ದರ್ಶನ್ ಸಿಂಹ.. ರಕ್ಷಿತಾ ಸಿಂಹಿಣಿ: ಇಂಟ್ರೆಸ್ಟಿಂಗ್ ಸಂಗತಿ ಬಿಚ್ಚಿಟ್ಟ ಡಿ ಬಾಸ್!

ಸ್ಯಾಂಡಲ್‌ವುಡ್‌ನ ಬೆಸ್ಟ್ ಆನ್‌ಸ್ಕ್ರೀನ್ ಪೇರ್ ಯಾರು ಅಂದ್ರೆ, ಇಂದಿಗೂ ದರ್ಶನ್ ಹಾಗೂ ರಕ್ಷಿತಾ ಹೆಸರು ಹೇಳಿಯೇ ಹೇಳುತ್ತಾರೆ. ಇಬ್ಬರ ಕಾಂಬಿನೇಷನ್‌ನಲ್ಲಿ ಬಂದ ಸಿನಿಮಾಗಳು ಹಾಗಿರುತ್ತಿತ್ತು. ಇಬ್ಬರೂ ಜೋಡಿಯಾಗಿ ನಟಿಸಿದ ಸಿನಿಮಾಗಳು ಕೂಡ ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸಿದ್ದವು.

ಇಬ್ಬರ ಅಭಿಮಾನಿಗಳಿಗೂ ಅಷ್ಟೇ. ದರ್ಶನ್ ಹಾಗೂ ರಕ್ಷಿತಾ ಒಂದೇ ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಅಂದ್ರೆ ಅದೇನೋ ಖುಷಿ. ಇತ್ತ ನಿರ್ಮಾಪಕರಿಗೆ, ನಿರ್ದೇಶಕರಿಗೆ ಸಿನಿಮಾ ಬ್ಲಾಕ್‌ಬಸ್ಟರ್ ಲಿಸ್ಟ್ ಸೇರೋದು ಫಿಕ್ಸ್. 'ಕಲಾಸಿಪಾಳ್ಯ', 'ಮಂಡ್ಯ', 'ಸುಂಟರಗಾಳಿ' ಹಾಗೂ 'ಅಯ್ಯ' ಸಿನಿಮಾಗಳಲ್ಲಿ ಜೊತೆಯಾಗಿ ನಟಿಸಿದ್ದಾರೆ. ಈ ಎಲ್ಲಾ ಸಿನಿಮಾಗಳು ಟಾಪ್ ಲಿಸ್ಟ್‌ನಲ್ಲಿವೆ.

'ಕ್ರಾಂತಿ' ಸಿನಿಮಾ ಬಿಡುಗಡೆ ವೇಳೆ ದರ್ಶನ್ ಮತ್ತೆ ನಟಿ ರಕ್ಷಿತಾ ಪ್ರೇಮ್‌ರನ್ನು ನೆನಪಿಸಿಕೊಂಡಿದ್ದಾರೆ. ನಟ ವಿನಾಯಕ್ ಜೋಶಿ ಯೂಟ್ಯೂನ್‌ ಚಾನೆಲ್‌ ಜೊತೆ ಮಾತಾಡುವಾಗ ರಕ್ಷಿತಾ ಪ್ರೇಮ್‌ರನ್ನು ಬಗ್ಗೆ ಮಾತಾಡಿದ್ದಾರೆ. ಅಷ್ಟಕ್ಕೂ ದಾಸ ಕ್ರೇಜಿ ಕ್ವೀನ್ ರಕ್ಷಿತಾ ಬಗ್ಗೆ ಹೇಳಿದ್ದೇನು? ಅನ್ನೋದನ್ನು ತಿಳಿಯಲು ಮುಂದೆ ಓದಿ.

ದರ್ಶನ್ ನಟಿ ರಕ್ಷಿತಾರನ್ನು ನೆನೆದಿದ್ದೇಕೆ?

ದರ್ಶನ್ ನಟಿ ರಕ್ಷಿತಾರನ್ನು ನೆನೆದಿದ್ದೇಕೆ?

ಚಾಲೆಂಜಿಂಗ್ ಸ್ಟಾರ್ ದರ್ಶನ್ ಕ್ರಾಂತಿ ಸಿನಿಮಾ ಪ್ರಮೋಷನ್‌ನಲ್ಲಿ ಬ್ಯುಸಿಯಾಗಿದ್ದಾರೆ. ಸಾಕಷ್ಟು ಯೂಟ್ಯೂಬ್‌ ಚಾನಲ್‌ಗಳಿಗೆ ಈಗಾಗಲೇ ದರ್ಶನ್ ಸಂದರ್ಶನ ನೀಡಿದ್ದಾರೆ. ವಿನಾಯಕ್ ಜೋಷಿ ಜೊತೆ ಮಾತಾಡುವಾಗ ದರ್ಶನ್ ತಮ್ಮ ಆತ್ಮೀಯ ಗೆಳತಿ ರಕ್ಷಿತಾ ಪ್ರೇಮ್‌ರನ್ನು ನೆನಪಿಸಿಕೊಂಡಿದ್ದಾರೆ. ನಿರೂಪಕ ದರ್ಶನ್ ಬಳಿ ಮೃಗಾಲಯದ ಬಗ್ಗೆ ಮಾತಾಡಿಸುತ್ತಿದ್ದರು. ಈ ವೇಳೆ ದರ್ಶನ್ ಅಲ್ಲಿನ ಸಿಂಹಗಳಿಗೆ ತಮ್ಮ ಹಾಗೂ ನಟಿ ರಕ್ಷಿತಾ ಪ್ರೇಮ್ ಹೆಸರಿಟ್ಟಿರೋದನ್ನು ನೆನಪಿಸಿಕೊಂಡಿದ್ದಾರೆ.

ದರ್ಶನ್ ಸಿಂಹ.. ರಕ್ಷಿತಾ ಸಿಂಹಿಣಿ

ದರ್ಶನ್ ಸಿಂಹ.. ರಕ್ಷಿತಾ ಸಿಂಹಿಣಿ

ಮೈಸೂರಿನ ಮೃಗಾಲಯದಲ್ಲಿರುವ ಸಿಂಹ ಹಾಗೂ ಸಿಂಹಿಣಿಗೆ ದರ್ಶನ್ ಹಾಗೂ ರಕ್ಷಿತಾ ಅಂತ ಹೆಸರಿಟ್ಟಿದ್ದಾರಂತೆ. ಈ ಮಾತನ್ನು ಸ್ವತ: ದರ್ಶನ್ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. "ಅನನ್ಯ, ಅಗಸ್ತ್ಯ ಅನ್ನೋ ಹುಲಿಗಳು ಇದ್ದವೋ ಇಲ್ಲವೋ ಗೊತ್ತಿಲ್ಲ. ಆದರೆ, ದರ್ಶನ್, ರಕ್ಷಿತಾ ಅನ್ನೋ ಸಿಂಹ ಸಿಂಹಿಣಿ ಇದ್ದಾವೆ ಅನ್ನೋದು ಗೊತ್ತು. ಈಗಲೂ ಇದ್ದಾವೆ." ಎಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಂದರ್ಶನದಲ್ಲಿ ಹೇಳಿದ್ದಾರೆ.

ದರ್ಶನ್ ಆ ವ್ಯಕ್ತಿ ಬಗ್ಗೆ ಹೇಳಿದ್ದೇನು?

ದರ್ಶನ್ ಆ ವ್ಯಕ್ತಿ ಬಗ್ಗೆ ಹೇಳಿದ್ದೇನು?

"ಮೃಗಾಲಯ ಅಂದಕೂಡಲೇ ಪುಂಡರಿಕ ನೆನಪಾಗುತ್ತಾರೆ. ಅವರು ಹೋಗಿಬಿಟ್ಟರು.. ಪಾಪಾ ಈಗ ಇಲ್ಲ. ಅವರು ಮದುವೆ ಮಾಡಿಕೊಳ್ಳಲಿಲ್ಲ. ಅವರು ಪ್ರತಿಯೊಂದು ಪ್ರಾಣಿ ಜೊತೆನೂ ಮಾತಾಡೋರು. ಅದೂ ಅಚ್ಚ ಕನ್ನಡದಲ್ಲಿ. ರೀಟಾ, ರೀನಾ ಅಂದ್ಬಿಟ್ಟು ಹುಲಿ ಅದು. ಮೃಗಾಲಯದಲ್ಲಿ ಅಂಬರೀಶ್ ಅಪ್ಪಾಜಿ ಹಿಡ್ಕೊಂಡು ಬರುತ್ತಾರೆ. ರೀನಾ ಹುಲಿಯನ್ನು ಕೂರಿಸಿಕೊಂಡು ಮಾತಾಡಿಸಿಕೊಂಡು ಹಲ್ಲು ಕ್ಲೀನ್ ಮಾಡೋರು." ಎಂದು ಪುಂಡರಿಕ ಅವರನ್ನು ದರ್ಶನ್ ನೆನಪಿಸಿಕೊಂಡಿದ್ದಾರೆ.

ಕರ್ನಾಟಕದಾದ್ಯಂತ 'ಕ್ರಾಂತಿ' ಕ್ರೇಜ್

ಕರ್ನಾಟಕದಾದ್ಯಂತ 'ಕ್ರಾಂತಿ' ಕ್ರೇಜ್

ದರ್ಶನ್ 'ಕ್ರಾಂತಿ' ಸಿನಿಮಾ ಬಿಡುಗಡೆಯಾಗುತ್ತಿದೆ. ಹೆಚ್ಚು ಕಡಿಮೆ ಎರಡು ವರ್ಷಗಳ ಬಳಿಕ ಥಿಯೇಟರ್‌ಗಳಲ್ಲಿ 'ಕ್ರಾಂತಿ' ಮಾಡುವುದಕ್ಕೆ ತುದಿಗಾಲಲ್ಲಿ ನಿಂತಿದ್ದಾರೆ. ಈ ಮಧ್ಯೆ ಅಡ್ವಾನ್ಸ್ ಬುಕಿಂಗ್‌ ಮೂಲಕ ಎಲ್ಲೆಡೆ ಸಿಕ್ಕಾಪಟ್ಟೆ ರೆಸ್ಪಾನ್ಸ್ ಸಿಗುತ್ತಿದೆ. ಕರ್ನಾಟಕದ ಮೂಲೆ ಮೂಲೆಯಲ್ಲಿರೋ ಅಭಿಮಾನಿಗಳು 'ಕ್ರಾಂತಿ' ಜಪಾ ಮಾಡುತ್ತಿದ್ದಾರೆ. ಈ ಮಧ್ಯೆ ಅಡ್ವಾನ್ಸ್ ಬುಕಿಂಗ್ ಮೂಲಕವೇ 'ಕ್ರಾಂತಿ' ದಾಖಲೆ ಮಾಡುವ ಸೂಚನೆ ಕಾಣುತ್ತಿದೆ.

More from Filmibeat

English summary
Darshan and Rakshita are the names of two lions at the Mysore Zoo Says Challenging Star, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X