"ಕೃತ್ಯ ಸಾಬೀತು ಪಡಿಸುವಂತಹ ಒಂದೇ ಒಂದು ಸಾಕ್ಷಿನೂ ಇಲ್ಲ"; ದರ್ಶನ್ ಪರ ವಕೀಲ ಸಿ ವಿ ನಾಗೇಶ್

ದರ್ಶನ್ ಜಾಮೀನು ಅರ್ಜಿ ವಿಚಾರಣೆ ನಡೆಯುತ್ತಿದೆ. ದರ್ಶನ್ ಪರ ವಕೀಲರಾದ ಸಿ ವಿ ನಾಗೇಶ್ ಹಾಗೂ ಎಸ್‌ಪಿಪಿ ಪ್ರಸನ್ನ ಕುಮಾರ್ ನಡುವೆ ವಾದ- ಪ್ರತಿವಾದ ನಡೆಯುತ್ತಿದೆ. ಸದ್ಯ ಈ ವಿಚಾರಣೆಯೀಗೆ ರೋಚಕ ಘಟ್ಟ ತಲುಪಿದೆ. ನಿನ್ನೆ (ಅಕ್ಟೋಬರ್ 9) ಎಸ್‌ಪಿಪಿ ಪ್ರಸನ್ನ ಕುಮಾರ್ ಪ್ರಬಲ ಪ್ರತಿವಾದವನ್ನು ಮಂಡಿಸಿದ್ದರು.

ರೇಣುಕಾಸ್ವಾಮಿ ಹತ್ಯೆ ಪ್ರಕರಣದ ತನಿಖೆಯೇ ಸರಿಯಾಗಿ ನಡೆದಿಲ್ಲ ಎಂದು ದರ್ಶನ್ ಪರ ವಕೀಲ ಸಿ ವಿ ನಾಗೇಶ್ ಮಂಡಿಸಿದ್ದರು. ಅದಕ್ಕೆ ಎಸ್‌ಪಿಪಿ ಪ್ರಸನ್ನ ಕುಮಾರ್ ಕೌಂಟರ್ ಕೊಟ್ಟಿದ್ದರು. ಇಂದು (ಅಕ್ಟೋಬರ್ 10) ಸಿ ವಿ ನಾಗೇಶ್ ಮತ್ತೆ ವಾದ ಮಂಡಿಸುತ್ತಿದ್ದಾರೆ. ಈ ಬಾರಿ ತಾಂತ್ರಿಕ ಸಾಕ್ಷಿಗಳನ್ನು ಗುರಿಯಾಗಿಸಿಕೊಂಡು ವಾದವನ್ನು ಮಂಡಿಸುತ್ತಿದ್ದಾರೆ.

Darshan bail case C V Nagesh giving counter to SPP Prasanna Kumar argument

ಬೆಂಗಳೂರಿನ 57ನೇ ಸಿಸಿಹೆಚ್ ಕೋರ್ಟ್‌ನಲ್ಲಿ ಸಿ ವಿ ನಾಗೇಶ್ ವಾದ ಮಂಡನೆ ಮಾಡುತ್ತಿದ್ದಾರೆ. ಈ ಬಾರಿ ತಾಂತ್ರಿಕ ಸಾಕ್ಷಿ ಅಂಶಗಳಲ್ಲಿ ಲೋಪವಿದೆ ಎಂದು ತಮ್ಮ ವಾದದ ಮೂಲಕ ಗಮನ ಸೆಳೆದಿದ್ದಾರೆ. ಪೊಲೀಸರು ಜೂನ್ 9ರಂದು ಗೂಗಲ್ ಅಡ್ರೆಸ್, ಟವರ್ ಲೋಕೇಶನ್ ಆಧರಿಸಿದ ಮ್ಯಾಪ್ ಸಲ್ಲಿಕೆ ಮಾಡಿದ್ದಾರೆ. ಎಸ್‌ಪಿಪಿ ಪ್ರಸನ್ನ ಕುಮಾರ್ ಅವರನ್ನು ತನಿಖಾಧಿಕಾರಿಗಳು ತಪ್ಪು ದಾರಿಗೆ ಎಳೆದು ತಂದಿದ್ದಾರೆ ಎಂದು ಸಿ ವಿ ನಾಗೇಶ್ ಹೇಳಿದ್ದಾರೆ.

ಗೂಗಲ್ ಮ್ಯಾಪ್ ಅನ್ನು ಬಳಸಿ ಕೃತ್ಯದ ಸಮಯ ಬೇರೆ ತೋರಿಸಬಹುದು. ಟವರ್ ಲೋಕೇಶನ್ ಆಧರಿಸಿ ನಡೆಸಿದ ತನಿಖೆ ಮಹತ್ವದಲ್ಲ. ನಾನು ನಿನ್ನೆ ಇಲ್ಲಿಯೇ ಕುಳಿತಿದ್ದೆ. ಆದರೆ ನಾನು ಹೈಕೋರ್ಟ್‌ನಲ್ಲಿ ಇದ್ದೆ ಎಂದೂ ಇದೇ ತಂತ್ರಜ್ಞಾನ ಬಳಸಿ ತೋರಿಸಬಹುದು. ಪೊಲೀಸರು ತಮಗೆ ಬೇಕಾದಂತೆ ನಕ್ಷೆಯನ್ನು ಸಿದ್ಧಪಡಿಸಿದ್ದಾರೆ. ಇದು ಸ್ಯಾಟಲೈಟ್ ಆಧರಿಸಿ ನಡೆಸಿದ ಖಂಡಿತಾ ತನಿಖೆ ಅಲ್ಲ" ಎಂದು ಸಿ ವಿ ನಾಗೇಶ್ ಟೆಕ್ನಿಕಲ್ ಎವಿಡೆನ್ಸ್ ಬಗ್ಗೆ ನ್ಯಾಯಾಧೀಶರ ಗಮನ ಸೆಳೆದಿದ್ದಾರೆ.

"ಪೊಲೀಸರು ಸಲ್ಲಿಸಿರುವು ಅವರೇ ಸಿದ್ಧ ಪಡಿಸಿದ ನಕ್ಷೆ. A1, A2, A5, A10, A13 ಎಲ್ಲರೂ ಮನೆಗಳು ಈ ಲೋಕೇಶನ್ ಸಮೀಪವೇ ಇದೆ. ಈ ಕಾರಣಕ್ಕೆ ಟವರ್ ಲೋಕೇಶನ್ ಲಭ್ಯವಾಗಿದೆ. ಇದನ್ನೇ ಇಟ್ಟುಕೊಂಡು ಪಟ್ಟಣಗೆರೆ ಶೆಡ್‌ನಲ್ಲಿಯೇ ಇದ್ದರು ಎಂದು ಹೇಗೆ ಹೇಳುತ್ತೀರಿ?. ಐಪಿ ಅಡ್ರೆಸ್ ಅನ್ನು ತಿರುಚಲು ಸಾಧ್ಯವಿದೆ. ನಾನು ಇಲ್ಲೇ ಇದ್ದರೂ, ನ್ಯೂಯಾರ್ಕ್‌ನಲ್ಲಿ ಇದ್ದೇನೆಂದು ತೋರಿಸಬಹುದು" ಎಂದು ಸಿ ವಿ ನಾಗೇಶ್ ಕೌಂಟರ್ ಕೊಟ್ಟಿದ್ದಾರೆ.

ಸಿ ವಿ ನಾಗೇಶ್ ತಮ್ಮ ವಾದದಲ್ಲಿ ಜೂನ್ 20 ಹೇಳಿದ ಸಾಕ್ಷಿಗಳಲ್ಲಿ ಈ ಮಾಹಿತಿ ಇಲ್ಲ. ರೇಣುಕಾಸ್ವಾಮಿ ತಲೆಯಲ್ಲಿ 1 ರಿಂದ 2.5 ಸೆ.ಮೀ ಗಾಯವಾಗಿದೆ. ಇದರಿಂದ ಅಷ್ಟು ಪ್ರಮಾಣದಲ್ಲಿ ರಕ್ತಸ್ರಾವ ಆಗಲು ಸಾಧ್ಯವಿಲ್ಲ ಎಂದಿದ್ದಾರೆ. ಹಾಗೇ ಪ್ರತ್ಯಕ್ಷ ಸಾಕ್ಷಿಗಳ ಹೇಳಿಕೆಯನ್ನು 13 ದಿನ ವಿಳಂಬವಾಗಿ ಸೇರಿಸಿದ್ದು ಯಾಕೆ? ಪೋಸ್ಟ್ ಮಾರ್ಟಂ ಬಂದ ಬಳಿಕ ಹೇಳಿಕೆ ದಾಖಲಿಸಿದ್ದಾರೆ ಎಂದು ವಾದವನ್ನು ಮಂಡಿಸಿದ್ದಾರೆ.

ಈ ವೇಳೆ ಎಸ್‌ಪಿಪಿ ಪ್ರಸನ್ನ ಕುಮಾರ್ "ನಾವು ಕೇಸ್ ಡೈರಿ, ಪ್ರತಿಸಲ್ಲಿಸಿದ್ದೇವೆ. ಗೊತ್ತಿಲ್ಲದಿದ್ದರೆ, ಹಿರಿಯ ವಕೀಲರು ವಾದ ಮಂಡಿಸಬಾರದು" ಎಂದು ಎಸ್‌ಪಿಪಿ ಆಕ್ಷೇಪ ವ್ಯಕ್ತಪಡಿಸಿದ್ದರು. "ನೀನು ಕೇಸ್ ಡೈರಿ, ಪ್ರತಿಸಲ್ಲಿಸಿದ್ದಾಗಿ ಹೇಳಿಕೊಂಡಿದ್ದೀರಿ. ಆದರೆ, ಮ್ಯಾಜಿಸ್ಟ್ರೇಟ್ ಆದೇಶದಲ್ಲಿ ಎಲ್ಲಿದೆ ನೀವೇ ಹೇಳಿ? ಮುಚ್ಚಿದ ಲಕೋಟೆಯಲ್ಲಿ ಪ್ರತಿ ಸಲ್ಲಿಸಿದ್ದೀರೆಂದು ಹೇಳಿಲ್ಲವಲ್ಲ. ಈಗ ಎದ್ದು ಆಕ್ಷೇಪಿಸಿ, ನಾನು ಉತ್ತರಿಸುತ್ತೇನೆ" ಸಿ ವಿ ನಾಗೇಶ್ ಹೇಳಿದ್ದಾರೆ.

More from Filmibeat

English summary
Darshan bail case C V Nagesh giving counter to SPP Prasanna Kumar argument.
Read more about: darshan case filmibeat news
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X