ಬಾಕ್ಸ್ ಆಫೀಸ್ ಚಿಂದಿ ಚಿತ್ರಾನ್ನಕ್ಕೆ ದರ್ಶನ ಸಜ್ಜು

By Rajendra

ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತೊಮ್ಮೆ ಬಾಕ್ಸ್ ಆಫೀಸ್ ಚಿಂದಿ ಚಿತ್ರಾನ್ನ ಮಾಡಲು ಸಜ್ಜಾಗಿದ್ದಾರೆ. ಈ ಬಾರಿ ಅವರು ಕೌಟುಂಬಿಕ ಕಥಾಹಂದರದ ಚಿತ್ರದ ಮೂಲಕ ತಮ್ಮ ಅಭಿಮಾನಿಗಳ ಮುಂದೆ ಬರುತ್ತಿದ್ದಾರೆ. ಭಾರಿ ಬಜೆಟ್ ಚಿತ್ರ ಬೃಂದಾವನ ಬಿಡುಗಡೆಗೆ ಸಜ್ಜಾಗಿದೆ.

ಇದೇ ಸೆಪ್ಟಂಬರ್ 26ರಂದು ಬೃಂದಾವನ ಚಿತ್ರ ಚಿತ್ರಮಂದಿರಗಳಿಗೆ ಅಪ್ಪಳಿಸುತ್ತಿದೆ. ಸಾಮಾನ್ಯವಾಗಿ ದರ್ಶನ್ ಚಿತ್ರಗಳು ರೀಮೇಕ್ ಆದರೂ ಅಷ್ಟೇ ಸ್ವಮೇಕ್ ಆದರೂ ಅಷ್ಟೇ ಬಾಕ್ಸ್ ಆಫೀಸಲ್ಲಿ ಮಾತ್ರ ಸೌಂಡ್ ಒಂದೆ. ತೆಲುಗಿನಲ್ಲಿ ಭರ್ಜರಿ ಯಶಸ್ಸು ದಾಖಲಿಸಿದ ಜೂ.ಎನ್ಟಿಆರ್ ಅಭಿನಯದ ಬೃಂದಾವನಂ ಚಿತ್ರದ ರಿಮೇಕ್.

ವಿ.ಹರಿಕೃಷ್ಣ ಸಂಗೀತ ಸಂಯೋಜನೆ ಚಿತ್ರಕ್ಕಿದ್ದು ಈಗಾಗಲೆ ಚಿತ್ರದ ಹಾಡುಗಳು ಭಾರಿ ಸದ್ದು ಮಾಡುತ್ತಿವೆ. ಕೆ.ಮಾದೇಶ್ ಆಕ್ಷನ್ ಕಟ್ ಹೇಳಿರುವ ಈ ಚಿತ್ರದ ಹಾಡಿನ ತುಣುಕೊಂದು ಈಗ ಯೂಟ್ಯೂಬ್ ನಲ್ಲೂ ಭಾರಿ ಸದ್ದು ಮಾಡುತ್ತಿರುವುದು ಗೊತ್ತೇ ಇದೆ.

ದರ್ಶನ್ ಜೊತೆ ಈ ಬಾರಿ ಇಬ್ಬರು ನಾಯಕಿಯರು. ಕಾರ್ತಿಕಾ ನಾಯರ್ ಹಾಗೂ ಮಿಲನಾ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಚಿತ್ರಕ್ಕೆ ಕೆ.ವಿ.ರಾಜು ಸಂಭಾಷಣೆ, ಕೆ.ಎಂ.ಪ್ರಕಾಶ್ ಸಂಕಲನ ಹಾಗೂ ರಮೇಶ್ ಬಾಬು ಅವರ ಛಾಯಾಗ್ರಹಣವಿದೆ. ['ಬೃಂದಾವನ' ಹಾಡು ಯೂಟ್ಯೂಬ್ ಗೆ ಲಗ್ಗೆ]

ಪಾತ್ರವರ್ಗದಲ್ಲಿ ಜೈಜಗದೀಶ್, ದೊಡ್ಡಣ್ಣ, ಸಾಧು ಕೋಕಿಲಾ, ಸಂಪತ್, ಕುರಿ ಪ್ರತಾಪ್, ಕೇಡಿ ವೆಂಕಟೇಶ್, ವೀಣಾ ಸುಂದರ್ ಮುಂತಾದ ಕನ್ನಡ ಚಿತ್ರಗಳ ರೆಗ್ಯುಲರ್ ಕಲಾವಿದರಿದ್ದಾರೆ. ಬಿಗ್ ಬಜೆಟ್ ಚಿತ್ರವಾಗಿರುವ 'ಬೃಂದಾವನ' ಚಿತ್ರದ ಬಗ್ಗೆ ಬಹಳಷ್ಟು ನಿರೀಕ್ಷೆಗಳಿವೆ. (ಒನ್ಇಂಡಿಯಾ ಕನ್ನಡ)

More from Filmibeat

English summary
Challenging Star Darshan's Brindavana is all set to hit screens on 26th September. The music has been composed by V. Harikrishna. The film also stars Karthika Nair and Milana Nagaraj as the female leads.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X