21 ಗಂಟೆಯೊಳಗೆ ಕಾಣೆಯಾದ ಹುಡುಗಿ ಹುಡುಕುತ್ತಾರಾ ಡಾಲಿ ಧನಂಜಯ್?

ಸ್ಯಾಂಡಲ್‌ವುಡ್‌ನಲ್ಲಿ ಬ್ಯುಸಿ ಇರುವ ನಟರಲ್ಲಿ ಡಾಲಿ ಧನಂಜಯ್ ಕೂಡ ಒಬ್ಬರು. ಪ್ಯಾನ್ ಇಂಡಿಯಾ ಸಿನಿಮಾ 'ಪುಷ್ಪ' ಬಳಿಕವಂತೂ ಡಾಲಿ ಭಯಂಕರ ಬ್ಯುಸಿಯಾಗಿದ್ದಾರೆ. ಇನ್ನು ಅವರೇ ನಿರ್ಮಿಸಿ, ನಟಿಸಿದ್ದ 'ಬಡವ ರಾಸ್ಕಲ್' ಬಾಕ್ಸಾಫೀಸ್‌ನಲ್ಲಿ ಬೇಜಾನ್ ಸದ್ದು ಮಾಡಿತ್ತು. ಅದಕ್ಕೆ ಈಗ ಸದ್ದಿಲ್ಲದೆ ಸಿನಿಮಾವೊಂದರಲ್ಲಿ ನಟಿಸಿ ಮುಗಿಸಿದ್ದಾರೆ.

ಹೌದು.. ಧನಂಜಯ್ 'ಟ್ವೆಂಟಿ ಒನ್ ಅವರ್ಸ್' ಎಂಬ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಅದ್ಯಾವಾಗ ಶುರು ಮಾಡಿದರು? ಅದ್ಯಾವಾಗ ಮುಗಿಸಿದರೋ ಗೊತ್ತಿಲ್ಲ. "ಟ್ವೆಂಟಿ ಒನ್ ಅವರ್ಸ್" ಎಂಬ ಸಿನಿಮಾ ಮುಗಿದಿದ್ದು ಬಿಡುಗಡೆಗೆ ಸಜ್ಜಾಗಿದೆ. ಜೈಶಂಕರ್ ಪಂಡಿತ್ ನಿರ್ದೇಶಿಸಿದ್ದು, ಈ ಚಿತ್ರ ಇದೇ ತಿಂಗಳ 20ಕ್ಕೆ ರಿಲೀಸ್ ಕೂಡ ಆಗುತ್ತೆ.

'ಟ್ವೆಂಟಿ ಒನ್ ಅವರ್ಸ್' ಬಗ್ಗೆ ಏನಂತಾರೆ ಡಾಲಿ?

ಧನಂಜಯ್ ಪಕ್ಕಾ ಸಸ್ಪೆನ್ಸ್ ಸಿನಿಮಾ ಮಾಡಿ ಮುಗಿಸಿದ್ದಾರೆ. ಇದೇ ವೇಳೆ ಸಿನಿಮಾ ಬಗ್ಗೆ ಸಂತಸವನ್ನು ವ್ಯಕ್ತಪಡಿಸಿದ್ದಾರೆ. "ನಿನ್ನೆ ಈ ಸಿನಿಮಾ ಬಗ್ಗೆ ಪೋಸ್ಟ್ ಹಾಕಿದಾಗ, ಗೆಳೆಯರು ಯಾವ ಗ್ಯಾಪ್ ನಲ್ಲಿ ಈ ಸಿನಿಮಾ ಮಾಡಿದ್ರಿ ಅಂತ ಕೇಳಿದರು. ಮೊದಲ ಲಾಕ್‌ಡೌನ್ ಆದ ಬಳಿಕ ಮಾಡಿದ ಸಿನಿಮಾವಿದು." ಎಂದು ಸೀಕ್ರೆಟ್ ರಿವೀಲ್ ಮಾಡಿದ್ದಾರೆ.

Daali Dhananjay New Kannada Movie 21 hours Shooting Finished

"ಮಲೆಯಾಳಿ ಹುಡುಗಿಯೊಬ್ಬಳು ಬೆಂಗಳೂರಿನಲ್ಲಿ ಕಾಣೆಯಾಗುತ್ತಾಳೆ. ಆಕೆಯ ಹುಡುಕಾಟದ ಸುತ್ತ ನಡೆಯುವ ಕಥೆಯಿದು. ನಾನು ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತೇನೆ. ಕರ್ನಾಟಕ ಹಾಗೂ ಕೇರಳದಲ್ಲಿ ನಡೆಯುವ ಕಥೆಯಾಗಿದ್ದರಿಂದ ಸಂಭಾಷಣೆ ಎರಡೂ ಭಾಷೆಯಲ್ಲೂ ಇರುತ್ತೆ. ಮೊದಲ ಕರ್ನಾಟಕದಲ್ಲಿ ರಿಲೀಸ್ ಆಗುತ್ತೆ. ಆಮೇಲೆ ಕೇರಳದಲ್ಲಿ ರಿಲೀಸ್ ಆಗುತ್ತೆ. ಆದರೆ ಕರ್ನಾಟಕದಲ್ಲಿ ಇಡೀ ಸಿನಿಮಾ ಕನ್ನಡದಲ್ಲಿಯೇ ಸಂಭಾಷಣೆ ಇರುತ್ತೆ." ಎನ್ನುತ್ತಾರೆ ಧನಂಜಯ್.

Daali Dhananjay New Kannada Movie 21 hours Shooting Finished

ಅಮಿತಾಬ್ ಬಚ್ಚನ್, ಐಶ್ವರ್ಯಾ ರೈಗೆ ನಿರ್ದೇಶನ

ಈ ಸಿನಿಮಾದ ನಿರ್ದೇಶಕ ಜೈ ಶಂಕರ್ ಜಾಹೀರಾತುಗಳಿಗೆ ನಿರ್ದೇಶನ ಮಾಡಿದ್ದಾರೆ. ಬಾಲಿವುಡ್ ನಟರಿಂದ ಹಿಡಿದೆ ಅನೇಕ ಗಣ್ಯರಿಗೆ ನಿರ್ದೇಶನ ಮಾಡಿದ್ದಾರೆ. " ನಾನು ಮೂಲತಃ ಕರ್ನಾಟದವನು. ಆದರೆ ಕೇರಳದಲ್ಲಿದ್ದೀನಿ. ಅಮಿತಾಬ್ ಬಚ್ಚನ್, ಐಶ್ವರ್ಯ ರೈ ಸೇರಿದಂತೆ ಖ್ಯಾತ ನಟರು ಅಭಿನಯಿಸಿರುವ ಜಾಹೀರಾತುಗಳನ್ನು ನಿರ್ದೇಶಿಸಿದ್ದೇನೆ. ಹಿರಿತೆರೆಯಲ್ಲಿ ಇದು ಮೊದಲ ಚಿತ್ರ. ಸಸ್ಪೆನ್ಸ್ ಥ್ರಿಲ್ಲರ್ ಚಿತ್ರ. ಇಪ್ಪತ್ತೊಂದು ಗಂಟೆಗಳಲ್ಲಿ ನಡೆಯುವ ವಿಶೇಷ ಕಥೆಯಿದು." ಎನ್ನುತ್ತಾರೆ ಧನಂಜಯ್.

ಇನ್ನು ಧನಂಜಯ್ ಜೊತೆ 'ಓಲ್ಡ್ ಮಾಂಕ್' ಸಿನಿಮಾದಲ್ಲಿ ನಟಿಸಿದ್ದ ನಟ ಸುದೇವ್ ನಾಯರ್, ಹಾಗೂ ಟಿ.ಎನ್.ಸೀತಾರಾಮ್ ನಿರ್ದೇಶಿಸಿದ್ದ 'ಕಾಫಿತೋಟ'ದಲ್ಲಿ ಅಭಿನಯಿಸಿದ್ದ ರಾಹುಲ್ ಮಾಧವ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಬಾಲಕೃಷ್ಣ ಹಾಗೂ ಎನ್.ಎಸ್, ಅಭಿಷೇಕ್, ರುದ್ರಮೂರ್ತಿ, ಸುನೀಲ್ ಗೌಡ, ಹಾಗೂ ಪ್ರವೀಣ್ ಮಹದೇವ್ ಈ ಸಿನಿಮಾವನ್ನು ನಿರ್ಮಿಸಿದ್ದಾರೆ. ರುಪರ್ಟ್ ಫರ್ನಾಂಡಿಸ್ ಸಂಗೀತ ನೀಡಿದ್ರೆ, ತಿರುನವುಕ್ಕರಸು ಛಾಯಾಗ್ರಹಣ, ರಿಚರ್ಡ್ ಕೆವಿನ್ ಎಡಿಟಿಂಗ್ ಮಾಡಿದ್ದಾರೆ. ಬಹಳ ದಿನಗಳ ಬಳಿಕ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ರಿಲೀಸ್‌ಗೆ ರೆಡಿಯಾಗಿದೆ.

More from Filmibeat

English summary
Daali Dhananjay New Kannada Movie 21 hours Shooting Finished, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X