Darshan: ಹರಿಕೃಷ್ಣ.. ತರುಣ್.. ಮಿಲನ ಪ್ರಕಾಶ್.. D57ಗೆ ಆಕ್ಷನ್ ಕಟ್ ಹೇಳೋದ್ಯಾರು? ಈ ಪೋಸ್ಟರ್ ಗುಟ್ಟೇನು?
ದರ್ಶನ್ ಸಿನಿಮಾ ರಿಲೀಸ್‌ಗಾಗಿ ಫ್ಯಾನ್ಸ್ ಎದುರು ನೋಡುತ್ತಿದ್ದಾರೆ. ರಾಕ್‌ಲೈನ್ ವೆಂಕಟೇಶ್ ನಿರ್ಮಾಣದ 'ಕಾಟೇರ' ಸಿನಿಮಾದ ಬಹುತೇಕ ಚಿತ್ರೀಕರಣ ಮುಗಿಯುವ ಹಂತಕ್ಕೆ ಬಂದಿದೆ. ಸದ್ಯ ಹಾಡಿನ ಚಿತ್ರೀಕರಣ ಆರಂಭ ಆಗಿದೆ. ಹಾಡುಗಳ ಶೂಟಿಂಗ್ ಮುಗಿಯುತ್ತಿದ್ದಂತೆ ಸಿನಿಮಾ ಪ್ರಚಾರ ಆರಂಭ ಆಗಲಿದೆ.
'ಕಾಟೇರ' ದರ್ಶನ್ ನಟಿಸುತ್ತಿರುವ 56ನೇ ಸಿನಿಮಾ. ಹೀಗಾಗಿ 57ನೇ ಸಿನಿಮಾ ಯಾವುದು? ಯಾವ ನಿರ್ದೇಶಕರಿಗೆ ಚಾಲೆಂಜಿಂಗ್ ಸ್ಟಾರ್ ಗ್ರೀನ್ ಸಿಗ್ನಲ್ ಕೊಡುತ್ತಾರೆ? ಅನ್ನೋ ಕುತೂಹಲ ಅಭಿಮಾನಿಗಳಲ್ಲಿದೆ. ಆದರೆ, ದರ್ಶನ್ ಒಂದು ಸಿನಿಮಾ ಮುಗಿಸುವವರೆಗೂ ಇನ್ನೊಂದು ಸಿನಿಮಾವನ್ನು ಅನೌನ್ಸ್ ಮಾಡಿದ್ದು ತೀರಾ ವಿರಳ. ಆದರೆ, 57ನೇ ಸಿನಿಮಾವನ್ನು ಮಿಲನ ಪ್ರಕಾಶ್ ನಿರ್ದೇಶನ ಮಾಡುತ್ತಾರೆ ಅನ್ನೋ ಸುದ್ದಿ ಗೊಂದಲ ಸೃಷ್ಟಿಸಿದೆ.

ನಿನ್ನೆ(ಅಕ್ಟೋಬರ್ 3)ಯಿಂದ ಸೋಶಿಯಲ್ ಮೀಡಿಯಾದಲ್ಲಿ ದರ್ಶನ್ 57ನೇ ಸಿನಿಮಾದ ಪೋಸ್ಟರ್ ಒಂದು ಹರಿದಾಡುತ್ತಿದೆ. ಇದು ದರ್ಶನ್ ಅಭಿಮಾನಿಗಳಿಗೆ ಕಿಕ್ ಕೊಟ್ಟಿದೆ. ಮಿಲನ ಪ್ರಕಾಶ್ ಹೆಸರಿನ ಎಕ್ಸ್ (ಟ್ವಿಟರ್) ಅಕೌಂಟ್‌ನಲ್ಲೇ ಈ ಪೋಸ್ಟರ್ ಶೇರ್ ಆಗಿತ್ತು. ಅಸಲಿಗೆ 57ನೇ ಸಿನಿಮಾ ಇನ್ನೂ ಇಬ್ಬರು ನಿರ್ದೇಶಕರು ರೇಸ್‌ನಲ್ಲಿದ್ದಾರೆ ಅನ್ನೋ ಸುದ್ದಿ ಸಂಚಲನ ಸೃಷ್ಟಿಸಿದೆ.
57ನೇ ಸಿನಿಮಾಗೆ ಮಿಲನ ಪ್ರಕಾಶ್ ನಿರ್ದೇಶನ?
ದರ್ಶನ್ 57ನೇ ಸಿನಿಮಾದ ಪೋಸ್ಟರ್ ವೈರಲ್ ಆಗುತ್ತಿದೆ. ಮಿಲನ ಪ್ರಕಾಶ್ ನಿರ್ದೇಶನದ ಸಿನಿಮಾ ಅಂತ ಆ ಪೋಸ್ಟರ್‌ನಲ್ಲಿ ಹೇಳಲಾಗಿದೆ. ದರ್ಶನ್ ಸಖತ್ ಸ್ಟೈಲಿಶ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಬೈಕ್ ಏರಿ ಹೊರಟಿರೋ ದರ್ಶನ್‌ಗೆ ರೇಸರ್ ಲುಕ್ ಕೊಡಲಾಗಿದೆ. ಅಸಲಿಗೆ ಈ ಸುದ್ದಿ ನಿಜವೇ? ಮಿಲನ ಪ್ರಕಾಶ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಿನಿಮಾವನ್ನು ನಿರ್ದೇಶನ ಮಾಡುತ್ತಾರೆಯೇ..? ಸದ್ಯ ಈ ಪ್ರಶ್ನೆಗೆ ಇನ್ನೂ ಅಧಿಕೃತ ಮಾಹಿತಿ ಇನ್ನೂ ಸಿಕ್ಕಿಲ್ಲ.

ಈ ಸುದ್ದಿ ನಿಜವೇ?
ದರ್ಶನ್ 57ನೇ ಸಿನಿಮಾವನ್ನು ಮಿಲನ ಪ್ರಕಾಶ್ ನಿರ್ದೇಶನ ಮಾಡುತ್ತಾರೆ ಅನ್ನೋದು ಇನ್ನೂ ಅಧಿಕೃತವಾಗಿಲ್ಲ. ಎಕ್ಸ್‌ನಲ್ಲಿ ಮಿಲನ ಪ್ರಕಾಶ್ ಹೆಸರಿನ ಖಾತೆಯಿಂದ ಈ ಪೋಸ್ಟರ್ ರಿವೀಲ್ ಆಗಿದ್ದು, ನಿರ್ದೇಶಕ ಅಧಿಕೃತ ಖಾತೆಯೇ ಅನ್ನೋದು ಧೃಡಪಟ್ಟಿಲ್ಲ. ಇನ್ನೊಂದು ಕಡೆ ತರುಣ್ ಸುಧೀರ್ ಅದೇ ಟ್ವೀಟ್ ಅನ್ನು ರೀ ಟ್ವೀಟ್ ಮಾಡಿದ್ದಾರೆ. ಅದೂ ಕೂಡ ಫೇಕ್ ಅಕೌಂಟ್ ಎಂದು ಹೇಳಲಾಗುತ್ತಿದೆ. ಹೀಗಾಗಿ 57ನೇ ಸಿನಿಮಾವನ್ನು ಮಿಲನ ಪ್ರಕಾಶ್ ಮಾಡುತ್ತಾರೆ ಅನ್ನೋ ಬಗ್ಗೆ ಕ್ಲಾರಿಟಿ ಇಲ್ಲ.
ರೇಸ್‌ನಲ್ಲಿ ಹರಿಕೃಷ್ಣ.. ತರುಣ್ ಹೆಸರು?
2020ರಲ್ಲೇ ದರ್ಶನ್ ಸಿನಿಮಾವನ್ನು ಮಿಲನ ಪ್ರಕಾಶ್ ನಿರ್ದೇಶನ ಮಾಡುತ್ತಾರೆ ಅನ್ನೋ ಸುದ್ದಿ ಓಡಾಡಿತ್ತು. ಆದರೆ, ಅಂದಿನಿಂದ ಇಂದಿನವರೆಗೂ ಆ ಸಿನಿಮಾ ಬಗ್ಗೆ ಸುದ್ದಿನೇ ಇಲ್ಲ. ಈ ಮಧ್ಯೆ 57ನೇ ಸಿನಿಮಾವನ್ನು 'ಕ್ರಾಂತಿ' ತಂಡವೇ ಮತ್ತೆ ಸಿನಿಮಾ ಮಾಡುತ್ತೆ ಎನ್ನಲಾಗಿದೆ. ಹೀಗಾಗಿ ಮತ್ತೊಮ್ಮೆ ವಿ.ಹರಿಕೃಷ್ಣ ಹೆಸರು ಕೇಳಿ ಬರುತ್ತಿವೆ. ಹಾಗೇ 'ಕಾಟೇರ' ಬಳಿಕ 57ನೇ ಸಿನಿಮಾವನ್ನು ತರುಣ್ ನಿರ್ದೇಶನ ಮಾಡುತ್ತಿದ್ದಾರೆ ಎನ್ನಲಾಗಿದೆ.
ಡಿಸೆಂಬರ್‌ನಲ್ಲಿ 'ಕಾಟೇರ'
ರಾಕ್‌ಲೈನ್ ವೆಂಕಟೇಶ್ ನಿರ್ಮಾಣದ 'ಕಾಟೇರ' ಸಿನಿಮಾ ಇದೇ ಡಿಸೆಂಬರ್‌ನಲ್ಲಿ ರಿಲೀಸ್ ಆಗುತ್ತೆ ಎನ್ನಲಾಗುತ್ತಿದೆ. ಆದರೆ, ಈಗಾಗಲೇ ಡಿಸೆಂಬರ್‌ನಲ್ಲಿ ಹಲವು ಸಿನಿಮಾಗಳು ರಿಲೀಸ್‌ಗಾಗಿ ಕ್ಯೂನಲ್ಲಿ ನಿಂತಿವೆ. ಹೀಗಾಗಿ ರಾಕ್‌ಲೈನ್ ವೆಂಕಟೇಶ್ ಯಾವಾಗ ರಿಲೀಸ್ ಮಾಡುತ್ತಾರೆ ಅನ್ನುವ ಬಗ್ಗೆ ಸುಳಿವು ಸಿಕ್ಕಿಲ್ಲ. ಈ ಕಾರಣಕ್ಕೆ 'ಕಾಟೇರ' ಡಿಸೆಂಬರ್‌ನಲ್ಲಿ ರಿಲೀಸ್ ಆಗುವ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದೆ.


Click it and Unblock the Notifications











