ಡಾಲಿ ಧನಂಜಯ್ ದಿಢೀರನೆ ಅಭಿಷೇಕ್ ಅಂಬರೀಶ್ ಭೇಟಿಯಾಗಿದ್ದರ ಗುಟ್ಟೇನು?

ದುನಿಯಾ ಸೂರಿ ನಿರ್ದೇಶನದ ಸಿನಿಮಾ ರಗಡ್ ಆಗಿರುತ್ತೆ ಅಂತ ಗೆಸ್ ಮಾಡದೆ ಹೇಳಬಹುದು. ಅದಕ್ಕೆ ಸ್ಯಾಂಡಲ್‌ವುಡ್ ಮಂದಿ ಪ್ರೀತಿಯಿಂದ ಸುಕ್ಕಾ ಸೂರಿ ಅಂತ ನಾಮಕರಣ ಮಾಡಿದ್ದಾರೆ. ಇದೂವರೆಗೂ ಸೂರಿ ನಿರ್ದೇಶಿಸಿದ ಸಿನಿಮಾಗಳು ಪ್ರೇಕ್ಷಕರಿಗೆ 'ರಾ' ಫೀಲ್ ಕೊಟ್ಟಿವೆ.

ಸದ್ಯ ಸೂರಿ ಸದ್ದಿಲ್ಲದೆ ತಮ್ಮ ಪಾಡಿಗೆ ತಾವು ಶೂಟಿಂಗ್ ಮಾಡುತ್ತಿದ್ದಾರೆ. ಅಭಿಷೇಕ್ ಅಂಬರೀಶ್ ನಟಿಸುತ್ತಿರುವ 'ಬ್ಯಾಡ್ ಮ್ಯಾನರ್ಸ್' ಸಿನಿಮಾದಲ್ಲಿ ಸೂರಿ ಬ್ಯುಸಿಯಾಗಿದ್ದಾರೆ. ಅಂದ್ಹಾಗೆ 'ಬ್ಯಾಡ್ ಮ್ಯಾನರ್ಸ್‌' ಸಿನಿಮಾ ಕೂಡ ರಗಡ್‌ ಫೀಲ್‌ನಲ್ಲಿರುತ್ತೆ ಎನ್ನುವುದನ್ನು ಸೂರಿ ಫಸ್ಟ್ ಲುಕ್‌ನಲ್ಲಿ ಹೇಳಿದ್ದಾಗಿದೆ.

ರೆಬೆಲ್ ಸ್ಟಾರ್ ಪುತ್ರ ಅಭಿಷೇಕ್ ಹಾಗೂ ಸೂರಿ ಇವರಿಬ್ಬರ ಮೊದಲ ಕಾಂಬಿನೇಷನ್ ಇದು. ಹೀಗಾಗಿ 'ಬ್ಯಾಡ್ ಮ್ಯಾನರ್ಸ್' ಸಿನಿಮಾ ಬಗ್ಗೆ ಕುತೂಹಲ ದುಪ್ಪಟ್ಟಾಗಿದೆ. ಸಾಲದ್ದಕ್ಕೆ ಡಾಲಿ ಧನಂಜಯ್ ಇದೇ ಸಿನಿಮಾ ಸೆಟ್ಟಿನಲ್ಲಿ ಕಾಣಿಸಿಕೊಂಡಿದ್ದಾರೆ. ಅಸಲಿಗೆ ಧನಂಜಯ್ ಈ ಸಿನಿಮಾ ಸೆಟ್ಟಿಗೆ ಹೋಗಿದ್ಯಾಕೆ? ಅನ್ನೋ ಕುತೂಹಲ ಎಲ್ಲರನ್ನೂ ಕಾಡುತ್ತಿದೆ. ಹಾಗಿದ್ದರೆ ಭೇಟಿ ಕೊಟ್ಟಿದ್ಯಾಕೆ? ಅಂತ ತಿಳಿಯಲು ಮುಂದೆ ಓದಿ.

ಡಾಲಿ-ಅಭಿಷೇಕ್ ಭೇಟಿಯ ಗುಟ್ಟೇನು?

ಡಾಲಿ-ಅಭಿಷೇಕ್ ಭೇಟಿಯ ಗುಟ್ಟೇನು?

'ಬ್ಯಾಡ್ ಮ್ಯಾನರ್ಸ್' ಸಿನಿಮಾದ ಶೂಟಿಂಗ್ ಮೈಸೂರಿನಲ್ಲಿ ನಡೆಯುತ್ತಿದೆ. 20 ದಿನ ಕೊನೆಯ ಹಂತದ ಚಿತ್ರೀಕರಣ ಶುರುವಾಗಿದೆ. ಸೂರಿ ಟೇಸ್ಟ್‌ನಂತೆಯೇ ರಗಡ್ ಜಾಗದಲ್ಲಿ 'ಬ್ಯಾಡ್ ಮ್ಯಾನರ್ಸ್ ಚಿತ್ರೀಕರಣ ನಡೆಯುತ್ತಿದೆ. ಈ ಮಧ್ಯೆ ಸೆಟ್ಟಿಗೆ ಡಾಲಿ ಧನಂಜಯ್ ವಿಶೇಷ ಎಂಟ್ರಿ ಕೊಟ್ಟಿದ್ದಾರೆ. ಇದು ಎಲ್ಲರಲ್ಲೂ ಅಚ್ಚರಿ ಮೂಡಿಸಿತ್ತು. ಸಿನಿಮಾ ಸೆಟ್ಟಿಗೆ ಧನಂಜಯ್ ಸೌಜನ್ಯದ ಭೇಟಿ ನೀಡಿದ್ದಾರೆ. ಡಾಲಿಯ ಗುರುಗಳು ಸೂರಿ ನಿರ್ದೇಶಿಸುತ್ತಿರುವ ಸಿನಿಮಾ ಆಗಿದ್ದು, ಇದೂವರೆಗೂ ಸೆಟ್ಟಿಗೆ ಭೇಟಿ ನೀಡಿರಲಿಲ್ಲ. ಈ ಕಾರಣಕ್ಕೆ ವಿಸಿಟ್ ಹಾಕಿದ್ದಾರೆ ಎನ್ನಲಾಗಿದೆ.

130 ದಿನ ಶೂಟಿಂಗ್ ನಡೆದಿದೆ

130 ದಿನ ಶೂಟಿಂಗ್ ನಡೆದಿದೆ

'ಬ್ಯಾಡ್ ಮ್ಯಾನರ್ಸ್' ಸಿನಿಮಾವನ್ನು ಇದೂವರೆಗೂ ದುನಿಯಾ ಸೂರಿ ಸುಮಾರು 130 ದಿನಗಳ ಕಾಲ ಶೂಟಿಂಗ್ ಮಾಡಿದ್ದಾರೆ ಎನ್ನಲಾಗಿದೆ. ಇನ್ನೂ 20 ದಿನದ ಶೂಟಿಂಗ್ ಬಾಕಿ ಉಳಿದಿದ್ದು, ಕೊನೆಯ ಹಂತದ ಚಿತ್ರೀಕರಣವನ್ನು ಮಾಡುತ್ತಿದ್ದಾರೆ. ಈ ಕಾರಣಕ್ಕೆ ಧನಂಜಯ್ ಮೈಸೂರಿಗೆ ಭೇಟಿ ನೀಡಿ, ಸಿನಿಮಾ ತಂಡದೊಂದಿಗೆ ಕೆಲ ಕಾಲ ಮಾತುಕತೆ ಮಾಡಿದ್ದಾರೆ. ಜೊತೆಗೆ ಚಿತ್ರತಂಡಕ್ಕೆ ಶುಭ ಹಾರೈಸಿ ಬಂದಿದ್ದಾರೆ.

ಇದು ಅಂಬಿ 2ನೇ ಸಿನಿಮಾ

ಇದು ಅಂಬಿ 2ನೇ ಸಿನಿಮಾ

ಮೊದಲ ಸಿನಿಮಾ 'ಅಮರ್' ಬಳಿಕ ಅಭಿಷೇಕ್ ಅಂಬರೀಶ್ ಅಭಿನಯಿಸುತ್ತಿರುವ ಎರಡನೇ ಸಿನಿಮಾವಿದು. ಪಕ್ಕಾ ಲವರ್‌ ಬಾಯ್ ಆಗಿ ಕಾಣಿಸಿಕೊಂಡಿದ್ದ ಅಭಿಷೇಕ್ ಎರಡನೇ ಸಿನಿಮಾದಲ್ಲಿ ಆಕ್ಷನ್ ಹೀರೊ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಖಾಕಿ ತೊಟ್ಟು ಪೊಲೀಸ್ ಅಧಿಕಾರಿಯಾಗಿ ತೆರೆಮೇಲೆ ಘರ್ಜಿಸಲಿದ್ದಾರೆ. ಹೀಗಾಗಿ 'ಬ್ಯಾಡ್ ಮ್ಯಾನರ್ಸ್' ಈ ವರ್ಷದ ಪ್ರಮುಖ ಸಿನಿಮಾಗಳಲ್ಲಿ ಒಂದಾಗಬಹುದು.

ದಸರಾಗೆ ಸಿನಿಮಾ ರಿಲೀಸ್

ದಸರಾಗೆ ಸಿನಿಮಾ ರಿಲೀಸ್

ಈ ಸಿನಿಮಾ ಇನ್ನು ಕೆಲವೇ ದಿನಗಳಲ್ಲಿ ಶೂಟಿಂಗ್ ಮುಗಿಸಲಿದೆ. ಸಿನಿಮಾ ಮುಗಿದ ಬಳಿಕವೇ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಚಿತ್ರತಂಡ ಬ್ಯುಸಿಯಾಗಲಿದೆ. ಕೆಲವು ಮೂಲಗಳ ಪ್ರಕಾರ, ಸಿನಿಮಾ ತಂಡ 'ಬ್ಯಾಡ್ ಮ್ಯಾನರ್ಸ್' ಅನ್ನು ಆಯುಧ ಪೂಜೆಗೆ ಬಿಡುಗಡೆ ಮಾಡಲು ಸಜ್ಜಾಗಿದೆ. ಈ ಸಿನಿಮಾದಲ್ಲಿ ಪ್ರಿಯಾಂಕಾ ಕುಮಾರ್ ಮತ್ತು ರಚಿತಾ ರಾಮ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

More from Filmibeat

English summary
Daali Dhananjay Visited Abhishek Ambareesh Starrer Bad Manners Movie Set, Know More,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X