Love Mocktail 3: 'ಟಾಕ್ಸಿಕ್' ಪೋಸ್ಟ್‌ಪೋನ್ ಆಗುತ್ತಿದ್ದಂತೆ ಡಾರ್ಲಿಂಗ್ ಕೃಷ್ಣ ಎಂಟ್ರಿ; ಅದೇ ದಿನ 'ಲವ್ ಮಾಕ್ಟೇಲ್ 3'
ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳಿಗೆ ಮತ್ತೆ ನಿರಾಸೆಯಾಗಿದೆ. ನಾಲ್ಕು ವರ್ಷಗಳಿಂದ ತಮ್ಮ ಫ್ಯಾನ್ಸ್ ಅನ್ನು ಕಾಯಿಸಿದ್ದ ಯಶ್ ಖಡಕ್ ನಿರ್ಧಾರ ತೆಗೆದುಕೊಂಡಿದ್ದಾರೆ. ಯುಗಾದಿ ಹಬ್ಬಕ್ಕೆ ರಿಲೀಸ್ ಆಗ ಬೇಕಿದ್ದ ಸಿನಿಮಾವನ್ನು ರಿಲೀಸ್ ಮಾಡದೇ ಇರುವುದಕ್ಕೆ ನಿರ್ಧರಿಸಿದ್ದಾರೆ. ಸುಮಾರು ಎರಡೂವರೆ ತಿಂಗಳುಗಳ ಕಾಲ ಸಿನಿಮಾ ಬಿಡುಗಡೆಯನ್ನು ಪೋಸ್ಟ್‌ಪೋಸ್ ಮಾಡಿರೋದು ಅವರ ಫ್ಯಾನ್ಸ್‌ಗಷ್ಟೇ ಅಲ್ಲ, ಸಿನಿ ಪ್ರಿಯರಿಗೂ ದೊಡ್ಡ ಮಟ್ಟಕ್ಕೆ ನಿರಾಸೆಯಾಗಿದೆ.
ಹಾಗಂತ ಕನ್ನಡಿಗರು ನಿರಾಸೆ ಮಾಡಿಕೊಳ್ಳೋದು ಬೇಡ. 'ಟಾಕ್ಸಿಕ್' ರಿಲೀಸ್ ಆಗಬೇಕಿದ್ದ ಜಾಗಕ್ಕೆ ಮತ್ತೊಂದು ಎಕ್ಸ್‌ಪೆಕ್ಟೆಡ್ ಸಿನಿಮಾ ರಿಲೀಸ್ ಆಗುತ್ತಿದೆ. ಅದುವೇ ಡಾರ್ಲಿಂಗ್ ಕೃಷ್ಣ ನಟಿಸಿ, ನಿರ್ದೇಶಿಸುತ್ತಿರುವ 'ಲವ್ ಮಾಕ್ಟೇಲ್ 3'. ಈಗಾಗಲೇ ಕೃಷ್ಣ ಪ್ರಮೋಷನ್ ಕೂಡ ಆರಂಭಿಸಿದ್ದರು. ಆದರೆ, ರಿಲೀಸ್ ಡೇಟ್ ಅನ್ನು ಮಾತ್ರ ಅನೌನ್ಸ್ ಮಾಡಿರಲಿಲ್ಲ. ಈಗ 'ಟಾಕ್ಸಿಕ್' ಪೋಸ್ಟ್‌ಪೋನ್ ಬೆನ್ನಲ್ಲೇ ರಿಲೀಸ್ ಡೇಟ್ ಅನೌನ್ಸ್ ಆಗಿದೆ.

ಹೌದು, 'ಟಾಕ್ಸಿಕ್' ರಿಲೀಸ್ ಆಗಬೇಕಿದ್ದ ದಿನದಂದೇ ಡಾರ್ಲಿಂಗ್ ಕೃಷ್ಣ ಅವರ 'ಲವ್ ಮಾಕ್ಟೇಲ್ 3' ರಿಲೀಸ್ ಆಗುತ್ತಿದೆ. ಯುಗಾದಿ ಹಬ್ಬ ಮಾಡ್ಕೊಂಡು ಸೀದಾ ಥಿಯೇಟರ್‌ಗೆ ಎಂಟ್ರಿ ಕೊಟ್ಟು ಎಂಜಾಯ್ ಮಾಡಬಹುದು. ಇದೊಂದು ಕಡೆಯಾದರೆ, ಇನ್ನೊಂದು ಕಡೆ ಟ್ರೇಡ್ ಎಕ್ಸ್‌ಪರ್ಟ್‌ಗಳು ಸಿನಿಮಾ ಬಗ್ಗೆ ಲೆಕ್ಕಾಚಾರ ಹಾಕುವುದಕ್ಕೆ ಶುರು ಮಾಡಿದ್ದಾರೆ. ಬಾಕ್ಸಾಫೀಸ್‌ನಲ್ಲಿ ಎಷ್ಟು ಲಾಭ ಆಗಬಹುದು ಅನ್ನೋ ಲೆಕ್ಕಾಚಾರಕ್ಕೆ ಬಿದ್ದಿದೆ.
'ಲವ್ ಮಾಕ್ಟೇಲ್ 3'ಗೆ ವರವಾಯಿತೇ?
ಯಶ್ ಪ್ಯಾನ್ ವರ್ಲ್ಡ್ ಸಿನಿಮಾ 'ಟಾಕ್ಸಿಕ್' ಒಳ್ಳೆಯ ದಿನದಂದು ರಿಲೀಸ್ ಡೇಟ್ ಪ್ಲ್ಯಾನ್ ಮಾಡಿತ್ತು. ಬ್ಯಾಕ್ ಟು ಬ್ಯಾಕ್ ರಜೆ ಹಾಗೂ ಹಬ್ಬಗಳು ಇರುವುದರಿಂದ ಜನರು ಜಾಲಿ ಮೂಡ್‌ನಲ್ಲಿ ಇರುತ್ತಾರೆ. ಅಲ್ಲದೆ ಮಕ್ಕಳಿಗೂ ರಜೆಗಳು ಇರುತ್ತವೆ. ಹೀಗಾಗಿ ಇದು ಸಿನಿಮಾ ರಿಲೀಸ್‌ಗೆ ಸರಿಯಾದ ಸಮಯ. 'ಕೆಜಿಎಫ್ 2' ಕೂಡ ಹೆಚ್ಚು ಕಡಿಮೆ ಇದೇ ಸಮಯಕ್ಕೆ ರಿಲೀಸ್ ಆಗಿತ್ತು. ಸಿನಿಮಾ ಬಾಕ್ಸಾಫೀಸ್‌ನಲ್ಲಿ ಮೆಗಾ ಹಿಟ್ ಅಂತ ಸಾಬೀತಾಗಿತ್ತು. ಹೀಗಾಗಿ ಈ ಅಡ್ವಾಂಟೇಜ್ ಈಗ ಡಾರ್ಲಿಂಗ್ ಕೃಷ್ಣ 'ಲವ್ ಮಾಕ್ಟೇಲ್ 3'ಗೆ ಸಿಕ್ಕಿದೆ.
ಕೆವಿಎನ್ ಪ್ರೊಡಕ್ಷನ್ ವಿತರಣೆ
'ಟಾಕ್ಸಿಕ್' ಸಿನಿಮಾವನ್ನು ನಿರ್ಮಾಣ ಮಾಡಿರೊ ಕೆವಿಎನ್ ಸಂಸ್ಥೆಯೇ ಈ ಸಿನಿಮಾವನ್ನು ಬಿಡುಗಡೆ ಮಾಡುತ್ತಿರೋದು ವಿಶೇಷ. 'ಲವ್ ಮಾಕ್ಟೇಲ್ 3' ಸಿನಿಮಾವನ್ನು ಕರ್ನಾಟಕದಾದ್ಯಂತ ಕೆವಿಎನ್ ಸಂಸ್ಥೆಯೇ ವಿತರಣೆ ಮಾಡುತ್ತಿದೆ. ಟಾಕ್ಸಿಕ್ ಬಿಡುಗಡೆ ದಿನಾಂಕ ಮುಂದೆ ಹೋಗುತ್ತಲೇ 'ಲವ್ ಮಾಕ್ಟೇಲ್ 3' ಪಾಲಿಗೆ ಅದೃಷ್ಟ ಖುಲಾಯಿಸಿದೆ. ಏಪ್ರಿಲ್ 10 ರಂದು ಬಿಡುಗಡೆಯಾಗಬೇಕಿದ್ದ ಈ ಸಿನಿಮಾ, ಸನ್ನಿವೇಶ ಬದಲಾಗುತ್ತಿದ್ದಂತೆ ಒಂದು ವಾರ ಮುಂದಕ್ಕೆ ಹೋಗಿದೆ. ಯುಗಾದಿ ರಜೆಯಂದೇ ಥಿಯೇಟರ್‌ನಲ್ಲಿ 'ಲವ್ ಮಾಕ್ಟೇಲ್ 3' ಪ್ರೇಮಕಾವ್ಯ ಬರೆಯುತ್ತಿದೆ.

'ಲವ್ ಮಾಕ್ಟೇಲ್ 3'ಗೆ ಏನೇನು ಲಾಭ?
'ಲವ್ ಮಾಕ್ಟೇಲ್ 3' ಸಿನಿಮಾ ಯುಗಾದಿ ರಿಲೀಸ್ ಆಗುತ್ತಿರೋದ್ರಿಂದ ತಂಡಕ್ಕೆ ಭಾರೀ ಅನುಕೂಲ ಆಗಲಿದೆ. 'ಲವ್ ಮಾಕ್ಟೇಲ್ 3' ರಿಲೀಸ್ ಆಗುವ ವೇಳೆ ಸಾಲು ಸಾಲು ಹಬ್ಬಗಳಿವೆ. ಒಂದ್ಕಡೆ ಯುಗಾದಿ ಆದರೆ, ಇನ್ನೊಂದು ಕಡೆ ರಂಜಾನ್. ಹೀಗಾಗಿ ಸಾಲು ಸಾಲು ರಜೆಗಳು ಇರುತ್ತವೆ. ಇಂತಹ ಸಮಯದಲ್ಲಿ 'ಲವ್ ಮಾಕ್ಟೇಲ್ 3' ರಿಲೀಸ್ ಆಗುತ್ತಿದ್ದು, ಬಾಕ್ಸಾಫೀಸ್‌ನಲ್ಲಿ ದಾಖಲೆ ಬರೆಯುವುದಕ್ಕೆ ಇದು ಒಳ್ಳೆಯ ಸಮಯ. ಇನ್ನು ಕ್ರಿಸ್‌ಮಿ ಬ್ಯಾನರಿನಲ್ಲಿ ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ಒಟ್ಟಿಗೆ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಡಾರ್ಲಿಂಗ್ ಕೃಷ್ಣ, ಮಿಲನಾ ನಾಗರಾಜ್, ಸಂವೃತ, ಅಮೃತಾ ಅಯ್ಯಂಗಾರ್, ರಚೆಲ್ ಡೇವಿಡ್, ಅಭಿಲಾಶ್ ದಳಪತಿ ಈ ಸಿನಿಮಾದಲ್ಲಿ ನಟಿಸಿದ್ದಾರೆ.
'ಲವ್ ಮಾಕ್ಟೇಲ್' ಸೀರಿಸ್ ರೆಸ್ಪಾನ್ಸ್
ಡಾರ್ಲಿಂಗ್ ಕೃಷ್ಣಗೆ 'ಲವ್ ಮಾಕ್ಟೇಲ್' ಸಿನಿಮಾ ತುಂಬಾನೇ ಒಳ್ಳೆಯ ಹೆಸರು ತಂದುಕೊಟ್ಟಿದೆ. ಅವರ ವೃತ್ತಿಗೆ ಬದುಕಿಗೆ ಒಂದೊಳ್ಳೆ ತಿರುವುಕೊಟ್ಟಿದ್ದೇ ಈ ಸಿನಿಮಾ. ಇಲ್ಲಿಂದ ಡಾರ್ಲಿಂಗ್ ಕೃಷ್ಣ ಮತ್ತೆ ಹಿಂತಿರುಗಿ ನೋಡುವ ಪ್ರಯತ್ನವೇ ಮಾಡಿಲ್ಲ. ಈ ಗೆಲುವಿನ ಬೆನ್ನಲ್ಲೇ 'ಲವ್ ಮಾಕ್ಟೇಲ್ 2' ರಿಲೀಸ್ ಆಗಿತ್ತು. ಅದೂ ಬಾಕ್ಸಾಫೀಸ್‌ನಲ್ಲಿ ಗೆಲುವು ಕಂಡಿತ್ತು. ಈಗ ಪಾರ್ಟ್ 3 ಏನಾಗುತ್ತೆ? ಅನ್ನೋದನ್ನು ಸಿನಿಮಾ ಮಂದಿ ಕುತೂಹಲದಿಂದ ಎದುರು ನೋಡುತ್ತಿದ್ದಾರೆ.


Click it and Unblock the Notifications











