'ದಾಸ' ದರ್ಶನ್ ಅಪಘಾತದ ಸುತ್ತ ಹಲವು ಅನುಮಾನಗಳ ಹುತ್ತ.!

Recommended Video

ದರ್ಶನ್‌ ಅಪಘಾತದ ಹಿಂದೆ ಇರುವ ಅಸಲಿ ಕಾರಣ ಏನು..? | FIlmibeat Kannada

ಆ ದುರ್ಘಟನೆಯೊಂದು ಸಂಭವಿಸದೇ ಹೋಗಿದ್ದರೆ, ಇಷ್ಟೊತ್ತಿಗೆ 'ಒಡೆಯ' ಚಿತ್ರದ ಶೂಟಿಂಗ್ ನಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಪಾಲ್ಗೊಳ್ಳುತ್ತಿದ್ದರು. ಆದ್ರೆ, ಅದ್ಯಾರ ಕೆಟ್ಟು ಕಣ್ಣು ಬಿತ್ತೋ ಏನೋ.. ದರ್ಶನ್ ಇದೀಗ ಆಸ್ಪತ್ರೆ ಸೇರಿದ್ದಾರೆ.

ಮೊನ್ನೆ ಮಧ್ಯರಾತ್ರಿ ಮೂರು ಗಂಟೆ ಸುಮಾರಿಗೆ ಸಂಭವಿಸಿದ ಅಪಘಾತದಿಂದಾಗಿ, 'ದಾಸ' ದರ್ಶನ್ ಕೈ ಮುರಿದುಕೊಂಡು ಆಸ್ಪತ್ರೆ ಸೇರಿದ್ದಾರೆ. ಅದೃಷ್ಟವಶಾತ್ ದೊಡ್ಡ ಅನಾಹುತದಿಂದ ಪಾರಾಗಿದ್ದಾರೆ.

ಪಾರ್ಟಿ ಮುಗಿಸಿ ಸಂಭ್ರಮದಲ್ಲಿ ಇದ್ದ ಡೈನಾಮಿಕ್ ಸ್ಟಾರ್ ದೇವರಾಜ್ ಹಾಗೂ ಪುತ್ರ ಪ್ರಜ್ವಲ್ ದೇವರಾಜ್ ಕೂಡ ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ದರ್ಶನ್, ದೇವರಾಜ್, ಪ್ರಜ್ವಲ್ ದೇವರಾಜ್ ಹಾಗೂ ರಾಯ್ ಆಂಟೋನಿ ಪ್ರಯಾಣಿಸುತ್ತಿದ್ದ ಆಡಿ ಕ್ಯೂ 7 ಕಾರು ಅಪ್ಪಳಿಸಿದ ರಭಸಕ್ಕೆ ಕಬ್ಬಿಣದ ಕಂಬವೇ ಮುರಿದು ಬಿದ್ದಿದೆ. ಆಡಿ ಕ್ಯೂ 7 ಕಾರಿನ ಮುಂಭಾಗ ಸಂಪೂರ್ಣ ಜಖಂಗೊಂಡಿದೆ. ಹಾಗಾದ್ರೆ, ಶರವೇಗದಲ್ಲಿ ಕಾರನ್ನ ಚಲಾಯಿಸಲಾಗುತ್ತಿತ್ತಾ.?

ದರ್ಶನ್ ಅಪಘಾತದ ಸುತ್ತ ಇಂತಹ ಹತ್ತು ಹಲವು ಅನುಮಾನಗಳ ಹುತ್ತ ಹುಟ್ಟಿಕೊಂಡಿದೆ. ಎಲ್ಲದರ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ. ಓದಿರಿ...

ಆಡಿ ಕಾರು ದರ್ಶನ್ ಗೆ ಸೇರಿದ್ದಲ್ಲ.!

ಆಡಿ ಕಾರು ದರ್ಶನ್ ಗೆ ಸೇರಿದ್ದಲ್ಲ.!

ದರ್ಶನ್ ಕಾರು ಅಪಘಾತಗೊಂಡಿದೆ ಎಂದೇ ಎಲ್ಲೆಡೆ ವರದಿ ಆಗುತ್ತಿದೆ. ಆದ್ರೆ, ಸತ್ಯ ಏನು ಅಂದ್ರೆ, ದರ್ಶನ್, ದೇವರಾಜ್, ಪ್ರಜ್ವಲ್ ದೇವರಾಜ್ ಪ್ರಯಾಣ ಮಾಡುತ್ತಿದ್ದ ಆಡಿ ಕಾರು (JA 51 JD 7999) ನಿರ್ಮಾಪಕ, ರಾಜಕಾರಣಿ ಸಂದೇಶ್ ನಾಗರಾಜ್ ಅವರಿಗೆ ಸೇರಿದ್ದು.!

ಅಪಘಾತ ನಡೆದ ಮೇಲೆ ಕಾರನ್ನ ಗೌಪ್ಯವಾಗಿ ತೆಗೆದುಕೊಂಡು ಹೋಗಿದ್ದೇಕೆ.?

ಅಪಘಾತ ನಡೆದ ಮೇಲೆ ಕಾರನ್ನ ಗೌಪ್ಯವಾಗಿ ತೆಗೆದುಕೊಂಡು ಹೋಗಿದ್ದೇಕೆ.?

ಮಧ್ಯರಾತ್ರಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು, ಎತ್ತರಕ್ಕೆ ಹಾರಿ ಬಿದ್ದ ಮೇಲೆ ಆಡಿ ಕಾರನ್ನ ಗೌಪ್ಯವಾಗಿ ಬೇರೆ ಸ್ಥಳಕ್ಕೆ ತೆಗೆದುಕೊಂಡು ಹೋಗಲಾಗಿತ್ತು. ಶ್ರೀರಂಗಪಟ್ಟಣದ ತೋಟದಲ್ಲಿ ಕಾರನ್ನ ಮುಚ್ಚಿಟ್ಟು, ಬಳಿಕ ಪೊಲೀಸ್ ಠಾಣೆಗೆ ತೆಗೆದುಕೊಂಡು ಬಂದಿದ್ದು ಈ ಅಪಘಾತ ಪ್ರಕರಣದಲ್ಲಿ ಹಲವು ಅನುಮಾನಗಳನ್ನು ಹುಟ್ಟುಹಾಕಿದೆ.

ಪೊಲೀಸರು ಇದ್ದರಂತೆ.!

ಪೊಲೀಸರು ಇದ್ದರಂತೆ.!

ಮಧ್ಯರಾತ್ರಿ ಅಪಘಾತವಾದ ಆಡಿ ಕಾರನ್ನು ಸಾಗಿಸುವಾಗ ಪೊಲೀಸರು ಇದ್ದರು ಅಂತ ಪ್ರತ್ಯಕ್ಷದರ್ಶಿಗಳು ಹೇಳ್ತಾರೆ. ಆದ್ರೆ, ಅಪಘಾತದ ನಡೆದ 14 ಗಂಟೆ ಬಳಿಕ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದು ಹಾಗೂ ಮಧ್ಯಾಹ್ನದ ಹೊತ್ತಿಗೆ ಅಪಘಾತ ನಡೆದ ಸ್ಥಳಕ್ಕೆ ಪೊಲೀಸರು ಭೇಟಿ ಕೊಟ್ಟಿದ್ದು ಸಾಮಾನ್ಯ ಜನರಲ್ಲಿ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಕಾರು ಚಲಾಯಿಸುತ್ತಿದ್ದವರು ಯಾರು.?

ಕಾರು ಚಲಾಯಿಸುತ್ತಿದ್ದವರು ಯಾರು.?

ಅಪಘಾತ ನಡೆದಾಗ ಆಡಿ ಕಾರನ್ನ ಚಲಾಯಿಸುತ್ತಿದ್ದವರು ಯಾರು ಎಂಬ ಪ್ರಶ್ನೆಗೆ ಇನ್ನೂ ಖಚಿತವಾದ ಉತ್ತರ ಲಭ್ಯವಾಗಿಲ್ಲ. ಆದ್ರೆ, ರಾಯ್ ಆಂಟೋನಿ ಎಂಬುವರು ಕಾರು ಚಲಾಯಿಸುತ್ತಿದ್ದರು ಎನ್ನಲಾಗಿದೆ.

ಡ್ರಿಂಕ್ ಅಂಡ್ ಡ್ರೈವ್ ಕೇಸ್ ತಪ್ಪಿಸಿಕೊಳ್ಳಲು ಯತ್ನ.?

ಡ್ರಿಂಕ್ ಅಂಡ್ ಡ್ರೈವ್ ಕೇಸ್ ತಪ್ಪಿಸಿಕೊಳ್ಳಲು ಯತ್ನ.?

ಪಾರ್ಟಿಯಲ್ಲಿ ಎಲ್ಲರೂ ಮದ್ಯಪಾನ ಮಾಡಿದ್ರಾ.? ಡ್ರಿಂಕ್ ಅಂಡ್ ಡ್ರೈವ್ ಕೇಸ್ ನಿಂದ ತಪ್ಪಿಸಿಕೊಳ್ಳಲು ಕಾರನ್ನ ಮುಚ್ಚಿಡುವ ಪ್ರಯತ್ನ ನಡೆಯಿತಾ.? ಅಂತ ಪ್ರಶ್ನೆಗಳು ಸಾರ್ವಜನಿಕ ವಲಯದಲ್ಲಿ ಎದ್ದಿವೆ.

ವಿಮೆ ಬೇಡ

ವಿಮೆ ಬೇಡ

ದುಬಾರಿ ಆಡಿ ಕಾರಿನ ವಿಮೆ ಬೇಡ ಅಂತ ಹೇಳಲಾಗಿದ್ಯಂತೆ. ಮುಂಭಾಗ ಪೂರ್ತಿ ಜಖಂ ಆಗಿರುವ ಕಾರಿನ ವಿಮೆ ಬೇಡ ಎನ್ನಲು ಕಾರಣ ಏನು.? ಪ್ರಕರಣವನ್ನ ಮುಚ್ಚಿ ಹಾಕಲು ಹೀಗೆಲ್ಲ ಮಾಡ್ತಿದ್ದಾರಾ ಎಂಬ ಡೌಟ್ ಎಲ್ಲರನ್ನೂ ಕಾಡುತ್ತಿದೆ.

More from Filmibeat

English summary
Kannada Actor Darshan Accident has raised many doubts: Here is the complete report
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X