Darshan Devil Teaser:ದರ್ಶನ್ 'ಡೆವಿಲ್' ಟೀಸರ್‌ಗೆ ಹೇಗಿದೆ ರೆಸ್ಪಾನ್ಸ್? ಟಾಕ್ಸಿಕ್ ಜೊತೆ ಹೋಲಿಕೆ ಯಾಕೆ?

ಚಾಲೆಂಜಿಂಗ್ ಸ್ಟಾರ್ ದರ್ಶನ್ ಇಂದು (ಫೆಬ್ರವರಿ 16) 48ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಈ ಬಾರಿ ತಮ್ಮ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿಕೊಳ್ಳಬೇಕಿತ್ತು. ಆದರೆ, ಬದಲಾದ ಪರಿಸ್ಥಿತಿಯಲ್ಲಿ ಅದು ಸಾಧ್ಯವಾಗುತ್ತಿಲ್ಲ. ಹಾಗಂತ ಅಭಿಮಾನಿಗಳ ಸಂಭ್ರಮವೇನೂ ನಿಂತಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ದರ್ಶನ್‌ರನ್ನು ಟ್ರೆಂಡಿಂಗ್‌ನಲ್ಲಿಯೇ ಇಟ್ಟಿದ್ದಾರೆ.

ಇತ್ತ ದರ್ಶನ್ ನಟಿಸುತ್ತಿರುವ 'ಡೆವಿಲ್: ದಿ ಹೀರೊ' ಸಿನಿಮಾ ತಂಡ ಕೂಡ ದರ್ಶನ್ ಹಾಗೂ ಅವರ ಅಭಿಮಾನಿಗಳಿಗೆ ಟೀರ್ ಗಿಫ್‌ ಮಾಡಿದೆ. ಮೊದಲೇ ತಿಳಿಸಿದಂತೆ 'ಡೆವಿಲ್' ಟೀಸರ್ ಆಗಿದ್ದು, ದರ್ಶನ್ ಅಭಿಮಾನಿಗಳು ಟ್ವಿಟರ್‌ನಲ್ಲಿ (ಎಕ್ಸ್‌) ಸಾಲು ಸಾಲು ಕಾಮೆಂಟ್‌ಗಳನ್ನು ಮಾಡುವುದಕ್ಕೆ ಶುರು ಮಾಡಿದ್ದಾರೆ. 'ಡೆವಿಲ್' ಲುಕ್‌ಗೆ ದರ್ಶನ್ ಅಭಿಮಾನಿಗಳು ಥ್ರಿಲ್ ಆಗಿರೋದು ಸೋಶಿಯಲ್ ಮೀಡಿಯಾದಲ್ಲಿ ಎದ್ದು ಕಾಣಿಸುತ್ತಿದೆ.

Darshan Devil The Hero teaser twitter reaction why netizens comparing Yash Toxic film

ಮಿಲನ ಪ್ರಕಾಶ್ ನಿರ್ದೇಶನ ಮಾಡುತ್ತಿರುವ ಈ ಸಿನಿಮಾದ ಮೇಲೆ ನಿರೀಕ್ಷೆ ದುಪ್ಪಟಿದೆ. 'ಕಾಟೇರ' ಮೆಗಾ ಸಕ್ಸಸ್ ಬಳಿಕ 'ಡೆವಿಲ್' ಸಿನಿಮಾ ನೋಡುವುದಕ್ಕೆ ಫ್ಯಾನ್ಸ್ ತುದಿಗಾಲಲ್ಲಿ ನಿಂತಿದ್ದರು. ಅಷ್ಟರೊಳಗೆ ರೇಣುಕಾಸ್ವಾಮಿ ಹತ್ಯೆ ಆರೋಪದಡಿ ದರ್ಶನ್ ಜೈಲು ಸೇರಿದ್ದರು. ಈಗ ರೆಗ್ಯೂಲರ್ ಜಾಮೀನಿನ ಮೇಲೆ ದರ್ಶನ್ ಹೊರ ಬಂದಿದ್ದಾರೆ. ಮತ್ತೆ ಶೂಟಿಂಗ್ ಶುರುವಾಗಬೇಕಿದೆ. ಫ್ಯಾನ್ಸ್ ಕುತೂಹಲ ತಣಿಸುವುದಕ್ಕೆ ಮಿಲನ ಪ್ರಕಾಶ್ 'ಡೆವಿಲ್' ಟೀಸರ್ ರಿಲೀಸ್ ಮಾಡಿದ್ದಾರೆ. ಅದನ್ನು ನೋಡಿ ದರ್ಶನ್ ಫ್ಯಾನ್ಸ್ ಖುಷಿಯಾಗಿದ್ದಾರೆ. ಆದರೆ, ಕೆಲವರು ಸೋಶಿಯಲ್ ಮೀಡಿಯಾದಲ್ಲಿ ಯಶ್ ಟಾಕ್ಸಿಕ್ ಟೀಸರ್‌ ಅನ್ನು ಮುಂದಿಟ್ಟುಕೊಂಡು ಚರ್ಚೆ ಮಾಡುವುದಕ್ಕೆ ಶುರು ಮಾಡಿದ್ದಾರೆ.

'ಡೆವಿಲ್' ಟೀಸರ್‌ನಲ್ಲಿ ದೃಶ್ಯ ವೈಭವ ಎದ್ದು ಕಾಣುತ್ತಿದೆ. ಪಬ್‌ನಲ್ಲಿ ದರ್ಶನ್ ಆಕ್ಷನ್ ಮಾಡುವ ದೃಶ್ಯಗಳು ಇವೆ. ಬ್ಯಾಕ್‌ಗ್ರೌಂಡ್‌ನಲ್ಲಿ ಡ್ಯಾನ್ಸರ್‌ಗಳು ಕಾಣಿಸಿದ್ದು, ಗ್ಲಾಮರ್ ಕೂಡ ಇದೆ. ಗನ್ನು, ಆಕ್ಷನ್ ಈ ಟೀಸರ್‌ನ ಹೈಲೈಟ್‌ಗಳಲ್ಲೊಂದು. ಮಿಲನಾ ಪ್ರಕಾಶ್ ಇಲ್ಲಿ ದರ್ಶನ್‌ರನ್ನು ಸೈಲಿಷ್ ಆಗಿ ತೋರಿಸಿದ್ದಾರೆ. ಬರ್ತ್‌ಡೇ ದಿನ ದರ್ಶನ್ ಲುಕ್ ನೋಡಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಆದರೆ, ಸೋಶಿಯಲ್ ಮೀಡಿಯಾದಲ್ಲೊಂದು ಚರ್ಚೆಯಾಗುತ್ತಿದೆ. ದರ್ಶನ್ 'ಡೆವಿಲ್' ಟೀಸರ್‌ ಹಾಗೂ ಯಶ್ 'ಟಾಕ್ಸಿಕ್' ಟೀಸರ್ ಎರಡನ್ನೂ ಹೋಲಿಕೆ ಮಾಡಲಾಗುತ್ತಿದೆ. ಎರಡೂ ಟೀಸರ್‌ನಲ್ಲೂ ಪಬ್ ಹಿನ್ನೆಲೆಯಲ್ಲೇ ಟೀಸರ್‌ಗಳು ಇವೆ. ಯಶ್ ಬರ್ತ್‌ಡೇಗೆ ರಿಲೀಸ್ ಆಗಿದ್ದ 'ಟಾಕ್ಸಿಕ್' ಟೀಸರ್‌ನಲ್ಲಿ ಪಬ್‌ ಸನ್ನಿವೇಶಗಳು ಇದ್ದವು. ಹಾಗೇ ದರ್ಶನ್ ಬರ್ತ್‌ಡೇಗೆ ರಿಲೀಸ್ ಆದ ಟೀಸರ್‌ನಲ್ಲೂ ಪಬ್ ಇದೆ. ಆದರೆ, ಸನ್ನಿವೇಶಗಳು ಮಾತ್ರ ಬೇರೆ ಎಂದು ಹೇಳುತ್ತಿದ್ದಾರೆ.

ಇನ್ನೊಂದು ಟ್ವೀಟ್‌ (ಎಕ್ಸ್) ಯಶ್ 'ಟಾಕ್ಸಿಕ್' ಸಿನಿಮಾದ ಟೀಸರ್‌ಗೆ ಟಾಂಗ್ ಕೊಟ್ಟಂತೆ ಇದೆ. ಪರೋಕ್ಷವಾಗಿ ದರ್ಶನ್ ಅಭಿಮಾನಿಯೊಬ್ಬರು ಈಗಂತ ಟ್ವೀಟ್ ಮಾಡಿದ್ದಾರೆ. "ಪಬ್‌ನಲ್ಲಿ ಮಜ ಮಾಡೋದು ನೋಡಿರ್ತಿಯ‌.. ಮಾಂಜ ಕೊಡೋದು ನೋಡ್ಬೇಕು ಅಂದ್ರೆ , ಲಿಂಕ್ ಕ್ಲಿಕ್ ಮಾಡು" ಎಂದು ಡೆವಿಲ್ ಸಿನಿಮಾದ ಲಿಂಕ್ ಅನ್ನು ಪೋಸ್ಟ್ ಮಾಡಿದ್ದಾರೆ. ಇದು ಪರೋಕ್ಷವಾಗಿ 'ಟಾಕ್ಸಿಕ್' ಸಿನಿಮಾ ಟೀಸರ್‌ಗೆ ಟಾಂಗ್ ಕೊಟ್ಟಿದ್ದಾರೆ ಅಂತನೂ ಚರ್ಚೆಯಾಗುತ್ತಿದೆ.

ಇವೆಲ್ಲ ಏನೇ ಇದ್ದರೂ 'ಡೆವಿಲ್' ಇನ್ನೂ ಆ ಹೈಪ್ ಅನ್ನು ಹಾಗೇ ಉಳಿಸಿಕೊಂಡಿದೆ ಅನ್ನೋ ಗೊತ್ತಾಗುತ್ತಿದೆ. ಆದರೆ, ದರ್ಶನ್ ಯಾವಾಗ ಸಿನಿಮಾ ಶುರು ಮಾಡುತ್ತಾರೆ? ಆ ಸಿನಿಮಾವನ್ನು ಅಭಿಮಾನಿಗಳು ಯಾವಾಗ ನೋಡುತ್ತಾರೆ? ಅನ್ನೋದು ಇನ್ನೂ ಗುಟ್ಟಾಗಿಯೇ ಇದೆ. ಇನ್ನೂ ದರ್ಶನ್ ಶೂಟಿಂಗ್‌ಗೆ ಹೋಗುವ ಬಗ್ಗೆ ಸುಳಿವನ್ನು ಬಿಟ್ಟು ಕೊಟ್ಟಿಲ್ಲ. ಇತ್ತ ಡೆವಿಲ್ ನಿರ್ದೇಶಕ ಮಿಲನ ಪ್ರಕಾಶ್ ಕೂಡ ಮಾಹಿತಿ ನೀಡುತ್ತಿಲ್ಲ. ಸದ್ಯ 'ಡೆವಿಲ್' ಟೀಸರ್ ನೋಡಿ ಫ್ಯಾನ್ಸ್ ದಿಲ್ ಖುಷ್ ಆಗಿದ್ದಾರೆ.

More from Filmibeat

English summary
Darshan Devil The Hero teaser twitter reaction why netizens comparing Yash Toxic film;
Read more about: darshan yash teaser
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X