ಹುಟ್ಟುಹಬ್ಬದಂದು ಫ್ಯಾನ್ಸ್ ಕೊಟ್ಟ ದಿನಸಿ ಏನಾಯ್ತು? ದರ್ಶನ್ ಸೂಚನೆಯಂತೆ ತಲುಪಿದ್ದು ಯಾರಿಗೆ?

ದರ್ಶನ್ ಹುಟ್ಟುಹಬ್ಬ ಆರಂಭ ಆಗುವುದಕ್ಕಿಂತಲೂ ಒಂದು ವಾರ ಮುನ್ನವೇ ಅಭಿಮಾನಿಗಳಲ್ಲಿ ಸಂಭ್ರಮ ಸಡಗರ ಮನೆ ಮಾಡಿತ್ತು. ಪ್ರತಿ ವರ್ಷದಂತೆ ಈ ವರ್ಷವೂ ಕೂಡ ದರ್ಶನ್ ಹೇಳಿದಂತೆ ಬರ್ತ್‌ಡೇಗೆ ಸಮಾಜಮುಖಿ ಕೆಲಸಗಳಲ್ಲಿ ಭಾಗಿಯಾಗಿದ್ದರು.

ಅಭಿಮಾನಿಗಳಿಗೆ ಕೇಕ್, ಹಾರಗಳನ್ನು ತರಬೇಡಿ. ಅದರ ಬದಲು ಅಸಹಾಯಕರಿಗೆ ನೆರವಾಗಿ ಎಂದು ಕರೆ ನೀಡಿದ್ದರು. ಅದರಂತೆ ಪ್ರತಿ ವರ್ಷ ದರ್ಶನ್ ಹುಟ್ಟುಹಬ್ಬದಂದು ಅಭಿಮಾನಿಗಳು ಸ್ವ:ಇಚ್ಚೆಯಿಂದ ತಮ್ಮ ಕೈಲಾದಷ್ಟು ದವಸ ಧಾನ್ಯಗಳನ್ನು ಮನೆಗೆ ತಲುಪಿಸುತ್ತಾರೆ.

ಈ ವರ್ಷ ಕೂಡ ಸಹಸ್ರಾರು ಸಂಖ್ಯೆಯಲ್ಲಿ ದಿನಸಿಯನ್ನಯ ಸಂಗ್ರಹಣೆ ಮಾಡಲಾಗಿತ್ತು. ಅದೆಲ್ಲವನ್ನೂ ಹಂಚುವ ಕೆಲಸ ಈಗ ನಡೆಯುತ್ತಿದೆ. ಹಾಗಿದ್ದರೆ, ಈ ಬಾರಿ ಅಭಿಮಾನಿಗಳಿಂದ ಸಂಗ್ರಹವಾದ ದಿನಸಿ ವಸ್ತುಗಳು ಯಾರಿಗೆ ನೀಡಿದ್ದಾರೆ? ದರ್ಶನ್ ಕೊಟ್ಟ ಸೂಚನೆ ಮೇರೆ ಫ್ಯಾನ್ಸ್ ಕೊಟ್ಟಿದ್ದು ಯಾರಿಗೆ? ತಿಳಿಯಲು ಮುಂದೆ ಓದಿ.

6 ದಿನಗಳಿಂದ ದಿನಸಿ ಸಂಗ್ರಹಣೆ

6 ದಿನಗಳಿಂದ ದಿನಸಿ ಸಂಗ್ರಹಣೆ

ಫೆಬ್ರವರಿ 16ರಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಹುಟ್ಟುಹಬ್ಬವಿತ್ತು. ಇದನ್ನೂ ಒಂದು ವಾರ ಮುನ್ನವೇ ದರ್ಶನ್ ಮನೆಗೆ ಅಭಿಮಾನಿಗಳು ಅಕ್ಕಿ,ಬೇಳೆ,ಅಡುಗೆ ಎಣ್ಣೆ ಸೇರಿದಂತೆ ದಿನಸಿ ವಸ್ತುಗಳನ್ನು ನೀಡುತ್ತಿದ್ದರು. ಇದು ಹುಟ್ಟುಹಬ್ಬದ ಹಿಂದಿನ ದಿನದವರೆಗೂ ಮುಂದುವರೆದಿತ್ತು. ಪ್ರತಿವರ್ಷದಂತೆ ಈ ವರ್ಷ ಕೂಡ ಹೆಚ್ಚು ದಿನಸಿ ವಸ್ತುಗಳನ್ನು ಸಂಗ್ರಹಣೆ ಮಾಡಲಾಗಿತ್ತು. ಅದನ್ನೀಗ ದರ್ಶನ್ ಸೂಚನೆ ಮೇರೆಗೆ ಹಂಚುವ ಕೆಲಸ ನಡೆಯುತ್ತಿದೆ.

ಮಂಗಳಮುಖಿಯರಿಗೆ ದಿನಸಿ ಹಂಚಿಕೆ

ಮಂಗಳಮುಖಿಯರಿಗೆ ದಿನಸಿ ಹಂಚಿಕೆ

ಹುಟ್ಟುಹಬ್ಬದ ನಿಮಿತ್ತ ಸಂಗ್ರಹವಾದ ದಿನಸಿ ವಸ್ತುಗಳನ್ನು ಹಂಚುವ ಕೆಲಸ ನಡೆಯುತ್ತಿದೆ. ಸ್ವತ: ದರ್ಶನ್ ಈ ಬಾರಿ ದಿನಸಿಯನ್ನು ಮಂಗಳಮುಖಿಯರಿಗೆ ಹಂಚುವಂತೆ ಸೂಚನೆ ನೀಡಿದ್ದರು. ಅದರಂತೆ ಅಭಿಮಾನಿಗಳು ಈಗ ಎಲ್ಲೆಲ್ಲಿ ಮಂಗಳಮುಖಿಯರು ಅಸಹಾಯಕ ಸ್ಥಿತಿಯಲ್ಲಿ ಇದ್ದಾರೋ, ಅವರಿಗೆಲ್ಲ ವಾಹನಗಳಲ್ಲಿ ದಿನಸಿಯನ್ನು ಕಳುಹಿಸಿಕೊಡಲಾಗುತ್ತಿದೆ. ಈ ವಿಡಿಯೋಗಳು, ಫೋಟೊಗಳು ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿವೆ.

ಮಂಗಳಮುಖಿಯರಿಗೆ ದರ್ಶನ್ ಸಂದೇಶ

ಮಂಗಳಮುಖಿಯರಿಗೆ ದರ್ಶನ್ ಸಂದೇಶ

ದರ್ಶನ್ ದವಸ ಧಾನ್ಯಗಳ ಜೊತೆಗೆ ಒಂದು ಪತ್ರವನ್ನು ಕೂಡ ಕಳುಹಿಸಿದ್ದಾರೆ. ಎಲ್ಲೆಲ್ಲಿ ಮಂಗಳಮುಖಿಯರಿಗೆ ದಿನಸಿ ವಿತರಣೆ ಮಾಡಲಾಗಿದೆಯೋ ಆ ಎಲ್ಲಾ ಕಡೆಗೂ ಸಂದೇಶ ಪತ್ರವನ್ನು ಕಳುಹಿಸಿಕೊಟ್ಟಿದ್ದಾರೆ. ದರ್ಶನ್ ಮನವಿಯಂತೆಯೇ ಅಭಿಮಾನಿಗಳು ಮಂಗಳಮುಖಿಯರ ವಾಸವಿರುವ ಪ್ರದೇಶವನ್ನು ಗುರುತಿಸಿ, ಅಲ್ಲಿಗೆ ದಿನಸಿ ವಿತರಣೆ ಮಾಡುತ್ತಿದ್ದಾರೆ.

ದರ್ಶನ್‌ಗೆ ಮಂಗಳಮುಖಿಯರ ಹಾರೈಕೆ

ದರ್ಶನ್‌ಗೆ ಮಂಗಳಮುಖಿಯರ ಹಾರೈಕೆ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಹಾಯಕ್ಕೆ ಮಂಗಳಮುಖಿಯರು ಹರ್ಷ ವ್ಯಕ್ತಪಡಿಸಿದ್ದಾರೆ. ದರ್ಶನ್ ಕಳುಹಿಸಿಕೊಟ್ಟಿರೋ ದಿನಸಿಯನ್ನು ಸ್ವೀಕರಿಸಿದ ಬಳಿಕ ಮಂಗಳಮುಖಿಯರು ಶುಭ ಹಾರೈಸಿದ್ದಾರೆ. " ತುಂಬಾನೇ ಖುಷಿ ಆಯ್ತು. ದೇವರು ಆಯಸ್ಸು, ಆರೋಗ್ಯ ಕೊಟ್ಟು ದರ್ಶನ್ ಸರ್ ಅನ್ನು ಕಾಪಾಡಲಿ" ಎಂದು ಮಂಗಳಮುಖಿಯರು ಹಾರೈಸಿದ್ದಾರೆ.

More from Filmibeat

English summary
Darshan distributes rations collected from fans on his birthday to transgenders, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X