'ಲವ್ ಮಾಕ್ಟೇಲ್' ₹5 ಕೋಟಿ.. 'ಲವ್ ಮಾಕ್ಟೇಲ್ 2' ಗಳಿಸಿದ್ದೆಷ್ಟು? ಡಾರ್ಲಿಂಗ್ ಕೃಷ್ಣ ಕೊಟ್ಟ ಲೆಕ್ಕವೆಷ್ಟು?

ಡಾರ್ಲಿಂಗ್ ಕೃಷ್ಣ ಸಿನಿ ಬದುಕನ್ನೇ ಬದಲಿಸಿದ ಸಿನಿಮಾ 'ಲವ್ ಮಾಕ್ಟೇಲ್' ಅನ್ನೋದು ಈಗಾಗಲೇ ಗೊತ್ತಿರೋ ವಿಷಯ. ಸ್ಯಾಂಡಲ್‌ವುಡ್‌ನಲ್ಲಿ ಅವರಿಗೊಂದು ಹಿಟ್ ಸಿನಿಮಾ ಕೊಡುವುದಕ್ಕೆ ಅವರೇ ಸಿನಿಮಾ ನಿರ್ದೇಶನ ಮಾಡಬೇಕಾಗಿದ್ದು ಕೂಡ ವಿಶೇಷ. ಅದೇ ಯಶಸ್ಸು ಈಗ 3ನೇ ಚಾಪ್ಟರ್‌ವರೆಗೂ ಬಂದು ನಿಂತಿದೆ. 'ಲವ್ ಮಾಕ್ಟೇಲ್' ಸಿನಿಮಾ ಮಾಡೋದು, ಅದನ್ನು ರಿಲೀಸ್ ಮಾಡೋದು ಅಷ್ಟು ಸುಲಭದ ಕೆಲಸ ಆಗಿರಲಿಲ್ಲ. ಇದನ್ನು ಸಾಕಷ್ಟು ಬಾರಿ ಅವರೇ ಹೇಳಿಕೊಂಡಿದ್ದಾರೆ.

ಇದೇ ಯಶಸ್ಸಿನ ಬೆನ್ನಲ್ಲೇ 'ಲವ್ ಮಾಕ್ಟೇಲ್ 3' ನಿರ್ದೇಶನ ಮಾಡಿ ರಿಲೀಸ್ ಮಾಡಿದ್ದಾರೆ. ಮಾರ್ಚ್ 19 ಯುಗಾದಿ ಹಬ್ಬದ ಹಿನ್ನೆಲೆಯಲ್ಲಿ ಸಿನಿಮಾವನ್ನು ರಿಲೀಸ್ ಮಾಡಲಾಗಿದೆ. 3 ಚಾಪ್ಟರ್‌ಗೂ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಇತ್ತೀಚೆಗೆ ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ನಾಗರಾಜ್ ಇಬ್ಬರೂ 'ಲವ್ ಮಾಕ್ಟೇಲ್' ಹಾಗೂ ಅದ ಸೀಕ್ವೆಲ್‌ಗಳ ಬಗ್ಗೆ ಮಾತಾಡಿದ್ದಾರೆ.

Darling Krishna and Milana Nagaraj revealed Love mocktail and Love Mocktail 2 Box Office Collection

ಇತ್ತೀಚೆಗೆ ಗೌರೀಶ್ ಅಕ್ಕಿ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಡಾರ್ಲಿಂಗ್ ಕೃಷ್ಣ ಇದೇ ಮೊದಲ ಬಾರಿಗೆ 'ಲವ್ ಮಾಕ್ಟೇಲ್' ಹಾಗೂ 'ಲವ್ ಮಾಕ್ಟೇಲ್ 2' ಎಷ್ಟು ಕಲೆಕ್ಷನ್ ಮಾಡಿತು ಅನ್ನೋದನ್ನು ರಿವೀಲ್ ಮಾಡಿದ್ದಾರೆ. ಹಾಗೇ ಸಿನಿಮಾ ಬಗ್ಗೆ ಕೆಲವು ಇಂಟ್ರೆಸ್ಟಿಂಗ್ ಸ್ಟೋರಿಗಳನ್ನು ಹೇಳಿದ್ದಾರೆ. ಹಾಗಿದ್ದರೆ, ಮೊದಲ ಎರಡು ಪಾರ್ಟ್‌ಗಳ ಕಲೆಕ್ಷನ್ ಎಷ್ಟು ಅನ್ನೋದನ್ನು ತಿಳಿಯುವುದಕ್ಕೆ ಮುಂದೆ ಓದಿ.

'ಲವ್ ಮಾಕ್ಟೇಲ್' ಸಿನಿಮಾವನ್ನು ಅವರು ಥಿಯೇಟರ್‌ನಲ್ಲಿ ಹೇಗೆ ಉಳಿಸಿಕೊಂಡರು ಅನ್ನೋದನ್ನು ಈ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. "ಒಳ್ಳೆಯ ಸಿನಿಮಾ ಕೊಡುವ ಜವಾಬ್ದಾರಿ ನಮ್ಮದು. ಒಳ್ಳೆಯ ಸಿನಿಮಾ ಕೊಡದೇನೆ ಜನರು ಬರುತ್ತಿಲ್ಲ ಅಂತ ಹೇಳುವುದು ತಪ್ಪು. ಈಗ ಲವ್ ಮಾಕ್ಟೇಲ್ 1 ಒಳ್ಳೆಯ ಸಿನಿಮಾ ಮಾಡಿದ್ವಿ. ಅದನ್ನು ಶಕ್ತಿ ಮೀರಿ ನಾವು ಪ್ರಮೋಟ್ ಮಾಡಿ ಉಳಿಸಿಕೊಂಡ್ವಿ. ಮೂರನೇ ವಾರದಿಂದ ಜನರು ತುಂಬಿ ಬಿಟ್ಟರು. ಲವ್ ಮಾಕ್ಟೇಲ್ 2ಗೆ ಜನರು ಬಂದರು. ಅದು ನನಗೆ ಕಾನ್ಫಿಡೆನ್ಸ್ ಇತ್ತು." ಎಂದು ಡಾರ್ಲಿಂಗ್ ಕೃಷ್ಣ ಹೇಳಿಕೊಂಡಿದ್ದಾರೆ.

Also Read
Love Mocktail 3 Day 1 Box office: 'ಲವ್‌ ಮಾಕ್ಟೇಲ್ 3' ರೆಸ್ಪಾನ್ಸ್ ಹೇಗಿದೆ? ಮೊದಲ ದಿನದ ಕಲೆಕ್ಷನ್ ಎಷ್ಟು?
Love Mocktail 3 Day 1 Box office: 'ಲವ್‌ ಮಾಕ್ಟೇಲ್ 3' ರೆಸ್ಪಾನ್ಸ್ ಹೇಗಿದೆ? ಮೊದಲ ದಿನದ ಕಲೆಕ್ಷನ್ ಎಷ್ಟು?

ಇದೇ ಸಂದರ್ಶನದಲ್ಲಿ ಸಿನಿಮಾ ನೋಡಿದ 60 ಜನರು 3ನೇ ವಾರದ ಹೊತ್ತಿಗೆ 'ಲವ್ ಮಾಕ್ಟೇಲ್' ದಿಕ್ಕನ್ನೇ ಹೇಗೆ ಬದಲಿಸಿದರು? ಅನ್ನೋದನ್ನು ಮಿಲನಾ ನಾಗರಾಜ್ ಹೇಳಿದ್ದಾರೆ. "ಕೃಷ್ಣ ತುಂಬಾನೇ ಕಾನ್ಫಿಡೆಂಟ್ ಆಗಿದ್ದರು. ಅವರು ಹೇಳಿದ ಹಾಗೆ ಇಡೀ ವಾರ 60 ಜನರು ಸಿನಿಮಾ ನೋಡಿದ್ರಲ್ಲ. ಅದೆಲ್ಲದೂ ರಿವ್ಯೂ ಆಗಿ ಕನ್ವರ್ಟ್ ಆಗಿತ್ತು. ಆಗ ಥಿಯೇಟರ್‌ಗಳು ಫುಲ್ ಆದವು. ಶಾರದಾ ಚಿತ್ರಮಂದಿರದಲ್ಲಿ ರಿಕ್ವೆಸ್ಟ್ ಮಾಡಿಕೊಂಡಿದ್ವಿ ಫುಲ್ ಆಯ್ತು. ಮೈಸೂರಿನ ಡಿಆರ್‌ಎಸ್ ಫುಲ್ ಆಯ್ತು. ರಾಕ್‌ಲೈನ್‌ನಲ್ಲಿ ರಿಕ್ವೆಸ್ಟ್ ಮಾಡಿಕೊಂಡಿದ್ವಿ ಪುಲ್ ಆಯ್ತು. ಇದು ರೇರ್ ಕೇಸ್ ಮಲ್ಟಿಪ್ಲೆಕ್ಸ್‌ನಲ್ಲಿ ಶೋಗಳನ್ನು ಹೆಚ್ಚಿಗೆ ಮಾಡಲ್ವಂತೆ. ಮೂರನೇ ವಾರದಲ್ಲಿ ಎಲ್ಲಾ ಕಡೆ ಸ್ಕ್ರೀನ್ ಹೆಚ್ಚಾಗ್ತಾ ಹೋಯ್ತು." ಎಂದು ಮಿಲನಾ ಪ್ರಕಾಶ್ ಹೇಳಿದ್ದಾರೆ.

Darling Krishna and Milana Nagaraj revealed Love mocktail and Love Mocktail 2 Box Office Collection

ನಿರೂಪಕ ಗೌರಿ ಅಕ್ಕಿ 'ಲವ್ ಮಾಕ್ಟೇಲ್' ಸೀಕ್ವೆಲ್‌ಗಳಿಂದ ಎಷ್ಟು ದುಡ್ಡು ಮಾಡಿದ್ದೀರಾ ಅಂತ ಪ್ರಶ್ನೆ ಮಾಡಿದ್ದರು. ಅದಕ್ಕೆ ಡಾರ್ಲಿಂಗ್ ಕೃಷ್ಣ ಕೊಟ್ಟ ಲೆಕ್ಕ ಹೀಗಿದೆ. "ಲವ್ ಮಾಕ್ಟೇಲ್ ಸಿನಿಮಾ 5 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತು. ಲವ್ ಮಾಕ್ಟೇಲ್ 2 ಅದರ ಮೂರು ಪಟ್ಟು ಕಲೆಕ್ಷನ್ ಮಾಡ್ತು. ಅಂದರೆ, 15 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತು. ಲವ್ ಮಾಕ್ಟೇಲ್ 3 ತುಂಬಾ ವರ್ಷ ಜನರಿಗೆ ಕಾಡಬೇಕು ಅಂತ ಬಯಸುತ್ತೇನೆ. ನನ್ನ ವರ್ಕ್ ಅವರಿಗೆ ಕಾಣಬೇಕು ಅಷ್ಟೇ." ಎಂದಿದ್ದಾರೆ.

ಹಾಗೇ 'ಲವ್ ಮಾಕ್ಟೇಲ್ 3' ಸಿನಿಮಾವನ್ನು ದುಡ್ಡಿಗೆ ಮಾಡಿಲ್ಲ ಎಂದೂ ಹೇಳಿಕೊಂಡಿದ್ದಾರೆ. "ಲವ್ ಮಾಕ್ಟೇಲ್ 3 ಸಿನಿಮಾವನ್ನು ದುಡ್ಡು ಮಾಡ್ಬೇಕು ಅಂತ ಮಾಡಿಲ್ಲ. ಇದು ಎಷ್ಟು ದುಡ್ಡು ಮಾಡುತ್ತೆ ಅನ್ನೋದು ನನಗೆ ಗೊತ್ತಿಲ್ಲ. 5 ಕೋಟಿಯಿಂದ 100 ಕೋಟಿವರೆಗೂ ಏನು ಬೇಕಾದರೂ ಆಗಬಹುದು. ಅದರ ಬಗ್ಗೆ ನನಗೆ ಟಾರ್ಗೆಟ್ ಕೂಡ ಇಲ್ಲ. ಎಲ್ಲಾ ತರಹದ ಜನರು ಬರುತ್ತಾರೆ. ಅವರು ಬಂದು ಸಿನಿಮಾ ನೋಡಿ, ಏನು ಸಿನಿಮಾ ಮಾಡಿದ್ದಾನೆ ಗುರು ಅನ್ಬೇಕು. ಅದೇ ನನ್ನ ಗುರಿ" ಎಂದು ಕೃಷ್ಣ ಹೇಳಿಕೊಂಡಿದ್ದಾರೆ.

More from Filmibeat

English summary
Darling Krishna and Milana Nagaraj revealed Love mocktail and Love Mocktail 2 Box Office Collection.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X