'ಲವ್ ಮಾಕ್‌ಟೇಲ್ 2' ಚಿತ್ರದ ಸ್ಕ್ರಿಪ್ಟ್‌ಗೆ ಪೂಜೆ ಸಲ್ಲಿಸಿದ 'ಆದಿ-ನಿಧಿಮಾ'

'ಲವ್ ಮಾಕ್‌ಟೇಲ್' ಚಿತ್ರದ ಜನಮನ ಗೆದ್ದಿದ್ದ ಚಿತ್ರತಂಡ, ಅದರ ಯಶಸ್ಸಿನ ಖುಷಿಯಲ್ಲಿಯೇ ಎರಡನೆಯ ಭಾಗಕ್ಕೆ ಕೈಹಾಕಿದೆ. ಲಾಕ್ ಡೌನ್ ಅವಧಿಯಲ್ಲಿ ಚಿತ್ರದ ಕಥೆ ಸಿದ್ಧಪಡಿಸಿರುವ ಡಾರ್ಲಿಂಗ್ ಕೃಷ್ಣ, ಚಿತ್ರೀಕರಣ ಆರಂಭಕ್ಕೆ ತುದಿಗಾಲಲ್ಲಿ ನಿಂತಿದ್ದಾರೆ.

Recommended Video

Rashmika Mandanna writes a note about her dad | Rashmika Mandanna | Instagram Feed

ಮೊದಲ ಭಾಗದಲ್ಲಿ 'ಆದಿ' ಮತ್ತು 'ನಿಧಿಮಾ' ಪಾತ್ರಗಳಿಂದಲೇ ಪ್ರಸಿದ್ಧರಾದ ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ಜೋಡಿ ಈ ಚಿತ್ರದಲ್ಲಿಯೂ ಮೋಡಿ ಮಾಡಲು ಬಯಸಿದೆ. ಚಿತ್ರದ ಸ್ಕ್ರಿಪ್ಟ್‌ಗೆ ಇಬ್ಬರೂ ಬುಧವಾರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು.

ನಿಮ್ಮೆಲ್ಲ ಆಶೀರ್ವಾದದ ಅಗತ್ಯವಿದೆ. ಮ್ಯಾಜಿಕ್‌ಅನ್ನು ಮರುಸೃಷ್ಟಿಸಲು ಮತ್ತು ನಿಮ್ಮೆಲ್ಲರ ನಿರೀಕ್ಷೆಗಳನ್ನು ಮುಟ್ಟಲು ಕಠಿಣವಾಗಿ ಶ್ರಮಿಸುತ್ತಿದ್ದೇವೆ. ಲವ್ ಮಾಕ್‌ಟೇಲ್ ಚಿತ್ರದ ಮುಂದುವರಿದ ಕಥೆಯಾಗಿ ಲವ್ ಮಾಕ್‌ಟೇಲ್ 2 ಇರಲಿದೆ ಎಂದು ಕೃಷ್ಣ ತಿಳಿಸಿದ್ದಾರೆ.

 Darling Krishna And Milana Nagaraj Kick Start Love Mocktail 2 With A Script Pooja

ಈ ಚಿತ್ರದಲ್ಲಿ ಮೊದಲ ಭಾಗದಲ್ಲಿ ಇದ್ದಂತೆಯೇ ಮನರಂಜನೆ ಸಿಗುವುದು ಗ್ಯಾರಂಟಿ ಎಂದು ನಟಿ ಮಿಲನಾ ನಾಗರಾಜ್ ಭರವಸೆ ನೀಡಿದ್ದಾರೆ.

ಮೊದಲ ಭಾಗದಲ್ಲಿ ಇದ್ದ ಕೆಲವು ಪಾತ್ರಗಳು ಇಲ್ಲಿಯೂ ಮುಂದುವರಿಯಲಿವೆ. ಹಾಗೆಯೇ ಹೊಸ ಪಾತ್ರಗಳೂ ಬರಲಿವೆ. ಆದರೆ ಫ್ಲೇವರ್ ಮೊದಲ ಚಿತ್ರದಲ್ಲಿದ್ದಂತೆಯೇ ಇರಲಿದೆ. ನಾಯಕನ ಬದುಕಿನಲ್ಲಿ ಮುಂದೆ ನಡೆಯುವ ಘಟನೆಗಳನ್ನು ಹೊಸ ಕಥೆ, ಹೊಸ ಸನ್ನಿವೇಶಗಳ ಮೂಲಕ ಬೇರೆ ಬೇರೆ ಆಯಾಮಗಳಲ್ಲಿ ಹೇಳಲು ಉದ್ದೇಶಿಸಲಾಗಿದೆ.

More from Filmibeat

English summary
Darling Krishna and Milana Nagaraj kick start Love Mocktail 2 with a script pooja on Wednesday.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X