ಡಿಸೆಂಬರ್‌ ಬಾಕ್ಸಾಫೀಸ್‌ನಲ್ಲಿ 'ಡೆವಿಲ್' ಜೊತೆ 'ಕೆಡಿ' ಕಾದಾಟ; ದರ್ಶನ್-ಧ್ರುವ ಹಳೆ ಮುನಿಸಿನ ಎಫೆಕ್ಟ್?

ಇಷ್ಟು ದಿನ ಸ್ಟಾರ್ ಸಿನಿಮಾಗಳು ರಿಲೀಸ್ ಆಗುತ್ತಿಲ್ಲ. ಥಿಯೇಟರ್‌ಗೆ ಜನರು ಬರುತ್ತಿಲ್ಲ ಅಂತೆಲ್ಲ ಗೋಳಾಡುತ್ತಿದ್ದರು. ಈಗ ನಿರೀಕ್ಷೆ ಮಾಡಿದಂತೆ ಸ್ಟಾರ್ ಸಿನಿಮಾಗಳು ಒಂದೊಂದಾಗೇ ರಿಲೀಸ್ ಡೇಟ್ ಅನ್ನು ಘೋಷಣೆ ಮಾಡುತ್ತಿದೆ. ಆದರೆ, ಸಿನಿಮಾ ಬಿಡುಗಡೆ ವಿಚಾರದಲ್ಲೂ ಪೈಪೋಟಿಗೆ ಬಿದ್ದಂತೆ ಕಾಣುತ್ತಿದೆ.

ಈ ವರ್ಷ ರಿಲೀಸ್ ಆಗುತ್ತಿರುವ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾಗಳಲ್ಲಿ 'ಮಾರ್ಟಿನ್', 'ಕೆಡಿ', 'ಡೆವಿಲ್', 'ಭೀಮ', 'ಭೈರತಿ ರಣಗಲ್' ಅಂತಹ ಸಿನಿಮಾಗಳು ಕ್ಯೂನಲ್ಲಿವೆ. ಈಗಾಗಲೇ ಧ್ರುವ ಸರ್ಜಾ ಅಭಿನಯದ 'ಮಾರ್ಟಿನ್' ಸಿನಿಮಾದ ರಿಲೀಸ್ ಡೇಟ್ ಅನೌನ್ಸ್ ಮಾಡಲಾಗಿದೆ. ಹಾಗೇ ಮತ್ತೊಂದು ಸಿನಿಮಾ 'ಕೆಡಿ' ಕೂಡ ಇದೇ ವರ್ಷ ಡಿಸೆಂಬರ್‌ಗೆ ಬಿಡುಗಡೆಯಾಗುತ್ತಿದೆ.

Darshan Devil Dhruva Sarja s KD is releasing December month can we expect a box office war

ಮೂರು ವರ್ಷಗಳ ಬಳಿಕ ಧ್ರುವ ಸರ್ಜಾ ನಟನೆಯ ಎರಡು ಸಿನಿಮಾಗಳು ರಿಲೀಸ್ ಆಗುತ್ತಿವೆ. 'ಮಾರ್ಟಿನ್' ಹಾಗೂ 'ಕೆಡಿ' ಈ ಎರಡೂ ಸಿನಿಮಾಗಳು ಪ್ಯಾನ್ ಇಂಡಿಯಾ ಸಿನಿಮಾಗಳು ಅನ್ನುವುದು ವಿಶೇಷ. ಆದರೆ, ನಿರ್ದೇಶಕ ಪ್ರೇಮ್ 'ಕೆಡಿ' ಸಿನಿಮಾವನ್ನು ಡಿಸೆಂಬರ್‌ ರಿಲೀಸ್ ಮಾಡುವುದಾಗಿ ಹೇಳಿದ್ದಾರೆ. ಇದೇ ಡಿಸೆಂಬರ್‌ನಲ್ಲಿ ದರ್ಶನ್ ಸಿನಿಮಾ 'ಡಿವಿಲ್' ಕೂಡ ಬಿಡುಗಡೆಯಾಗುತ್ತಿದೆ.

ದರ್ಶನ್ ಹಾಗೂ ಮಿಲನ ಪ್ರಕಾಶ್ ಕಾಂಬಿನೇಷನ್‌ನಲ್ಲಿ ನಿರ್ಮಾಣ ಆಗುತ್ತಿರುವ 'ಡೆವಿಲ್' ಕ್ರಿಸ್‌ಮಸ್‌ಗೆ ರಿಲೀಸ್ ಮಾಡುವುದಾಗಿ ಘೋಷಣೆ ಮಾಡಲಾಗಿದೆ. ಡಿಸೆಂಬರ್ 25 ಬುಧವಾರ ಬರುವುದರಿಂದ ಒಂದು ವಾರ ಮುಂಚೆ ಅಥವಾ ಎರಡು ದಿನ ತಡವಾಗಿ ಸಿನಿಮಾ ರಿಲೀಸ್ ಆಗಬಹುದು. ಹೀಗಾಗಿ ಡಿಸೆಂಬರ್‌ ಕೊನೆಯ ಎರಡು ವಾರ ಬ್ಲಾಕ್ ಆದಂತೆ.

ಇನ್ನು ನಿರ್ದೇಶಕ ಪ್ರೇಮ್ ಕೂಡ ಡಿಸೆಂಬರ್ ತಿಂಗಳಲ್ಲಿಯೇ 'ಕೆಡಿ' ಸಿನಿಮಾ ರಿಲೀಸ್ ಎಂದಿದ್ದಾರೆ. ಹೀಗಾಗಿ ಎರಡು ವಾರ ಗ್ಯಾಪ್ ಕೊಟ್ಟು ರಿಲೀಸ್ ಮಾಡ್ಬೇಕು ಅಂದರೆ, ಡಿಸೆಂಬರ್ ಮೊದಲ ವಾರವೇ ಬಿಡುಗಡೆಯಾಗಬೇಕು. 'ಕೆಡಿ' ಪ್ಯಾನ್ ಇಂಡಿಯಾ ಸಿನಿಮಾ ಆಗಿದ್ದರಿಂದ ಈ ರಿಲೀಸ್ ಡೇಟ್ ಎಲ್ಲಾ ಭಾಷೆಯ ವಿತರಕರಿಗೂ ಒಪ್ಪಿಗೆಯಾಗಬೇಕು. ಅಲ್ಲದೆ ಡಿಸೆಂಬರ್ ಕೊನೆಯ ವಾರದಲ್ಲಿ ರಿಲೀಸ್ ಮಾಡುವುರಿಂದ ಗಳಿಕೆ ವಿಚಾರದಲ್ಲಿ ಹೆಚ್ಚು ಲಾಭ. ಹೀಗಾಗಿ ಡಿಸೆಂಬರ್ ತಿಂಗಳ ಕೊನೆಯಲ್ಲೇ ರಿಲೀಸ್‌ಗೆ ಮುಂದಾದರೆ, ಬಾಕ್ಸಾಫೀಸ್ ಕ್ಲಾಶ್ ಆಗೋದು ಪಕ್ಕಾ.

Darshan Devil Dhruva Sarja s KD is releasing December month can we expect a box office war

'ಕೆಡಿ' ಹಾಗೂ 'ಡೆವಿಲ್' ಬಾಕ್ಸಾಫೀಸ್‌ನಲ್ಲಿ ಕ್ಲ್ಯಾಶ್ ಆದರೆ, ಎರಡು ಸಿನಿಮಾಗಳಿಗೂ ನಷ್ಟ ಆಗೋದಂತೂ ಪಕ್ಕಾ. ಯಾಕಂದ್ರೆ, ಕರ್ನಾಟಕದಲ್ಲಿ ಸದ್ಯಕ್ಕೆ ಇರೋದು ಕೇವಲ 500 ಥಿಯೇಟರ್‌ಗಳು. ಹೀಗಾಗಿ ಎರಡು ದೊಡ್ಡ ಸಿನಿಮಾಗಳ ಒಟ್ಟಿಗೆ ಬಿಡುಗಡೆಗೆ ನಿರ್ಧರಿಸಿದರೆ, ಥಿಯೇಟರ್‌ಗಳ ಅಭಾವ ಎದುರಾಗೋದು ನೂರಕ್ಕೆ ನೂರರಷ್ಟು ಪಕ್ಕಾ. ಅದರಲ್ಲೂ 'ಕೆಡಿ' ಸಿನಿಮಾಗೆ ನಿರ್ಮಾಣ ಸಂಸ್ಥೆ ಕೆವಿಎನ್ ಸಿಕ್ಕಾಪಟ್ಟೆ ಹಣ ಸುರಿದಿದೆ. ಈ ಕಾರಣಕ್ಕೆ ಕಮ್ಮಿ ಅಂದರೂ 400 ಸ್ಕ್ರೀನ್‌ನಲ್ಲಾದರೂ ರಿಲೀಸ್ ಆಲೇಬೇಕು.

'ಕೆಡಿ' ರಿಲೀಸ್ ಬಗ್ಗೆ ಪ್ರೇಮ್ "ರಾಜ್‌ ದಿ ಶೋ ಮ್ಯಾನ್ ಸಿನಿಮಾ ಬಿಡುಗಡೆ ವೇಳೆ ಹೆಚ್ಚು ಥಿಯೇಟರ್‌ಗಳಲ್ಲಿ ಸಿನಿಮಾ ರಿಲೀಸ್ ಮಾಡಬೇಕು ಅಂತ ಮಾಡಿದವನೇ ನಾನು. ಯಾಕಂದ್ರೆ 100 ದಿನಗಳಲ್ಲಿ ಬರುವ ದುಡ್ಡು 3 ದಿನಗಳಲ್ಲಿ ಬರುತ್ತೆ" ಎಂದಿದ್ದಾರೆ. ಹೀಗಾಗಿ ಹೆಚ್ಚು ಥಿಯೇಟರ್‌ಗಳ ಮೇಲೆ ಪ್ರೇಮ್ ಕಣ್ಣಿಟ್ಟಿದ್ದಾರೆ ಅನ್ನೋದಂತೂ ಈ ಪ್ರತಿಕ್ರಿಯೆ ಮೂಲಕ ತಿಳಿಯುತ್ತೆ.

ಇತ್ತ ದರ್ಶನ್ ಹಾಗೂ ಧ್ರುವ ಸರ್ಜಾ ಸಂಬಂಧ ಚೆನ್ನಾಗಿಲ್ಲ. ಹೀಗಾಗಿ ಡಿಸೆಂಬರ್‌ನಲ್ಲಿ ಬಾಕ್ಸಾಫೀಸ್ ವಾರ್ ಅಷ್ಟೇ ಅಲ್ಲ ಫ್ಯಾನ್ ವಾರ್ ಕೂಡ ಶುರುವಾದರೂ ಅಚ್ಚರಿ ಪಡಬೇಕಿಲ್ಲ. ಒಟ್ನಲ್ಲಿ ಡಿಸೆಂಬರ್‌ ತಿಂಗಳಲ್ಲಿ ಎರಡು ದುಬಾರಿ ಕನ್ನಡ ಸಿನಿಮಾಗಳ ಕಾದಾಟ ನೋಡುವ ಅವಕಾಶ ಪ್ರೇಕ್ಷಕರಿಗೆ ಸಿಗೋದು ಗ್ಯಾರಂಟಿ.

More from Filmibeat

English summary
Darshan Devil Vs Dhruva Sarja KD: Both the movies releasing in December|
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X