»   » ಡಾರ್ಲಿಂಗ್ ಕೃಷ್ಣ ನ 'ಮುಂಬೈ' ಪ್ರಯಾಣಕ್ಕೆ ದಿನಗಣನೆ ಶುರು

ಡಾರ್ಲಿಂಗ್ ಕೃಷ್ಣ ನ 'ಮುಂಬೈ' ಪ್ರಯಾಣಕ್ಕೆ ದಿನಗಣನೆ ಶುರು

Written By:
Subscribe to Filmibeat Kannada

ಡಾರ್ಲಿಂಗ್ ಕೃಷ್ಣ ಇತ್ತೀಚೆಗೆತಾನೆ 'ಜಾನ್ ಜಾನಿ ಜನಾರ್ಧನ್' ಸಿನಿಮಾದಲ್ಲಿ ಜಾನಿ ಪಾತ್ರದಲ್ಲಿ ಮಿಂಚಿದ್ದರು. ಈದೀಗ ಅವರೇ ನಾಯಕ ನಟನಾಗಿ ಅಭಿನಯಿಸಿರುವ 'ಮುಂಬೈ' ಚಿತ್ರ ಜನವರಿ 26 ರಂದು ತೆರೆಕಾಣುತ್ತಿದೆ.[ವಿಮರ್ಶೆ: 'ಜಾನ್-ಜಾನಿ-ಜನಾರ್ಧನ್' ಚೆಲ್ಲಾಟ ಮತ್ತು ಸಾಮಾಜಿಕ ಸಂದೇಶ!]

darling krishna

ಡಿಸೆಂಬರ್ 26 ರಂದು 'ಮುಂಬೈ' ಚಿತ್ರತಂಡ ಪಡ್ಡೆ ಹುಡುಗರಿಗೆ ಹೇಳಿಮಾಡಿಸಿದಂತಹ ಹಾಡುಗಳನ್ನು ಬಿಡುಗಡೆ ಮಾಡಿತ್ತು. 'ಲವಿಂಗ್ ಹುಡಗೀರ್ ಪವರ್ರು ಡ್ಯಾಮೇಜ್' ಎಂಬ ಹಾಡನ್ನು ವಿಜಯ್ ಪ್ರಕಾಶ್ ವಾಯ್ಸ್ ನಲ್ಲಿ ಕೇಳಿ ಹಲವು ಲವರ್ ಬಾಯ್‌ ಗಳು ಫಿದಾ ಸಹ ಆಗಿದ್ರು.

'ಡೆಮೋ ಕೊಡೋಕೆ ನಾನೇನು ಸಂತೂರು ಸೋಪಲ್ಲಾ.. ಆರಡಿ ಬುಲೆಟ್' ಎಂಬ ಖದರ್ ಡೈಲಾಗ್ ಮೂಲಕ 'ಮುಂಬೈ' ಚಿತ್ರದಲ್ಲಿ ಡಾರ್ಲಿಂಗ್ ಕೃಷ್ಣ ಅಬ್ಬರಿಸಿದ್ದಾರೆ. ಪವರ್ ಸ್ಟಾರ್ ಪುನೀತ್ ರಾಜ್‌ ಕುಮಾರ್ ವಾಯ್ಸ್ ನಲ್ಲಿ 'ದಾಸವಾಳದ ಹೂವಾ ಕಿವಿಗಿಡುತಾಳವ್ವ.. ಪಟೈಕಳಿಗೆಲ್ಲಾ ಹಾರ್ಟೆಲ್ಲಾ ಡವಾ' ಎಂಬ ಸಾಂಗ್ ಇರುವುದು ಚಿತ್ರದ ಬಗ್ಗೆ ಇನ್ನಷ್ಟು ಕ್ರೇಜ್‌ ಹೆಚ್ಚಿಸಿದೆ.

teju

'ಮುಂಬೈ' ಚಿತ್ರಕ್ಕೆ ಎಸ್.ಆರ್.ರಮೇಶ್ ಆಕ್ಷನ್ ಕಟ್ ಹೇಳಿದ್ದು, ರಾಮು ಚಿತ್ರ ನಿರ್ಮಾಣ ಮಾಡಿದ್ದಾರೆ. ಡಾರ್ಲಿಂಗ್ ಕೃಷ್ಣನಿಗೆ ತೇಜು ನಾಯಕಿ ನಟಿ ಆಗಿ ಅಭಿನಯಿಸಿದ್ದಾರೆ. ವಿ ಶ್ರೀಧರ್ ಸಂಭ್ರಮ್ ಸಂಗೀತ ಸಂಯೋಜನೆ ಮಾಡಿದ್ದಾರೆ.

English summary
Darling Krishna Starrer 'Mumbai' Kannada Cinema Releasing on January 26. This Movie is Directed by S.R.Ramesh, Music by V.Sridhar Sambhram.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada