"ವರ್ಷಕ್ಕೆ 2 ಸಿನಿಮಾ ಕೊಡ್ಬೇಕು ಅಂತಿರೋ ದರ್ಶನ್ ಚಿತ್ರರಂಗವನ್ನು ಕಾಪಾಡುತ್ತಿರೋದು"-ನಿರ್ದೇಶಕ ಜಯತೀರ್ಥ
ಕನ್ನಡ ಚಿತ್ರರಂಗ ಪಾತಾಳಕ್ಕೆ ಕುಸಿದಿದೆ. ಜನರು ಚಿತ್ರಮಂದಿರಕ್ಕೆ ಸಿನಿಮಾ ನೋಡುವುದಕ್ಕೆ ಬರುತ್ತಿಲ್ಲ. ಪ್ರದರ್ಶಕರು, ವಿತರಕರು ಸಿನಿಮಾಗಳೇ ಇಲ್ಲದೆ ಕಂಗಾಲಾಗಿ ಹೋಗಿದ್ದಾರೆ. ಒಂದೊಂದೇ ಚಿತ್ರಮಂದಿರವನ್ನು ಉರುಳಿಸಿ ಕಾಂಪ್ಲೆಕ್ಸ್ ಕಟ್ಟುವುದಕ್ಕೆ ಹೊರಟಿದ್ದಾರೆ. ಇತ್ತೀಚೆಗೆ ಜನಪ್ರಿಯ ಚಿತ್ರಮಂದಿರ ಕಾವೇರಿ ಇತಿಹಾಸ ಪುಟಗಳನ್ನು ಸೇರಿದೆ.
ಕನ್ನಡ ಚಿತ್ರರಂಗದ ಗಂಭೀರ ಪರಿಸ್ಥಿತಿಯನ್ನು ಮನಗಂಡ ನಿರ್ಮಾಪಕರು, ವಿತರಕರು, ಪ್ರದರ್ಶಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸೂಪರ್‌ಸ್ಟಾರ್‌ಗಳು ಎರಡು ವರ್ಷ ಆದರೂ ಸಿನಿಮಾ ಮಾಡುತ್ತಿಲ್ಲ. ಹೀಗಾಗಿ ಫಿಲ್ಮ್ ಚೇಂಬರ್ ಮುಂದಾಳತ್ವದಲ್ಲಿ ಮೀಟಿಂಗ್ ಕೂಡ ನಡೆಯುತ್ತಿದೆ. ಒಂದು ತಿಂಗಳ ವರೆಗೂ ಚಿತ್ರರಂಗವನ್ನು ಬಂದ್ ಮಾಡುವ ಚಿಂತನೆ ಕೂಡ ನಡೆದಿದೆ.

ಇದೇ ವೇಳೆ ಕನ್ನಡದ ಸೂಪರ್‌ಸ್ಟಾರ್‌ಗಳು ವರ್ಷಕ್ಕೆ ಎರಡು ಸಿನಿಮಾ ರಿಲೀಸ್ ಮಾಡಬೇಕು ಅನ್ನೋ ಕೂಗು ಕೂಡ ಕೇಳಿ ಬರುತ್ತಿದೆ. ಆಗ ಮಾತ್ರ ಕನ್ನಡ ಚಿತ್ರರಂಗ ಉಳಿಯುವುದಕ್ಕೆ ಸಾಧ್ಯ. ಇತ್ತೀಚೆಗೆ 'ಬೆಲ್ ಬಾಟಂ' ಖ್ಯಾತಿಯ ಕನ್ನಡ ನಿರ್ದೇಶಕ ಜಯತೀರ್ಥ ಟಿವಿ 19 ಕನ್ನಡ ಯೂಟ್ಯೂಬ್ ಚಾನೆಲ್‌ಗೆ ಸಂದರ್ಶನ ನೀಡಿದ್ದು, ವರ್ಷಕ್ಕೆ 2 ಸಿನಿಮಾ ಕೊಡ್ಬೇಕು ಅಂತಿರೋ ದರ್ಶನ್ ಅವರೇ ಚಿತ್ರರಂಗವನ್ನು ಕಾಪಾಡುತ್ತಿರೋದು ಎಂದು ಹೇಳಿದ್ದಾರೆ. ಅಷ್ಟಕ್ಕೂ ಈ ಸಂದರ್ಶನದಲ್ಲಿ ಏನು ಹೇಳಿದ್ದಾರೆ? ತಿಳಿಯಲು ಮುಂದೆ ಓದಿ..
ಜಯತೀರ್ಥ ಕನ್ನಡ ಚಿತ್ರರಂಗದ ಹೀರೊಗಳ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಅದರಲ್ಲೂ ಪ್ಯಾನ್ ಇಂಡಿಯಾ ಸ್ಟಾರ್ ಆದ್ಮೇಲೆ ಕನ್ನಡಕ್ಕಾಗಿ ಸಿನಿಮಾ ಮಾಡುವುದು ಕಡಿಮೆ ಆಗಿದೆ ಎಂದಿದ್ದಾರೆ. ಈಗ ರಾಕಿಂಗ್ ಸ್ಟಾರ್ ಯಶ್ ಅವರನ್ನು ಕನ್ನಡ ಹೀರೋ ಅನ್ನುವುದಕ್ಕೆ ಆಗುತ್ತಾ? ಎಂದು ಪ್ರಶ್ನೆ ಮಾಡಿದ್ದಾರೆ.

"ಈಗ ನೋಡಿ ಯಶ್ ಅವರು ಕನ್ನಡದ ಹೀರೊನಾ? ನ್ಯಾಷನಲ್ ಲೆವೆಲ್ ಹೀರೊನಾ? ಅವರು ಯಾರಿಗೆ ಸಿನಿಮಾ ಮಾಡುತ್ತಿದ್ದಾರೆ ಈಗ? ಇಡೀ ಪ್ರಪಂಚಕ್ಕೆ ಸಿನಿಮಾ ಮಾಡುತ್ತಿದ್ದಾರೆ. ಈಗ ಕನ್ನಡದವರು ಅಂದುಕೊಳ್ಳುವುದಕ್ಕೆ ಆಗಲ್ಲ." ಎಂದು ಬೆಲ್ ಬಾಟಂ ನಿರ್ದೇಶಕ ದರ್ಶನ್ ಪ್ರತಿಕ್ರಿಯೆ ನೀಡಿದ್ದಾರೆ.
ಹಾಗೇ ಕಿಚ್ಚ ಸುದೀಪ್ ಕೂಡ ಬಿಗ್‌ಬಾಸ್, ಕ್ರಿಕೆಟ್ ಅಂತ ಆಕ್ಯೂಪೈ ಆಗಿದ್ದಾರೆ. ಅವರು ಸಿನಿಮಾ ಮಾಡದೇ ಎರಡು ವರ್ಷ ಆಯ್ತು ಎಂದಿದ್ದಾರೆ. "ನಮ್ಮ ಸುದೀಪ್ ಸರ್, ಬಿಗ್ ಬಾಸ್, ಕ್ರಿಕೆಟ್ ಅಂತ ಸಿಕ್ಕಿಕೊಂಡಿದ್ದಾರೆ. ಸಿನಿಮಾ ಮಾಡುತ್ತಿದ್ದಾರೆ. ಅದೂ ಬರಬೇಕು. ಆದರೆ, ಎರಡು ವರ್ಷ ಆಯ್ತೇನೋ.. ಕೊನೆಯದಾಗಿ ಬಂದಿದ್ದು, ವಿಕ್ರಾಂತ್ ರೋಣನಾ ತುಂಬಾ ದಿನ ಆಗಿ ಹೋಯ್ತು." ಎಂದು ಜಯತೀರ್ಥ ಹೇಳಿದ್ದಾರೆ.
ಧ್ರುವ ಸರ್ಜಾ, ಶ್ರೀಮುರಳಿ ಕೂಡ ಪ್ಯಾನ್ ಇಂಡಿಯಾ ಸಿನಿಮಾ ಕಡೆ ಮುಖ ಮಾಡಿದ್ದಾರೆ. ಆದರೆ, ದರ್ಶನ್ ವರ್ಷಕ್ಕೆ ಎರಡು ಸಿನಿಮಾ ಕೊಡಲೇಬೇಕು ಅಂತಿದ್ದಾರಲ್ಲ. ಅವರೇ ಕನ್ನಡ ಚಿತ್ರರಂಗವನ್ನು ಉಳಿಸುತ್ತಿದ್ದಾರೆಂದು ಜಯತೀರ್ಥ ಹೇಳಿದ್ದಾರೆ. "ಧ್ರುವ ಅವರು ಒಂದು ಕಡೆ ಟ್ರೈ ಮಾಡುತ್ತಿದ್ದಾರೆ. ಮುರಳಿ ಅವರು ಟ್ರೈ ಮಾಡುತ್ತಿದ್ದಾರೆ. ದರ್ಶನ್ ಅವರು ಎರಡು ಸಿನಿಮಾ ಕೊಡಲೇಬೇಕು ಅಂತ ನಿಂತಿದ್ದಾರಲ್ಲ, ನಿಜವಾಗಲೂ ಅವರು ಪಾಪಾ ಕಾಪಾಡುತ್ತಿರೋದು. ಬಂಡವಾಳ ಹಾಕಿರೋದು, ಕಾರ್ಮಿಕರಿಗೆ ಕೆಲಸ ಕೊಡುತ್ತಿರೋದು. ದೊಡ್ಡ ದೊಡ್ಡ ಹೀರೊಗಳು ಹೆಚ್ಚೆಚ್ಚು ಸಿನಿಮಾ ಮಾಡಬೇಕು. ಥಿಯೇಟರ್‌ಗಾಗಿ ಸಿನಿಮಾ ಮಾಡಬೇಕು." ಎಂದಿದ್ದಾರೆ.


Click it and Unblock the Notifications











