Dhananjay Wedding:ಧನಂಜಯ್ ಮದುವೆ ಸಮಾರಂಭ ಶುರು; ಸಂಪ್ರದಾಯದಂತೆ ಕೆಂಡ ತುಳಿದ ಡಾಲಿ
ಡಾಲಿ ಧನಂಜಯ್ ಇನ್ನುಕೆಲವೇ ದಿನಗಳಲ್ಲಿ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ಇದೇ ಫೆಬ್ರವರಿ 15 ಹಾಗೂ 16ರಂದು ಮೈಸೂರಿನಲ್ಲಿ ಅದ್ಧೂರಿಯಾಗಿ ಅಭಿಮಾನಿಗಳು, ಕುಟುಂಬಸ್ಥರು ಹಾಗೂ ಹಿತೈಶಿಗಳ ಸಮ್ಮುಖದಲ್ಲಿ ಮದುವೆ ಆಗಲಿದ್ದಾರೆ. ಹೀಗಾಗಿ ಅವರ ಹುಟ್ಟೂರಾದ ಅರಸಿಕೆರೆಯಲ್ಲಿ ಕಾಳೇನ ಹಳ್ಳಿಯಲ್ಲಿ ಮದುವೆ ಸಮಾರಂಭಗಳು ನಡೆಯುತ್ತಿವೆ.
ಧನಂಜಯ್ ಮದುವೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿವೆ. ಹೀಗಾಗಿ ಅವರ ಮನೆಯಲ್ಲಿ ಮದುವೆ ಸಮಾರಂಭ ಶುರುವಾಗಿದೆ. ಅವರ ಮನೆಯ ಸಂಪ್ರದಾಯದಂತೆ ಶಾಸ್ತ್ರಗಳು ಆರಂಭ ಆಗಿವೆ. ಹುಟ್ಟೂರಿನಲ್ಲಿ ಇರುವ ಧನಂಜಯ್ ಮದುವೆ ಶಾಸ್ತ್ರದಲ್ಲಿ ಭಾಗಿಯಾಗುತ್ತಿದ್ದಾರೆ. ಡಾಲಿ ಧನಂಜಯ್ ಹುಟ್ಟೂರಾದ ಕಾಳೇನಹಳ್ಳಿಯಲ್ಲಿ ಮದುವೆ ಸಂಭ್ರಮ ಕಳೆಗಟ್ಟಿದೆ.

ಧನಂಜಯ್ ತಮ್ಮ ಕುಟುಂಬದ ಸಂಪ್ರದಾಯದಂತೆ ಮೊದಲು ಅರಸಿಕೆರೆಯ ಜೇನುಕಲ್ಲು ಸಿದ್ದೇಶ್ವರ ದೇವರ ಕೊಂಡ ತುಳಿದಿದ್ದಾರೆ. ಅದಕ್ಕೂ ಮುನ್ನ ದೇವಸ್ಥಾನನಕ್ಕೆ ಕುಟುಂಬಸ್ಥರು ಹಾಗೂ ಊರಿಗೂ ಮಧುಮಗನನ್ನು ಮೆರವಣಿಗೆ ಮೂಲಕ ಕರೆದುಕೊಂಡು ಬಂದರು. ಬಳಿಕ ಡಾಲಿ ಮನೆಯಲ್ಲಿ ಮನೆದೇವರ ಪೂಜೆ ನೆರವೇರಿಸಿದರು. ಈ ವೇಳೆ ಧನಂಜಯ್ ಟ್ರೆಡಿಷನಲ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ.
ಡಾಲಿ ಧನಂಜಯ್ ಕೆಂಡದ ಮೇಲೆ ನಡೆದಾಡುವುದನ್ನು ನೋಡುವುದಕ್ಕೆ ಊರಿನ ಜನರೆಲ್ಲರೂ ಸೇರಿದ್ದರು. ಧನಂಜಯ್ ಕೂಡ ಉತ್ಸಾಹದಿಂದ ಮದುವೆ ಸಂಪ್ರದಾಯಗಳಲ್ಲಿ ಭಾಗಿಯಾಗಿದ್ದಾರೆ. ಈ ವೇಳೆ ಗೋಲ್ಡನ್ ಕಲರ್ ಸಂಪ್ರದಾಯಿಕ ಉಡುಗೆಯಲ್ಲಿ ಮಿಂಚಿದ್ದಾರೆ. ಈ ಸಂದರ್ಭದಲ್ಲಿ ಡಾಲಿಯ ಕುಟುಂಬಸ್ಥರು ಹಾಗೂ ಊರಿನ ಜನರು ಕೂಡ ಸೇರಿದ್ದರು. ಹುಟ್ಟೂರಿನಲ್ಲಿ ಮದುವೆ ನಡೆಯದೇ ಇರುವುದರಿಂದ ವಿವಾಹ ಪೂರ್ವ ಸಮಾರಂಭಗಳು ಇಲ್ಲಿಯೇ ನಡೆಯುತ್ತಿವೆ.
ಧನಂಜಯ್ ಮದುವೆ ಎರಡು ದಿನಗಳ ಕಾಲ ಮೈಸೂರಿನಲ್ಲಿ ನಡೆಯಲಿದೆ. ಅದಕ್ಕಾಗಿ ಈಗಾಲೇ ಸಾಕಷ್ಟು ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ. ಅಭಿಮಾನಿಗಳು ಬಂದು ದಂಪತಿಗಳನ್ನು ಆಶೀರ್ವದಿಸುವುದಕ್ಕೆಂದೇ ಪ್ರತ್ಯೇಕ ವಿಧ್ಯಾಪತಿ ದ್ವಾರವನ್ನು ನಿರ್ಮಿಸಲಾಗಿದೆ. ಹೀಗಾಗಿ ಮೈಸೂರಿನಲ್ಲಿ ಆರತಕ್ಷತೆ ಹಾಗೂ ಮದುವೆ ದಿನ ನಡೆಯುವ ಶಾಸ್ತ್ರಗಳು ಮಾತ್ರ ಇರುತ್ತವೆ. ಈ ಕಾರಣಕ್ಕೆ ಹುಟ್ಟೂರಿನಲ್ಲಿ ಶಾಸ್ತ್ರಬದ್ಧ ಕಾರ್ಯಕ್ರಮಗಳು ನಡೆಯುತ್ತಿವೆ.
ಇನ್ನು ಡಾಲಿ ಧನಂಜಯ್ ಹಾಗೂ ಧನ್ಯತಾ ಇಬ್ಬರೂ ಕೆಲವು ದಿನಗಳಿಂದ ಪ್ರೀತಿ ಮಾಡುತ್ತಿದ್ದರು. ವೃತ್ತಿಯಲ್ಲಿ ವೈದ್ಯೆಯಾಗಿರುವ ಧನ್ಯತಾ ಫೆಬ್ರವರಿ 16ರಂದು ಧನಂಜಯ್ ಜೊತೆ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ಹೀಗಾಗಿ ಅವರ ಮನೆಯಲ್ಲಿಯೂ ಶಾಸ್ತ್ರಗಳು ಆರಂಭ ಆಗಿವೆ. ಎರಡೂ ಕುಟುಂಬಗಳು ಮೈಸೂರಿನಲ್ಲಿ ಒಟ್ಟಿಗೆ ಸೇರಿಕೊಳ್ಳಲಿದ್ದಾರೆ. ಇನ್ನು ಎರಡು ದಿನಗಳ ಕಾಲ ಡಾಲಿ ಧನಂಜಯ್ ಮನೆಯಲ್ಲಿ ಮದುವೆ ಶಾಸ್ತ್ರಗಳು ನಡೆಯಲಿವೆ.
ಧನಂಜಯ್ ಮದುವೆಗಾಗಿ ಮೈಸೂರಿನ ವಸ್ತು ಪ್ರದರ್ಶನ ಮೈದಾನದಲ್ಲಿ ಸಿದ್ಧವಾಗುತ್ತಿದೆ. ಚಾಮುಂಡೇಶ್ವರಿ ದೇವಿಯ ಸನ್ನಿಧಾನದಂತೆ ಸೆಟ್ಟನ್ನು ಹಾಕಲಾಗುತ್ತಿದ್ದರು. ಧನಂಜಯ್ ಹಾಗೂ ಧನ್ಯತಾ ಮದುವೆ ಸಮಾರಂಭಕ್ಕೆ ಸುಮಾರು 25 ರಿಂದ 30 ಸಾವಿರಕ್ಕೂ ಅಧಿಕ ಮಂದಿ ಜನರು ಸೇರುವ ಸಾಧ್ಯತೆಯಿದೆ ಎಂದು ಅಂದಾಜಿಸಲಾಗಿದೆ. ಧನಂಜಯ್ ಈಗಾಗಲೇ ಚಿತ್ರರಂಗದ ಗಣ್ಯರನ್ನು, ರಾಜಕೀಯ ಮುಖಂಡರು, ಮಠಾಧೀಶರಿಗೆ ಆಹ್ವಾನ ನೀಡಿದ್ದಾರೆ.
ಧನಂಜಯ್ ಇತ್ತೀಚೆಗೆ ತೆಲುಗು ಚಿತ್ರರಂಗದ ದಿಗ್ಗಜರಾದ ಮೆಗಾಸ್ಟಾರ್ ಚಿರಂಜೀವಿ ಹಾಗೂ ಅಲ್ಲು ಅರ್ಜುನ್ ಅವರನ್ನು ಮದುವೆ ಆಹ್ವಾನಿಸಿದ್ದರು. ಹಾಗೇ ಪುಷ್ಪ 2 ಸಿನಿಮಾದ ಸಹ ನಟಿ ರಶ್ಮಿಕಾ ಮಂದಣ್ಣ ಅವರಿಗೂ ಆಮಂತ್ರಣ ಪತ್ರಿಕೆಯನ್ನು ನೀಡಿದ್ದರು. ಇತ್ತ ಕನ್ನಡ ಚಿತ್ರರಂಗದಲ್ಲಿ ಸುದೀಪ್, ಯಶ್, ಶಿವಣ್ಣ ಸೇರಿದಂತೆ ಎಲ್ಲಾ ಪ್ರಮುಖರಿಗೂ ಆಹ್ವಾನವನ್ನು ನೀಡಿದ್ದರು.


Click it and Unblock the Notifications











