Darling Krishna: 'ಶುಗರ್ ಫ್ಯಾಕ್ಟರಿ' ಡಾರ್ಲಿಂಗ್ ಕೃಷ್ಣ ಸಿಕ್ಕಾಪಟ್ಟೆ ಸ್ವೀಟ್.. ರಿಲೀಸ್ ಯಾವಾಗ?
'ಲವ್ ಮಾಕ್ಟೇಲ್' ಡಾರ್ಲಿಂಗ್ ಕೃಷ್ಣ ಸಿನಿಮಾಗಳಿಗೆ ಬೇಡಿಕೆ ಹೆಚ್ಚಾಗಿದೆ. ಇನ್ನು 'ಲವ್ ಮಾಕ್ಟೇಲ್ 2' ಬಂದು ಹೋದ್ಮೇಲೆ ಡಾರ್ಲಿಂಗ್ ಕೃಷ್ಣ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದರು. ಒಂದರ ಹಿಂದೊಂದು ಸಿನಿಮಾಗಳಲ್ಲಿ ನಟಿಸುತ್ತಿದ್ದರು. ಈಗ ಅವರ ಬತ್ತಳಿಕೆಯಲ್ಲಿರೋ ಮತ್ತೊಂದು ಸಿನಿಮಾ ರಿಲೀಸ್‌ಗೆ ರೆಡಿಯಾಗಿದೆ.
ಇತ್ತೀಚೆಗಷ್ಟೇ ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ನಾಗರಾಜ್ ಕಾಂಬಿನೇಷನ್‌ನಲ್ಲಿ 'ಕೌಸಲ್ಯ ಸುಪ್ರಜಾ ರಾಮ' ಸಿನಿಮಾ ರಿಲೀಸ್ ಆಗಿತ್ತು. ಈ ಸಿನಿಮಾ ಫ್ಯಾಮಿಲಿ ಆಡಿಯನ್ಸ್‌ಗೆ ಸಿಕ್ಕಾಪಟ್ಟೆ ಇಷ್ಟನೂ ಆಗಿತ್ತು. 'ಲವ್ ಮಾಕ್ಟೇಲ್ 2' ಬಳಿಕ ಕೃಷ್ಣಗೆ ಮತ್ತೊಂದು ಸಕ್ಸಸ್ ಸಿಕ್ಕಿದೆ. ಇದೇ ಖುಷಿಯಲ್ಲಿರುವಾಗಲೇ ಹೊಸ ಸಿನಿಮಾದ ರಿಲೀಸ್ ಡೇಟ್ ಅನೌನ್ಸ್ ಆಗಿದೆ.

'ಶುಗರ್ ಫ್ಯಾಕ್ಟರಿ' ಸಿನಿಮಾ ಆರಂಭದಿಂದಲೂ ಸಿನಿ ಪ್ರಿಯರ ಗಮನ ಸೆಳೆಯುತ್ತಲೇ ಇತ್ತು. ಸಿನಿಮಾದ ಪೋಸ್ಟರ್, ಫೋಟೊಶೂಟ್ ಕುತೂಹಲ ಕೆರಳಿಸಿತ್ತು. ಈಗ ಅದೇ ಸಿನಿಮಾದ ಟ್ರೈಲರ್ ರಿಲೀಸ್ ಆಗಿದೆ. ಅದರೊಂದಿಗೆ ಸಿನಿಮಾ ರಿಲೀಸ್ ಡೇಟ್ ಕೂಡ ಅನೌನ್ಸ್ ಆಗಿದೆ.
'ಶುಗರ್ ಫ್ಯಾಕ್ಟರಿ' ಟ್ರೈಲರ್‌ನಲ್ಲಿ ಮನರಂಜನೆಯ ಮಹಾಪೂರವೇ ಇದೆ. ಎರಡು ನಿಮಿಷಗಳ ಟ್ರೈಲರ್ ಸಖತ್ ಎಂಟರ್‌ಟೈನಿಂಗ್ ಆಗಿದೆ. ಮನರಂಜನೆ ಜೊತೆಗೆ ಹಾಸ್ಯ ಭರಿತ ಸಂಭಾಷಣೆ ಯುವ ಮನಸ್ಸುಗಳಿಗೆ ಮತ್ತಷ್ಟು ಕಿಕ್ ಕೊಟ್ಟಿದೆ. ಈ ಮೂಲಕ ಸಿನಿಮಾದ ಉದ್ದಕ್ಕೂ ಎಂಟರ್‌ಟೈನ್ಮೆಂಟ್ ನಾನ್ ಸ್ಟಾಪ್ ಇರುತ್ತೆ ಅನ್ನೋದನ್ನು ಟ್ರೈಲರ್ ಹೇಳುತ್ತಿದೆ.
ಈ ಸಿನಿಮಾವನ್ನು ದೀಪಕ್ ಅರಸ್ ನಿರ್ದೇಶನ ಮಾಡಿದ್ದಾರೆ. ಗಿರೀಶ್ ನಿರ್ಮಿಸಿರುವ 'ಶುಗರ್ ಫ್ಯಾಕ್ಟರಿ' ಸಿನಿಮಾ ಸಾಂಗ್ಸ್ ಹಾಗೂ ಟ್ರೈಲರ್ ಈಗಾಗಲೇ ಫೇಮಸ್ ಆಗಿದೆ. ಡಾರ್ಲಿಂಗ್ ಕೃಷ್ಣ ವೃತ್ತಿ ಬದುಕಿನಲ್ಲೇ 'ಶುಗರ್ ಫ್ಯಾಕ್ಟರಿ' ಬಿಗ್ ಬಜೆಟ್ ಸಿನಿಮಾ ಎಂದು ಹೇಳಲಾಗುತ್ತಿದೆ. ಡಾರ್ಲಿಂಗ್ ಕೃಷ್ಣ ಜೊತೆ ಸೋನಾಲ್ ಮಾಂತೆರೊ, ಅದ್ವಿತಿ ಶೆಟ್ಟಿ, ರುಹಾನಿ ಶೆಟ್ಟಿ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ.

'ಶುಗರ್ ಫ್ಯಾಕ್ಟರಿ' ನಿರ್ದೇಶಕ ದೀಪಕ್ ಅರಸ್ 'ಶುಗರ್ ಫ್ಯಾಕ್ಟರಿ' ಸಿನಿಮಾದ ಸಂಪೂರ್ಣ ಚಿತ್ರೀಕರಣ ಮುಗಿಸಿ ಸಿನಿಮಾ ಬಿಡುಗಡೆಗೂ ರೆಡಿ ಮಾಡಿದ್ದಾರೆ. ಸಿನಿಮಾ ರಿಲೀಸ್‌ಗೆ ಇನ್ನೂ ಎರಡು ತಿಂಗಳು ಇದೆ ಅನ್ನುವಾಗಲೇ ಟ್ರೈಲರ್ ಬಿಟ್ಟಿದ್ದು, ಪ್ರಚಾರ ಆರಂಭಿಸಿದ್ದಾರೆ. ಮುಂದೆ ಇನ್ನೂ ಸರ್ಪ್ರೈಸ್ ಇರುತ್ತೆ ಅನ್ನೋ ಕುತೂಹಲ ಸಿನಿಪ್ರೇಮಿಗಳಲ್ಲಿದೆ.
'ಶುಗರ್ ಫ್ಯಾಕ್ಟರಿ' ಸಿನಿಮಾವನ್ನು 55 ದಿನಗಳ ಕಾಲ ಬೇರೆ ಬೇರೆ ಕಡೆಗಳಲ್ಲಿ ಚಿತ್ರೀಕರಣ ಮಾಡಲಾಗಿದೆ. ಗೋವಾ, ಬೆಂಗಳೂರು, ಮೈಸೂರು ಹಾಗೂ ಕಜಾಕಿಸ್ತಾನದಲ್ಲಿ ಸಿನಿಮಾದ ಶೂಟಿಂಗ್ ಮಾಡಲಾಗಿದೆ. 'ಶುಗರ್ ಫ್ಯಾಕ್ಟರಿ'ಯಲ್ಲಿ ಅದ್ಧೂರಿ ಸೆಟ್‌ಗಳು ಕಣ್ಮನ ಸೆಳೆಯುತ್ತವೆ ಎನ್ನಲಾಗಿದೆ. ಸದ್ಯ ಟ್ರೈಲರ್‌ನಲ್ಲಿ ಇವೆಲ್ಲ ಎದ್ದು ಕಾಣುತ್ತಿದೆ.


Click it and Unblock the Notifications











