ಅಪಘಾತದಲ್ಲಿ ಸಾವನ್ನಪ್ಪಿದ ಅಭಿಮಾನಿಗೆ ಸಂತಾಪ ಸೂಚಿಸಿದ ದಾಸ
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಯೊಬ್ಬ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿರುವ ಘಟನೆ ನಿನ್ನೆ ನಡೆದಿದೆ. ಆ ಅಭಿಮಾನಿ ಸಾವಿಗೆ ಈಗ ಡಿ ಬಾಸ್ ಸಂತಾಪ ಸೂಚಿಸಿದ್ದಾರೆ.
ಈ ಬಗ್ಗೆ ಟ್ವಿಟ್ಟರ್ ನಲ್ಲಿ ಬೇಸರ ವ್ಯಕ್ತಪಡಿಸಿರುವ ದರ್ಶನ್, ವಾಹನ ಚಲಾಯಿಸವಾಗ ಜಾಗೃತೆಯಿಂದ ಹೋಗಿ ಎಂದು ಮನವಿ ಮಾಡಿಕೊಂಡಿದ್ದಾರೆ.
'ನಿನ್ನೆ ನಡೆದ ರಸ್ತೆ ಅಪಘಾತದಲ್ಲಿ ಅಭಿಮಾನಿಯೊಬ್ಬ ಸಾವನಪ್ಪಿದ್ದನ್ನು ಕೇಳಿ ತುಂಬಾ ಬೇಸರವಾಗಿದೆ. ಈ ನೋವನ್ನು ತಡೆದುಕೊಳ್ಳುವ ಶಕ್ತಿ ದೇವರು ಅವರ ಕುಟುಂಬಕ್ಕೆ ನೀಡಲಿ ಅಭಿಮಾನಿಗಳಲ್ಲಿ ಕಳಕಳಿಯ ಮನವಿ. ಗಾಡಿಯಲ್ಲಿ ಚಲಿಸುವಾಗ ದಯಮಾಡಿ ಅತೀ ಜಾಗೃಕತೆಯಿಂದ ಓಡಿಸಿ. ನಿಮ್ಮ ಕುಟುಂಬ ನಿಮ್ಮ ಮೇಲೆ ಅವಲಂಬಿತವಾಗಿರುತ್ತದೆ ಎಂಬುದನ್ನು ಎಂದೂ ಮರೆಯದಿರಿ. ಕೆಲವೊಮ್ಮೆ ನಮ್ಮ ಪ್ರಜ್ಞೆಯಲ್ಲಿದ್ದರೂ ಸಹ ದುರದೃಷ್ಟವಶಾತ್ ಅಪಘಾತಗಳು ಸಂಭವಿಸುತ್ತವೆ.ದೂರದ ಸ್ಥಳಗಳಿಗೆ ಹೋಗುವಾಗ ದ್ವಿಚಕ್ರ ವಾಹನಗಳನ್ನು ಆದಷ್ಟು ಉಪಯೋಗಿಸಬೇಡಿ' ಎಂದು ಟ್ವೀಟ್ ಮಾಡಿದ್ದಾರೆ.

ಕಳೆದ ತಿಂಗಳಲ್ಲಿ ಸ್ವತಃ ದರ್ಶನ್ ಅವರೇ ಅಪಘಾತಕ್ಕೆ ಒಳಗಾಗಿದ್ದರು. ಮೈಸೂರಿನ ರಸ್ತೆಯಲ್ಲಿ ಹೋಗುತ್ತಿದ್ದಾಗ ಕಾರು ಚಾಲಕನ ನಿಯಂತ್ರಣ ತಪ್ಪಿ ಆಕ್ಸಿಡೆಂಟ್ ಆಗಿತ್ತು. ಈ ಕಾರಿನಲ್ಲಿ ದರ್ಶನ್, ದೇವರಾಜ್ ಮತ್ತು ಪ್ರಜ್ವಲ್ ದೇವರಾಜ್ ಹಾಗೂ ದರ್ಶನ್ ಸ್ನೇಹಿತ ರಾಯ್ ಆಂಟೋನಿ ಇದ್ದರು.
ಅದೃಷ್ಟವಶಾತ್ ಈ ಅಪಘಾತದಿಂದ ದರ್ಶನ್ ಅವರಿಗೆ ಬಲಗೈ ಪೆಟ್ಟಾಗಿದ್ದು ಬಿಟ್ಟರೇ ಗಂಭೀರ ಗಾಯಗಳು ಆಗಿಲ್ಲ. ಹೀಗಾಗಿ, ದರ್ಶನ್ ಅವರು ಕೂಡ ತಮ್ಮ ಅಭಿಮಾನಿಗಳಿಗೆ, ಸಾರ್ವಜನಿಕರಿಗೆ ವಿನಂತಿ ಮಾಡಿದ್ದಾರೆ.


Click it and Unblock the Notifications











