RCB Vs MI:ಡಾರ್ಲಿಂಗ್ ಕೃಷ್ಣನ 'ಬ್ರ್ಯಾಟ್ ಫಿಲಾಸೋಪಿ'; ಗ್ರೌಂಡ್ ಯಾವುದೇ ಆಗಿರಲಿ. ಆದರೆ, ಸೌಂಡ್ ಮಾತ್ರ..?

ಈಗ ದೇಶಾದ್ಯಂತ ಕ್ರಿಕೆಟ್ ಜ್ವರ ಜೋರಾಗಿದೆ. ಐಪಿಎಲ್ ಪಂದ್ಯಗಳು ಆರಂಭ ಆದ ದಿನದಿಂದ ಆರ್‌ಸಿಬಿ ಮೇಲೆ ಎಲ್ಲರ ಕಣ್ಣಿದೆ. ಮಿಸ್ ಮಾಡದ ಹಾಗೇ ಆರ್‌ಸಿಬಿ ಪಂದ್ಯಗಳನ್ನು ನೋಡುತ್ತಾರೆ. ಈ ಸೀಸನ್‌ನಲ್ಲಿ ಆರ್‌ಸಿಬಿ ಶುಭಾರಂಭ ಮಾಡಿದೆ. ಒಂದು ಪಂದ್ಯ ಸೋತರೂ ಮುಂದಿನ ಪಂದ್ಯದ ಮೇಲೆ ಎಲ್ಲರ ಕಣ್ಣು ಇದೆ. ಯಾಕಂದ್ರೆ, ಅವರದ್ದೇ ಗ್ರೌಂಡ್‌ನಲ್ಲಿ ಮುಂಬೈ ಇಂಡಿಯನ್ಸ್ (Mumbai Indians) ತಂಡವನ್ನು ಆರ್‌ಸಿಬಿ (RCB) ಟೀಮ್ ಎದುರಿಸಲಿದೆ.

ನಾಳೆ (ಏಪ್ರಿಲ್ 7) ಮುಂಬೈ ಇಂಡಿಯನ್ಸ್ ತಂಡವನ್ನು ಆರ್‌ಸಿಬಿ ಎದುರಿಸಲಿದೆ. ಈ ಪಂದ್ಯ ಕೂಡ ಹೈ ವೋಲ್ಟೇಜ್‌ನಿಂದ ಕೂಡಿರುತ್ತೆ. ಮುಂಬೈ ತಂಡವನ್ನು ಸೆದೆ ಬಡಿದರೆ, ಆರ್‌ಸಿಬಿ ಕ್ರೇಜ್ ಮತ್ತಷ್ಟು ಹೆಚ್ಚಾಗೋದು ಗ್ಯಾರಂಟಿ. ಈ ಮಧ್ಯೆ ಸಿಸಿಎಲ್‌ನ ಡಾರ್ಲಿಂಗ್ ಅಂತಲೇ ಜನಪ್ರಿಯರಾಗಿರುವ ಕೃಷ್ಣ ಆರ್‌ಸಿಬಿ ಪರ ಮಸ್ತ್ ಆಗಿ ಬ್ಯಾಟ್ ಬೀಸಿದ್ದಾರೆ. ಮುಂಬೈ ಇಂಡಿಯನ್ಸ್ ಪ್ರೇಮಿಯನ್ನು ರೋಸ್ಟ್ ಮಾಡಿದ್ದಾರೆ.

Darling Krishna s Brat Philosophy for Forever RCBians on RCB Vs Mumbai Indians match

ಆರ್‌ಸಿಬಿ ಜರ್ನಿ ಧರಿಸಿ ಮುಂಬೈ ಇಂಡಿಯನ್ಸ್ ಫ್ಯಾನ್ಸ್ ಎದುರು ವಾಗ್ವಾದಕ್ಕೆ ಇಳಿದಿದ್ದಾರೆ. ಡಾರ್ಲಿಂಗ್ ಕೃಷ್ಣ ಹಾಗೂ ಅವರ ಗೆಳೆಯನ ಮಧ್ಯೆ ನಡೆದ ಆರ್‌ಸಿಬಿ Vs ಮುಂಬೈ ಇಂಡಿಯನ್ಸ್ ತಂಡದ ನಡುವಿನ ವಾಗ್ಯುದ್ಧದಲ್ಲಿ ಏನು ಸಂಭಾಷಣೆ ನಡೀತು ಅನ್ನೋದು ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹಲ್‌ಚಲ್ ಎಬ್ಬಿಸಿದೆ. ಡಾರ್ಲಿಂಗ್ ಕೃಷ್ಣ ಪಂಚ್ ಡೈಲಾಗ್‌ಗಳಿಗೆ ಆರ್‌ಸಿಬಿ ಫ್ಯಾನ್ಸ್ ಖುಷಿ ಪಟ್ಟಿದ್ದಾರೆ.

ಇನ್ನು ಡಾರ್ಲಿಂಗ್ ಕೃಷ್ಣ ಬ್ಯಾಟಿಂಗ್ ಪರಾಕ್ರಮ ಹೇಗಿದೆ ಅನ್ನೋದನ್ನು ವಿಶೇಷವಾಗಿ ಹೇಳಬೇಕಿಲ್ಲ. ಸೆಲೆಬ್ರಿಟಿ ಕ್ರಿಕೆಟ್ ಲೀಗ್‌ನಲ್ಲಿ ಡಾರ್ಲಿಂಗ್ ಕೃಷ್ಣ ಬ್ಯಾಟಿಂಗ್ ಅಬ್ಬರ ಈ ಸೀಸನ್‌ನಲ್ಲೂ ಗಮನ ಸೆಳೆದಿತ್ತು. ಡಾರ್ಲಿಂಗ್ ಕೃಷ್ಣಗೆ ಆರ್‌ಸಿಬಿ ಬಂದ್ಬಿಡು ಗುರು ಅಂತ ಅಭಿಮಾನಿಗಳೇ ಕಮೆಂಟ್ ಮಾಡುವಷ್ಟು ಅದ್ಭುತ ಆಟವನ್ನು ಪ್ರದರ್ಶಿಸಿದ್ರು. ಹೀಗಾಗಿ ಕ್ರಿಕೆಟ್ ವಿಚಾರಕ್ಕೆ ಕೃಷ್ಣಗೂ ಫ್ಯಾನ್ಸ್ ಏನೂ ಕಮ್ಮಿಯಿಲ್ಲ.

ಅಂದ್ಹಾಗೆ, ಆರ್‌ಸಿಬಿ ಫ್ಯಾನ್ ಆಗಿ ಕೃಷ್ಣ ಹಾಗೂ ಮುಂಬೈ ಇಂಡಿಯನ್ಸ್ ಅಭಿಮಾನಿಯಾಗಿ ಅವರ ಗೆಳೆಯ ನಡುವೆ ನಡೆದ ಸಂಭಾಷಣೆಯಲ್ಲಿ ಬ್ರ್ಯಾಟ್ ಫಿಲಾಸಫಿ ಅಂತ ಒಂದು ಡೈಲಾಗ್ ಬಿಟ್ಟಿದ್ದಾರೆ. ಅದೇನು ಅಂತ ಮುಂದೆ ಹೇಳ್ತೀವಿ. ಅದಕ್ಕೂ ಮುನ್ನ ಇಬ್ಬರ ನಡುವೆ ನಡೆದ ಸಂಭಾಷಣೆ ಹೇಗಿದೆ ಅನ್ನೋದನ್ನು ನೋಡಿ.

ಗೆಳೆಯ: ನಿಮ್ಮ ಟೀಮ್‌ಗೆ ಆಡಿದವರೆಲ್ಲ ನಿಮ್ ಟೀಮ್‌ಗೆ ಗುನ್ನ ಇಟ್ಟು ಹೋಗುತ್ತಾರಲ್ಲ.
ಡಾರ್ಲಿಂಗ್ ಕೃಷ್ಣ: ಯಾರು?
ಗೆಳೆಯ: ಲಾಸ್ಟ್ ಸೀಸನ್‌ ದುಬೆ. ಈ ಸೀಸನ್‌ನಲ್ಲಿ ಸಿರಾಜ್.
ಡಾರ್ಲಿಂಗ್ ಕೃಷ್ಣ: ಆಕ್ಚ್ಯುಯಲಿ, ಟ್ರಾವಿಸ್ ಹೆಡ್ ಅನ್ನೇ ಬೆಂಚ್‌ ಅಲ್ಲಿ ಕೂರಿಸಿದವರು ನಾವು. ಈ ಬಚ್ಚಾಗಳಿಗೆಲ್ಲ ಹೆದರಿಕೊಳ್ತೀವಾ? ಒಂದು ತಿಳ್ಕೊ. ಬಾಪ್ ಬಾಪ್ ಹೋತಾ ಹೇ.. ಬೇಟಾ ಬೇಟಾ ಹೋತಾ ಹೇ. ನಮ್ ಟೀಮ್ ವಿಷ್ಯ ಬಿಡು. ನಿಮ್ ಟೀವ್ ವಿಷ್ಯಕ್ಕೆ ಬರೋಣ. ಹೋದ್ಸಲ ಬಾಟಮ್ ಆಫ್ ದಿ ಟೇಬಲ್‌ನಲ್ಲಿ ಇದ್ರಿ. ಈ ವರ್ಷ ಟೇಬಲ್‌ನಲ್ಲಿ ಇರೋದೇ ಡೌಟ್ ಆಗಿದೆ."
ಗೆಳೆಯ: ಬ್ರೋ ನಾವು ಕಾಯ್ತಿದ್ದಿದ್ದೇ ಈ ಮ್ಯಾಚ್‌ಗೆ.
ಡಾರ್ಲಿಂಗ್ ಕೃಷ್ಣ: ಯಾಕೋ
ಗೆಳೆಯ: ಫಾರ್ಮ್‌ನಲ್ಲಿ ಇಲ್ದಿರೋ ಟೀಮ್ ಫಾರ್ಮ್‌ಗೆ ಬರೋದು ಆರ್‌ಸಿಬಿ ಮೇಲೆ ತಾನೇ.
ಡಾರ್ಲಿಂಗ್ ಕೃಷ್ಣ: ಪಾಯಿಂಟ್.. ಒಂದು ಕೆಲಸ ಮಾಡಿ. ನಾಳೆ ರೋಹಿತ್ ಶರ್ಮಾರನ್ನು ಆಡಿಸಿಬಿಡಿ. ಪಾಪ ಫಾರ್ಮ್‌ಗೆ ಬರಲಿ. ನಮ್ಮ ಕಡೆಗೂ ತುಂಬಾ ಜನ ಫ್ಯಾನ್ಸ್ ಇದ್ದಾರೆ. ಅವರಿಗೂ ತುಂಬಾ ಖುಷಿ ಆಗುತ್ತೆ.
ಗೆಳೆಯ: ನಾಳೆ ಮ್ಯಾಚ್ ಇರೋದು ನಮ್ಮ ಹೋಮ್ ಗ್ರೌಂಡ್‌ನಲ್ಲಿ
ಡಾರ್ಲಿಂಗ್ ಕೃಷ್ಣ: ಬ್ರ್ಯಾಟ್ ಫಿಲಾಸೋಪಿ ಅಂತ ಒಂದು ಇದೆ. ಗ್ರೌಂಡ್ ಯಾವುದೇ ಆಗಿರಲಿ. ಆದರೆ, ಸೌಂಡ್ ಮಾತ್ರ ಒಂದೇ ಬರೋದು.

ಅಂದ್ಹಾಗೆ ಇದು, ಬ್ರ್ಯಾಟ್ ಫಿಲಾಸಫಿ ಅನ್ನೋದಕ್ಕೆ ಒಂದು ಕಾರಣವಿದೆ. ನಿರ್ದೇಶಕ ಶಶಾಂಕ್ ನಿರ್ದೇಶಿಸುತ್ತಿರುವ ಹೊಸ ಸಿನಿಮಾದ ಹೆಸರು 'ಬ್ರ್ಯಾಟ್'. ಈ ಸಿನಿಮಾಗೆ ಡಾರ್ಲಿಂಗ್ ಕೃಷ್ಣ ಹೀರೋ. ಇಬ್ಬರ ಕಾಂಬಿನೇಷನ್‌ನಲ್ಲಿ ಇನ್ನೊಂದು ಸಿನಿಮಾ ಬರಲಿದ್ದು, ಆರ್‌ಸಿಬಿ Vs ಮುಂಬೈ ಇಂಡಿಯನ್ಸ್ ಮ್ಯಾಚ್ ವೇಳೆ 'ಬ್ರ್ಯಾಟ್' ಝಲಕ್ ಕೊಟ್ಟಿದ್ದಾರೆ. ಒಟ್ನಲ್ಲಿ ಡಾರ್ಲಿಂಗ್ ಕೃಷ್ಣ ಡೈಲಾಗ್ ಆರ್‌ಸಿಬಿ ಫ್ಯಾನ್ಸ್ ಹೃದಯ ತಟ್ಟಿದೆ.

More from Filmibeat

English summary
Darling Krishna's Brat Philosophy for Forever RCBians on RCB Vs Mumbai Indians match
Read more about: darling krishna rcb ipl
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X