ಡಾರ್ಲಿಂಗ್ ಕೃಷ್ಣ 37ನೇ ಹುಟ್ಟುಹಬ್ಬ: ದಿಲ್ ಪಸಂದ್ ಗ್ಲಿಂಪ್ಸ್ ರಿಲೀಸ್!

ಸ್ಯಾಂಡಲ್‌ವುಡ್‌ನ ಡಾರ್ಲಿಂಗ್ ಕೃಷ್ಣಗೆ ಹುಟ್ಟುಹಬ್ಬದ ಸಂಭ್ರಮ. ನಟ ಕೃಷ್ಣ 37ನೇ ಬರ್ತ್‌ಡೇ ಸೆಲೆಬ್ರೆಟ್ ಮಾಡಿಕೊಳ್ಳುತ್ತಿದ್ದಾರೆ. 'ಲವ್ ಮಾಕ್ಟೇಲ್' ಸಿನಿಮಾ ಮೂಲಕ ಕನ್ನಡ ಚಿತ್ರರಂಗದಲ್ಲಿ ಸ್ಟಾರ್ ಪಟ್ಟಕ್ಕೇರಿದ್ದಾರೆ. ಕನ್ನಡ ಸಿನಿಮಾಗಳಲ್ಲಿ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿರುವ ಕೃಷ್ಣ ನಾಯಕರಾಗಿ ಅಖಾಡಕ್ಕಿಳಿದಿದ್ದರು. ಆದರೆ, ಹಲವು ಸೋಲುಗಳನ್ನು ಕಂಡ ಬಳಿಕ ತಾವೇ ನಿರ್ದೇಶಿಸಿದ 'ಲವ್ ಮಾಕ್ಟೇಲ್' ಮೂಲಕ ಯಶಸ್ಸು ಕಂಡಿದ್ದಾರೆ.

ದುನಿಯಾ ಸೂರಿ ನಿರ್ದೇಶಿಸಿದ 'ಜಾಕಿ' ಸಿನಿಮಾದಲ್ಲಿ ಡಾರ್ಲಿಂಗ್ ಕೃಷ್ಣ ಸಹಾಯ ನಿರ್ದೇಶಕರಾಗಿ ಕೆಲಸ ಮಾಡಿದ್ದರು. ಬಳಿಕ 'ಹುಡುಗರು' ಸಿನಿಮಾದಲ್ಲಿಯೂ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. 'ಕೃಷ್ಣ-ರುಕ್ಮಿಣಿ' ಧಾರಾವಾಹಿಯಲ್ಲಿ ಕೃಷ್ಣ ಪಾತ್ರದಲ್ಲಿ ನಟಿಸಿದ್ದರಿಂದ ಕೃಷ್ಣ ಎಂದೇ ಖ್ಯಾತಿ ಗಳಿಸಿದ್ದರು. 'ಮದರಂಗಿ' ಸಿನಿಮಾ ಮೂಲಕ ನಾಯಕನಾಗಿ ಚಿತ್ರರಂಗಕ್ಕೆ ಪ್ರವೇಶ ಮಾಡಿದ್ದರು.

'ಮದರಂಗಿ' to 'ಲವ್ ಮಾಕ್ಟೇಲ್'

'ಮದರಂಗಿ' ಸಿನಿಮಾದ ಬಳಿಕ ಕೃಷ್ಣ ನಾಯಕನಾಗಿ ನಟಿಸಿದ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಗೆಲ್ಲಲಿಲ್ಲ. ಬಳಿಕ ತಾವೇ ನಿರ್ಮಿಸಿ, ನಿರ್ದೇಶಿಸಿದ 'ಲವ್ ಮಾಕ್ಟೇಲ್' ಸಿನಿಮಾ ಮೂಲಕ ಹೊಸ ಸ್ಯಾಂಡಲ್‌ವುಡ್‌ ಯಶಸ್ಸಿನ ರುಚಿ ಸಿಕ್ಕಿತ್ತು. ಇದೇ ವರ್ಷ ತೆರೆಕಂಡ 'ಲವ್ ಮಾಕ್ಟೇಲ್ 2' ಸಿನಿಮಾ ಕೂಡ ಬಾಕ್ಸಾಫೀಸ್‌ನಲ್ಲಿ ಸಕ್ಸಸ್ ಕಂಡಿದೆ.

Darling Krishna 37th Birthday: Dilpasand Movie Glimpse Will Be Released

'ಲವ್ ಮಾಕ್ಟೇಲ್' ಸಿನಿಮಾ ಯಶಸ್ಸಿನ ಬಳಿಕ ಬಹುದಿನದ ಗೆಳತಿ ಮಿಲನ ನಾಗರಾಜ್‌ ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ವೃತ್ತಿ ಹಾಗೂ ವೈಯಕ್ತಿಕ ಬದುಕು ಎರಡರಲ್ಲೂ ಡಾರ್ಲಿಂಗ್ ಕೃಷ್ಣ ಖುಷಿ ಖುಷಿಯಾಗಿದ್ದಾರೆ.

ಹುಟ್ಟುಹಬ್ಬಕ್ಕೆ 'ದಿಲ್ ಪಸಂದ್' ಗ್ಲಿಂಪ್ಸ್

ಡಾರ್ಲಿಂಗ್ ಕೃಷ್ಣ ಜೂನ್ 12ರಂದು ಹುಟ್ಟುಹಬ್ಬದ ಅಂಗವಾಗಿ ಅವರೇ ನಟಿಸಿದ 'ದಿಲ್ ಪಸಂದ್' ಚಿತ್ರದ ಗ್ಲಿಂಪ್ಸ್‌ ಅನ್ನು ಚಿತ್ರತಂಡ ಬಿಡುಗಡೆ ಮಾಡಲಿದೆ. 'ದಿಲ್ ಪಸಂದ್' ಚಿತ್ರದ ಫಸ್ಟ್ ಗ್ಲಿಂಪ್ಸ್ ಜೂನ್ 12ರ ಬೆಳಗ್ಗೆ 11.14ಕ್ಕೆ ಬಿಡುಗಡೆಯಾಗಲಿದೆ. 'ದಿಲ್ ಪಸಂದ್' ಚಿತ್ರದ ಫಸ್ಟ್ ಗ್ಲಿಂಪ್ಸ್ ಬಿಡುಗಡೆ ಮಾಡುವ ಮೂಲಕ ಚಿತ್ರತಂಡ ಕೃಷ್ಣ ಅವರಿಗೆ ಹುಟ್ಟುಹಬ್ಬಕ್ಕೆ ವಿಶೇಷ ಉಡುಗೊರೆ ನೀಡಲಿದೆ.

Darling Krishna 37th Birthday: Dilpasand Movie Glimpse Will Be Released

'ದಿಲ್ ಪಸಂದ್' ಪೋಸ್ಟರ್ ನೋಡಿದ ಮೇಲೆ ಡಾರ್ಲಿಂಗ್ ಕೃಷ್ಣ ಮದುವೆ ಬಳಿಕ ಸಿಕ್ಕಾಪಟ್ಟೆ ರೊಮ್ಯಾಂಟಿಕ್ ಆಗಿದ್ದಾರೆ ಅಂತ ಅನಿಸುತ್ತೆ. ಈಗಾಗಲೇ ಸಿನಿಮಾದ ಬಹುತೇಕ ಚಿತ್ರೀಕರಣ ಮುಗಿದಿದೆ. ಅಲ್ಲದೆ ಹಾಡುಗಳ ಚಿತ್ರೀಕರಣ ಬಾಕಿಯಿದೆ. ಈ ಚಿತ್ರವನ್ನು ಶಿವ ತೇಜಸ್ ನಿರ್ದೇಶಿಸುತ್ತಿದ್ದಾರೆ. ಈ ಚಿತ್ರದ ಸುಮಧುರ ಹಾಡುಗಳಿಗೆ ಅರ್ಜುನ್ ಜನ್ಯ ಸಂಗೀತ ನೀಡುತ್ತಿದ್ದಾರೆ. ಶೇಖರ್ ಚಂದ್ರ ಛಾಯಾಗ್ರಹಣ ಹಾಗೂ ಕೆ.ಎಂ.ಪ್ರಕಾಶ್ ಸಂಕಲನ 'ದಿಲ್ ಪಸಂದ್'ಗಿದೆ.

ಡಾರ್ಲಿಂಗ್ ಕೃಷ್ಣಗೆ ನಾಯಕಿಯಾಗಿ ನಿಶ್ವಿಕಾ ನಾಯ್ಡು ನಟಿಸುತ್ತಿದ್ದಾರೆ. ಅಲ್ಲದೆ ಜೊತೆಜೊತೆಯಲಿ ಖ್ಯಾತಿಯ ಮೇಘ ಶೆಟ್ಟಿ ಕೂಡ ನಟಿಸಿದ್ದಾರೆ. ಸಾಧುಕೋಕಿಲ, ರಂಗಾಯಣ ರಘು, ತಬಲ ನಾಣಿ, ಗಿರಿ, ಹರೀಶ್ ದೇವಿತಂದ್ರೆ, ಚಿತ್ಕಲ ಬಿರಾದಾರ್, ಅರುಣಾ ಬಾಲರಾಜ್ ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

More from Filmibeat

English summary
Darling Krishna 37th Birthday: Dilpasand Movie Glimpse Will Be Released, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X