ಸಿ ವಿ ನಾಗೇಶ್ ವಾದಕ್ಕೆ ಎಸ್‌ಪಿಪಿ ಪ್ರಸನ್ನ ಕುಮಾರ್ ಪ್ರತಿವಾದ: ದರ್ಶನ್‌ಗೆ ಕಗ್ಗಂಟಾಗುತ್ತಾ ಜಾಮೀನು?
ದರ್ಶನ್ ಜಾಮೀನು ಅರ್ಜಿ ವಿಚಾರಣೆ ಕುತೂಹಲ ಘಟ್ಟ ತಲುಪಿದೆ. ಚಾಲೆಂಜಿಂಗ್ ಸ್ಟಾರ್‌ಗೆ ಜಾಮೀನು ಸಿಗುತ್ತೋ ಇಲ್ಲವೋ ಅನ್ನೋದು ಹಾವು ಏಣಿ ಆಟದ ಹಾಗೆ ಆಗಿದೆ. ಕಳೆದ ವಾರ ವಾದ ಮಂಡಿದ್ದ ದರ್ಶನ್ ಪರ ವಕೀಲ ಸಿ ವಿ ನಾಗೇಶ್ ಪೊಲೀಸರ ತನಿಖೆ ಸರಿಯಿಲ್ಲ ಎಂದು ವಾದ ಮಂಡಿಸಿದ್ದರು. ನ್ಯಾಯಾಧೀಶರ ಮುಂದೆ ಪ್ರಬಲವಾಗಿ ಮಂಡಿಸಿದ್ದ ವಾದದ ಬಳಿಕ ಜಾಮೀನು ಸಿಕ್ಕೇಬಿಟ್ಟಿತು ಅನ್ನುವ ಖುಷಿಯಲ್ಲಿ ಅವರ ಅಭಿಮಾನಿಗಳು ಇದ್ದರು.
ಆದರೆ, ಇಂದು ಅಕ್ಟೋಬರ್ 8) ಎಸ್‌ಪಿಪಿ ಪ್ರಸನ್ನ ಕುಮಾರ್ ವಾದ ಮಂಡಿಸಿದ್ದಾರೆ. ಈ ವೇಳೆ ದರ್ಶನ್ ಪರ ವಕೀಲ ಸಿ ವಿ ನಾಗೇಶ್ ಮಂಡಿದ್ದ ವಾದಗಳಿಗೆ ಉತ್ತರ ನೀಡಿದ್ದಾರೆ. ಅಲ್ಲದೆ ನ್ಯಾಯಾಧೀಶರ ಮುಂದೆ ಆರೋಪಿಗಳ ಕ್ರೂರತೆ ಬಗ್ಗೆನೂ ಇಂಚಿಂಚಾಗಿ ಬಿಚ್ಚಿಟ್ಟಿದ್ದಾರೆ. ಹಿರಿಯ ವಕೀಲ ಸಿ ವಿ ನಾಗೇಶ್ ಅವರ ವಾದಕ್ಕೆ ಎಸ್‌ಪಿಪಿ ಪ್ರಸನ್ನ ಕುಮಾರ್ ಪ್ರತಿವಾದ ಮಾಡಿದ್ದು ಕೂಡ ಅಷ್ಟೇ ಪವರ್‌ಫುಲ್ ಆಗಿತ್ತು.

ದರ್ಶನ್ ಪರ ವಕೀಲರಾಗಿರುವ ಸಿ ವಿ ನಾಗೇಶ್ ಪೊಲೀಸರು ಸಲ್ಲಿ ಚಾರ್ಜ್ ಶೀಟ್ ಅನ್ನು 'ಅರೇಬಿಯನ್ ನೈಟ್ಸ್' ಕಥೆಗೆ ಹೋಲಿಕೆ ಮಾಡಿದ್ದರು. ಪೊಲೀಸರು ತನಿಖೆಯನ್ನು ಸರಿಯಾಗಿ ಮಾಡಿಲ್ಲ. ಅವರು ಮಾಡಿದ ತನಿಖೆಯಲ್ಲಿ ಲೋಪಗಳು ಎದ್ದು ಕಾಣುತ್ತಿವೆ ಎಂದು ತಮ್ಮ ವಾದ ಮಂಡಿಸಿದ್ದರು. ಅದರಲ್ಲಿ ಆರೋಪಿಗಳಿಗೆ ರೇಣುಕಾ ಸ್ವಾಮಿ ಬಗ್ಗೆ ಗೊತ್ತೇ ಮಾಹಿತಿನೇ ಇರಲಿಲ್ಲ. ಇದು ಪೂರ್ವ ಯೋಜಿತವಲ್ಲ ಎಂದು ಹೇಳಿದ್ದರು.
ಸಿ ವಿ ನಾಗೇಶ್ ಅವರ ಈ ವಾದಕ್ಕೆ ಎಸ್‌ಪಿಪಿ ಪ್ರಸನ್ನ ಕುಮಾರ್ ಪ್ರತಿವಾದ ಮಾಡಿದ್ದರು. ಇನ್‌ಸ್ಟಾಗ್ರಾಂನಲ್ಲಿ ಪವಿತ್ರಾ ಗೌಡ ಹಾಗೂ ರೇಣುಕಾಸ್ವಾಮಿ ನಡುವಿನ ಚಾಟ್ ಬಗ್ಗೆ ಪ್ರಸ್ತಾಪಿಸಿದ್ದರು. ಹಾಗೇ ರೇಣುಕಾಸ್ವಾಮಿ ಜೊತೆ ಪವಿತ್ರಾ ಗೌಡ ಎಂದು ಪವನ್ ಚಾಟಿಂಗ್ ಮಾಡಿದ್ದನು. ಹಾಗೇ ರೇಣುಕಾಸ್ವಾಮಿ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಕಲೆ ಹಾಕಲಾಗಿತ್ತು. ಅಲ್ಲದೆ ಚಿತ್ರದುರ್ಗದಿಂದಲೇ ರೇಣುಕಾಸ್ವಾಮಿಯನ್ನು ಕಿಡ್ನಾಪ್ ಮಾಡಲಾಗಿತ್ತು. ಹೀಗಾಗಿ ಆರೋಪಿಗಳಿಗೆ ರೇಣುಕಾಸ್ವಾಮಿ ಬಗ್ಗೆ ಮೊದಲ ಮಾಹಿತಿ ಇತ್ತು" ಎಂದು ಎಸ್‌ಪಿಪಿ ವಾದ ಮಂಡಿಸಿದ್ದಾರೆ.
ಇದೇ ವೇಳೆ ದರ್ಶನ್ ಹಾಗೂ ಅವರ ಸಂಗಡಿಗರು ಕ್ರೂರತೆಯನ್ನು ಎಸ್‌ಪಿಪಿ ನ್ಯಾಯಾಧೀಶರ ಮುಂದೆ ವಿವರಿಸಿದ್ದಾರೆ. ರೇಣುಕಾಸ್ವಾಮಿಯನ್ನು ಅಪರಣ ಮಾಡಿ ಪಟ್ಟಣಗೆರೆ ಶೆಡ್‌ಗೆ ಕರೆತಂದ ತಂಡ ಹಿಗ್ಗಾಮುಗ್ಗಾ ಹಲ್ಲೆ ಮಾಡಿದೆ. ದರ್ಶನ್ ಬರುವುದಕ್ಕೆ ಮುನ್ನವೇ ರೇಣುಕಾಸ್ವಾಮಿ ಮೇಲೆ ಹಲ್ಲೆ ಮಾಡಲಾಗಿತ್ತು. ದರ್ಶನ್ ಹಾಗೂ ಪವಿತ್ರಾ ಗೌಡ ಬಂದ್ಮೇಲೆ ಮತ್ತೆ ಹಲ್ಲೆ ಮಾಡಲಾಗಿದೆ ಎಂದು ಎಸ್‌ಪಿಪಿ ಪ್ರಸನ್ನ ಕುಮಾರ್ ಹೇಳಿದ್ದಾರೆ.

ಸಿ ವಿ ನಾಗೇಶ್ ಅವರು ರೇಣುಕಾಸ್ವಾಮಿಗೆ ನಾಯಿ ಕಚ್ಚಿದ್ದರಿಂದ ಗಾಯಗಳಾಗಿವೆ ಎಂದು ಹೇಳಿದ್ದರು. ಅದಕ್ಕೆ ಎಸ್‌ಪಿಪಿ ಮರಣೋತ್ತರ ವರದಿಯ ಬಗ್ಗೆ ಪ್ರಸ್ತಾಪ ಮಾಡಿದ್ದರು. ಈ ವರದಿಯಲ್ಲಿ 13 ಕಡೆ ರೇಣುಕಾಸ್ವಾಮಿಗೆ ಗಾಯವಾಗಿದೆ. ಅಲ್ಲಿ ರಕ್ತಸ್ರಾವವಾಗಿದೆ. ಅಷ್ಟೇ ಅಲ್ಲದೆ ರೇಣುಕಾಸ್ವಾಮಿ ಮರ್ಮಾಂಗಕ್ಕೂ ಗಾಯವಾಗಿದ್ದು, ಎದೆ ಮೂಳೆಗಳು ಮುರಿದಿದ್ದರ ಬಗ್ಗೆ ಮರಣೋತ್ತರ ಪರೀಕ್ಷೆಯ ವರದಿಯಲ್ಲಿದೆ ಎಂದು ವಾದ ಮಂಡಿಸಿದ್ದಾರೆ.
ಹಾಗೇ ದರ್ಶನ್ ಹಾಗೂ ಅವರ ತಂಡದ ಕ್ರೂರತೆ ಹೇಗಿತ್ತು ಅನ್ನೋದನ್ನು ಎಸ್‌ಪಿಪಿ ನ್ಯಾಯಾಧೀಶರ ಮುಂದೆ ತೆಗೆದಿಟ್ಟಿದ್ದಾರೆ. ರೇಣುಕಾಸ್ವಾಮಿಗೆ ದರ್ಶನ್‌ಗೆ ಸಂಗಡಿಗರು ಕಟ್ಟಿಗೆ ಹಲ್ಲೆ ಮಾಡಿದ್ದಾರೆ. ಕರೆಂಟ್ ಶಾಕ್ ಕೊಟ್ಟಿದ್ದಾರೆ. ರೇಣುಕಾಸ್ವಾಮಿ ಸುಸ್ತಾಗಿ ಮಲಗಿದ್ದರೂ, ಎಬ್ಬಿಸಿ ಪ್ಯಾಂಟ್ ತೆಗೆಸಿ ಮರ್ಮಾಂಗಕ್ಕೆ ಒದೆಯಲಾಗಿದೆ. ರೇಣುಕಾಸ್ವಾಮಿ ಎದೆ ಮೇಲೆ ದರ್ಶನ್ ಹತ್ತಿ ನಿಂತಿದ್ದರು ಎಂದು ಎಸ್‌ಪಿಪಿ ಹೇಳಿದ್ದಾರೆ. ಈ ವಾದವನ್ನು ಆಲಿಸಿದ ಬಳಿಕ ವಿಚಾರಣೆಯನ್ನು ನಾಳೆಗೆ ಮುಂದೂಡಲಾಗಿದ್ದು, ಮತ್ತೆ ಎಸ್‌ಪಿಪಿ ಪ್ರಸನ್ನ ಕುಮಾರ್ ವಾದವನ್ನು ಮಂಡಿಸಲಿದ್ದಾರೆ. ಈ ಕಾರಣಕ್ಕೆ ದರ್ಶನ್‌ಗೆ ಜಾಮೀನು ಅರ್ಜಿ ನಾಳೆನೂ ಸಿಗೋದು ಅನುಮಾನ ಎನ್ನಲಾಗುತ್ತಿದೆ.


Click it and Unblock the Notifications










