ದರ್ಶನ್ ಕಾರು ಅಪಘಾತ ಪ್ರಕರಣ: ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಕೆ

By ಯಶಸ್ವಿನಿ ಎಂ.ಕೆ

Recommended Video

ನಟ ದರ್ಶನ್ ಕಾರು ಅಪಘಾತದ ಕೇಸ್ ನಲ್ಲಿ ಯಾರು ತಪ್ಪಿಸ್ಥರು? | FILMIBEAT KANNADA

ಮೈಸೂರು, ನವೆಂಬರ್ 3 : ಕಳೆದ ಕೆಲ ದಿನಗಳ ಹಿಂದೆ ಮೈಸೂರಿನಲ್ಲಿ ನಡೆದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕಾರು ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ವಿ.ವಿ.ಪುರಂ ಸಂಚಾರ ಠಾಣಾ ಪೊಲೀಸರು ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ.

ಈ ಅಪಘಾತ ಪ್ರಕರಣ ಸಂಬಂಧ ಮೈಸೂರಿನ 4ನೇ ಜೆ.ಎಂ.ಎಫ್‌.ಸಿ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್‌ ಸಲ್ಲಿಕೆ ಮಾಡಿದ್ದಾರೆ. ಪ್ರಕರಣ ಕುರಿತು ವಿವಿ ಪುರಂ ಸಂಚಾರ ಪೊಲೀಸ್ ಠಾಣೆ ಸಿಬ್ಬಂದಿ ಎಲ್ಲಾ ವಿಧದಲ್ಲೂ ತನಿಖೆ ನಡೆಸಿದ್ದು, ಇಂಚಿಂಚೂ ಮಾಹಿತಿ ಕಲೆ ಹಾಕಿ ಚಾರ್ಜ್‌ಶೀಟ್‌ ಸಲ್ಲಿಸಿದ್ದಾರೆ.

ಪೊಲೀಸರು ಅಪಘಾತದ ಮಾಹಿತಿಯನ್ನು ಚಾರ್ಜ್ ಶೀಟ್ ಮೂಲಕ ನ್ಯಾಯಾಲಯಕ್ಕೆ ಸಲ್ಲಿಸಿದ್ದು, ಅದರಲ್ಲಿ ಆ ಕಾರನ್ನು ಅವರ ಗೆಳೆಯ ಆಂಟೋನಿ ರಾಯ್ ಚಾಲನೆ ಮಾಡುತ್ತಿದ್ದನ್ನು ಉಲ್ಲೇಖಿಸಲಾಗಿದೆ.

Darshan car Accident case: Charge sheet submitted to Mysuru court

ಮೈಸೂರಿನಲ್ಲಿ ತಡರಾತ್ರಿ ಖಾಸಗಿ ಹೋಟೆಲ್ ನಲ್ಲಿ ಕಾರ್ಯಕ್ರಮ ಮುಗಿಸಿ ಬೆಂಗಳೂರಿಗೆ ಮರಳುತ್ತಿದ್ದ ರಿಂಗ್ ರಸ್ತೆಯ ಜಂಕ್ಷನ್ ಬಳಿ ಆಂಟೋನಿ ರಾಯ್ ಅವರ ನಿರ್ಲಕ್ಷ್ಯತನದಿಂದ ಕಾರು ಡಿವೈಡರ್ ಗೆ ಡಿಕ್ಕಿಯಾಗಿ ಪಲ್ಟಿಯಾಗಿತ್ತು. ನಂತರ ಕಾರಿನಲ್ಲಿದ್ದ ಐವರಿಗೆ ಗಾಯವಾಗಿ ಚಿಕಿತ್ಸೆ ಪಡೆದಿದ್ದರು.

ಈ ಸಮಯದಲ್ಲಿ ನಟ ದರ್ಶನ್ ಅವರಿಗೆ ಸಹಾಯ ಮಾಡಲು ಬಂದ ವ್ಯಕ್ತಿಯೊಬ್ಬರು ಆಯತಪ್ಪಿ ಬಿದ್ದು ಅವರಿಗೂ ಗಾಯಗಳಾಗಿತ್ತು. ಅವರೂ ಸಹ ಕೊಲಂಬಿಯಾ ಏಷ್ಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.

ಕಾರನ್ನು ಸರ್ಕಾರಿ ಆರ್.ಟಿ.ಓ ಅಧಿಕಾರಿಗಳು ಪರಿಶೀಲಿಸಿದ್ದು, ಯಾವುದೇ ತಾಂತ್ರಿಕ ಕಾರಣದಿಂದ ಅಪಾಯ ಆಗಿಲ್ಲ ಎಂದು ವರದಿ ನೀಡಿದ್ದಾರೆ. ಘಟನೆ ಸಂಬಂಧ ನಟರಾದ ದರ್ಶನ್, ದೇವರಾಜ್, ಪ್ರಜ್ವಲ್ ದೇವರಾಜ್, ಚಾಲಕ ಆಂಟೋನಿ ಕಾರಿನಲ್ಲಿದ್ದ ಪ್ರಕಾಶ್ ಎಂಬುವರ ಹೇಳಿಕೆ ಪಡೆಯಲಾಗಿದೆ. ಎಲ್ಲರ ಹೇಳಿಕೆಯಲ್ಲೂ ಆಂಟೋನಿ ಅವರ ನಿರ್ಲಕ್ಷ್ಯವೇ ಅಪಘಾತಕ್ಕೆ ಕಾರಣ ಎಂಬ ಸಹಜ ಅಭಿಪ್ರಾಯ ಬಂದಿದೆ.

ತಪ್ಪಿತಸ್ಥ ಚಾಲಕ ಆಂಟೋನಿ ರಾಯ್ ವಿರುದ್ಧ ಕಾನೂನಿನ ಪ್ರಕಾರ ಶಿಕ್ಷೆ ವಿಧಿಸಬೇಕು ಎಂದು ಸಂಚಾರಿ ಠಾಣಾ ಪೊಲೀಸರು ಮನವಿ ಮಾಡಿದ್ದಾರೆ.

More from Filmibeat

English summary
Kannada Actor Darshan car Accident case: Charge sheet submitted to Mysuru court.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X