ಕೊಳ್ಳೆಗಾಲದಲ್ಲಿ ಅಂಬೇಡ್ಕರ್ ಪ್ರತಿಮೆ ಮುಂದೆ 'ಡಾಲಿ' ಭಾಷಣ: ಮತ್ತೆ ರಾಜಕೀಯದ ಗಮಲು?

ಸಾಮಾನ್ಯವಾಗಿ ಸಿನಿಮಾ ತಾರೆಯರು ಹೋರಾಟಗಳಲ್ಲಿ ತೊಡಗಿಸಿಕೊಳ್ಳುವುದು ವಿರಳ. ಅದರಲ್ಲೂ ಚುನಾವಣಾ ಪ್ರಚಾರಕ್ಕೆ ಹೋದರೂ, ರಾಜಕೀಯ ವ್ಯಕ್ತಿಯೊಂದಿಗೆ ಗುರುತಿಸಿಕೊಳ್ಳುವುದಕ್ಕೆ ಇಷ್ಟ ಪಡುವುದಿಲ್ಲ. ವಿವಾದಗಳಿಂದ ಸದಾ ದೂರ ಇರಲು ಬಯಸುತ್ತಾರೆ.

ಇನ್ನು ವ್ಯವಸ್ಥೆಯ ಬಗ್ಗೆ ಭಾಷಣ ಮಾಡುವುದು. ವಿರೋಧ ಕಟ್ಟಿಕೊಳ್ಳುವಂತಹ ಪರಿಸ್ಥಿತಿಯನ್ನು ತಂದುಕೊಳ್ಳೋದು ಕೆಲವೇ ಕೆಲವು ಮಂದಿ. ಆದರೆ, ಡಾಲಿ ಧನಂಜಯ್ ಇವರೆಲ್ಲರಿಗಿಂತ ಕೊಂಚ ವಿಭಿನ್ನವಾಗಿಯೇ ನಿಲ್ಲುತ್ತಾರೆ. ಇವರ ಪ್ರಬುದ್ಧ ಮಾತುಗಳು, ವಿಚಾರಧಾರೆಗಳು ಧನಂಜಯ್ ಮುಂದಿನ ನಡೆಯ ಬಗ್ಗೆ ಸುಳಿವು ನೀಡುತ್ತಿದೆ.

ಸದ್ಯ ಡಾಲಿ ಧನಂಜಯ್ ತಮ್ಮ ಸಿನಿಮಾ 'ಹೆಡ್‌ ಬುಷ್' ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಸಿನಿಮಾ ಬಿಡುಗಡೆಗೂ ಮುನ್ನ ಭರ್ಜರಿ ಪ್ರಚಾರ ಮಾಡುತ್ತಿದ್ದಾರೆ. ನಿನ್ನೆ (ಅಕ್ಟೋಬರ್ 10) ಧನಂಜಯ್ ಕೊಳ್ಳೆಗಾಲದಲ್ಲಿ ಪ್ರಚಾರ ಮಾಡುತ್ತಿದ್ದರು. ಈ ವೇಳೆ ಅಂಬೇಡ್ಕರ್ ಪ್ರತಿಮೆ ಮುಂದೆ ಡಾಲಿ ಆಡಿದ ಮಾತುಗಳನ್ನು ಕೇಳಿದ ಜನರು ರಾಜಕೀಯ ಪ್ರವೇಶ ಗುಮಾನಿ ವ್ಯಕ್ತಪಡಿಸಿದ್ದಾರೆ.

ಜೈ ಭೀಮ್ ಬ್ರಿಗೇಡ್ ಜೊತೆ ಡಾಲಿ

ಜೈ ಭೀಮ್ ಬ್ರಿಗೇಡ್ ಜೊತೆ ಡಾಲಿ

ಅಕ್ಟೋಬರ್ 10ರಂದು ಡಾಲಿ ಧನಂಜಯ್ ಕೊಳ್ಳೆಗಾಲದಲ್ಲಿ ತಮ್ಮ ಸಿನಿಮಾ 'ಹೆಡ್‌ ಬುಷ್' ಪ್ರಚಾರ ಮಾಡಿದ್ದಾರೆ. ಡಾಲಿ ನೋಡುವುದಕ್ಕೆ ಜನಸಾಗರವೇ ಸೇರಿದೆ. ಈ ವೇಳೆ ಜೈ ಭೀಮ್ ಬಿಗ್ರೇಡ್ ಜೊತೆ ಸೇರಿಕೊಂಡು ಧನಂಜಯ್ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಪ್ರತಿಮೆಗೆ ಹೂವಿನ ಹಾರ ಹಾಕಿದ್ದಾರೆ. ಈ ಸಂದರ್ಭದಲ್ಲಿ ಧನಂಜಯ್ ಜನರನ್ನು ಉದ್ದೇಶಿಸಿ ಭಾಷಣ ಮಾಡಿದ್ದರು. ಅದೇ ಭಾಷಣವೀಗ ವೈರಲ್ ಆಗುತ್ತಿದ್ದು, ಧನಂಜಯ್ ರಾಜಕೀಯ ಪ್ರವೇಶದ ಮಾಡುವ ಬಗ್ಗೆ ಗುಮಾನಿ ವ್ಯಕ್ತಪಡಿಸಿದ್ದಾರೆ.

ಅಸ್ತಿತ್ವದ ಕಿಡಿಕಾರಿದ ಡಾಲಿ

ಅಸ್ತಿತ್ವದ ಕಿಡಿಕಾರಿದ ಡಾಲಿ

ಡಾಲಿ ಧನಂಜಯ್ ಜೈ ಭೀಮ್ ಬ್ರಿಗೇಡ್ ಜೊತೆ ಜನರ ಅಸ್ತಿತ್ವದ ಪಾಠ ಮಾಡಿದ್ದಾರೆ. ಇದು ಧನಂಜಯ್ ರಾಜಕೀಯ ಪ್ರವೇಶದ ಬಗ್ಗೆ ಮತ್ತಷ್ಟು ಸುಳಿವು ಕೊಟ್ಟಿದೆ. ಈಗಾಗಲೇ ಧನಂಜಯ್ ರಾಜಕೀಯ ಪ್ರವೇಶ ಮಾಡಲಿದ್ದಾರೆ ಅನ್ನೋ ಮಾತುಗಳು ಕೇಳಿ ಬಂದಿದ್ದವು. ಆಗ ಡಾಲಿ ಈ ಮಾತನ್ನು ತಳ್ಳಿ ಹಾಕಿದ್ದರು. ಆದರೂ ಈಗ 'ಹೆಡ್ ಬುಷ್' ಪ್ರಚಾರದ ವೇಳೆ ಧನಂಜಯ್ ರಾಜಕೀಯ ಪ್ರವೇಶದ ಬಗ್ಗೆ ಮತ್ತೆ ಗುಲ್ಲೆದ್ದಿದೆ.

ಧನಂಜಯ್ ಪೊಲಿಟಿಕಲ್ ಎಂಟ್ರಿ ಯಾವಾಗ?

ಧನಂಜಯ್ ಪೊಲಿಟಿಕಲ್ ಎಂಟ್ರಿ ಯಾವಾಗ?

ಕೆಲವು ದಿನಗಳ ಹಿಂದಷ್ಟೇ ಡಾಲಿ ಧನಂಜಯ್ ರಾಕೀಯ ಪ್ರವೇಶದ ಬಗ್ಗೆ ಸುದ್ದಿ ಹಬ್ಬಿತ್ತು. ಧನಂಜಯ್ ಜೆಡಿಎಸ್ ಪಕ್ಷದಿಂದ ಅರಸೀಕೆರೆ ಆಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ. ಜೆಡಿಎಸ್ ಹಿರಿಯ ನಾಯಕ ಶಿವಲಿಂಗೇ ಗೌಡರು ಪಕ್ಷ ತೊರೆಯುತ್ತಿದ್ದು, ಆ ಜಾಗಕ್ಕೆ ಧನಂಜಯ್ ಕಣಕ್ಕಿಳಿಸುವ ಪ್ರಯತ್ನ ನಡೆಯುತ್ತಿದೆ ಎಂದು ವರದಿಯಾಗಿತ್ತು. ಇನ್ನೊಂದು ಕಡೆ ಧನಂಜಯ್ ಅಥವಾ ತಂದೆ ಚುನಾವಣೆ ಎದುರಿಸಲಿದ್ದಾರೆ ಎನ್ನಲಾಗಿತ್ತು. ಆದರೆ, ಧನಂಜಯ್ ಈ ಸುದ್ದಿ ಬಗ್ಗೆ ಪ್ರತಿಕ್ರಿಯೆ ನೀಡಿದ್ದರು. "ನಾನು shooting ಅಲ್ಲಿ ಎಷ್ಟು ಮುಳುಗಿ ಹೋಗಿದಿನಿ ಅಂದ್ರೆ, ನನಗೆ ಈ ತರ ಒಂದು news ಆಗಿದೆ ಅನ್ನೋದೆ ಗೊತ್ತಾಗಿರಲಿಲ್ಲ. ಈ ವಿಷಯಕ್ಕೂ ನನಗೂ , ರಾಜಕೀಯಕ್ಕೂ ಯಾವುದೇ ಸಂಬಂಧವಿಲ್ಲ. ಕಲಾವಿದನಾಗಿ ಜನ ಸ್ವೀಕರಿಸಿ ಅಪ್ಪಿದ್ದಾರೆ. ನೂರಾರು ಪಾತ್ರಗಳ ಮೂಲಕ ಅಭಿಮಾನಿ ದೇವರುಗಳ ರಂಜಿಸುವ ಕೆಲಸವಷ್ಟೇ ನನ್ನದು." ಎಂದು ಡಾಲಿ ಪ್ರತಿಕ್ರಿಯಿಸಿದ್ದರು.

'ಹೆಡ್ ಬುಷ್' ಅವತಾರದಲ್ಲಿ ಡಾಲಿ

'ಹೆಡ್ ಬುಷ್' ಅವತಾರದಲ್ಲಿ ಡಾಲಿ

ಡಾಲಿ ಧನಂಜಯ್ ನಟನೆ ಜೊತೆ ನಿರ್ಮಾಣದಲ್ಲೂ ಬ್ಯುಸಿಯಾಗಿದ್ದು ಗೊತ್ತೇ ಇದೆ. ಧನಂಜಯ್ ಎರಡನೇ ಬಾರಿಗೆ ಸಿನಿಮಾವನ್ನುನಿರ್ಮಾಣಕ್ಕೆ ಹಾಕಿದ್ದಾರೆ. ಅದುವೇ 'ಹೆಡ್‌ ಬುಷ್'. ಈ ಸಿನಿಮಾ ಈಗಾಗಲೇ ಬಿಡುಗಡೆಗೆ ರೆಡಿಯಾಗಿದ್ದು, ಅಕ್ಟೋಬರ್ 21ಕ್ಕೆ 'ಹೆಡ್‌ ಬುಷ್' ಸಿನಿಮಾ ಅದ್ಧೂರಿಯಾಗಿ ರಿಲೀಸ್ ಆಗಲಿದೆ. ಧನಂಜಯ್, ಯೋಗಿ, ರಘು ಮುಖರ್ಜಿ ಸೇರಿದಂತೆ ಸ್ಯಾಂಡಲ್‌ವುಡ್‌ನ ಸ್ಟಾರ್‌ ನಟರು ಈ ಸಿನಿಮಾದಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

More from Filmibeat

English summary
Daali Dhananjay Political Speech In Kollegal During Head Bush Promotion, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X