"ಎದುರಾಳಿಗಳು ಏನಾದರೂ ಮಾಡಿಕೊಳ್ಳಲಿ.. ಅವ್ರಿಂದ ಬಾಸ್ ಆರ್ಮಿಯನ್ನು ತಡೆಯೋಕೆ ಆಗುತ್ತಾ?"

'ರಾಬರ್ಟ್' ಅಂತಹ 100 ಕೋಟಿ ರೂ. ಸಿನಿಮಾ ನೀಡಿದ ಬಳಿಕ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತೊಂದು ಸಿನಿಮಾ ಬಿಡುಗಡೆ ಸಜ್ಜಾಗಿದೆ. ಈ ಬಾರಿ ಮತ್ತೊಂದು 'ಕ್ರಾಂತಿ' ಮಾಡುವುದಕ್ಕೆ ದರ್ಶನ್ ಆರ್ಮಿ ಸಜ್ಜಾಗಿ ನಿಂತಿದೆ.

'ಕ್ರಾಂತಿ' ಸಿನಿಮಾ ಬಿಡುಗಡೆಗೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿವೆ. ರಾಜ್ಯಾದ್ಯಂತ ಎಲ್ಲಾ ಕಡೆಗೂ ಭರ್ಜರಿಯಾಗಿಯೇ ಕೊನೆಯ ಹಂತದ ಪ್ರಚಾರ ನಡೆಯುತ್ತಿದೆ. ಇನ್ನೊಂದು ಕಡೆ ದರ್ಶನ್ ಅಭಿಮಾನಿಗಳು ಅಖಾಡಕ್ಕಿಳಿದು ಸಿನಿಮಾ ಪ್ರಚಾರ ಮಾಡುತ್ತಲೇ ಇದ್ದಾರೆ.

ಬೆಂಗಳೂರಿನ ದಾಸರಹಳ್ಳಿಯ ದರ್ಶನ್ ಅಭಿಮಾನಿಗಳು ಮೂರು ದಿನಗಳ ಕಾಲ ನಿರಂತರ ಪ್ರಚಾರ ಮಾಡುತ್ತಿದ್ದಾರೆ. ಈಗಾಗಲೇ 'ಕ್ರಾಂತಿ' ಸಿನಿಮಾದ ಟ್ಯಾಬ್ಲೋವನ್ನು ಉದ್ಘಾಟನೆ ಮಾಡಿ, ಪ್ರಚಾರ ಆರಂಭಿಸಿದ್ದಾರೆ. ಈ ವೇಳೆ ಅಭಿಮಾನಿಗಳು ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ. ಜೊತೆ ದರ್ಶನ್ ಜೊತೆ 365 ದಿನಾನೂ ಇರುತ್ತೇವೆ ಎಂದು ಹೇಳಿದ್ದಾರೆ.

'ಬಾಸ್ ಆರ್ಮಿಯನ್ನು ತಡೆಯೋಕೆ ಆಗುತ್ತಾ?'

'ಬಾಸ್ ಆರ್ಮಿಯನ್ನು ತಡೆಯೋಕೆ ಆಗುತ್ತಾ?'

ಕಳೆದ ಕೆಲವು ದಿನಗಳಿಂದ ದರ್ಶನ್ ಹಾಗೂ ಅವರ ಅಭಿಮಾನಿಗಳ ವಿರುದ್ಧ ಹಲವು ಆರೋಪ ಮಾಡಲಾಗುತ್ತಿದೆ. ಈ ಬೆನ್ನಲ್ಲೇ ಅಭಿಮಾನಿಗಳು ಎದುರಾಳಿಗಳಿಗೆ ಟಕ್ಕರ್ ಕೊಟ್ಟಿದ್ದಾರೆ. "ಅವರು ಮಾಡುತ್ತಾರೆ ಅಂತ ನಾವು ಮಾಡುವುದಕ್ಕೆ ಆಗುವುದಿಲ್ಲ. ಅವರು ಏನಾದರೂ ಮಾಡಿಕೊಳ್ಳಲಿ ಅವರ ಪ್ರಯತ್ನ ಅದು. ಎದುರಾಳಿಗಳು ಏನಾದರೂ ಮಾಡಿಕೊಳ್ಳಲಿ. ಅವರಿಂದ ಬಾಸ್‌ ಹಾಗೂ ಬಾಸ್ ಆರ್ಮಿಯನ್ನು ತಡೆಯೋಕೆ ಆಗುತ್ತಾ? ಬಾಸ್ ಜೊತೆ ಯಾವತ್ತೂ ಇರುತ್ತೇವೆ. 365 ದಿನಾನೂ ಇರುತ್ತೇವೆ. 24 ಗಂಟೆನೂ ಅವರ ಜೊತೆ ಇರುತ್ತೇವೆ. ಬಾಸ್‌ಗೋಸ್ಕರ ಜೀವ ಬೇಕಾದ್ರೂ ಕೊಡುತ್ತೇವೆ." ಎಂದು

'ಚಕ್ರವ್ಯೂಹ ಭೇದಿಸದೆ ಇರೋದಿಲ್ಲ'

'ಚಕ್ರವ್ಯೂಹ ಭೇದಿಸದೆ ಇರೋದಿಲ್ಲ'

ಇದೇ ವೇಳೆ ಯುದ್ಧಕ್ಕೆ ಹೊರಟಿದ್ದಾಗಿದೆ. ಚಕ್ರವ್ಯೂಹವನ್ನು ಭೇದಿಸಿಯೇ ಭೇದಿಸುತ್ತೇವೆ. ಚಾಲೆಂಜಿಂಗ್‌ಸ್ಟಾರ್‌ಗಾಗಿ ಪ್ರಾಣ ಕೊಡುವುದಕ್ಕೂ ಸಿದ್ಧವೆಂದು ಅಭಿಮಾನಿಗಳು ಹೇಳಿದ್ದಾರೆ. "ರಣರಂಗದ ಒಳಗಡೆ ನುಗ್ಗಿದ್ದು ಆಗಿದೆ. ಇನ್ನು ಅದನ್ನು ಭೇದಿಸುತ್ತೇವೆ. ಆ ಚಕ್ರವ್ಯೂಹವನ್ನು ಭೇದಿಸದೆ ಇರೋದಿಲ್ಲ. ಎಷ್ಟು ಜನನಾದ್ರೂ ಇರಲಿ. ಬಾಸ್‌ಗೋಸ್ಕರ ಪ್ರಾಣ ಕೊಡೋಕೂ ಸಿದ್ಧ. ಬಾಸ್‌ಗೋಸ್ಕರ ಏನು ಮಾಡುವುದಕ್ಕೂ ಸಿದ್ಧ." ಎನ್ನುತ್ತಾರೆ.

ಮದುವೆ ಮನೆತರ ಥಿಯೇಟರ್ ಸಿಂಗಾರ

ಮದುವೆ ಮನೆತರ ಥಿಯೇಟರ್ ಸಿಂಗಾರ

ಟ್ಯಾಬ್ಲೋ ಜೊತೆ ಚಿತ್ರಮಂದಿರಗಳನ್ನು ಅಲಂಕಾರ ಮಾಡುತ್ತಿದ್ದಾರೆ. ರಿಲೀಸ್ ದಿನ ಥಿಯೇಟರ್ ಮುಂದೆ ಸದ್ದು ಜೋರಾಗಿ ಇರುತ್ತೆ ಅಂತಾರೆ ಫ್ಯಾನ್ಸ್."ಭಾರತಿ ಚಿತ್ರಮಂದಿರದಲ್ಲಿ 6 ಗಂಟೆಯ ಮಾರ್ನಿಂಗ್ ಶೋ.. 9.45 ಶೋ ಟಿಕೆಟ್ ಸೋಲ್ಡ್‌ಔಟ್ ಆಗಿಬಿಟ್ಟಿದೆ. ಥಿಯೇಟರ್ ಮುಂದೆ ತಮಟೆ ಅಲಂಕಾರ, ಥೀಯೇಟರ್ ಮುಂದೆ ಸೀರಿಯಲ್ ಸೆಟ್ಟು ಎಲ್ಲಾ ಮಾಡಿದ್ದೇವೆ. ಮನೆಯಲ್ಲಿ ಮದುವೆ ಫಂಕ್ಷನ್ ಹೇಗೆ ಮಾಡುತ್ತಾರೋ ಅದೇ ರೀತಿ ಎಲ್ಲಾ ಸಿದ್ಧತೆಗಳನ್ನು ಮಾಡುತ್ತಿದ್ದೇವೆ." ಎನ್ನುತ್ತಾರೆ.

ಅಡ್ವಾನ್ಸ್ ಬುಕಿಂಗ್ ಜೋರು

ಅಡ್ವಾನ್ಸ್ ಬುಕಿಂಗ್ ಜೋರು

'ಕ್ರಾಂತಿ' ಸಿನಿಮಾದ ಪ್ರಚಾರದ ಜೊತೆಗೆ ಅಡ್ವಾನ್ಸ್ ಬುಕಿಂಗ್ ಕೂಡ ಜೋರಾಗಿದೆ. ಈಗಾಗಲೇ ಸುಮಾರು 2 ಕೋಟಿ ರೂ. ಅಧಿಕ ಹಣವನ್ನು ಕಲೆಹಾಕಲಾಗಿದೆ. ಇನ್ನೂ ಮೂರು ದಿನಗಳು ಬಾಕಿ ಇದ್ದು, ಬಿಡುಗಡೆ ವೇಳೆ 'ಕ್ರಾಂತಿ' ಸಿನಿಮಾ ಅಡ್ವಾನ್ಸ್ ಬುಕಿಂಗ್‌ ಮೂಲಕ ಎಷ್ಟು ಹಣವನ್ನು ಕಲೆ ಹಾಕುತ್ತೆ ಅನ್ನೋ ಕುತೂಹಲವಿದೆ. ಒಟ್ನಲ್ಲಿ ಅಭಿಮಾನಿಗಳು 'ಕ್ರಾಂತಿ' ಗೆಲ್ಲಿಸುವುದಕ್ಕೆ ಪಣ ತೊಟ್ಟು ನಿಂತಿದ್ದಾರೆ.

More from Filmibeat

English summary
Darshan Dasarahalli Fans Tablo Inauguration And Their Love Towards D Boss, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X