ಫ್ಯಾಮಿಲಿ ಕೋರ್ಟ್‌ನಲ್ಲಿ ಡಾರ್ಲಿಂಗ್ ಕೃಷ್ಣ; ಫೋಟೊ ವೈರಲ್

ಸ್ಯಾಂಡಲ್‌ವುಡ್‌ನಲ್ಲಿ ವಿವಾದಗಳಿಂದ ದೂರ ಇರುವ ನಟ ಡಾರ್ಲಿಂಗ್ ಕೃಷ್ಣ. ನಟನೆ ಹಾಗೂ ನಿರ್ದೇಶನದ ಕಡೆಗೆ ಹೆಚ್ಚು ಗಮನ ಹರಿಸಿದ್ದಾರೆ. ಜೊತೆಗೆ ಸಿಸಿಎಲ್‌ನಲ್ಲಿ ಕರ್ನಾಟಕ ಬುಲ್ಡೋಜರ್‌ ತಂಡ ಸ್ಟಾರ್ ಆಟಗಾರನಾಗಿ ಜನಪ್ರಿಯರಾಗಿದ್ದಾರೆ. ಇತ್ತೀಚೆಗಷ್ಟೇ ಡಾರ್ಲಿಂಗ್ ಕೃಷ್ಣ 'ಲವ್ ಮಾಕ್ಟೇಲ್ 3' ಸಿನಿಮಾವನ್ನು ಆರಂಭಿಸಿದ್ದರು. ವೃತ್ತಿ ಬದುಕಿನಲ್ಲಿ ಯಶಸ್ಸಿ ಹೆಜ್ಜೆ ಇಡುತ್ತಿರುವ ನಟನೀಗ ಕೌಟುಂಬ ನ್ಯಾಯಾಲಯದಲ್ಲಿ ಕಾಣಿಸಿಕೊಂಡಿದ್ದಾರೆ.

ಡಾರ್ಲಿಂಗ್ ಕೃಷ್ಣ ಬೆಂಗಳೂರಿನ ಕೌಟುಂಬಿಕ ನ್ಯಾಯಲಯದಲ್ಲಿ ಕಾಣಿಸಿಕೊಂಡಿರುವ ಫೋಟೊ ಒಂದು ವೈರಲ್ ಆಗುತ್ತಿದೆ. ಈ ಫೋಟೊ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದಂತೆ ಚರ್ಚೆಗೆ ಎಡೆ ಮಾಡಿಕೊಟ್ಟಿದೆ. ಈ ಫೋಟೊ ನೋಡುತ್ತಿದ್ದಂತೆ ಡಾರ್ಲಿಂಗ್ ಕೃಷ್ಣ ಅಭಿಮಾನಿಗಳಿಗೆ ಹಾಗೂ ನೆಟ್ಟಿಗರು ಗೊಂದಲಕ್ಕೆ ಬಿದ್ದಿದ್ದಾರೆ.

Darling Krishna Spotted at Bengaluru Family Court Photo Goes Viral

ಬೆಂಗಳೂರಿನ ಫ್ಯಾಮಿಲಿ ಕೋರ್ಟ್‌ನಲ್ಲಿ ಡಾರ್ಲಿಂಗ್ ಕೃಷ್ಣ ನೇರಳೆ ಬಣ್ಣ ಟಿ-ಶರ್ಟ್ ಹಾಗೂ ಜೀನ್ಸ್ ಧರಿಸಿ, ಮುಖಕ್ಕೆ ಮಾಸ್ಕ್ ಹಾಕಿಕೊಂಡು ಓಡಾಡುತ್ತಿರುವಾಗ ಕ್ಯಾಮರಾ ಕಣ್ಣಿಗೆ ಬಿದ್ದಿದ್ದಾರೆ. ಅಸಲಿಗೆ ಕೃಷ್ಣ ಫ್ಯಾಮಿಲಿ ಕೋರ್ಟ್‌ಗೆ ಹೋಗಿದ್ದೇಕೆ? ಒಬ್ಬರೇ ಹೋಗಿದ್ದರೇ? ಸಿನಿಮಾಗೋಸ್ಕರ ಹೋಗಿದ್ದರೇ? ಇಲ್ಲ ಕೌಟುಂಬಿಕ ಸಮಸ್ಯೆಯಿಂದ ಹೋಗಿದ್ದರೇ? ಅಂತ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಿದೆ.

ಬೆಂಗಳೂರಿನ ಫ್ಯಾಮಿಲಿ ಕೋರ್ಟ್‌ನಲ್ಲಿ ಡಾರ್ಲಿಂಗ್ ಕೃಷ್ಣ ಓಡಾಡುತ್ತಿರುವುದನ್ನು ಅಲ್ಲಿದ್ದವರೇ ಯಾರೋ ಗುರುತಿಸಿದ್ದಾರೆ. ಇವರೊಂದಿಗೆ ಮಿಲನಾ ನಾಗರಾಜ್ ಕೂಡ ಬಂದಿದ್ದರು ಎಂದು ಹೇಳಲಾಗುತ್ತಿದೆ. ಆದರೆ, ಅವರನ್ನು ಯಾರ ಕಣ್ಣಿಗೂ ಬಿಳಲಿಲ್ಲ ಎಂಬುದುವುನ್ನು ಬಲ್ಲ ಮೂಲಗಳು ಹೇಳುತ್ತಿವೆ. ಹಾಗಿದ್ದರೆ, ಕುಟುಂಬದಲ್ಲಿ ಸಮಸ್ಯೆ ಏನಾದರೂ ಇದೆಯಾ? ಎಂಬ ಪ್ರಶ್ನೆ ಅವರಿಬ್ಬರ ಅಭಿಮಾನಿಗಳನ್ನು ಕಾಡುತ್ತಿದೆ.

ಸದ್ಯಕ್ಕೆ ಸಿಕ್ಕಿರುವ ಮಾಹಿತಿ ಪ್ರಕಾರ, ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ನಾಗರಾಜ್ ಇಬ್ಬರೂ ತಮ್ಮ ಸಿನಿಮಾಗೆ ಸಂಬಂಧಿಸಿದಂತೆ ಫ್ಯಾಮಿಲಿ ಕೋರ್ಟ್‌ಗೆ ಹೋಗಿದ್ದರು. ಅದನ್ನು ಬಿಟ್ಟು ಬೇರೆ ಯಾವುದೇ ಸಮಸ್ಯೆಯಿಲ್ಲ ಎಂದು ಹೇಳಲಾಗುತ್ತಿದೆ. ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ನಾಗರಾಜ್ ಇಬ್ಬರೂ 'ಲವ್ ಮಾಕ್ಟೇಲ್ 3' ಸಿನಿಮಾ ಮಾಡುತ್ತಿದ್ದಾರೆ. ಈ ಸಿನಿಮಾಗೆ ಸಂಬಂಧಪಟ್ಟಂತೆ ಕೌಟುಂಬಿಕ ನ್ಯಾಯಾಲಕ್ಕೆ ಹೋಗಿರಬಹುದು ಎಂದು ಆಪ್ತರ ಅಭಿಪ್ರಾಯ.

Darling Krishna Spotted at Bengaluru Family Court Photo Goes Viral

ಇನ್ನು ಇಬ್ಬರ ಇನ್‌ಸ್ಟಾಗ್ರಾಂನಲ್ಲೂ ಯಾವುದೇ ರೀತಿ ಡಿಸ್ಟರ್ಬೆನ್ಸ್ ಇಲ್ಲ. ಇತ್ತೀಚೆಗೆ ಇಬ್ಬರೂ ಮಗಳ ಜೊತೆಯಲ್ಲಿ ಗಣೇಶ ಹಬ್ಬವನ್ನು ಆಚರಣೆ ಮಾಡಿದ್ದಾರೆ. ಮಗಳೊಂದಿಗೆ ಕ್ಯಾಮರಾಗೆ ಪೋಸ್ ಕೊಟ್ಟಿದ್ದು, ಆ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಅಲ್ಲದೆ ಅವರ ಇನ್‌ಸ್ಟಾಗ್ರಾಂನಿಂದ ಯಾವುದೇ ಫೋಟೋ ಹಾಗೂ ವಿಡಿಯೋಗಳು ಕೂಡ ಕಾಣೆಯಾಗಿಲ್ಲ. ಹೀಗಾಗಿ ಇದು ಸಿನಿಮಾಗೆ ಸಂಬಂಧಿಸಿದ ಭೇಟಿನೇ ಇರಬಹುದೆಂದು ಗೆಸ್ ಮಾಡಲಾಗುತ್ತಿದೆ.

ಸದ್ಯ ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ನಾಗರಾಜ್ ಇಬ್ಬರೂ ತಮ್ಮದೇ ನಿರ್ಮಾಣ ಸಂಸ್ಥೆಯಿಂದ 'ಲವ್ ಮಾಕ್ಟೇಲ್ 3' ಸಿನಿಮಾಗೆ ಕೈ ಹಾಕಿದ್ದಾರೆ. ಕೆಲವೇ ತಿಂಗಳ ಹಿಂದಷ್ಟೇ ಈ ಸಿನಿಮಾ ಅದ್ಧೂರಿಯಾಗಿ ಆರಂಭ ಆಗಿದೆ. 'ಲವ್ ಮಾಕ್ಟೇಲ್' ಹಾಗೂ 'ಲವ್ ಮಾಕ್ಟೇಲ್ 2' ಎರಡೂ ಸಿನಿಮಾಗಳು ಯಶಸ್ಸು ಕಂಡ ಬೆನ್ನಲ್ಲೇ 'ಲವ್ ಮಾಕ್ಟೇಲ್ 3'ಗೆ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಇಬ್ಬರೂ ಇದೇ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆಂದು ಹೇಳಲಾಗಿದೆ.

ಇನ್ನು ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ಇಬ್ಬರೂ ಓಣಂ ಹಬ್ಬವನ್ನು ಸೆಲೆಬ್ರೆಟ್ ಮಾಡುತ್ತಿರುವ ಫೋಟೊವನ್ನು ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಹಾಕಿಕೊಂಡಿದ್ದಾರೆ. ಹೀಗಾಗಿ ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ನಾಗರಾಜ್ ಇಬ್ಬರ ಅಭಿಮಾನಿಗಳು ಕೂಡ ಆತಂಕ ಪಡೆಬೇಕಾದ ಅಗತ್ಯವಿಲ್ಲ. ಅಲ್ಲದೆ ಈಗ ಹರಿದಾಡುತ್ತಿರುವ ಫೋಟೊ ಕೂಡ ಎಂದಿನದ್ದು ಅನ್ನೋದು ಕ್ಲಾರಿಟಿ ಇಲ್ಲ. ಬಹುಶ: ಈ ಫೋಟೊ ಬಗ್ಗೆ ಲವ್ ಮಾಕ್ಟೇಲ್ ಜೋಡಿ ಶೀಘ್ರದಲ್ಲಿಯೇ ಸ್ಪಷ್ಟೀಕರಣವನ್ನು ಕೊಡಬಹುದು.

More from Filmibeat

English summary
Kannada actor Darling Krishna was recently seen at the Bengaluru Family Court, and his photo from the spot has gone viral on social media, sparking curiosity among fans and Sandalwood circles.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X