twitter
    For Quick Alerts
    ALLOW NOTIFICATIONS  
    For Daily Alerts

    ವಿಮರ್ಶೆ: 'ಜಾನ್-ಜಾನಿ-ಜನಾರ್ಧನ್' ಚೆಲ್ಲಾಟ ಮತ್ತು ಸಾಮಾಜಿಕ ಸಂದೇಶ !

    By Bharath Kumar
    |

    'ಜಾನ್-ಜಾನಿ-ಜನಾರ್ಧನ್' ಈ ಮೂವರು 'ಚಡ್ಡಿ ದೋಸ್ತ್'ಗಳು. ಒಬ್ಬರನ್ನ ಬಿಟ್ಟು ಮತ್ತೊಬ್ಬರು ಏನೂ ಮಾಡಲ್ಲ. ಆದ್ರೆ, ಹುಡುಗೀರ್ ಲವ್ ಮಾಡೋ ವಿಷ್ಯದಲ್ಲಿ ಒಬ್ಬನಿಗೆ ಗೊತ್ತಾಗದ ಹಾಗೆ ಮತ್ತೊಬ್ಬ ಲವ್ ಮಾಡೋಕೆ ಹೋಗೋದು ಇವರ ಸ್ವಭಾವ.

    ಇವರ ಲೈಫ್ ಒಂಥರ ಸೀರಿಯಸ್ ಎನಿಸಿದ್ರೂ, ಕಾಮಿಡಿ ಮನೋರಂಜನೆ. ಇದರ ಜೊತೆಗೆ ಮನಕುಲುಕುವಂತಹ ಸಂದೇಶವೊಂದು ಚಿತ್ರದಲ್ಲಿದ್ದು, ಪ್ರೇಕ್ಷಕರನ್ನ ಕಾಡುತ್ತೆ.

    Rating:
    3.0/5

    ಚಿತ್ರ : ಜಾನ್ ಜಾನಿ ಜನಾರ್ಧನ್
    ನಿರ್ದೇಶಕ : ಗುರುದೇಶ್ ಪಾಂಡೆ
    ನಿರ್ಮಾಪಕ : ಎಂ. ಆರ್ ಪಿಕ್ಚರ್ಸ್
    ಸಂಗೀತ ನಿರ್ದೇಶನ : ಅರ್ಜುನ್ ಜನ್ಯ
    ಛಾಯಾಗ್ರಹಣ : ಸಂತೋಷ್ ರೈ ಪತಾಜೇ
    ಸಂಕಲನ : ಕೆ ಎಂ ಪ್ರಕಾಶ್
    ತಾರಾಗಣ : ಅಜಯ್ ರಾವ್, ಲೂಸ್ ಮಾದ ಯೋಗೇಶ್, ಮದರಂಗಿ ಕೃಷ್ಣ, ಕಾಮ್ನಾ ರಣಾವತ್, ರವಿಶಂಕರ್, ಮತ್ತು ಇತರರು.
    ಬಿಡುಗಡೆ : ಡಿಸೆಂಬರ್ 9, 2016

    ಕಥಾಹಂದರ

    ಕಥಾಹಂದರ

    ಜಾನ್ (ಲೂಸ್ ಮಾದ ಯೋಗೇಶ್), ಜಾನಿ (ಮದರಂಗಿ ಕೃಷ್ಣ), ಜಾನಾರ್ಧನ್(ಅಜಯ್ ರಾವ್) ಈ ಮೂವರು 'ಚಡ್ಡಿ ದೋಸ್ತ್'ಗಳು. ಸಣ್ಣಪುಟ್ಟ ಕೆಲಸ ಮಾಡ್ಕೊಂಡು ಶೋಕಿ ಮಾಡ್ಕೊಂಡಿರುವ ಇವರಿಗೆ ಬ್ಯಾಂಕಾಕ್ ಹೋಗಿ ಎಂಜಾಯ್ ಮಾಡ್ಬೇಕು ಎಂಬ ಆಸೆ. ಇನ್ನೂ ಇದರ ಜೊತೆಗೆ ಇವರು ಏರಿಯಾದಲ್ಲಿ ಶಾನ್ವಿ (ಕಾಮ್ನಾ ರಣಾವತ್) ಎಂಬ ಒಬ್ಬ ಹುಡುಗಿ ಇರುತ್ತಾಳೆ. ಈ ಮೂರು ಜನರಲ್ಲಿ ಶಾನ್ವಿ ಯಾರನ್ನ ಇಷ್ಟ ಪಡುತ್ತಾಳೆ ಎಂಬ ಕಾಂಪಿಟೇಷನ್. ಹೀಗೆ ಸಾಗುವ ಕಥೆ ಫೂರ್ತಿ ಮನೋರಂಜನೆಯಿಂದ ಕೂಡಿದೆ. ಈ ಕಥೆಯ ಜೊತೆ 'ಹೆಣ್ಣು ಮಕ್ಕಳನ್ನ ಉಳಿಸಿ' ಎಂಬ ಸಂದೇಶ ಚಿತ್ರಮಂದಿರದಲ್ಲಿದ್ದವರ ಹೃದಯ ಮುಟ್ಟುತ್ತೆ.

    ಮನೋರಂಜನೆಯ ಪ್ಯಾಕೇಜ್

    ಮನೋರಂಜನೆಯ ಪ್ಯಾಕೇಜ್

    'ಜಾನ್ 'ಜಾನಿ ಜನಾರ್ಧನ್' ಹುಡುಗೀರ್ ನ ಪಟಾಯಿಸುವುದಕ್ಕಾಗಿ ಮಾಡುವ ಖಸರತ್ತು, ಅವರಿಗೆ ಅವರೇ ಕೊಡೋ ಬಿಲ್ಡಪ್ ಗಳು ನೋಡುಗರನ್ನ ರಂಜಿಸುತ್ತೆ. ಸೀರಿಯಸ್ ಸನ್ನಿವೇಶಗಳು ಬಂದ್ರು ಅಲ್ಲಿ ಅದು ಕಾಮಿಡಿಯಾಗಿ ಪರಿವರ್ತನೆಯಾಗುತ್ತೆ. ಅಷ್ಟರಮಟ್ಟಿಗೆ 'ಜಾನ್ 'ಜಾನಿ ಜನಾರ್ಧನ್' ಎಂಟರ್ ಟೈನ್ ಮಾಡುತ್ತೆ

    ಕಾಮಿಡಿ ಜರ್ನಿಯಲ್ಲಿದೆ ಮನಕುಲುಕುವ ಸಂದೇಶ

    ಕಾಮಿಡಿ ಜರ್ನಿಯಲ್ಲಿದೆ ಮನಕುಲುಕುವ ಸಂದೇಶ

    ಪೂರ್ತಿ ಸಿನಿಮಾವನ್ನ ಮನೋರಂಜನೆ ದೃಷ್ಟಿಯಲ್ಲೇ ಪ್ರೆಸೆಂಟ್ ಮಾಡಿರುವ ನಿರ್ದೇಶಕರು, ಚಿತ್ರದ ಕೊನೆಯ 20 ನಿಮಿಷ ಸೀರಿಯಸ್ ವಿಷ್ಯವನ್ನಿಟ್ಟು ಮನಕುಲುಕುವಂತಹ ಸಂದೇಶ ನೀಡಿದ್ದಾರೆ. ಅಪ್ರಾಪ್ತ ಬಾಲಕಿಯರ ಮೇಲೆ ಆಗುತ್ತಿರುವ ಅತ್ಯಾಚಾರದ ಘಟನೆಯನ್ನಿಟ್ಟು 'ಹೆಣ್ಣು ಮಕ್ಕಳನ್ನ ಉಳಿಸಿ' ಎಂಬ ಸಂದೇಶವನ್ನ ನೀಡಲಾಗಿದೆ

    'ಜಾನ್ ಜಾನಿ ಜನಾರ್ಧನ್' ಅಭಿನಯ ಹೇಗೆ?

    'ಜಾನ್ ಜಾನಿ ಜನಾರ್ಧನ್' ಅಭಿನಯ ಹೇಗೆ?

    ತಮ್ಮ ಸಾಮರ್ಥ್ಯಕ್ಕೆ ತಕ್ಕ ಅಭಿನಯವನ್ನ ಮೂವರು ಮಾಡಿದ್ದಾರೆ. ಅಜಯ್ ರಾವ್ ಹಾಗೂ ಮದರಂಗಿ ಕೃಷ್ಣ ಅವರ ಅಭಿನಯ ಕ್ಲಾಸ್ ಆಗಿದೆ. ಅಂಗವಿಕಲನ ಪಾತ್ರದಲ್ಲಿ ಕಾಣಿಸಿಕೊಂಡಿರುವ ಲೂಸ್ ಮಾದ ಯೋಗೇಶ್ ಹೆಚ್ಚು ಗಮನ ಸೆಳೆಯುತ್ತಾರೆ.

    ತಾರೆಗಳ ಹಬ್ಬ

    ತಾರೆಗಳ ಹಬ್ಬ

    ಮೂವರು ಹೀರೋಗಳು ಎನ್ನುವುದೇ ಒಂದು ವಿಶೇಷ. ಗುರುನಂದನ್, ಭಾವನ ರಾವ್, ಪಾವನ, ಹೀಗೆ ಬಂದು ಹಾಗೆ ಹೋಗ್ತಾರೆ. ಇನ್ನೂ ಚಿತ್ರದ 'ಪ್ರೀತಿಯ ಪಾರಿವಾಳ' ಹಾಡಿಗೆ ಹೆಜ್ಜೆ ಹಾಕುವ ಐಂದ್ರಿತಾ ರೈ ಪ್ರೇಕ್ಷಕರಿಗೆ ಕಿಕ್ ಕೊಟ್ರೆ, ಕ್ಲೈಮ್ಯಾಕ್ಸ್ ನಲ್ಲಿ ಬರುವ ಎಸಿಪಿ ದುರ್ಗಿ ಮಾಲಾಶ್ರೀ ಅವರು, ಸಿನಿಮಾನ ಎಂಡ್ ಮಾಡ್ತಾರೆ.

    ಉಳಿದವರ ಅಭಿನಯ

    ಉಳಿದವರ ಅಭಿನಯ

    ಪ್ರಶಾಂತ್ ಸಿದ್ದಿ, ರವಿಶಂಕರ್ ಗೌಡ, ಬಿರಾದರ್, ಶ್ರೀನಿವಾಸ ಮೂರ್ತಿ, ಗಿರಿಜಾ ಲೊಕೇಶ್ ಇಡೀ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಉಮೇಶ್, ಟೆನ್ನಿಸ್ ಕೃಷ್ಣ, ಬ್ಯಾಂಕ್ ಜನಾರ್ಧನ್, ಸಂಕೇತ್ ಕಾಶಿ ಕೂಡ ಅಭಿನಯಿಸಿದ್ದಾರೆ. ಈ ಎಲ್ಲ ತಾರೆಯರು ತಮ್ಮ ತಮ್ಮ ಪಾತ್ರಗಳಿಗೆ ಜೀವ ತುಂಬಿದ್ದಾರೆ.

    ಸಂಗೀತ ಹೇಗಿದೆ

    ಸಂಗೀತ ಹೇಗಿದೆ

    ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಮಾಡಿದ್ದು, ಹಾಡುಗಳು ಚಿತ್ರಕ್ಕೆ ಜೋಶ್ ನೀಡಿದೆ.

    ರಿಮೇಕ್ ಸಿನಿಮಾ

    ರಿಮೇಕ್ ಸಿನಿಮಾ

    ಅಂದ್ಹಾಗೆ, 'ಜಾನ್-ಜಾನಿ-ಜನಾರ್ಧನ್' ಸಿನಿಮಾ ಮಲಯಾಳಂನ 'ಅಮರ್-ಅಕ್ಬರ್-ಆಂಟೋನಿ' ಚಿತ್ರದ ರಿಮೇಕ್. ಮಲಯಾಳಂ ಚಿತ್ರವನ್ನ ಯಥಾವತ್ತಾಗಿ ಕನ್ನಡಕ್ಕೆ ಇಳಿಸಿದ್ದಾರೆ.

    ನಿರ್ದೇಶನ ಹೇಗಿದೆ

    ನಿರ್ದೇಶನ ಹೇಗಿದೆ

    ಗುರುದೇಶ್ ಪಾಂಡೆ ನಿರ್ದೇಶನದಲ್ಲಿ ಹೊಸತನವೇನೂ ಇಲ್ಲ. ಸಾಮಾನ್ಯ ಕಥೆಯನ್ನ, ಎಂಟರ್ ಟೈನಿಂಗ್ ಆಗಿ ಪ್ರೆಸೆಂಟ್ ಮಾಡಿದ್ದಾರೆ. ಕೆಲವೊಂದು ಕಡೆ ಚಿತ್ರಕಥೆ ನಿಧಾನವಾಯಿತು ಎಂದು ಎನಿಸುತ್ತದೆ.

    ಫೈನಲ್ ಸ್ಟೇಟ್ ಮೆಂಟ್

    ಫೈನಲ್ ಸ್ಟೇಟ್ ಮೆಂಟ್

    ಕಥೆಯಲ್ಲಿ ಏನೂ ವಿಶೇಷತೆಯಲ್ಲ. ಆದ್ರೆ, ಮನೋರಂಜನೆ ಕೊರತೆಯಿಲ್ಲ. ಡಬ್ಬಲ್ ಮೀನಿಂಗ್ ಡೈಲಾಗ್ ಗಳು, ಪಡ್ಡೆ ಹುಡುಗರಿಗೆ ಇಷ್ಟುವಾಗುವಂತಹ ಕಾಮಿಡಿಗಳು ಚಿತ್ರದಲ್ಲಿದೆ. ಜೊತೆ ಒಂದು ಸಾಮಾಜಿಕ ಸಂದೇಶ ಕೂಡ ಚಿತ್ರದಲ್ಲಿದೆ.

    English summary
    Kannada Actor Ajay Rao, Actor Yogesh and Actor Krishna starrer Kannada Movie 'John Jaani Janardhan' has hit the screens today (December 9nd). Here is the complete review of 'John Jaani Janardhan'
    Friday, December 9, 2016, 16:59
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X