Dhananjaya in America: ಚಾಲಕನಿಲ್ಲದ ಕಾರಿನಲ್ಲಿ ಡಾಲಿ.. ಯುಎಸ್‌ನಲ್ಲಿ ಧನಂಜಯ್ ಮಸ್ತಿ!

ಡಾಲಿ ಧನಂಜಯ್ ಒಂದರ ಹಿಂದೊಂದು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಧನಂಜಯ್ ಬಿಡುವು ಇಲ್ಲದೆ ಸಿನಿಮಾದಲ್ಲಿ ಬ್ಯುಸಿಯಾಗಿದ್ದರು. ಸಿನಿಮಾದಲ್ಲಿ ನಟನೆಯಷ್ಟೇ ಅಲ್ಲ. ಈಗೀಗ ಸಿನಿಮಾ ನಿರ್ಮಾಣಕ್ಕೂ ಕೈ ಹಾಕಿದ್ದಾರೆ. ಹೀಗಾಗಿ ಕಳೆದ ನಾಲ್ಕೈದು ವರ್ಷಗಳಿಂದ ಕೆಲಸ ಮಾಡುತ್ತಲೇ ಇದ್ದರು.

ಡಾಲಿ ಧನಂಜಯ್ ಸಿನಿಮಾದಿಂದ ಕೊಂಚ ಬ್ರೇಕ್ ತೆಗೆದುಕೊಂಡಿದ್ದಾರೆ. ಗೆಳೆಯರೊಂದಿಗೆ ಅಮೆರಿಕ ಪ್ರವಾಸ ಮಾಡುತ್ತಿದ್ದಾರೆ. ಅಲ್ಲಿನ ನಗರಗಳಲ್ಲಿ ಸುತ್ತಾಡುತ್ತಾ ಎಂಜಾಯ್ ಮಾಡುತ್ತಿದ್ದಾರೆ. ಡಾಲಿ ಧನಂಜಯ್ ಜೊತೆ ಗೆಳೆಯ ನಾಗಭೂಷಣ್ ಹಾಗೂ ಸ್ನೇಹಿತರು ಕೂಡ ಅಮೆರಿಕ ಪ್ರವಾಸದಲ್ಲಿ ಇದ್ದಾರೆ.

ಇದೀಗ ಸೋಶಿಯಲ್ ಮೀಡಿಯಾದಲ್ಲಿ ಧನಂಜಯ್ ಅಮೆರಿಕ ಪ್ರವಾಸದ ವಿಡಿಯೋವೊಂದು ವೈರಲ್ ಆಗುತ್ತಿದೆ. ಇದರಲ್ಲಿ ಡಾಲಿ ಧನಂಜಯ್ ಚಾಲನೇ ಇಲ್ಲದ ಕಾರನ್ನು ಕಂಡು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಅದೇ ಕಾರಿನಲ್ಲಿ ಪ್ರಯಾಣ ಮಾಡಿ ಎಂಜಾಯ್ ಮಾಡಿದ್ದಾರೆ.

dhananjaya-usa-tour

ಅಮೆರಿಕದಲ್ಲಿ ಡಾಲಿ ಧನಂಜಯ್

ಡಾಲಿ ಧನಂಜಯ್ ಅಮೆರಿಕದ ಪ್ರಮುಖ ಸ್ಥಳಗಳಿಗೆ ಭೇಟಿ ಕೊಟ್ಟಿದ್ದಾರೆ. ಅಮೆರಿಕ ಪ್ರವಾಸವನ್ನು ಎಂಜಾಯ್ ಮಾಡುತ್ತಿದ್ದಾರೆ. ಒಂದು ರಾತ್ರಿ ಅಮೆರಿಕದ ಕ್ಯಾಬ್‌ನಲ್ಲೂ ಪ್ರಯಾಣ ಮಾಡಿದ್ದಾರೆ. ಈ ವೇಳೆ ಚಾಲಕನೇ ಇಲ್ಲದ ಕ್ಯಾಬ್‌ ಅನ್ನು ನೋಡಿ ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಅಮೆರಿಕದ ಹಲವು ನಗರದಲ್ಲಿ ಚಾಲಕ ರಹಿತ ಕಾರುಗಳು ಚಲಿಸುತ್ತವೆ. ಎಲಾನ್‌ ಮಸ್ಕ್ ಒಡೆತನದ ಚಾಲಕ ರಹಿತ ಟೆಸ್ಲಾ ಕಾರುಗಳು ಜನಪ್ರಿಯವಾಗಿವೆ. ಹಾಗೇ ಕ್ಯಾಬ್ ವ್ಯವಸ್ಥೆ ಕೂಡ ಇದೆ. ಇದನ್ನೇ ಕಂಡು ಧನಂಜಯ್ ಥ್ರಿಲ್ ಆಗಿದ್ದು ವಿಡಿಯೋ ಹರಿದಾಡುತ್ತಿದೆ.

ಕಾರಿನ ಸ್ಪೀಡ್‌ಗೆ ದಂಗಾದ ಡಾಲಿ

ಧನಂಜಯ್ ಇರುವ ಲೋಕೇಶ್‌ಗೆ ಚಾಲಕ ರಹಿತ ಕಾರು ಬಂದು ನಿಂತಿತ್ತು. ಇಲ್ಲಿಂದ ಈ ವಿಶೇಷ ಕಾರಿನ ಅನುಭವವನ್ನು ಹಂಚಿಕೊಂಡಿದ್ದಾರೆ. ಕಾರಿನೊಳಗೆ ಕೂತ ಬಳಿಕ ಡಾಲಿ ಧನಂಜಯ್ ಚಾಲಕ ರಹಿತ ಕಾರಿನ ವೇಗವನ್ನು ಕಂಡು ಅಚ್ಚರಿ ವ್ಯಕ್ತಪಡಿಸಿದ್ದಾರೆ.

dhananjaya-usa-tour

ಅಲ್ಲದೆ ಅಮೆರಿಕದಲ್ಲಿ ಕಾರಿನ ಸ್ಟೇರಿಂಗ್ ಕೂಡ ಎಡಗಡೆ ಇರುತ್ತೆ. ಹೀಗಾಗಿ ಸ್ಟೇರಿಂಗ್ ಕಂಡು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಕಾರಿನ ವೇಗ ಕಂಡು "ಏನಮ್ಮ ಈ ಸ್ಟೀಡ್‌ನಲ್ಲಿ ಹೋಯ್ತದಲ್ಲೋ. ಸ್ಟೇರಿಂಗ್ ಆ ಕಡೆ ಈ ಕಡೆ ಅಲ್ಲಾಡೊಲ್ದು" ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಸ್ಯಾಂಡಲ್‌ವುಡ್‌ನಲ್ಲಿ ಬ್ಯುಸಿ

ಡಾಲಿ ಧನಂಜಯ್ ಸ್ಯಾಂಡಲ್‌ವುಡ್‌ನಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಕೆಲವು ದಿನಗಳ ಹಿಂದಷ್ಟೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದ ವೇಳೆ ಕೆಲವು ಸಿನಿಮಾಗಳು ಅನೌನ್ಸ್ ಆಗಿದ್ದವು, 'ಅಣ್ಣಾ ಫ್ರಮ್ ಸ್ಯಾನ್‌ ಫ್ರಾನ್ಸಿಸ್ಕೋ', 'ಜೀಬ್ರಾ', 'ಉತ್ತರಕಾಂಡ'ದಂತಹ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾಗಳ ಬ್ಯಾಕ್ ಟು ಬ್ಯಾಕ್ ಆರಂಭ ಆಗಲಿದೆ.

ಇದರೊಂದಿಗೆ ಅಲ್ಲು ಅರ್ಜುನ್ ಅಭಿನಯದ 'ಪುಷ್ಪ 2' ಸಿನಿಮಾದಲ್ಲೂ ಡಾಲಿ ನಟಿಸುತ್ತಿದ್ದಾರೆ. ಹೀಗಾಗಿ ಮುಂದಿನ ವರ್ಷ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಮತ್ತೆ ಶೈನ್ ಆಗಲಿದ್ದಾರೆ. ಇದರೊಂದಿಗೆ ತಾವೇ ನಿರ್ಮಿಸಿದ 'ಟಗರು ಪಲ್ಯ' ಸಿನಿಮಾದ ಪ್ರಚಾರದಲ್ಲಿಯೂ ಭಾಗಿಯಾಗಲಿದ್ದಾರೆ.

More from Filmibeat

English summary
Daali Dhananjaya thrilled traveling in a driverless car in USA
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X