ಪತಿ ಡಾರ್ಲಿಂಗ್ ಕೃಷ್ಣಗೆ ಮಿಲನಾ ನಾಗರಾಜ್ ಪ್ರೇಮಿಗಳ ದಿನದಂದು ಹೇಳಿದ್ದೇನು? ಎಲ್ಲಾ 'ಲವ್ ಮಾಕ್ಟೇಲ್ 2' ಮಹಿಮೆ

ಡಾರ್ಲಿಂಗ್ ಕೃಷ್ಣ ಹಾಗೂ ಮಿಲನ ನಾಗರಾಜ್‌ಗೆ ಖುಷಿ ಮೇಲೆ ಖುಷಿ. ಅವರ ಬದುಕಿನಲ್ಲೀಗ ಎಲ್ಲವೂ ಅಂದುಕೊಂಡಂತೆ ನಡೆಯುತ್ತಿದೆ. ಕೆಲವು ದಿನಗಳ ಹಿಂದಷ್ಟೇ 'ಲವ್ ಮಾಕ್ಟೇಲ್ 2' ಸಿನಿಮಾ ರಿಲೀಸ್ ಆಗಿದೆ. ಸಿನಿಮಾ ನೋಡಿ ಯುವ ಪ್ರೇಮಿಗಳು ಖುಷಿಯಾಗಿದ್ದಾರೆ. ಇನ್ನೊಂದು ಕಡೆ ಚಿತ್ರರಂಗದ ಬೆಸ್ಟ್ ಜೋಡಿನೂ ಯಶಸ್ಸಿನ ಅಲೆಯಲ್ಲಿ ತೇಲಾಡುತ್ತಿದೆ. ಹೀಗಾಗಿ ಇವರಿಬ್ಬರ ಹರ್ಷಕ್ಕೆ ಒಂದಲ್ಲ, ಎರಡಲ್ಲ ಮೂರು ಕಾರಣವಿದೆ.

2020ರಲ್ಲಿ 'ಲವ್ ಮಾಕ್ಟೇಲ್' ಸಿನಿಮಾ ಡಾರ್ಲಿಂಗ್ ಕೃಷ್ಣ ಹಾಗೂ ಮಿಲನ ಬದುಕಿಗೆ ಹೊಸ ತಿರುವು ಕೊಟ್ಟಿತ್ತು. ಈ ಸಿನಿಮಾ ಹಿಟ್ ಲಿಸ್ಟ್ ಸೇರುತ್ತಿದ್ದಂತೆ ಮಿಲನಾ ನಾಗರಾಜ್ ಹಾಗೂ ಕೃಷ್ಣ ಬಾಳು ಹೊಸ ಹಾದಿ ಹಿಡಿದಿತ್ತು. ಇಬ್ಬರ ಪ್ರೇಮ ಲೋಕ ಅನಾವರಣಗೊಂಡಿತ್ತು. ಇದೇ ಜೋಡಿ ಈಗ ಮೊದಲ ವರ್ಷದ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುತ್ತಿದೆ. ಹೀಗಾಗಿ ಮಿಲನ ಪತಿಗೆ ಭಾವನಾತ್ಮಕವಾಗಿ ಸಾಲೊಂದನ್ನು ಬರೆದುಕೊಂಡಿದ್ದಾರೆ.

ಕೃಷ್ಣ-ಮಿಲನಾಗೆ ವಿವಾಹ ವಾರ್ಷಿಕೋತ್ಸವ

ಕೃಷ್ಣ-ಮಿಲನಾಗೆ ವಿವಾಹ ವಾರ್ಷಿಕೋತ್ಸವ

ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ನಾಗರಾಜ್ ಇಬ್ಬರೂ ವೈವಾಹಿಕ ಜೀವನಕ್ಕೆ ಕಾಲಿಟ್ಟು ಇಂದಿಗೆ ಒಂದು ವರ್ಷ. ಕಳೆದ ವರ್ಷ ಫೆಬ್ರವರಿ 14ರಂದು ಪ್ರೇಮಿಗಳ ದಿನದಂದೇ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. 'ಲವ್ ಮಾಕ್ಟೇಲ್' ಯಶಸ್ಸಿನ ಅಲೆಯಲ್ಲೇ ವೈವಾಹಿಕ ಜೀವನಕ್ಕೂ ಕಾಲಿಟ್ಟಿದ್ದ ಜೋಡಿ ಹಲವರಿಗೆ ಮಾದರಿಯಾಗಿದ್ದಾರೆ. ಇಂದು (ಫೆ 14) ಈ ಜೋಡಿಗೆ ಮೊದಲ ವಿವಾಹವಾರ್ಷಿಕೋತ್ಸವ. ಈ ಸಂದರ್ಭದಲ್ಲಿ ಮಿಲನಾ ನಾಗರಾಜ್ ತಮ್ಮ ಪತಿಗೆ ಭಾವನಾತ್ಮಕವಾಗಿ ವಿಶ್ ಮಾಡಿದ್ದಾರೆ.

ಕೃಷ್ಣಗೆ ಮಿಲನಾ ಹೇಳಿದ್ದೇನು?

ಮೊದಲ ವಿವಾಹ ವಾರ್ಷಿಕೋತ್ಸವದಂದು ಮಿಲನಾ ನಾಗರಾಜ್ ಪತಿ ಡಾರ್ಲಿಂಗ್ ಕೃಷ್ಣಗೆ ಪ್ರೀತಿ ವಿವಾಹ ವಾರ್ಷಿಕೋತ್ಸವದ ಶುಭಾಶಯಗಳನ್ನು ತಿಳಿಸಿದ್ದಾರೆ. ತನ್ನ ಇನ್‌ಸ್ಟಾಗ್ರಾಂನಲ್ಲಿ ಒಂದು ಫೋಟೊ ಶೇರ್ ಮಾಡಿ, ಎಮೋಷನಲ್ ಆಗಿ ಸಾಲೊಂದು ಬರೆದು ವಿಶ್ ಮಾಡಿದ್ದಾರೆ. "ನಿನ್ನ ಜೊತೆ ನನ್ನ ಇಡೀ ಜೀವನ ಹಂಚಿಕೊಳ್ಳಬೇಕು ಎಂದುಕೊಂಡಿದ್ದು ನಾನು ತೆಗೆದುಕೊಂಡ ಅತ್ಯುತ್ತಮ ನಿರ್ಧಾರ. ನನ್ನ ಪ್ರಪಂಚವೇ ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು." ಎಂದು ವಿಶ್ ಮಾಡಿದ್ದಾರೆ.

ಈ ಬಾರಿ ಮೂರು ಮೂರು ಖುಷಿ

ಈ ಬಾರಿ ಮೂರು ಮೂರು ಖುಷಿ

ಪ್ರೇಮಿಗಳ ದಿನದಂದು ಮಿಲನಾ ನಾಗರಾಜ್ ಹಾಗೂ ಡಾರ್ಲಿಂಗ್ ಕೃಷ್ಣ ಜೋಡಿಗೆ ಸಂಭ್ರಮವೋ ಸಂಭ್ರಮ. ಒಂದ್ಕಡೆ ವಿವಾಹ ವಾರ್ಷಿಕೋತ್ಸವ ಇನ್ನೊಂದು ಕಡೆ ಪ್ರೇಮಿಗಳ ದಿನ. ಎಲ್ಲಕ್ಕಿಂತ ಹೆಚ್ಚಾಗಿ ಮೊದಲ ವಿವಾಹವಾರ್ಷಿಕೋತ್ಸವಕ್ಕೆ ಇಬ್ಬರಿಗೂ ಒಳ್ಳೆ ಗಿಫ್ಟ್ ಸಿಕ್ಕಿದೆ. 'ಲವ್ ಮಾಕ್ಟೇಲ್ 2' ಸಿನಿಮಾ ಥಿಯೇಟರ್‌ಗಳಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದೆ. ಈ ಸಿನಿಮಾದ ಯಶಸ್ಸು ಇಬ್ಬರಿಗೂ ಉಡುಗೊರೆಯಾಗಿ ಸಿಕ್ಕಂತಾಗಿದೆ. ಹೀಗಾಗಿ ಮೂರು ಸಂಭ್ರಮಗಳನ್ನು ಒಟ್ಟೊಟ್ಟಿಗೆ ಆಚರಣೆ ಮಾಡುವಂತೆ ಆಗಿದೆ.

ನಿರ್ದೇಶಕ-ನಿರ್ಮಾಪಕಿಯಾಗಿ ಗೆಲುವು

ನಿರ್ದೇಶಕ-ನಿರ್ಮಾಪಕಿಯಾಗಿ ಗೆಲುವು

ಡಾರ್ಲಿಂಹ್ ಕೃಷ್ಣ ನಟನಾಗಿ ಹಾಗೂ ನಿರ್ದೇಶಕನಾಗಿ ಮತ್ತೆ ಗೆದ್ದಿದ್ದಾರೆ. 'ಲವ್ ಮಾಕ್ಟೇಲ್' ಬಳಿಕ ಪಾರ್ಟಿ 2 ಗೂ ಪಾಸಿಟಿವ್ ರಿವ್ಯೂ ಸಿಕ್ಕಿದೆ. ಚಿತ್ರಮಂದಿರಗಳಲ್ಲಿ ಮೊದಲ ವಾರ ಸಿನಿಮಾ ಗೆದ್ದಿದೆ. ಪ್ರೇಮಿಗಳನ್ನು ಟಾರ್ಗೆಟ್ ಮಾಡಿ ಸಿನಿಮಾ ಬಿಡುಗಡೆ ಮಾಡಲಾಗಿತ್ತು. ಹೀಗಾಗಿ ಪ್ರೇಮಿಗಳ ದಿನ ಕೂಡ ಸಿನಿಮಾ ಉತ್ತಮ ಪ್ರತಿಕ್ರಿಯೆ ಸಿಗುವ ಸೂಚನೆ ಇದೆ. ಈ ವಾರ ಮತ್ತೊಂದು ಲವ್ ಸ್ಟೋರಿ 'ಬೈಟು ಲವ್' ಬಿಡುಗಡೆಯಾಗುತ್ತಿದೆ. ಮುಂದಿನ ವಾರ 'ಏಕ್ ಲವ್ ಯಾ' ರಿಲೀಸ್ ಆಗುತ್ತಿದೆ. ಹೀಗಾಗಿ ಮುಂದಿನ ಎರಡು ವಾರ ಚಿತ್ರಮಂದಿರಲ್ಲಿ ಈ ಲವ್ ಸ್ಟೋರಿಗಳ ಜೊತೆ ಹೇಗೆ ಸೆಣೆಸಾಡುತ್ತೆ 'ಲವ್ ಮಾಕ್ಟೇಲ್ 2' ಅನ್ನುವುದು ಸದ್ಯಕ್ಕೆ ಕುತೂಹಲ.

More from Filmibeat

English summary
Darling Krishna and Milana wedding Anniversary and valentines day with love mocktail 2. Last year they got married in same valentines day.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X