55 ದಿನ 'ಶುಗರ್ ಫ್ಯಾಕ್ಟರಿ'ಯಲ್ಲಿ ಡಾರ್ಲಿಂಗ್ ಕೃಷ್ಣ ಮಾಡಿದ್ದೇನು?

'ಲವ್ ಮಾಕ್ಟೇಲ್ 2' ಬಳಿಕ ಡಾರ್ಲಿಂಗ್ ಕೃಷ್ಣ ಬ್ಯಾಕ್ ಟು ಬ್ಯಾಕ್ ಸಿನಿಮಾ ಮಾಡುತ್ತಿರುವುದು ಗೊತ್ತೇ ಇದೆ. ಅದರಲ್ಲೊಂದು ಸಿನಿಮಾ 'ಶುಗರ್ ಫ್ಯಾಕ್ಟರಿ'. ಸಿನಿಮಾ ಆರಂಭ ಆದಲ್ಲಿಂದಲೂ 'ಶುಗರ್ ಫ್ಯಾಕ್ಟರಿ' ಒಂದಲ್ಲ ಒಂದು ಕಾರಣಕ್ಕೆ ಗಮನ ಸೆಳೆಯುತ್ತಲೇ ಇದೆ. ಸಿನಿಮಾದ ಪೋಸ್ಟರ್‌ನಿಂದ ಆರಂಭ ಆಗಿದ್ದ ಕುತೂಹಲ ಸಿನಿಮಾ ಮುಗಿಯುವವರೆಗೂ ಮುಂದುವರೆಯುತ್ತಲೇ ಇದೆ.

'ಶುಗರ್ ಫ್ಯಾಕ್ಟರಿ' ಸಿನಿಮಾದ ಚಿತ್ರೀಕರಣ ಮುಕ್ತಾಯವಾಗಿದೆ. ಇತ್ತೀಚೆಗೆ ನೆಲಮಂಗಲದ ಸಮೀಪವಿರುವ ಅಂಕಿತ್ ವಿಸ್ತಾದಲ್ಲಿ ಈ ಸಿನಿಮಾದ ಕೊನೆಯ ಸನ್ನಿವೇಶದ ದೃಶ್ಯವನ್ನು ಶೂಟಿಂಗ್ ಮಾಡಲಾಗಿದೆ. ನಿರ್ದೇಶಕ ದೀಪಕ್ ಅರಸ್ 'ಶುಗರ್ ಫ್ಯಾಕ್ಟರಿ'ಯ ಸಂಪೂರ್ಣ ಚಿತ್ರೀಕರಣ ಮುಗಿಸಿ, ಕುಂಬಳಕಾಯಿ ಒಡೆದಿದ್ದಾರೆ. ಸಿನಿಮಾ ಮುಗಿದ ಖುಷಿಯಲ್ಲಿ ಇಡೀ ಚಿತ್ರತಂಡವಿದ್ದು, ಈ ಸಂತಸವನ್ನು ಹಂಚಿಕೊಂಡಿದೆ.

'ಶುಗರ್ ಫ್ಯಾಕ್ಟರಿ' ಸಿನಿಮಾವನ್ನು 55 ದಿನಗಳ ಕಾಲ ಹಲವೆಡೆ ಶೂಟಿಂಗ್ ಮಾಡಲಾಗಿದೆ. ಗೋವಾ, ಬೆಂಗಳೂರು, ಮೈಸೂರು ಹಾಗೂ ಕಜಾಕಿಸ್ಥಾನದಲ್ಲಿ ಸಿನಿಮಾ ಶೂಟಿಂಗ್ ನಡೆದಿದೆ. 'ಶುಗರ್ ಫ್ಯಾಕ್ಟರಿ' ಮತ್ತೊಂದು ಪ್ರಮುಖ ಅಂಶ ಅಂದರೆ, ಅದ್ಧೂರಿ ಸೆಟ್‌ಗಳು. ಈ ಸಿನಿಮಾಗಾಗಿಯೇ ದುಬಾರಿ ಸೆಟ್‌ಗಳನ್ನು ಹಾಕಲಾಗಿದೆ. ವಿಭಿನ್ನ ಪೋಸ್ಟರ್, ವಿನೂತನ ಪ್ರಚಾರದ ಮೂಲಕ "ಶುಗರ್ ಫ್ಯಾಕ್ಟರಿ" ಈಗಾಗಲ್ಲೇ ಸಿನಿಪ್ರಿಯರಲ್ಲಿ ಕುತೂಹಲ ಕೆರಳಿಸಿದೆ‌.

Darling Krishna Starrer Sugar Factory Shooting Completed

'ಶುಗರ್ ಫ್ಯಾಕ್ಟರಿ'ಯ ಮತ್ತೊಂದು ವಿಶೇಷತೆಯೆಂದರೆ, ಈ ಸಿನಿಮಾದಲ್ಲಿ ಡಾರ್ಲಿಂಗ್ ಕೃಷ್ಣ ತುಂಬಾನೇ ರೊಮ್ಯಾಂಟಿಕ್ ಆಗಿ ಕಾಣಿಸಿಕೊಂಡಿದ್ದಾರೆ. ಸೋನಾಲ್ ಮಾಂಟೆರೊ, ಶಿಲ್ಪಾ ಶೆಟ್ಟಿ ಹಾಗೂ ಅದ್ವಿತಿ ಶೆಟ್ಟಿ ನಾಯಕಿಯರ ಜೊತೆ ರೊಮ್ಯಾಂಟಿಕ್ ಕೃಷ್ಣನಾಗಿ ಕಾಣಿಸಿಕೊಳ್ಳಲಿದ್ದಾರೆ. 'ಲವ್ ಮಾಕ್ಟೇಲ್ 2' ಬಳಿಕ ನಿಜಕ್ಕೂ ಕೃಷ್ಣ ಡಾರ್ಲಿಂಗ್ ಆಗಿ ಕಾಣಿಸಿಕೊಳ್ಳಲಿದ್ದಾರೆ.

'ಶುಗರ್ ಫ್ಯಾಕ್ಟರಿ' ಶೂಟಿಂಗ್ ಮುಗಿದ ಬೆನ್ನಲ್ಲೆ ಸಿನಿಮಾದ ಮ್ಯೂಸಿಕ್ ಡೈರೆಕ್ಟರ್ ಕಬೀರ್ ರಫಿ 'ಶುಗರ್ ಫ್ಯಾಕ್ಟರಿ'ಯ ರೀ-ರೆಕಾರ್ಡಿಂಗ್ ಕೆಲಸ ಆರಂಭಿಸಿದ್ದಾರೆ. ಡಾರ್ಲಿಂಗ್ ಕೃಷ್ಣ, ಸೋನಾಲ್ ಮಾಂಟೆರೊ, ಶಿಲ್ಪಾ ಶೆಟ್ಟಿ ಹಾಗೂ ಅದ್ವಿತಿ ಶೆಟ್ಟಿ ಜೊತೆ ದೊಡ್ಡ ತಂಡವೇ ಈ ಸಿನಿಮಾದಲ್ಲಿ ನಟಿಸಿದೆ. ರಂಗಾಯಣ ರಘು, ಗೋವಿಂದೇ ಗೌಡ, ಕಾಮಿಡಿ ಕಿಲಾಡಿಗಳು ಖ್ಯಾತಿಯ ಸೂರಜ್ ಈ ಚಿತ್ರದಲ್ಲಿ ನಟಿಸಿದ್ದಾರೆ.

Darling Krishna Starrer Sugar Factory Shooting Completed

ಗಿರೀಶ್ ಎಂಬುವವರು ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಜಯಂತ್ ಕಾಯ್ಕಿಣಿ, ಯೋಗರಾಜ್ ಭಟ್, ಚೇತನ್ ಕುಮಾರ್, ಚಂದನ್ ಶೆಟ್ಟಿ, ಅರಸು ಅಂತಾರೆ, ರಾಘವೇಂದ್ರ ಕಾಮತ್, ಗೌಸ್ ಫಿರ್ ಈ ಚಿತ್ರದ ಸಾಹಿತ್ಯ ಬರೆದಿದ್ದಾರೆ. ಯೋಗಾನಂದ್ ಹಾಗೂ ಚೇತನ್ ಕುಮಾರ್ ಸಂಭಾಷಣೆ ಬರೆದಿದ್ದು, ಸಂತೋಷ್ ರೈ ಪಾತಾಜೆ ಛಾಯಾಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನ, ಧನಂಜಯ್ ನೃತ್ಯ ನಿರ್ದೇಶನ ಹಾಗೂ ಅರ್ಜುನ್ ಅವರ ಸಾಹಸ ನಿರ್ದೇಶನವಿದೆ.

More from Filmibeat

English summary
Darling Krishna Starrer Sugar Factory Shooting Completed, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X