Darshan Birthday: ದರ್ಶನ್ ಮನೆ ಮುಂದೆ ಫ್ಯಾನ್ಸ್.. ಒಂದು ದಿನ ಮುನ್ನವೇ ಸಂಭ್ರಮ!

ಫೆಬ್ರವರಿ 16 ಬರುತ್ತಿದೆ ಅಂದರೆ ಸಾಕು, ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟುತ್ತೆ. ಒಂದು ದಿನ ಮುನ್ನವೇ ಡಿ ಬಾಸ್ ಫ್ಯಾನ್ಸ್ ಮನೆ ಮುಂದೆ ಜಾಮಾಯಿಸಿ ಬಿಡುತ್ತಾರೆ. ರಸ್ತೆಯುದ್ದಕ್ಕೂ ಎಲ್ಲಿ ನೋಡಿದರೂ ಅಭಿಮಾನಿಗಳೇ ಎದ್ದು ಕಾಣುತ್ತಾರೆ.

ದರ್ಶನ್ ಮನೆ ಇರುವ ರಾಜರಾಜೇಶ್ವರಿ ನಗರದ ರಸ್ತೆ ಮೇಲೆ ಪೆಂಡಲ್ ಬೀಳುತ್ತೆ. ಬ್ಯಾರಿಕೇಡ್‌ಗಳು ಹಾಕ್ತಾರೆ. ದರ್ಶನ್ ಸಿನಿಮಾದ ಕಟೌಟ್‌ಗಳು, ಬ್ಯಾನರ್‌ಗಳು ರಸ್ತೆಯುದ್ದಕ್ಕೂ ಎದ್ದು ನಿಲ್ಲುತ್ತವೆ. ಕಳೆದ ಮೂರು ವರ್ಷಗಳಿಂದ ಈ ಸಂಭ್ರಮ ಮಿಸ್ ಆಗಿತ್ತು. ಅದೀಗ ಮತ್ತೆ ಮರುಕಳಿಸಿದೆ.

ನಾಳೆ(ಫೆಬ್ರವರಿ 15) ದರ್ಶನ್ 46ನೇ ವಸಂತಕ್ಕೆ ಕಾಲಿಡುತ್ತಿದ್ದಾರೆ. ಈ ಬೆನ್ನಲ್ಲೇ ಅಭಿಮಾನಿಗಳು ಕಳೆದ ಒಂದು ವಾರದಿಂದಲೇ ಸಂಭ್ರಮಿಸುತ್ತಿದ್ದಾರೆ. ಈ ಬಾರಿ ದರ್ಶನ್ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಣೆ ಮಾಡುವುದಕ್ಕೆ ತುದಿಗಾಲಲ್ಲಿ ನಿಂತಿದ್ದಾರೆ. ಹಾಗಿದ್ದರೆ,ಮನೆ ಮುಂದೆ ಸಂಭ್ರಮ ಹೇಗಿದೆ? ಅನ್ನೋದನ್ನು ತಿಳಿಯಲು ಮುಂದೆ ಓದಿ..

ದಾಸನ ಬರ್ತ್‌ಡೇಗೆ ಬಂತು ರೇಷನ್

ದಾಸನ ಬರ್ತ್‌ಡೇಗೆ ಬಂತು ರೇಷನ್

ಹುಟ್ಟುಹಬ್ಬದ ವೇಳೆ ತಮ್ಮ ನೆಚ್ಚಿನ ನಟನಿಗಾಗಿ ಅಭಿಮಾನಿಗಳು ವಿಭಿನ್ನವಾದ ಕೇಕ್‌ಗಳನ್ನು ತರುತ್ತಿದ್ದರು. ಹಾರಗಳನ್ನು ತಂದು ಸಂಭ್ರಮಿಸುತ್ತಿದ್ದರು. ಆದರೆ, ಸ್ವತ: ದರ್ಶನ್ ತಮ್ಮ ಅಭಿಮಾನಿಗಳಿಗೆ ಇದ್ಯಾವುದೂ ಬೇಡ ಅನ್ನೋ ಸಂದೇಶವನ್ನು ಅಭಿಮಾನಿಗಳಿಗೆ ನೀಡಿದ್ದರು. ಈ ಕಾರಣಕ್ಕಾಗಿ ದರ್ಶನ್ ಫ್ಯಾನ್ಸ್ ಅವರ ಮನೆಗೆ ದವಸ ಧಾನ್ಯಗಳನ್ನು ತಂದು ಹಾಕುತ್ತಿದ್ದಾರೆ. ಈ ದವಸ ಧಾನ್ಯಗಳನ್ನು ಅನಾಥ ಆಶ್ರಮಕ್ಕೆ ನೀಡಲು ದರ್ಶನ್ ತೀರ್ಮಾನಿಸಿದ್ದಾರೆ.

ಮನೆ ಮುಂದ ಚಕ್ರವರ್ತಿ ಕಟೌಟ್

ಮನೆ ಮುಂದ ಚಕ್ರವರ್ತಿ ಕಟೌಟ್

ದರ್ಶನ್ ಮನೆ ಮುಂದೆ ಅಭಿಮಾನಿಗಳ ಸಂಭ್ರಮ ಒಂದು ದಿನ ಮುನ್ನವೇ ಶುರುವಾಗಿದೆ. ಮನೆ ಮುಂದೆನೇ 'ಚಕ್ರವರ್ತಿ' ಸಿನಿಮಾದ ಕಟೌಟ್ ಅನ್ನು ಅಭಿಮಾನಿಗಳು ನಿಲ್ಲಿಸಿದ್ದಾರೆ. ಶಿವಮೊಗ್ಗದ ನಾಗೇಶ್ ಎಂಬ ಅಭಿಮಾನಿ ದಾಸನ ಮನೆ ಮುಂದೆನೇ ಲಾಂಗ್ ಹಿಡಿದು ನಿಂತ 'ಚಕ್ರವರ್ತಿ' ಸಿನಿಮಾದ ಕಟೌಟ್‌ ಅನ್ನು ನಿಲ್ಲಿಸಿದ್ದಾರೆ. ಹಾಗೆಯೇ ಮೈಸೂರು ಅರಮನೆ ಶೈಲಿಯ ದ್ವಾರವನ್ನು ನಿರ್ಮಿಸಲಾಗಿದೆ. ಇದೆಲ್ಲವೂ ಅಭಿಮಾನಿಗಳನ್ನು ಸೆಳೆಯುತ್ತಿದೆ.

ಹಚ್ಚೆ ಹಾಕಿಸಿಕೊಂಡು ಬಂದ ಫ್ಯಾನ್ಸ್

ಹಚ್ಚೆ ಹಾಕಿಸಿಕೊಂಡು ಬಂದ ಫ್ಯಾನ್ಸ್

ಹುಟ್ಟುಹಬ್ಬಕ್ಕೆ ಒಂದೆರಡು ದಿನ ಇದೆ ಅನ್ನುವಾಗಲೇ ದರ್ಶನ್ ಅಭಿಮಾನಿಗಳಿಗಾಗಿ ಟ್ಯಾಟೂ ಹಾಕಿಸಿಕೊಂಡಿದ್ದರು. ಇದು ಅಭಿಮಾನಿಗಳ ಮನಕಲುಕಿತ್ತು. ಈಗ ದರ್ಶನ್ ಹುಟ್ಟುಹಬ್ಬಕ್ಕೆ ಬರುವ ಅಭಿಮಾನಿಗಳು ಕೂಡ ಹಚ್ಚೆ ಹಾಕಿಸಿಕೊಂಡು ಬರುತ್ತಿದ್ದಾರೆ. ದರ್ಶನ್ ಬರ್ತ್‌ಡೇಗೆ ಅಭಿಮಾನಿಗಳು ಕೂಡ ಗೌರವ ಸೂಚಿಸುತ್ತಿದ್ದಾರೆ.

56ನೇ ಸಿನಿಮಾ ಟೈಟಲ್‌ ಕ್ರೇಜ್

56ನೇ ಸಿನಿಮಾ ಟೈಟಲ್‌ ಕ್ರೇಜ್

'ಕ್ರಾಂತಿ' ಸಿನಿಮಾ ಬಳಿಕ ಚಾಲೆಂಜಿಂಗ್ ಸ್ಟಾರ್ ದರ್ಶನ್ 56ನೇ ಸಿನಿಮಾ ಮೇಲೆ ಫ್ಯಾನ್ಸ್ ಕಣ್ಣಿಟ್ಟಿದ್ದಾರೆ. ತರುಣ್ ಸುಧೀರ್ ನಿರ್ದೇಶಿಸುತ್ತಿರುವ 56ನೇ ಸಿನಿಮಾ ಟೈಟಲ್‌ಗಾಗಿ ಎದುರು ನೋಡುತ್ತಿದ್ದಾರೆ. ಫೆಬ್ರವರಿ 16ರ ಮಧ್ಯರಾತ್ರಿ 12 ಗಂಟೆಗೆ ಟೈಟಲ್ ರಿವೀಲ್ ಆಗುತ್ತಿದೆ. ಶೀರ್ಷಿಕೆ ಅನಾವರಣ ಆಗುತ್ತಿದ್ದಂತೆ ಅಭಿಮಾನಿಗಳು ರಾತ್ರಿಯಿಂದ ಸೋಶಿಯಲ್ ಮೀಡಿಯಾದಲ್ಲಿ ರೀಚ್ ಮಾಡಿಸುವುದಕ್ಕೆ ಬೇಕಾಗಿ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ.

More from Filmibeat

English summary
Darshan 46th Birthday Preparation Infront Of His House Near Rajarajeshwari Nagar, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X