"ರೋಡಲ್ಲಿ ಫೋಟೋ ತೆಗೆಸಿಕೊಳ್ಳೋರೂ ಮದುವೆ ಯಾವಾಗ ಅಂತಾರೆ?"; ನಟ ಧನಂಜಯ್

ಡಾಲಿ ಧನಂಜಯ್ ಕನ್ನಡದ ಚಿತ್ರರಂಗದ ಬ್ಯುಸಿ ನಟರಲ್ಲಿ ಒಬ್ಬರು. ಸಿನಿಮಾದಲ್ಲಿ ನಟಿಸುವುದರ ಜೊತೆಗೆ ನಿರ್ಮಾಣದಲ್ಲಿಯೂ ಬ್ಯುಸಿಯಾಗಿದ್ದಾರೆ. ಇದರ ಜೊತೆ ಪರಭಾಷೆಯ ಸಿನಿಮಾಗಳಲ್ಲೂ ನಟಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಅಲ್ಲು ಅರ್ಜುನ್ ನಟನೆಯ 'ಪುಷ್ಪ 2' ಸಿನಿಮಾದಲ್ಲಿ ನಟಿಸಿ ಬಂದಿದ್ದಾರೆ.

'ಪುಷ್ಪ 2' ಅಂತಹ ದುಬಾರಿ ಬಜೆಟ್‌ನ ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ನೆಗೆಟಿವ್ ಶೇಡ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾ ಆಗಸ್ಟ್ 15ಕ್ಕೆ ವಿಶ್ವದಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗುತ್ತಿದೆ. ಆದರೆ, ಅದಕ್ಕೂ ಮುನ್ನ ಡಾಲಿ ಧನಂಜಯ್ ನಟಿಸಿದ ಕನ್ನಡ ಸಿನಿಮಾವೊಂದು ಬಿಡುಗಡೆಯಾಗಲಿದೆ ಅದುವೇ 'ಕೋಟಿ'.

Daali Dhananjay said he will marry when the movie Kotee gets success

ಕಲರ್ಸ್ ಕನ್ನಡದ ಮುಖ್ಯಸ್ಥರಾಗಿದ್ದ ಪರಮ್ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಡಾಲಿ ಅಭಿಮಾನಿಗಳಿಗೆ ಒಂದ್ಕಡೆ 'ಕೋಟಿ' ಸಿನಿಮಾ ರಿಲೀಸ್ ಆಗುತ್ತಿದೆ ಅನ್ನೋದು ಖುಷಿ. ಅದೇ ಇನ್ನೊಂದು ಕಡೆ ಇದೇ 'ಕೋಟಿ' ವೇದಿಕೆ ಮೇಲೆ ಮದುವೆ ಬಗ್ಗೆನೂ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಅದೇನು ಅಂತ ತಿಳಿಯಲು ಮುಂದೆ ಓದಿ.

ಡಾಲಿ ಧನಂಜಯ್ ಇತ್ತೀಚೆಗೆ ಎಲ್ಲಿಗೆ ಹೋದರೂ ಮದುವೆ ಬಗ್ಗೆನೇ ಪ್ರಶ್ನೆ ಮಾಡುತ್ತಿದ್ದರು. ಯಾರದ್ದೇ ಮದುವೆ ಹೋದರೂ ಧನಂಜಯ್ ಮದುವೆ ಬಗ್ಗೆ ಒಂದು ಪ್ರಶ್ನೆ ಇರುತ್ತಿತ್ತು. ಅದಕ್ಕೀಗ 'ಕೋಟಿ' ವೇದಿಕೆ ಮೇಲೆ ಡಾಲಿ ಧನಂಜಯ್ ಅಭಿಮಾನಿಗಳಿಗೆ ಮದುವೆ ಆಗುವ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

'ಕೋಟಿ' ಸಿನಿಮಾ ಕಾರ್ಯಕ್ರಮದ ವೇದಿಕೆ ಮೇಲೆ ಮದುವೆ ಬಗ್ಗೆ ಓಪನ್ ಆಗಿ ಮಾತಾಡಿದ್ದಾರೆ. " ವರ್ಷಗಳು ಉರುಳುತ್ತಲೇ ಇರುತ್ತವೆ. ಅದು ಹೋಗಿದ್ದು ಗೊತ್ತಾಗೋದೇ ಇಲ್ಲ. ಇತ್ತ ಸಿನಿಮಾದವರಿಗೆ ವಯಸ್ಸಾಗೋದೂ ಗೊತ್ತಾಗಲ್ಲ, ಸತ್ತು ಹೋಗೋದೂ ಗೊತ್ತಾಗಲ್ಲ. ಒಂದು ಸಿನಿಮಾ ಮಾಡಿ ಮುಗಿಸುವುದರ ಒಳಗೆ ಎರಡು ವರ್ಷ ಮುಗಿದೇ ಹೋಗಿರುತ್ತದೆ. ರೋಡಲ್ಲಿ ಫೋಟೋ ತೆಗೆಸಿಕೊಳ್ಳೋರು ಕೂಡ ಮದುವೆ ಯಾವಾಗ ಅಂತ ಕೇಳೋ ಹಾಗೆ ಆಗಿದೆ" ಎಂದು ಡಾಲಿ ವೇದಿಕೆ ತಮಾಷೆಯಾಗಿ ಪ್ರತಿಕ್ರಿಯೆ ನೀಡಿದ್ದಾರೆ.

ಇದರ ಜೊತೆಗೇನೆ 'ಕೋಟಿ' ಸಿನಿಮಾ ಗೆದ್ದರೆ ಪಕ್ಕಾ ಮದುವೆ ಆಗುವುದಾಗಿ ಪ್ರಮಾಣ ಮಾಡಿದ್ದಾರೆ. "ಹಾಗೇ ಸಿನಿಮಾ ಚೆನ್ನಾಗಿ ಆಗಿಲ್ಲ ಅಂದರೂ ಮದುವೆ ಆಗುತ್ತೇನೆ. ಯಾಕಂದರೆ, ತಾರಮ್ಮನೇ ನನಗೆ ಮದುವೆ ಮಾಡಿಸಿ ಬಿಡುತ್ತಾರೆ". ಇದೇ ವೇಳೆ 'ಕೋಟಿ' ಸಿನಿಮಾ ಹಿಟ್ ಆಗೇ ಆಗುತ್ತೆ ಎಂದು ಭರವಸೆ ಕೊಟ್ಟಿದ್ದಾರೆ. ಈ ಸಿನಿಮಾ ತುಂಬಾ ಚೆನ್ನಾಗಿ ಮೂಡಿ ಬಂದಿದೆ ಎಂದು ತಮ್ಮ ಅಭಿಮಾನಿಗಳಿಗೆ ಭರವಸೆ ಕೊಟ್ಟಿದ್ದಾರೆ.

ಪರಮ್ ಹಾಗೂ ಡಾಲಿ ಧನಂಜಯ್ ಕಾಂಬಿನೇಷನ್‌ನಲ್ಲಿ ಬಂದಿರೋ 'ಕೋಟಿ' ಸಿನಿಮಾ ಇದೇ ಜೂನ್ 14ಕ್ಕೆ ಬಿಡುಗಡೆಯಾಗುತ್ತಿದೆ. ಧನಂಜಯ್ ಜೊತೆ ಮೋಕ್ಷಾ ಕುಶಾಲ್ ಹೀರೊಯಿನ್ ಆಗಿ ನಟಿಸಿದ್ದು, ಸಿನಿಮಾ ಟ್ರೈಲರ್ ರಿಲೀಸ್ ಆಗಿದೆ. ಈ ಟ್ರೈಲರ್‌ಗೆ ಸಿನಿಪ್ರಿಯರು ಈಗಾಗಲೇ ಮೆಚ್ಚುಗೆ ಸೂಚಿಸಿದ್ದಾರೆ.

More from Filmibeat

English summary
Daali Dhananjay finally revealed when he would get married:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X