ನೋಡೋಕೆ ಕ್ಲಾಸ್.. ಕೈ ನೋಡಿದ್ರೆ ಮಾತ್ರ ಮಾಸ್; 'ಜೀಬ್ರಾ'ದಲ್ಲಿ ಡಾಲಿ ಖದರ್ ಹೇಗಿದೆ ನೋಡಿ!

ಡಾಲಿ ಧನಂಜಯ್ ಸಿನಿಮಾ ಅದ್ಯಾವಾಗ ಶುರುವಾಗುತ್ತೋ? ಅದ್ಯಾವಾಗ ಮುಗಿಯುತ್ತೋ ಗೊತ್ತೇ ಆಗುವುದಿಲ್ಲ. ಸೈಲೆಂಟ್ ಆಗಿಯೇ ಸಿನಿಮಾಗಳನ್ನು ಮಾಡಿ ಮುಗಿಸಿರುತ್ತಾರೆ. ಆ ಸಿನಿಮಾ ಪೋಸ್ಟರ್ ರಿಲೀಸ್ ಆದಾಗಲೋ, ಇಲ್ಲ ಸಿನಿಮಾದ ಟೈಟಲ್ ರಿವೀಲ್ ಆದಾಗಲೇ ಹೊಸ ಪ್ರಾಜೆಕ್ಟ್ ಬಗ್ಗೆ ಗೊತ್ತಾಗುತ್ತೆ. ಡಾಲಿ ಸದ್ದಿಲ್ಲದೆ ಮುಗಿಸಿದ ಸಿನಿಮಾವೊಂದು ಬಿಡುಗಡೆಗೆ ಸಜ್ಜಾಗಿದೆ. ಅದುವೇ 'ಜೀಬ್ರಾ'.

ಡಾಲಿ ಧನಂಜಯ್ ಮಲ್ಟಿಸ್ಟಾರರ್ ಸಿನಿಮಾ 'ಜೀಬ್ರಾ' ಬಿಡುಗಡೆಗೆ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಸದ್ದಿಲ್ಲದೆ ಸಿನಿಮಾವನ್ನು ಮುಗಿಸಿರುವ ಚಿತ್ರತಂಡ ನೇರವಾಗಿ ರಿಲೀಸ್ ಡೇಟ್ ಅನ್ನೇ ಅನೌನ್ಸ್ ಮಾಡಿ ಅಚ್ಚರಿಸಿ ಹುಟ್ಟಿಸಿದೆ. ಆದರೂ, ಧನಂಜಯ್ ಅಭಿಮಾನಿಗಳು ಖುಷಿಯಾಗಿದ್ದು, 'ಜೀಬ್ರಾ' ನೋಡುವುದಕ್ಕೆ ಉತ್ಸಾಹ ತೋರುತ್ತಿದ್ದಾರೆ. ಹಾಗಂತ ಇದು ಸ್ಟ್ರೈಟ್ ಕನ್ನಡ ಸಿನಿಮಾ ಅಲ್ಲ.

Daali Dhananjay Satyadev movie Zebra release date cast and crew update

ದೀಪಾವಳಿ ಹಬ್ಬಕ್ಕೆ 'ಜೀಬ್ರಾ' ರಿಲೀಸ್ ಮಾಡುತ್ತಿರುವುದಾಗಿ ಚಿತ್ರತಂಡ ಅನೌನ್ಸ್ ಮಾಡಿದೆ. ಇದು ಬಹುಬಾಷೆಯಲ್ಲಿ ಬಿಡುಗಡೆಯಾಗುತ್ತಿದ್ದು, ಮೂಲತ: ತೆಲುಗಿನಲ್ಲಿ ನಿರ್ಮಾಣಗೊಂಡಿದೆ. ಹೀಗಾಗಿ ತೆಲುಗಿನ ಜೊತೆಗೆ ಕನ್ನಡ, ತಮಿಳು, ಮಲಯಾಳಂ ಭಾಷೆಯಲ್ಲಿ ಸಿನಿಮಾ ರಿಲೀಸ್ ಮಾಡಲಾಗುತ್ತಿದೆ. ಅಕ್ಟೋಬರ್ 31ಕ್ಕೆ ಅದ್ಧೂರಿಯಾಗಿ ಸಿನಿಮಾ ರಿಲೀಸ್ ಆಗುತ್ತಿದೆ.

ಈ ಸಿನಿಮಾದಲ್ಲಿ ಇಬ್ಬರು ಹೀರೋ. ಕನ್ನಡದಿಂದ ಡಾಲಿ ಧನಂಜಯ್ ಹೀರೊ ಆಗಿದ್ದರೆ, ತೆಲುಗಿನ ನಟ ಸತ್ಯದೇವ್ ಮತ್ತೊಬ್ಬ ಹೀರೋ. ಇವರೊಂದಿಗೆ ಸುನೀಲ್, ಹಾಸ್ಯ ನಟ ಸತ್ಯ, ತಮಿಳಿನ ಸತ್ಯರಾಜ್, ಪ್ರಿಯಾ ಭವಾನಿ ಶಂಕರ್ ಹಾಗೇ ಹಾಲಿವುಡ್‌ ನಟಿ ಜೆನ್ನಿಫರ್ ಪಿಕ್ಕಿನಾಟೊ ಪ್ರಮುಖವಾಗಿ ಮೋಷನ್ ಪೋಸ್ಟರ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಪ್ರಿಯರಿಗೆ ಈ ಪೋಸ್ಟರ್ ವಿಶೇಷ ಅಂತ ಅನಿಸಿದ್ದು, ಚಿತ್ರತಂಡ ಪ್ರಚಾರವನ್ನು ಆರಂಭಿಸಿದೆ.

'ಜೀಬ್ರಾ' ಮೋಷನ್ ಪೋಸ್ಟರ್ ನೋಡಿದರೆ, ಇದೊಂದು ಕ್ರೈಂ ಡ್ರಾಮ ಅನ್ನೋದು ಮೇಲ್ನೋಟಕ್ಕ ಹೇಳಬಹುದು. ಚೆಸ್ ಗೇಮ್ , ಕಾಯಿನ್ ಫ್ಲಿಪ್ಪಿಂಗ್, ಕರೆನ್ಸಿ ನೋಟುಗಳು ಮತ್ತು ಫ್ಲೈ ಓವರ್‌ನಿಂದ ಕಾರ್ ಇಳಿಯುವ ದೃಶ್ಯಗಳು ಗಮನ ಸೆಳೆಯುತ್ತಿವೆ. ಕ್ರಿಯೆಟಿವಿಟಿ ಆಗಿ ಮೋಷನ್ ಪೋಸ್ಟರ್ ಡಿಸೈನ್ ಮಾಡಿದ್ದು, ಜೀಬ್ರಾ ಸಿನಿಮಾವನ್ನು ಈಶ್ವರ್ ಕಾರ್ತಿಕ್ ಡೈರೆಕ್ಷನ್ ಮಾಡಿದ್ದಾರೆ. ಕ್ರೈಂ ಮತ್ತು ಥ್ರಿಲ್ಲರ್ ಪ್ರಿಯರಿಗೆ ಈ ಸಿನಿಮಾ ಇಷ್ಟ ಆಗಬಹುದೆಂದು ನಿರೀಕ್ಷೆ ಮಾಡಲಾಗಿದೆ.

'ಕೆಜಿಎಫ್', 'ಸಲಾರ್' ಕ್ಯಾತಿಯ ರವಿ ಬಸ್ರೂರು ಈ ಸಿನಿಮಾಗೆ ಸಂಗೀತ ನೀಡುತ್ತಿದ್ದಾರೆ. ಎಸ್‌ಎನ್ ರೆಡ್ಡಿ, ಎಸ್ ಪದ್ಮಜಾ, ಬಾಲ ಸುಂದರಂ ಮತ್ತು ದಿನೇಶ್ ಸುಂದರಂ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಸತ್ಯ ಪೊನ್ಮಾರ್ ಅವರ ಛಾಯಾಗ್ರಹಣ, ಅನಿಲ್ ಕ್ರಿಶ್ ಎಡಿಟಿಂಗ್, ಮೀರಾಖ್ ಅವರ ಸಂಭಾಷಣೆ ಈ ಸಿನಿಮಾದಲ್ಲಿದೆ. ಅಶ್ವಿನಿ ಮುಲ್ಪುರಿ, ಗಂಗಾಧರ ಬೊಮ್ಮರಾಜು ಕಾಸ್ಟ್ಯೂಮ್ ಡಿಸೈನ್ ಮಾಡಿದ್ದಾರೆ.

ಡಾಲಿ ಧನಂಜಯ್ ಕೈಯಲ್ಲಿ ಹಲವು ಸಿನಿಮಾಗಳಿವೆ. 'ಜೀಬ್ರಾ' ಮುಂದಿನ ತಿಂಗಳು ರಿಲೀಸ್ ಆಗುತ್ತಿದ್ದಾರೆ. 'ಅಣ್ಣ From Mexico' ಸಿನಿಮಾದ ಚಿತ್ರೀಕರಣ ನಡೆಯುತ್ತಿದೆ. ಕೆಆರ್‌ಜಿ ಸ್ಟುಡಿಯೋ ನಿರ್ಮಿಸುತ್ತಿರುವ 'ಉತ್ತರಕಾಂಡ' ಶೂಟಿಂಗ್ ಆರಂಭ ಆಗಿದೆ. ಹಾಗೇ 'ನಾಡಪ್ರಭು ಕೆಂಪೇಗೌಡ', 'ಜಿಂಗೋ' ಸಿನಿಮಾ ಅನೌನ್ಸ್ ಆಗಿದೆ. 'ಪುಷ್ಪ 2' ರಿಲೀಸ್ ಆಗಬೇಕಿದೆ. ಇದರೊಂದಿಗೆ ತಾವೇ ನಿರ್ಮಿಸುತ್ತಿರುವ ಸಿನಿಮಾ ಕೂಡ ನಡೆಯುತ್ತಿದೆ. ಸದ್ಯಕ್ಕೆ ಡಾಲಿ ಸಿನಿಮಾ 'ಜೀಬ್ರಾ' ದಕ್ಷಿಣ ಭಾರತದ ನಾಲ್ಕು ಪ್ರಮುಖ ಭಾಷೆಗಳಲ್ಲಿ ರಿಲೀಸ್ ಆಗಲಿದೆ.

More from Filmibeat

English summary
Daali Dhananjay, Satyadev movie Zebra release date cast and crew update:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X