲಿಯೇ. ಅಲ್ಲಿನ ಬಸವೇಶ್ವರ ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ ವೈದ್ಯಕೀಯ ಶಿಕ್ಷಣವನ್ನು ಪಡೆದಿದ್ದಾರೆ. ಸದ್ಯ ಪ್ರತಿಷ್ಠಿತ ಆಸ್ಪತ್ರೆಯೊಂದರಲ್ಲಿ ಪ್ರಸೂತಿ ತಜ್ಞರಾಗಿ ಕೆಲಸ ಮಾಡುತ್ತಿದ್ದಾರೆ. ಅವರೇ ಹೇಳಿಕೊಂಡಂತೆ ಇದೂವರೆಗೂ ಸುಮಾರು 500 ಅಧಿಕ ಹೆರಿಗೆಗಳನ್ನು ಮಾಡಿಸಿದ್ದಾರೆ.

"ನನ್ನದು ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನಲ್ಲಿ ಮಲ್ಲಾಡಿಹಳ್ಳಿಯಲ್ಲಿರುವ ಶಿವಪುರ ಅಂತ ಚಿಕ್ಕ ಊರು. ಎಂಬಿಬಿಎಸ್ ಮಾಡಿದ್ದು ಚಿತ್ರದುರ್ಗ, ಬಸವೇಶ್ವರ ಮೆಡಿಕಲ್ ಕಾಲೇಜ್‌ನಲ್ಲಿ. ಇಲ್ಲಿವರೆಗೂ ಸುಮಾರು 500ಕ್ಕೂ ಅಧಿಕ ಡಿಲೆವರಿ ಮಾಡಿಸಿರಬಹುದು. ನಾನು ಧನಂಜಯ್ ಅವರನ್ನು ಮದುವೆ ಆಗುತ್ತಿರುವುದು ನಮ್ಮ ಊರಿನವರಿಗೂ ಖುಷಿ ಕೊಟ್ಟಿದೆ" ಎಂದು ಧನಂಜಯ್ ಭಾವಿ ಪತ್ನಿ ಧನ್ಯತಾ ಮಾಧ್ಯಮಗಳಿಗೆ ತಮ್ಮ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
ಇನ್ನು ಸಿನಿಮಾ ಬಗ್ಗೆ ಅಷ್ಟೇನು ಆಸಕ್ತಿ ಇಲ್ಲ ಅನ್ನೋದನ್ನು ಒಪ್ಪಿಕೊಂಡಿದ್ದಾರೆ. ಆದರೂ, ಡಾಲಿ ಧನಂಜಯ್ ನಟಿಸಿದ 'ರತ್ನನ್ ಪ್ರಪಂಚ' ಸಿನಿಮಾ ಅಂದರೆ ಬಲು ಇಷ್ಟ ಎಂದು ಹೇಳಿಕೊಂಡಿದ್ದಾರೆ. ಡಾಲಿ ಧನಂಜಯ್ ಪರಿಚಯ ಆದ ದಿನಗಳಿಂದ ಸಿನಿಮಾ ಬಗ್ಗೆ ಹೆಚ್ಚು ಆಸಕ್ತಿ ಬೆಳೆಸಿಕೊಂಡಿದ್ದಾಗಿ ಹೇಳಿಕೊಂಡಿದ್ದಾರೆ. ಧನಂಜಯ್ ಹಾಗೂ ಧನ್ಯತಾ ಇದೇ ಫೆಬ್ರವರಿ 15 ಹಾಗೂ 16 ರಂದು ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ತಮ್ಮ ವಿವಾಹಕ್ಕೆ ಈಗಾಗಲೇ ಚಿತ್ರರಂಗದ ಗಣ್ಯರು, ರಾಜಕೀಯ ಮುಖಂಡರು ಸೇರಿದಂತೆ ಅಭಿಮಾನಿಗಳಿಗೂ ಆಹ್ವಾನ ನೀಡಿದ್ದಾರೆ. ಅಭಿಮಾನಿಗಳಿಗಾಗಿ ಬಂದು ನವ ಜೋಡಿಯನ್ನು ಆಶೀರ್ವಾದ ಮಾಡುವುದಕ್ಕೆ ಪ್ರತ್ಯೇಕ ವ್ಯವಸ್ಥೆಯನ್ನು ಮಾಡಲಾಗಿದೆ. ವಿದ್ಯಾಪತಿ ಅನ್ನುವ ದ್ವಾರದಿಂದ ಅವರಿಗೆ ಪ್ರವೇಶ ನೀಡಲಾಗಿದ್ದು, ಧನಂಜಯ್ ಮದುವೆಯನ್ನು ಅಲ್ಲಿ ಕಣ್ತುಂಬಿಕೊಳ್ಳಬಹುದು.


Click it and Unblock the Notifications











