"ನಮ್ಮ ಪ್ರೀತಿಯ ರಾಮು ಮುಗಿದ್ಮೇಲೆ ಒಂದು ಕಣ್ಣು ಡ್ಯಾಮೇಜ್ ಆಗಿತ್ತು"; ಇವತ್ತಿಗೂ ದರ್ಶನ್‌ಗೆ ಕಣ್ಣಿನ ಸಮಸ್ಯೆಯಿದೆ!

ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ 'ಕಾಟೇರ' ಸಿನಿಮಾ ಬಿಡುಗಡೆ ಸಜ್ಜಾಗಿದೆ. ಇಡೀ ತಂಡ ಕೊನೆಯ ಹಂತದ ಸಿನಿಮಾ ಪ್ರಚಾರದಲ್ಲಿ ಬ್ಯುಸಿಯಾಗಿದೆ. ನಟಿ ಆರಾಧನಾ, ನಿರ್ದೇಶಕ ತರುಣ್ ಸುಧೀರ್, ಬಿರಾದರ್, ಕುಮಾರ್ ಗೋವಿಂದ್, ಶ್ರುತಿ ಸೇರಿದಂತೆ ಇಡೀ ಚಿತ್ರತಂಡ ಭರ್ಜರಿಯಾಗಿ ಪ್ರಚಾರ ಮಾಡುತ್ತಿದೆ.

ಇಷ್ಟೇ ಅಲ್ಲದೆ ಇಂದು (ಡಿಸೆಂಬರ್ 23) ರೈತರ ದಿನದ ಅಂಗವಾಗಿ ಮಂಡ್ಯದಲ್ಲಿ 'ಕಾಟೇರ' ಸಿನಿಮಾದ ಬಿಗ್ ಇವೆಂಟ್‌ ಅನ್ನು ಚಿತ್ರತಂಡ ಹಮ್ಮಿಕೊಂಡಿದೆ. ಇಡೀ ಚಿತ್ರತಂಡ ಮಂಡ್ಯದಲ್ಲಿ ಬೀಡು ಬಿಟ್ಟಿದ್ದು, 'ಕಾಟೇರ' ಸಿನಿಮಾಗೆ ಭರ್ಜರಿ ಬೆಂಬಲ ವ್ಯಕ್ತವಾಗುತ್ತಿದೆ.

Darshan eye was damaged while Nanna Preethiya Ramu movie shooting he still has problem

ಇನ್ನೊಂದು ಕಡೆ ಯೂಟ್ಯೂಬ್ ಚಾನೆಲ್‌ಗಳಿಗೆ 'ಕಾಟೇರ' ತಂಡ ಪ್ರಚಾರ ಮಾಡುತ್ತಿದೆ. ನಿರ್ದೇಶಕ ತರುಣ್ ಸುಧೀರ್ ಗಲಾಟ್ಟ ಪ್ಲಸ್ ಯೂಟ್ಯೂಬ್ ಚಾನೆಲ್‌ ಸಂದರ್ಶನದಲ್ಲಿ ದರ್ಶನ್ ಬಗ್ಗೆ ಇಂಟ್ರೆಸ್ಟಿಂಗ್ ವಿಷಯವೊಂದನ್ನು ಹಂಚಿಕೊಂಡಿದ್ದಾರೆ. 'ನಮ್ಮ ಪ್ರೀತಿಯ ರಾಮು' ದರ್ಶನ್ ವೃತ್ತಿ ಬದುಕಿನ ಬೆಸ್ಟ್ ಸಿನಿಮಾಗಳಲ್ಲೊಂದು. ಈ ಸಿನಿಮಾಗಾಗಿ ದರ್ಶನ್ ಒಂದು ಕಣ್ಣನ್ನು ಆಪರೇಷನ್ ಮಾಡಿಸಿಕೊಳ್ಳಬೇಕಾಯ್ತು ಅಂತ ತರುಣ್ ಸುಧೀರ್ ಹೇಳಿದ್ದಾರೆ. ಅಸಲಿಗೆ ಆ ಸಿನಿಮಾ ವೇಳೆ ಅಂತಹದ್ದೇನಾಯ್ತು? ತಿಳಿಯಲು ಮುಂದೆ ಓದಿ.

ತರುಣ್ ಸುಧೀರ್ ಹಾಗೂ ದರ್ಶನ್ 'ನವಗ್ರಹ' ಸಿನಿಮಾದ ಬಳಿಕ ಒಡನಾಟ ಇಟ್ಟುಕೊಂಡವರಲ್ಲ. ಇವರಿಬ್ಬರದ್ದು ತುಂಬಾ ಹಳೆಯ ಸಂಬಂಧ. ದರ್ಶನ್ 'ಮೆಜೆಸ್ಟಿಕ್' ಸಿನಿಮಾ ಮಾಡುವಾಗಿನಿಂದ ಜೊತೆಗಿದ್ದವರು. ಸಿನಿಮಾ ಬಗ್ಗೆ ದರ್ಶನ್‌ಗೆ ಇರುವ ಕಮಿಟ್ಮೆಂಟ್ ಅನ್ನು ಈ ಸಂದರ್ಶನದಲ್ಲಿ ನೆನಪಿಸಿಕೊಂಡಿದ್ದಾರೆ.

"ದರ್ಶನ್ ಸರ್‌ನ ಒಬ್ಬ ನಟನಾಗಿ, ಸ್ಟಾರ್ ಆಗಿ ನೋಡುತ್ತಿದ್ದೇನೆ ಅದು ಸರಿ. ಅವರು ಸಿನಿಮಾರಂಗ ಭೇಟಿ ಕೊಡುವುದಕ್ಕಿಂತ ಮೊದಲು, ಮೆಜೆಸ್ಟಿಕ್ ಮಾಡುವಾಗಿನಿಂದ ಒಡನಾಟ. ನಾನು, ದರ್ಶನ್ ಸರ್, ದಿನಕರ್, ನಂದ ನಮ್ಮ ಅಣ್ಣ ನಾವು ನಾಲ್ಕು ಮಂದಿ ಸ್ನೇಹಿತರು. ಆ ಕಷ್ಟದ ದಿನಗಳಿಂದ ಜೊತೆಗಿದ್ದು ನೋಡಿದ್ದೀವಿ. ಅವರ ಪರ್ಫಾಮೆನ್ಸ್ ಲೆವೆಲ್ ಏನು ಅನ್ನೋದನ್ನೂ ನಾನು ನೋಡಿದ್ದೀನಿ. ಯಾಕೆ ಅದು ಬೆಳಕಿಗೆ ಬಂದಿಲ್ಲ ಅನ್ನೋ ಕಾರಣನೂ ನನಗೆ ಗೊತ್ತಿದೆ." ಎಂದು ತರುಣ್ ಸುಧೀರ್ ಹೇಳಿದ್ದಾರೆ.

Darshan eye was damaged while Nanna Preethiya Ramu movie shooting he still has problem

ಇದೇ ವೇಳೆ 'ನಮ್ಮ ಪ್ರೀತಿಯ ರಾಮು' ಸಿನಿಮಾಗಾಗಿ ದರ್ಶನ್ ಹಾಕಿದ ಎಫರ್ಟ್ ಹೇಗಿತ್ತು? ಅನ್ನೋದನ್ನು ಇದೇ ಸಂದರ್ಶನದಲ್ಲಿ ಶೇರ್ ಮಾಡಿಕೊಂಡಿದ್ದಾರೆ. "ನಮ್ಮ ಪ್ರೀತಿಯ ರಾಮು ಅಂತ ಸಿನಿಮಾ ಶೂಟಿಂಗ್ ನಡೆಯುವಾಗ, ಇಡೀ ಸಿನಿಮಾ ಶೂಟಿಂಗ್ ಅವರ ಜೊತೆ ನಾನು ಇದ್ದೇನೆ. ತಮಿಳು, ಮಲಯಾಳಂ ಎಲ್ಲಾ ಭಾಷೆಯಲ್ಲೂ ಆಗಿದ್ದಂತಹ ಸಿನಿಮಾ ಅದು. ಮಲಯಾಳಂ ಫಸ್ಟ್, ತಮಿಳು ಆಮೇಲೆ ಕನ್ನಡ. ಎಲ್ಲೇ ನೋಡಿದರನೂ ಎಲ್ಲರೂ ನ್ಯಾಚುರಲ್ ಆಗಿಯೇ ಮಾಡಿದ್ದಾರೆ. ಇವರದ್ದು ಬೆಸ್ಟ್ ಆಗಿ ಕಾಣಿಸುತ್ತೆ. ಎಲ್ಲರ ಕಣ್ಣುಗಳಲ್ಲೂ ಕಪ್ಪು ಕಾಣಿಸುತ್ತೆ. ಇವರದ್ದು ಒಂದು ಚೂರು ಕಾಣಿಸುವುದಿಲ್ಲ. ಅವರು ಅಷ್ಟು ಎಫರ್ಟ್ ಹಾಕಿದ್ದರು." ಎಂದು ತರುಣ್ ಸುಧೀರ್ ಆ ಘಟನೆಯನ್ನು ನೆನಪಿಸಿಕೊಂಡಿದ್ದಾರೆ.

'ನಮ್ಮ ಪ್ರೀತಿಯ ರಾಮು' ಸಿನಿಮಾದಲ್ಲಿ ದರ್ಶನ್ ತಮ್ಮ ಪಾತ್ರವನ್ನು ಅಚ್ಚು ಕಟ್ಟಾಗಿ ನಿಭಾಯಿಸಿದ್ದರು. ಇದರಿಂದ ಸಿನಿಮಾ ಮುಗಿಯುವಷ್ಟರಲ್ಲಿ ಅವರ ಕಣ್ಣಿಗೆ ಡ್ಯಾಮೇಜ್ ಆಗಿತ್ತು. "ನಮ್ಮ ಪ್ರೀತಿಯ ರಾಮು ಸಿನಿಮಾ ಶೂಟಿಂಗ್ ಮುಗಿಯುವಷ್ಟರಲ್ಲಿ, ಅವರ ಒಂದು ಕಣ್ಣನ್ನು ಆಪರೇಷನ್ ಮಾಡಿಸಿಕೊಳ್ಳಬೇಕಾಯ್ತು. ಅಷ್ಟು ರೇಂಜ್‌ಗೆ ಡ್ಯಾಮೇಜ್ ಆಗಿತ್ತು. ಇವತ್ತಿಗೂ ಅವರಿಗೊಂದು ಚಿಕ್ಕ ಸಮಸ್ಯೆಯಿದೆ ಅಲ್ಲಿ. ಆ ಸಿನಿಮಾಗಾಗಿ ಅಷ್ಟು ಡೆಡಿಕೇಟ್ ಮಾಡಿದ್ರು. ನಾವು ದೊಡ್ಡ ನಂಬಿಕೆಯಲ್ಲಿ ಇದ್ವಿ. ಆದರೆ, ಅಂದುಕೊಂಡಷ್ಟು ಆ ಸಿನಿಮಾ ರೀಚ್ ಆಗಲಿಲ್ಲ." ಎಂದು ತರುಣ್ ಸುಧೀರ್ ಹೇಳಿದ್ದಾರೆ.

More from Filmibeat

English summary
Tarun Sudhir says Darshan's eye was damaged while Nanna Preethiya Ramu movie shooting
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X