ವೈದ್ಯರು ನೀಡಿದ ಸಲಹೆಯಿಂದ ದರ್ಶನ್ ಚಿತ್ರಗಳಲ್ಲಿ ಭಾರಿ ಬದಲಾವಣೆ.!
Recommended Video

ದರ್ಶನ್ ಕಾರು ಅಪಘಾತದ ಬಳಿಕ ಡಿ-ಬಾಸ್ ಗೆ ವಿಶ್ರಾಂತಿ ಅಗತ್ಯವಿದೆ. ಯಶಸ್ವಿಯಾಗಿ ಶಸ್ತ್ರ ಚಿಕಿತ್ಸೆ ಮಾಡಿರುವ ವೈದ್ಯರು ಈಗ ದರ್ಶನ್ ಗೆ ಸಲಹೆ ನೀಡಿದ್ದು, ಸುಮಾರು ಏಂಟು ವಾರಗಳು ವಿಶ್ರಾಂತಿ ಪಡೆಯಬೇಕು ಎಂದು ತಿಳಿಸಿದ್ದಾರಂತೆ.
ಇದು ಸಹಜವಾಗಿ ದರ್ಶನ್ ಸಿನಿಮಾಗಳ ನಿರ್ಮಾಪಕರಿಗೆ ಹಾಗೂ ಅಭಿಮಾನಿಗಳಿಗೆ ಕೊಂಚ ಮಟ್ಟದ ಆಘಾತ ತರಿಸಿದೆ. ಯಾಕಂದ್ರೆ, ಎರಡು ತಿಂಗಳು ವಿಶ್ರಾಂತಿ ಅಂದ್ರೆ, ದರ್ಶನ್ ಅವರ ಶೂಟಿಂಗ್ ಗೆ ಬ್ರೇಕ್ ಬೀಳಲಿದೆ. ಬಿಡುಗಡೆಯೂ ವಿಳಂಬವಾಗಲಿದೆ ಎಂಬ ಲೆಕ್ಕಾಚಾರ ಈಗ ಚಿತ್ರಜಗತ್ತಿನಲ್ಲಿ ಕಾಡುತ್ತಿದೆ.
ಈ ವರ್ಷ ಚಾಲೆಂಜಿಂಗ್ ಸ್ಟಾರ್ ಅಭಿನಯದ ಯಾವ ಸಿನಿಮಾನೂ ಬಿಡುಗಡೆಯಾಗಿಲ್ಲ. ಹಾಗಾಗಿ, ಬಾಸ್ ಸಿನಿಮಾಗೆ ಭಕ್ತರು ಕಾಯ್ತಿದ್ದಾರೆ. ಹೀಗಿರುವಾಗ, ವೈದ್ಯರ ಸಲಹೆ ಮತ್ತಷ್ಟು ನಿರಾಸೆ ಮೂಡಿಸಿದೆ. ಹಾಗಿದ್ರೆ, ಸಿನಿಮಾ ಬಿಡುಗಡೆಯಾಗುವುದು ಲೇಟ್ ಆಗುತ್ತಾ.? ಅಂದುಕೊಂಡಿದ್ದ ದಿನಕ್ಕೆ ಸಿನಿಮಾಗಳು ಬರುತ್ತಾ ಎಂಬ ಕುತೂಹಕ ಕಾಡುತ್ತಿದೆ.? ಮುಂದೆ ಓದಿ.....

'ಯಜಮಾನ' ಸಾಂಗ್ ಮಾತ್ರ ಬಾಕಿ
ಶೈಲಜಾ ನಾಗ್ ನಿರ್ಮಾಣ ಮಾಡುತ್ತಿರುವ 'ಯಜಮಾನ' ಚಿತ್ರೀಕರಣ ಬಹುತೇಕ ಮುಗಿದಿದೆ. ಸ್ವತಃ ನಿರ್ಮಾಪಕರೇ ಹೇಳುವ ಪ್ರಕಾರ ಕೇವಲ ಎರಡು ಸಾಂಗ್ ಮಾತ್ರ ಬಾಕಿ ಇದೆ. ಈ ಹಾಡು ಮುಗಿಸಲು ದರ್ಶನ್ ಅವರು ಬರಬೇಕಿದೆ. ಅಂದುಕೊಂಡಂತೆ ಶೂಟಿಂಗ್ ನಡೆದಿದ್ದರೇ ಬಹುಶಃ ಇದು ಕೂಡ ಮುಗಿಯಬೇಕಿತ್ತು. ಈಗ ಸಾಂಗ್ ಶೂಟಿಂಗ್ ಮತ್ತಷ್ಟು ದಿನ ಮುಂದಕ್ಕೆ ಹೋಗುವ ಸಾಧ್ಯತೆ ಇದೆ. ಈ ವರ್ಷ 'ಯಜಮಾನ' ಚಿತ್ರವೇ ದರ್ಶನ್ ಅಭಿಮಾನಿಗಳಿಗೆ ಟ್ರೀಟ್ ಆಗಲಿದೆ.

'ಒಡೆಯ' ಈಗಷ್ಟೇ ಆರಂಭ
ಎಂ.ಡಿ ಶ್ರೀಧರ್ ನಿರ್ದೇಶನ ಹಾಗೂ ಸಂದೇಶ್ ನಾಗರಾಜ್ ನಿರ್ಮಾಣದ ಸಿನಿಮಾ 'ಒಡೆಯ'. ಈಗಷ್ಟೇ ಸಿನಿಮಾ ಚಿತ್ರೀಕರಣ ಅರಂಭ ಮಾಡಿದೆ. ಈ ಚಿತ್ರದಲ್ಲಿ ದೇವರಾಜ್ ಮತ್ತು ದರ್ಶನ್ ಒಟ್ಟಿಗೆ ಅಭಿನಯಿಸ್ತಿದ್ದಾರೆ. ಇದು ಪಕ್ಕಾ ಆಕ್ಷನ್ ಕಮ್ ಫ್ಯಾಮಿಲಿ ಕಥೆ ಹೊಂದಿದೆ. ಈ ಚಿತ್ರದಲ್ಲಿ ದರ್ಶನ್ ಆಕ್ಷನ್ ಮಾಡಬೇಕಾಗಿದೆ. ಈಗ ದರ್ಶನ್ ಕಂಬ್ಯಾಕ್ ಆಗೋವರೆಗೂ ಈ ಸಿನಿಮಾ ಬೇರೆ ಕೆಲಸದಲ್ಲಿ ತೊಡಗಬೇಕಿದೆ.

'ಕುರುಕ್ಷೇತ್ರ' ಕಂಪ್ಲೀಟ್
ದರ್ಶನ್ ವೃತ್ತಿ ಜೀವನದ ಮಹತ್ವದ ಚಿತ್ರ 'ಕುರುಕ್ಷೇತ್ರ'. ಈ ಸಿನಿಮಾದ ಶೂಟಿಂಗ್ ಸಂಪೂರ್ಣವಾಗಿದೆ. ಇದಕ್ಕೆ ಯಾವುದೇ ತೊಂದರೆ ಇಲ್ಲ. ಸದ್ಯ, ಪೊಸ್ಟ್ ಪ್ರೊಡಕ್ಷನ್ ನಲ್ಲಿ ತೊಡಗಿಕೊಂಡಿರುವ ಈ ಚಿತ್ರದ ಗ್ರಾಫಿಕ್ಸ್ ಕೆಲಸದಿಂದ ತಡವಾಗ್ತಿದೆ ಎಂದು ಚಿತ್ರದ ನಿರ್ಮಾಪಕ ಮುನಿರತ್ನ ಸ್ಪಷ್ಟಪಡಿಸಿದ್ದಾರೆ. ಅಲ್ಲಿಗೆ ಈ ಸಿನಿಮಾಗೆ ಯಾವುದೇ ಪ್ರಾಬ್ಲಂ ಇಲ್ಲ.

ರಾಕ್ ಲೈನ್ ಸಿನಿಮಾ ವಿಳಂಬ
ರಾಕ್ ಲೈನ್ ವೆಂಕಟೇಶ್ ನಿರ್ಮಾಣದಲ್ಲಿ ದರ್ಶನ್ ಅಭಿನಯಿಸಿಲಿರುವ 'ಗಂಡುಗಲಿ ಮದಕರಿ ನಾಯಕ' ಸಿನಿಮಾದ ಪ್ರೀ-ಪ್ರೊಡಕ್ಷನ್ ಕೆಲಸ ಅರಂಭವಾಗಿದೆ. ಆದ್ರೆ, ಅಧಿಕೃತವಾಗಿ ಸಿನಿಮಾ ಸೆಟ್ಟೇರಿಲ್ಲ. ಬಹುಶಃ ಈ ಚಿತ್ರದ ಶೂಟಿಂಗ್ ಮುಂದಿನ ವರ್ಷದಲ್ಲಿ ಶುರುವಾಗಬಹುದು. ಹಾಗಾಗಿ, ಈ ಚಿತ್ರಕ್ಕೇನೂ ಅಂತಹ ಸಮಸ್ಯೆಯಾಗುವುದಿಲ್ಲ. ಬಟ್, ಮದಕರಿ ನಾಯಕ ಕಥೆಯಲ್ಲಿ ಆಕ್ಷನ್ ದೃಶ್ಯಗಳು ಹೆಚ್ಚಿರುತ್ತೆ. ದರ್ಶನ್ ಅದನ್ನ ಹೇಗೆ ನಿಭಾಯಿಸ್ತಾರೆ ಎನ್ನುವುದು ಈ ಚಿತ್ರಕ್ಕೆ ಚಾಲೆಂಜ್ ಆಗಬಹುದು.

'ಭಗತ್ ಸಿಂಗ್' ಪಾತ್ರ ಮುಕ್ತಾಯ
ಪ್ರಜ್ವಲ್ ದೇವರಾಜ್ ಅಭಿನಯದ 'ಇನ್ಸ್ ಪೆಕ್ಟರ್ ವಿಕ್ರಂ' ಚಿತ್ರದಲ್ಲಿ ಭಗತ್ ಸಿಂಗ್ ಪಾತ್ರದಲ್ಲಿ ದರ್ಶನ್ ಅಭಿನಯಿಸಿದ್ದಾರೆ. ಹಾಗಾಗಿ, ಈ ಪಾತ್ರವನ್ನ ಕೂಡ ಮುಗಿಸಿಕೊಟ್ಟಿದ್ದಾರೆ.

ತರುಣ್ ಸಿನಿಮಾನೂ ಲೇಟ್
ಹೆಬ್ಬುಲಿ ನಿರ್ಮಾಪಕ ಉಮಾಪತಿ ಮತ್ತು ನಿರ್ದೇಶಕ ತರುಣ್ ಸುಧೀರ್ ಕಾಂಬಿನೇಷನ್ ಚಿತ್ರದಲ್ಲಿ ದರ್ಶನ್ ನಟಿಸುತ್ತಿದ್ದಾರೆ. ಸಿನಿಮಾದ ಸ್ಕ್ರಿಪ್ಟ್ ಪೂಜೆ ಕೂಡ ಆಗಿದೆ. ನವೆಂಬರ್ ನಲ್ಲಿ ಶೂಟಿಂಗ್ ಮಾಡುವ ಯೋಜನೆ ಹಾಕಿಕೊಂಡಿತ್ತು. ಚಿತ್ರತಂಡ ಬಹುಶಃ ದರ್ಶನ್ ಕಾರು ಅಪಘಾತದ ಪರಿಣಾಮ ಶೆಡ್ಯೂಲ್ ಬದಲಾಗಬಹುದು.


Click it and Unblock the Notifications











