4 ತಿಂಗಳ ಬಳಿಕ ಮನೆಗೆ ಬಂದ ರೇಣುಕಾಸ್ವಾಮಿ ಮಗನಿಗೆ ನಾಮಕರಣ; ಮೊಮ್ಮನಿಗಿಟ್ಟ ಹೆಸರೇನು?

ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣ ಕರ್ನಾಟಕದಲ್ಲಿ ಸಂಚಲನ ಸೃಷ್ಟಿಸಿದ್ದು ಗೊತ್ತೇ ಇದೆ. ಈ ಪ್ರಕರಣದಲ್ಲಿ ದರ್ಶನ್ ಹೆಸರು ಕೇಳಿ ಬರುತ್ತಿದ್ದಂತೆ ಇನ್ನಷ್ಟು ಹಲ್‌ಚಲ್ ಎದ್ದಿತ್ತು. ರೇಣುಕಾಸ್ವಾಮಿ ಹತ್ಯೆಯಾದ ಸಂದರ್ಭದಲ್ಲಿ ಅವರ ಪತ್ನಿ ಗರ್ಭಿಣಿಯಾಗಿದ್ದರು. ಕೆಲವು ತಿಂಗಳ ಹಿಂದಷ್ಟೇ ಪತ್ನಿ ಸಹನಾ ಗಂಡು ಮಗುವಿಗೆ ಜನ್ಮ ನೀಡಿದ್ದರು. ಆ ಮಗುವಿನ ನಾಮಕರಣ ಮಾಡಲಾಗಿದೆ.

ಹೌದು ಇಂದು (ಫೆಬ್ರವರಿ 23) ರಂದು ರೇಣುಕಾಸ್ವಾಮಿ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ಮಗು ಜನಿಸಿದ ಬಳಿಕ ರೇಣುಕಾಸ್ವಾಮಿ ಪತ್ನಿ ಸಹನಾ ಹಾಗೂ ಅವರ ಪುತ್ರ ಚಿತ್ರದುರ್ಗದಲ್ಲಿರುವ ಗಂಡನ ಮನೆಗೆ ಹಿಂತಿರುಗಿದ್ದಾರೆ. ಸೊಸೆ ಹಾಗೂ ಮಗು ಇಬ್ಬರನ್ನೂ ಮನೆ ತುಂಬಿಸಿಕೊಂಡು ಇಡೀ ಕುಟುಂಬ ಸಂತಸ ಮಾಡಿದೆ. ಮಗನನ್ನು ಕಳೆದುಕೊಂಡ ನೋವಿನಲ್ಲಿದ್ದ ರೇಣುಕಾಸ್ವಾಮಿ ತಂದೆ ತಾಯಿಗೆ ಖುಷಿ ಸಿಕ್ಕಂತೆ ಆಗಿದೆ.

Darshan case update Renukaswamy s son-naming ceremony happened in Chitradurga and was named Shashidhar

ಮೊಮ್ಮಗನಿಗೆ ನಾಮಕರಣ ಮಾಡಿದ್ದಾರೆ. ರೇಣುಕಾಸ್ವಾಮಿ ತಂದೆ ಕಾಶೀನಾಥ್ ಶಿವನಗೌಡರು, ತಾಯಿ ರತನ್ನ ಪ್ರಭಾ ಪೂಜೆಯನ್ನು ಮಾಡಿ ಮಗುವನ್ನು ಸ್ವಾಗತ ಮಾಡಿದ್ದರು. ಅವರ ಸಂಪ್ರದಾಯದಂತೆ ಮಗುವನ್ನು ಮನೆಯೊಳಗೆ ಪ್ರವೇಶ ಮಾಡಿಕೊಂಡ ಬಳಿಕ ಮಗುವಿನ ನಾಮಕರಣವನ್ನು ಮಾಡಿದ್ದಾರೆ. ಈ ವೇಳೆ ರೇಣುಕಾಸ್ವಾಮಿ ತಂದೆ ಕಾಶಿನಾಥ್ ಶಿವನಗೌಡ್ರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಮೊಮ್ಮಗನಿಗೆ ಇಷ್ಟ ಹೆಸರನ್ನು ರಿವೀಲ್ ಮಾಡಿದ್ದಾರೆ.

ಹೆರಿಗೆಗೆಂದು ತವರು ಮನೆಗೆ ತೆರಳಿದ್ದ ರೇಣುಕಾಸ್ವಾಮಿ ಪತ್ನಿ ಸಹನಾ ಹಾಗೂ ಅವರ ಪುತ್ರನನ್ನು ಮನೆಗೆ ಬರಮಾಡಿಕೊಂಡ ಬಳಿಕ ತಂದೆ ಕಾಶಿನಾಥ್ ಶಿವನಗೌಡ್ರು ಸಂತಸ ವಕ್ತಪಡಿಸಿದ್ದಾರೆ. "ಹರಿಹರದಿಂದ ಸೊಸೆ ಹಾಗೂ ಮೊಮ್ಮಗ ಮನೆಗೆ ಬಂದಿದ್ದಾರೆ. ಇವತ್ತು ನಾಲ್ಕನೇ ತಿಂಗಳು ನಮ್ಮ ಸಂಪ್ರದಾಯದ ಪ್ರಕಾರ ನಾಮಕರಣ ಶಾಸ್ತ್ರವನ್ನು ಇಟ್ಟುಕೊಂಡಿದ್ದೇವೆ. ಈ ದಿನ ಗುರುಗಳ ಆಶೀರ್ವಾದಿಂದ ಶಶಿಧರ ಅಂತ ನಾಮಕರಣ ಮಾಡಿ, ಸಂಕ್ಷಿಪ್ತವಾಗಿ ಇವತ್ತು ಪೂಜೆ ಪುನಸ್ಕಾರವನ್ನು ಇಟ್ಟುಕೊಂಡಿದ್ದೇವೆ." ಎಂದು ಹೇಳಿಕಂಡಿದ್ದಾರೆ.

Darshan case update Renukaswamy s son-naming ceremony happened in Chitradurga and was named Shashidhar

ಇದೇ ವೇಳೆ ರೇಣುಕಾಸ್ವಾಮಿ ತಂದೆ ಸೊಸೆಗೆ ಸರ್ಕಾರಿ ಕೆಲಸ ನೀಡುವಂತೆ ಮತ್ತೆ ಕರ್ನಾಕಟ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ. "ಈ ವೇಳೆ ಸರ್ಕಾರಕ್ಕೆ ಮತ್ತೆ ಮನವಿ ಮಾಡಿಕೊಳ್ಳುತ್ತೇನೆ. ಸೊಸೆ ಒಂದು ಕೆಲಸ ಕೊಡುವಂತೆ ಹೇಳಿಕೊಳ್ಳುತ್ತೇನೆ. ದಯಮಾಡಿ ಸರ್ಕಾರ ಇದನ್ನು ಪುರಸ್ಕರಿಸಬೇಕು. ವಿಶೇಷ ಪ್ರಕರಣ ಅಂತ ಪರಿಗಣಿಸಿ ನೌಕರಿ ಕೊಡಬೇಕು ಅಂತ ಹೇಳಿಕೊಂಡಿದ್ದೇವೆ." ಎಂದಿದ್ದಾ,ರೆ

ಇದರೊಂದಿಗೆ ಮೊಮ್ಮಗನಿಗೆ ಶಶಧರ ಅಂತ ನಾಮಕರಣವನ್ನು ಮಾಡಿರುವ ಸಂಸತವನ್ನು ವ್ಯಕ್ತಪಡಿಸಿದ್ದಾರೆ. "ಸದ್ಯ ಶಶಿಧರ ಅಂತ ಇಟ್ಟಿದ್ದೀವಿ. ಶ ಅನ್ನುವ ಅಕ್ಷರದಿಂದ ಬಂದಿದೆ. ಖುಷಿಯಾಗಿದೆ. ಸ್ವಂತ ಮಗನೇ ಬಂದಂತೆ ಆಗಿದೆ. ಆ ಒಂದು ಸಂತೋಷ ಇದೆ. ಆದರೂ ಕೂಡ ಹಳೆಯದನ್ನು ಮರೆಯುವುದಕ್ಕೆ ಆಗುತ್ತಿಲ್ಲ. ಇವತ್ತು ಮನೆ ತುಂಬಿಸಿಕೊಂಡಿದ್ದೇವೆ. ಸೊಸೆ ಮನೆಗೆ ಬಂದಿದ್ದಾರೆ. ಮೊಮ್ಮಗ ಮನೆಗೆ ಬಂದಿದ್ದಾರೆ. ಆ ಒಂದು ಸಂತೋಷದಲ್ಲಿ ಮನೆ ಮಂದಿ ಎಲ್ಲರೂ ಇದ್ದೀವಿ." ಎಂದಿದ್ದಾರೆ.

ಇನ್ನು ಇದೇ ಪ್ರಕರಣದಲ್ಲಿ ದರ್ಶನ್‌ಗೆ ಜಾಮೀನು ಸಿಕ್ಕಿದ ಬೆನ್ನಲ್ಲೇ ಕರ್ನಾಟಕ ಪೊಲೀಸರು ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿಯನ್ನು ಸಲ್ಲಿಸಿದ್ದಾರೆ. ಜಾಮೀನಿ ಅರ್ಜಿಯನ್ನು ರದ್ದು ಮಾಡುವಂತೆ ಈ ಮನವಿಯಲ್ಲಿ ಕೇಳಿಕೊಳ್ಳಲಾಗಿದೆ. ಇದು ದರ್ಶನ್‌ಗೆ ದೊಡ್ಡ ತಲೆ ನೋವಾಗಿರುವುದಂತೂ ನಿಜ. ಸದ್ಯ ಸುಪ್ರೀಂ ಕೋರ್ಟ್‌ನಲ್ಲಿ ಈ ಕೇಸ್ ಸಂಬಂಧ ವಿಚಾರಣೆ ನಡೆಯುತ್ತಿದೆ.

More from Filmibeat

English summary
Darshan case update Renukaswamy's son-naming ceremony happened in Chitradurga and was named Shashidhar;
Read more about: darshan case chitradurga
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X