ಅಪಘಾತಕ್ಕೂ ಮುಂಚೆ ದರ್ಶನ್-ದೇವರಾಜ್ ಪಾರ್ಟಿ ಫೋಟೋಗಳು
Recommended Video

ಚಾಲೆಂಜಿಂಗ್ ಸ್ಟಾರ್ ದರ್ಶನ್, ಹಿರಿಯ ನಟ ದೇವರಾಜ್ ಹಾಗೂ ಪ್ರಜ್ವಲ್ ದೇವರಾಜ್ ಅವರು ಚಲಿಸುತ್ತಿದ್ದ ಕಾರು ಮೈಸೂರಿನ ಹಿನಕಲ್ ಬಳಿ ಅಪಘಾತಕ್ಕೀಡಾಗಿತ್ತು.
ಈ ಅಪಘಾತದಲ್ಲಿ ಚಾಲಕ ರಾಯ್ ಆಂಟೋನಿ ಸೇರಿದಂತೆ ದರ್ಶನ್, ದೇವರಾಜ್, ಪ್ರಜ್ವಲ್ ನಾಲ್ಕು ಜನರಿಗೂ ಗಾಯಗಳಾಗಿವೆ. ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸದ್ಯ ಎಲ್ಲರೂ ಆರೋಗ್ಯವಾಗಿದ್ದಾರೆ ಎಂದು ಸ್ವತಃ ವೈದ್ಯರು ಸ್ಪಷ್ಟಪಡಿಸಿದ್ದಾರೆ.
ಈ ಅಪಘಾತ ರಾತ್ರಿ ಸುಮಾರು 3 ಗಂಟೆ ವೇಳೆ ನಡೆದಿದೆ. ಆ ಸಮಯದಲ್ಲಿ ದರ್ಶನ್ ಮತ್ತು ದೇವರಾಜ್ ಅವರು ಎಲ್ಲಿ ಹೊರಟ್ಟಿದ್ದರು ಮತ್ತು ಎಲ್ಲಿಗೆ ಹೋಗಿದ್ದರು ಎಂಬ ಪ್ರಶ್ನೆ ಕಾಡುವುದು ಸಹಜ. ಅದಕ್ಕೆ ಸಂಬಂಧಪಟ್ಟಂತೆ ಕೆಲವು ಫೋಟೋಗಳು ಬಹಿರಂಗವಾಗಿದ್ದು, ಅಪಘಾತಕ್ಕೂ ಮುಂಚೆ ಪಾರ್ಟಿಯೊಂದರಲ್ಲಿ ಭಾಗವಹಿಸಿ ಹೊಟೆಲ್ ಗೆ ಹೋಗುತ್ತಿದ್ದರು ಎಂಬ ಮಾಹಿತಿ ಇದೆ. ಇಲ್ಲಿ ವಿಶೇಷ ಅಂದ್ರೆ ಈ ಪಾರ್ಟಿಯಲ್ಲಿ ಸೃಜನ್, ಪ್ರಣಾಮ್ ಸೇರಿದಂತೆ ಇನ್ನು ಕೆಲವರು ಕಾಣಿಸಿಕೊಂಡಿದ್ದಾರೆ. ಚಿತ್ರಗಳು ಮುಂದೆ ನೋಡಿ......

ಪಾರ್ಟಿಯಲ್ಲಿ ದರ್ಶನ್ ಅಂಡ್ ಟೀಂ
ಕಳೆದ ರಾತ್ರಿ ದರ್ಶನ್, ದೇವರಾಜ್ ಅವರು ಪಾರ್ಟಿಯೊಂದರಲ್ಲಿ ಭಾಗಿಯಾಗಿದ್ದರು. ಇವರ ಜೊತೆ ದೇವರಾಜ್ ಪುತ್ರರಾದ ಪ್ರಣಾಮ್ ದೇವರಾಜ್, ಪ್ರಜ್ವಲ್ ದೇವರಾಜ್ ಕೂಡ ಇದ್ದರು. ಇದು ದೇವರಾಜ್ ಅವರ ಹುಟ್ಟುಹಬ್ಬದ ಪಾರ್ಟಿ ಎಂದು ಹೇಳಲಾಗುತ್ತಿದೆ.

ಗಜ ಜೊತೆ ಸೃಜ ಕೂಡ ಭಾಗಿ
ಚಾಲೆಂಜಿಂಗ್ ಸ್ಟಾರ್ ಜೊತೆಯಲ್ಲಿ ಟಾಕಿಂಗ್ ಸ್ಟಾರ್ ಸೃಜನ್ ಲೋಕೇಶ್, ತರಂಗ ವಿಶ್ವ ಕೂಡ ಆ ಪಾರ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ ಎನ್ನಲಾಗಿದೆ. ತಡರಾತ್ರಿ ಅವರಿಗೆ ಈ ಪಾರ್ಟಿಯಲ್ಲಿ ಸ್ಟಾರ್ ಸಯಮ ಕಳೆದಿದ್ದಾರೆ.

ಅವರೆಲ್ಲಿ ಹೋದರು
ಹೀಗೆ, ಕಳೆದ ರಾತ್ರಿ ಪಾರ್ಟಿ ಮುಗಿಸಿ ದರ್ಶನ್, ಪ್ರಜ್ವಲ್, ದೇವರಾಜ್ ತಾವು ತಂಗಿದ್ದ ಹೋಟೆಲ್ ರೂಂಗೆ ವಾಪಸ್ ಬರುವ ವೇಳೆ ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಆದ್ರೆ, ಸೃಜನ್ ಮತ್ತು ಸ್ನೇಹಿತರು ಎಲ್ಲಿ ಹೋದರು ಎಂಬುದರ ಬಗ್ಗೆ ಮಾಹಿತಿ ಇಲ್ಲ. ಆದ್ರೆ, ನಿರ್ಮಾಪಕ ಸಂದೇಶ ನಾಗರಾಜ್ ಅವರು ಹೇಳಿದ ಪ್ರಕಾರ, ಇವರೆಲ್ಲಾ ಗೊತ್ತಿರುವ ವ್ಯಕ್ತಿಯೊಬ್ಬರ ಮನೆಯಲ್ಲಿ ಊಟ ಮುಗಿಸಿ ಹೋಟೆಲ್ ಗೆ ವಾಪಸ್ ಆಗ್ತಿದ್ದರಂತೆ.

ಚಾಲಕನ ನಿಯಂತ್ರಣ ತಪ್ಪಿ ಅಪಘಾತ
ಹೀಗೆ, ಸ್ನೇಹಿತರ ಜೊತೆ ಪಾರ್ಟಿ ಮುಗಿಸಿ ಹಿಂತಿರುಗುವಾಗ ಕಾರು ಚಾಲಕ ರಾಯ್ ಆಂಟೋನಿ ನಿಯಂತ್ರಣ ತಪ್ಪಿ ಈ ಅಪಘಾತವಾಗಿದೆ. ಕೂಡಲೇ ದರ್ಶನ್ ಸ್ನೇಹಿತರು ಸ್ಥಳಕ್ಕೆ ಧಾವಿಸಿ, ಅವರನ್ನ ಆಸ್ಪತ್ರೆಗೆ ಸೇರಿಸಿದ್ದಾರೆ ಎನ್ನಲಾಗಿದೆ.

ಪೊಲೀಸರಿಂದ ಎಫ್.ಐ.ಆರ್
ದರ್ಶನ್ ಕಾರು ಅಪಘಾತವಾದ ಸ್ಥಳ ವಿವಿ ಪುರಂ ಪೊಲೀಸರ ವ್ಯಾಪ್ತಿಗೆ ಬರಲಿದ್ದು, ಈಗ ಎಫ್.ಐ.ಆರ್ ದಾಖಲಿಸಿದ್ದಾರೆ ಎನ್ನಲಾಗಿದೆ. ಚಾಲಕನ ನಿಯಂತ್ರಣ ತಪ್ಪಿ ಅಪಘಾತವಾಗಿದೆ ಎಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಪಘಾತಕ್ಕೋಳಗಾದ ಕಾರನ್ನ ಮುಚ್ಚಿಡಲಾಗಿದೆ ಎನ್ನಲಾಗಿತ್ತು. ಶ್ರೀರಂಗಪಟ್ಟಣದ ಬಳಿ ಈ ಕಾರು ಪತ್ತೆಯಾಗಿದ್ದು, ಕಾರನ್ನ ವಶ ಪಡಿಸಿಕೊಂಡಿದ್ದಾರೆ.

ದರ್ಶನ್ ಗೆ ವಿಶ್ರಾಂತಿ ಬೇಕಿದೆ
ದರ್ಶನ್ ಬಲಗೈಗೆ ಪೆಟ್ಟಾಗಿದ್ದು, ಸುಮಾರು 25 ಹೊಲಿಗೆಗಳನ್ನ ಹಾಕಿದ್ದಾರೆ. ದೇವರಾಜ್ ಅವರಿಗೂ ಹಾಗೂ ಪ್ರಜ್ವಲ್ ಗೂ ಗಾಯಗಳಾಗಿದ್ದು ಎಲ್ಲರೂ ಆರಾಮಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಸದ್ಯದ ಮಾಹಿತಿ ಪ್ರಕಾರ ದರ್ಶನ್ ಅವರು 10 ರಿಂದ 15 ದಿನ ವಿಶ್ರಾಂತಿ ಪಡೆದುಕೊಳ್ಳಬೇಕು ಎನ್ನಲಾಗಿದೆ.


Click it and Unblock the Notifications











