ದರ್ಶನ್-ಸುದೀಪ್ ಹಳೇ ವಿಡಿಯೋ ವೈರಲ್: ಕಿಚ್ಚ-ದಚ್ಚುಯಿಂದ ಕಾಲೆಳೆಸಿಕೊಂಡ ಆ ಕ್ರಿಕೆಟರ್ ಯಾರು?
ಚಾಲೆಂಜಿಂಗ್‌ಸ್ಟಾರ್ ದರ್ಶನ್ ಹಾಗೂ ಕಿಚ್ಚ ಸುದೀಪ್ ಇಬ್ಬರೂ ಒಂದು ಕಾಲದಲ್ಲಿ ಕುಚಿಕು ಗೆಳೆಯರು. ಕನ್ನಡ ಚಿತ್ರರಂಗಕ್ಕೆ ಅಂಬರೀಶ್ ಹಾಗೂ ವಿಷ್ಣುವರ್ಧನ್ ಇದ್ದಂತೆ. ಸ್ನೇಹಿತರಾಗಿದ್ದಾಗ ಒಂದಿಷ್ಟು ದಿನ ಇಬ್ಬರೂ ಒಟ್ಟಿಗೆ ಎಂಜಾಯ್ ಮಾಡಿದ್ದೂ ಇದೆ.
ಸ್ನೇಹಿತರನ್ನು ಗುಡ್ಡೆ ಹಾಕಿಕೊಂಡು ಟ್ರಿಪ್‌ಗೆ ಹೋಗಿದ್ದರು. ಬೈಕ್ ರೈಡ್ ಅಂತ ಕಾಡು ಮೇಡು ಸುತ್ತಿದ್ರು. ಹಳ್ಳಿ, ಕಾಡು ಮೇಡು ಅಲೆದಾಡಿದ್ದರು. ಆ ವೇಳೆ ದರ್ಶನ್ ಹಾಗೂ ಸುದೀಪ್ ಇಬ್ಬರ ಪರಸ್ಪರ ಒಬ್ಬರನ್ನೊಬ್ಬರು ಕಾಲೆಳೆದುಕೊಂಡಿದ್ದು ಇದೆ. ಈ ವಿಡಿಯೊಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿದ್ದವು.

ಈಗ ಕಿಚ್ಚ ಸುದೀಪ್ ಹಾಗೂ ದರ್ಶನ್ ಇಬ್ಬರೂ ನಾನೊಂದು ತೀರ.. ನೀನೊಂದು ತೀರ ಅಂತಿದ್ದಾರೆ. ಸ್ನೇಹಿತರಿಬ್ಬರು ಯಾವುದೋ ಕಾರಣಕ್ಕೆ ಮುನಿಸಿಕೊಂಡು ಬೇರೆಯಾಗಿದ್ದಾರೆ. ಆದರೂ, ಅವರ ಅಭಿಮಾನಿಗಳು ಇವತ್ತಲ್ಲ ನಾಳೆ ಒಂದಾಗುತ್ತಾರೆ ಅನ್ನೋ ನಿರೀಕ್ಷೆಯಲ್ಲೇ ಇದ್ದಾರೆ. ಸದ್ಯ ದರ್ಶನ್ ಹಾಗೂ ಸುದೀಪ್ ಇಬ್ಬರೂ ಬೈಕ್ ರೈಡ್ ಹೋಗಿದ್ದ ವೇಳೆ ಇಬ್ಬರ ನಡುವೆ ನಡೆದ ಸಂಭಾವಷಣೆ ಈಗ ವೈರಲ್ ಆಗುತ್ತಿದೆ.
ದಚ್ಚು-ಕಿಚ್ಚ ಹಳೇ ವಿಡಿಯೋ ವೈರಲ್
ದರ್ಶನ್ ಹಾಗೂ ಕಿಚ್ಚ ಸುದೀಪ್ ಒಟ್ಟಿಗೆ ಸೇರಿದ್ರೆ ಅಲ್ಲಿ ನಗುವಿಗೇನು ಕಮ್ಮಿಯಿರಲಿಲ್ಲ. ತನ್ನ ಗೆಳೆಯರನ್ನು ರೇಗಿಸುತ್ತಾ? ಅವರ ಕಾಲೆಳೆಯುತ್ತಾ? ಆ ಟ್ರಿಪ್‌ಗೆ ಕಳೆ ತರುತ್ತಿದ್ದದ್ದೇ ದರ್ಶನ್ ಹಾಗೂ ಸುದೀಪ್. ಈಗ ಇವರಿಬ್ಬರು ಬೇರೆಯಾಗಿದ್ದಾರೆ. ಆದರೂ, ದರ್ಶನ್ ಸ್ನೇಹಿತರನ್ನು ಗುಡ್ಡೆ ಹಾಕಿಕೊಂಡು ಟ್ರಿಪ್ ಮಾಡುತ್ತಲೇ ಇರುತ್ತಾರೆ. ಇತ್ತೀಚೆಗೆಷ್ಟೇ ಗೆಳೆಯರೊಂದಿಗೆ ಮಳೆಯಲ್ಲೇ ಆಫ್ ರೋಡ್ ಟ್ರಿಪ್ ಮಾಡಿ ಬಂದಿದ್ದರು. ಇದೇ ವೇಳೆ ಮತ್ತೆ ಕಿಚ್ಚ-ದಚ್ಚು ಹಳೇ ವಿಡಿಯೋ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಮಾಜಿ ಕ್ರಿಕೆಟಿಗರೊಬ್ಬರ ಕಾಲೆಳೆದಿದ್ದಾರೆ.
ಕಿಚ್ಚ ಕಾಲೆಳೆದ ಮಾಜಿ ಕ್ರಿಕೆಟರ್ ಯಾರು?
ಕಿಚ್ಚ ಸುದೀಪ್ ಹಾಗೂ ದರ್ಶನ್ ಇಬ್ಬರೂ ಟ್ರಿಪ್ ಹೋದಾಗ ಸಿಸಿಎಲ್‌ನಲ್ಲಿ ಕ್ರೇಜ್ ಇತ್ತು. ಸ್ವತ: ದರ್ಶನ್ ಕೂಡ ಸಿಸಿಎಲ್‌ನ ಭಾಗವಾಗಿದ್ದರು. ಆ ವೇಳೆ ಕರ್ನಾಟಕದ ಮಾಜಿ ಕ್ರಿಕೆಟ್ ಆಟಗಾರ ಜಿ ಕೆ ಅನಿಲ್ ಕುಮಾರ್ ಕೂಡ ಈ ಟ್ರಿಪ್‌ನ ಒಂದು ಭಾಗವಾಗಿದ್ದರು. ಈ ವೇಳೆ ಕಿಚ್ಚ ಸುದೀಪ್ ಹಾಗೂ ದರ್ಶನ್ ಇಬ್ಬರು ಮಾತಾಡುವಾಗ ಅಲ್ಲೇ ಪಕ್ಕದಲ್ಲಿದ್ದ ಮಾಜಿ ಕ್ರಿಕೆಟಿಗ ಹಾಗೂ ಕರ್ನಾಟಕ ಬುಲ್ಡೋಜರ್ ತಂಡಕ್ಕೆ ಕೋಚ್ ಆಗಿದ್ದ ಜಿ ಕೆ ಅನಿಲ್ ಕುಮಾರ್ ಅವರನ್ನು ತಮಾಷೆಯಾಗಿ ಕಾಲೆಳೆದಿದ್ದಾರೆ. ಅದೇ ವಿಡಿಯೋ ಮತ್ತೆ ಸೋಶಿಯಲ್ ಮೀಡಿಯಾದಲ್ಲಿ ಓಡಾಡುತ್ತಿದೆ.
ಇದೊಂದೇ ವಿಡಿಯೋ ಅಲ್ಲ
ದರ್ಶನ್ ಹಾಗೂ ಸುದೀಪ್ ಜೊತೆಯಾಗಿ ರೋಡ್ ಟ್ರಿಪ್ ಮಾಡುವಾಗ ಹಲವು ವಿಷಯಗಳ ಬಗ್ಗೆ ಮಾತಾಡಿದ್ದಾರೆ. ಕೆಲವರಿಗೆ ತಮಾಷೆ ಮಾಡಿದ್ದಾರೆ. ಕಾಲೆಳೆದು ನಗಿಸಿದ್ದಾರೆ. ಪಾರ್ಟಿ ಮಾಡಿ ಎಂಜಾಯ್ ಮಾಡಿದ್ದಾರೆ. ದರ್ಶನ್ ಹಾಗೂ ಸುದೀಪ್ ಜೊತೆ ನಟ ರವಿಶಂಕರ್ ಕೂಡ ಇವರೊಂದಿಗೆ ರೋಡ್ ಟ್ರಿಪ್ ಮಾಡಿದ್ದಾರೆ. ಈ ವೇಳೆ ಮನೆಯೊಂದರಲ್ಲಿ ಕಿಚ್ಚ-ದಚ್ಚು ಬಿಡುವಿನ ಸಮಯವನ್ನು ಆರಾಮಾಗಿ ಕಳೆದಿದ್ದಾರೆ. ಇದೇ ವಿಡಿಯೋ ಈಗ ಮತ್ತೆ ವೈರಲ್ ಆಗಿದೆ. ಅಭಿಮಾನಿಗಳು ಇಬ್ಬರೂ ಮತ್ತೆ ಒಂದಾಗಲಿ ಎಂದು ಬಯಸುತ್ತಿದ್ದಾರೆ.


Click it and Unblock the Notifications











