ಮದುವೆ ಬಳಿಕ 'ದಿಲ್ ಪಸಂದ್' ಹುಡುಗಿ ಜೊತೆ ಡಾರ್ಲಿಂಗ್ ಕೃಷ್ಣನ ಕೃಷ್ಣಾವತಾರ

ಮದುವೆ ಬಳಿಕ ಡಾರ್ಲಿಂಗ್ ಕೃಷ್ಣ ಬದಲಾಗಿಬಿಟ್ಟಿದ್ದಾರೆ. ಸಿಕ್ಕಾ ಪಟ್ಟೆ ರೊಮ್ಯಾಂಟಿಕ್ ಆಗಿದ್ದಾರೆ. ಹೀಗಂತ ಸ್ಯಾಂಡಲ್‌ವುಡ್ ಮಾತಾಡಿಕೊಳ್ಳುತ್ತಿದೆ. ಸಿನಿಮಾ ಮಂದಿ ಕಣ್ಣು ಲವ್ ಮಾಕ್ಟೇಲ್ ನಟನ ಮೇಲೆ ಯಾಕೆ ಬಿತ್ತು? ಅನ್ನುವ ಪ್ರಶ್ನೆಗೊಂದು ಕಾರಣವಿದೆ. ಡಾರ್ಲಿಂಗ್ ಕೃಷ್ಣ ನಟಿಸುತ್ತಿರುವ ಹೊಸ ಸಿನಿಮಾ ಒಂದೆರಡು ಫೋಟೊಗಳನ್ನು ಚಿತ್ರತಂಡ ರಿವೀಲ್ ಮಾಡಿದೆ. ಆ ಫೋಟೊ ನೋಡಿ ಸಿನಿಪ್ರಿಯರು ಬಾಯಿ ಮೇಲೆ ಬೆರಳಿಟ್ಟುಕೊಂಡಿದ್ದಾರೆ.

Recommended Video

ಡಾರ್ಲಿಂಗ್ ಜೊತೆ 'ದಿಲ್ ಪಸಂದ್' ತಿನ್ನಲು ರೆಡಿಯಾದ ನಿಶ್ವಿಕಾ ನಾಯ್ಡು

ಇತ್ತೀಚೆಗೆ ಡಾರ್ಲಿಂಗ್ ಕೃಷ್ಣ ನಟಿಸುತ್ತಿರುವ ಹೊಸ ಸಿನಿಮಾ ಸೆಟ್ಟೇರಿತ್ತು. ಅದುವೇ 'ದಿಲ್ ಪಸಂದ್'. ಈ ಸಿನಿಮಾ ಫೋಟೊಗಳೇ ಈಗ ಬೇಜಾನ್ ಸದ್ದು ಮಾಡುತ್ತಿವೆ. ಇತ್ತೀಚೆಗಷ್ಟೆ ಲವ್​ ಮಿ ಆರ್​ ಹೇಟ್​ ಮಿ ಸಿನಿಮಾದ ಮೂಹೂರ್ತ ಕೂಡ ನಡೆದಿತ್ತು. ಗ್ಯಾಪ್‌ನಲ್ಲೇ 'ದಿಲ್ ಪಸಂದ್' ಹುಡುಗಿ ಜೊತೆ ಕೃಷ್ಣಾವತಾರವೆತ್ತಿ ಮತ್ತಷ್ಟು ಸಂಚಲನ ಸೃಷ್ಟಿಸಿದ್ದಾರೆ. ಲವ್ ಮಾಕ್ಟೇಲ್ ನೋಡಿ ಫಿದಾ ಆದವರಿಗೆ 'ದಿಲ್ ಪಸಂದ್' ಚಿತ್ರದ ಈ ಫೋಟೊಗಳು ಕಿಕ್ ಕೊಡಲು ಶುರುವಾಗಿದೆ.

ಡಾರ್ಲಿಂಗ್ ಕೃಷ್ಣನ 'ದಿಲ್ ಪಸಂದ್'

ಡಾರ್ಲಿಂಗ್ ಕೃಷ್ಣನ 'ದಿಲ್ ಪಸಂದ್'

ಒಂದು ಸಿನಿಮಾ ಹಾಡಿನಿಂದಲೋ, ಡೈಲಾಗ್ಸ್‌ನಿಂದಲೋ, ಇಲ್ಲಾ ಪೋಸ್ಟರ್‌ಗಳಿಂದಲೋ ಸದ್ದು ಮಾಡುತ್ತಿರುತ್ತೆ. ಡಾರ್ಲಿಂಗ್ ಕೃಷ್ಣ ಅಭಿನಯದ 'ದಿಲ್ ಪಸಂದ್' ಸಿನಿಮಾ ಕೂಡ ರೊಮ್ಯಾಂಟಿಕ್ ಫೋಟೊಗಳಿಂದ ಬೇಜಾನ್ ಸದ್ದು ಮಾಡುತ್ತಿದೆ. ಈಗಾಗಲೇ ಚಿತ್ರತಂಡ ಎರಡು ಫೋಟೊಗಳನ್ನು ರಿವೀಲ್ ಮಾಡಿದ್ದು, ಲವ್ ಮಾಕ್ಟೇಲ್ ಕೃಷ್ಣನ ಕೃಷ್ಣಾವತಾರ ಎದ್ದುಕಾಣುತ್ತಿದೆ. ಯುವ ಪ್ರೇಮಿಗಳ ಮನಗೆದ್ದ ಈ ಪೋಸ್ಟರ್ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಮೇಘ, ನಿಶ್ವಿಕಾ ಇಬ್ಬರಲ್ಯಾರು 'ದಿಲ್ ಪಸಂದ್'?

ಮೇಘ, ನಿಶ್ವಿಕಾ ಇಬ್ಬರಲ್ಯಾರು 'ದಿಲ್ ಪಸಂದ್'?

ಈಗ ಸ್ಯಾಂಡಲ್‌ವುಡ್ ಬೇಜಾನ್ ಸದ್ದು ಮಾಡುತ್ತಿರುವುದು ಡಾರ್ಲಿಂಗ್ ಕೃಷ್ಣ ಹಾಗೂ ನಿಶ್ವಿಕಾ ನಾಯ್ಡು ಫೋಟೊಗಳು. ಸಿನಿಮಾದ ರೊಮ್ಯಾಂಟಿಕ್ ಸನ್ನಿವೇಶವೊಂದರ ಫೋಟೊಗಳಿವು. ಅಂದ ಹಾಗೆ ಈ ದಿಲ್ ಪಸಂದ್ ಸಿನಿಮಾದಲ್ಲಿ ನಿಶ್ವಿಕಾ ನಾಯ್ಡು ಜೊತೆ ಮತ್ತೊಬ್ಬ ನಾಯಕಿ ಕೂಡ ಇದ್ದಾರೆ. ಅವರೇ, ಜೊತೆ ಜೊತೆಯಲಿ ಧಾರಾವಾಹಿ ಮೂಲಕ ಕನ್ನಡಿಗರಿಗೆ ಚಿರಪರಿಚಿತರಾಗಿರುವ ಮೇಘಾ ಶೆಟ್ಟಿ. ಇಬ್ಬರು ನಾಯಕಿಯ ಪೈಕಿ ಡಾರ್ಲಿಂಗ್ ಕೃಷ್ಣನ 'ದಿಲ್ ಪಸಂದ್' ಯಾರು ಅನ್ನುವುದು ಸದ್ಯಕ್ಕೆ ಸಸ್ಪೆನ್ಸ್.

ಮೊದಲ ಹಂತದ ಚಿತ್ರೀಕರಣ ಮುಕ್ತಾಯ

ಮೊದಲ ಹಂತದ ಚಿತ್ರೀಕರಣ ಮುಕ್ತಾಯ

'ದಿಲ್ ಪಸಂದ್' ಸಿನಿಮಾಗೆ ಶಿವ ತೇಜಸ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಎರಡು ತಿಂಗಳ ಹಿಂದಷ್ಟೇ ರವಿ ಡಿ ಚನ್ನಣ್ಣನವರ್ ಸಿನಿಮಾದ ಟೈಟಲ್ ಅನ್ನು ಅನಾವರಣಗೊಳಿಸಿದ್ದರು. ಅಂದಿನಿಂದ ಬಿಡದಂತೆ ಸಿನಿಮಾದ ಚಿತ್ರೀಕರಣ ನಡೆಯತ್ತಿತ್ತು. ಸದ್ಯ ಮೊದಲ ಹಂತ ಚಿತ್ರೀಕರಣ ಪೂರ್ಣಗೊಂಡಿದ್ದು, ಎರಡನೇ ಹಂತದ ಚಿತ್ರೀಕರಣಕ್ಕೆ ಚಿತ್ರತಂಡ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. 'ದಿಲ್ ಪಸಂದ್' ರೊಮ್ಯಾಂಟಿಕ್ ಕಾಮಿಡಿ ಸಿನಿಮಾ ಆಗಿದ್ದು, ಪ್ರೇಕ್ಷಕರನ್ನು ಹೊಟ್ಟೆ ಹುಣ್ಣಾಗಿಸುವಷ್ಟು ನಗಿಸುತ್ತೆ ಎನ್ನುವ ನಿರೀಕ್ಷೆಯಿದೆ.

ಸ್ಯಾಂಡಲ್‌ವುಡ್ ಡಾರ್ಲಿಂಗ್ ಫುಲ್ ಬ್ಯುಸಿ

ಸ್ಯಾಂಡಲ್‌ವುಡ್ ಡಾರ್ಲಿಂಗ್ ಫುಲ್ ಬ್ಯುಸಿ

ಡಾರ್ಲಿಂಗ್ ಕೃಷ್ಣ ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ಇವರ ಕೈಯಲ್ಲೀಗ ಒಂದಲ್ಲಾ, ಎರಡಲ್ಲಾ ಬರೋಬ್ಬರಿ ಸಿನಿಮಾಗಳಿವೆ. ಕೃಷ್ಣ ನಟಿಸಿ ನಿರ್ದೇಶಿಸಿರುವ ಲವ್ ಮಾಕ್ಟೇಲ್ ಸೀಕ್ವೆಲ್ ಚಿತ್ರೀಕರಣ ಮುಗಿದಿದೆ. ಶುಗರ್ ಫ್ಯಾಕ್ಟರಿ, ಮಿಸ್ಟರ್ ಬ್ಯಾಚುಲರ್, ಲಕ್ಕಿ ಮ್ಯಾನ್, ಲವ್ ಮಿ ಔರ್ ಹೇಟ್ ಮಿ ಜೊತೆ ದಿಲ್ ಪಸಂದ್ ಸಿನಿಮಾಗಳು ಅನೌನ್ಸ್ ಆಗಿ ಚಿತ್ರೀಕರಣದ ಹಂತದಲ್ಲಿವೆ. ಅಲ್ಲದೆ ಇನ್ನೂ ಕೆಲವು ಸಿನಿಮಾಗಳು ಮಾತುಕತೆಯ ಹಂತದಲ್ಲಿವೆ. ಸ್ಯಾಂಡಲ್‌ವುಡ್‌ನ ಬ್ಯುಸಿ ನಟರಲ್ಲಿ ಕೃಷ್ಣ ಕೂಡ ಒಬ್ಬರಾಗಿದ್ದು, ಸಿನಿಪ್ರಿಯರು 'ಲವ್ ಮಾಕ್ಟೇಲ್ 2' ರಿಲೀಸ್‌ಗಾಗಿ ಎದುರು ನೋಡುತ್ತಿದ್ದಾರೆ.

More from Filmibeat

English summary
Love mocktail actor Darling Krishna's new movie 'Dil Pasand' romantic poster creating sensation. Megha Shetty and Nishvika Naidu are two lead actress in Dil pasand.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X