For Quick Alerts
  ALLOW NOTIFICATIONS  
  For Daily Alerts

  'ರಾಬರ್ಟ್' ಬಿಜಿಎಂ ಕಾಪಿ ಮಾಡಿದ ತೆಲುಗಿನ 'ರಾವಣ ಲಂಕಾ': ದರ್ಶನ್ ಅಭಿಮಾನಿಗಳ ಆಕ್ರೋಶ

  |

  ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ ಅಭಿನಯದ 'ರಾಬರ್ಟ್' ಚಿತ್ರ ದಿನದಿಂದ ದಿನಕ್ಕೆ ಅವರ ಅಭಿಮಾನಿಗಳ ಉತ್ಸಾಹವನ್ನು ಹೆಚ್ಚಿಸುತ್ತಿದೆ. ಚಿತ್ರದ ಎರಡು ಲಿರಿಕಲ್ ಹಾಡುಗಳು ಇತ್ತೀಚೆಗೆ ಬಿಡುಗಡೆಯಾಗಿದ್ದು, ಯೂಟ್ಯೂಬ್‌ನಲ್ಲಿ ಧೂಳೆಬ್ಬಿಸಿವೆ. ಚಿತ್ರದ ಮೋಷನ್ ಪೋಸ್ಟರ್ 16 ಲಕ್ಷ ವೀಕ್ಷಣೆ ಪಡೆದು ಟ್ರೆಂಡ್ ಆಗಿತ್ತು.

  ರಾಬರ್ಟ್ ರಿಲೀಸ್ ಡೇಟ್ ಫಿಕ್ಸ್ | Darshan | Roberrt | FILMIBEAT KANNADA

  ಕಳೆದ ಎರಡು ವಾರಗಳಲ್ಲಿ ಬಿಡುಗಡೆಯಾದ 'ಬಾ ಬಾ ಬಾ ನಾ ರೆಡಿ' ಮತ್ತು 'ಜೈ ಶ್ರೀರಾಮ್' ಲಿರಿಕಲ್ ವಿಡಿಯೋಗಳು ದರ್ಶನ್ ಅಭಿಮಾನಿಗಳಲ್ಲಿ ಸಂಚಲನ ಮೂಡಿಸಿವೆ. ಹಾಡಿನ ಚಿತ್ರೀಕರಣಕ್ಕಾಗಿ ವಿದೇಶಕ್ಕೆ ತೆರಳಬೇಕಿದ್ದ ಚಿತ್ರತಂಡ ಕೊರೊನಾ ವೈರಸ್ ಕಾರಣದಿಂದ ಗುಜರಾತ್‌ಗೆ ಚಿತ್ರೀಕರಣ ಸ್ಥಳವನ್ನು ಬದಲಿಸಲು ನಿರ್ಧರಿಸಿದೆ ಎನ್ನಲಾಗಿದೆ. ಮಾರ್ಚ್ 21ರಂದು ಚಿತ್ರದ ಆಡಿಯೋ ಬಿಡುಗಡೆ ಮಾಡಲು ಕೂಡ ನಿರ್ಧರಿಸಲಾಗಿದೆ ಎಂದು ಹೇಳಲಾಗಿದೆ. ಈ ಮಧ್ಯೆ ತೆಲುಗಿನ ಚಿತ್ರವೊಂದು 'ರಾಬರ್ಟ್' ಬಿಜಿಎಂ ನಕಲು ಮಾಡಿರುವುದು ಸುದ್ದಿಯಾಗಿದೆ.

  'ರಾಬರ್ಟ್' ಸಿನಿಮಾದ ಭರ್ಜರಿ ಸುದ್ದಿ: ಆಡಿಯೋ ರಿಲೀಸ್ ಗೆ ದಿನಾಂಕ-ಸ್ಥಳ ನಿಗದಿ?'ರಾಬರ್ಟ್' ಸಿನಿಮಾದ ಭರ್ಜರಿ ಸುದ್ದಿ: ಆಡಿಯೋ ರಿಲೀಸ್ ಗೆ ದಿನಾಂಕ-ಸ್ಥಳ ನಿಗದಿ?

  ಮೂರು ವಾರಗಳ ಹಿಂದೆ ಟೀಸರ್ ಬಿಡುಗಡೆ

  ಮೂರು ವಾರಗಳ ಹಿಂದೆ ಟೀಸರ್ ಬಿಡುಗಡೆ

  ತೆಲುಗಿನ 'ರಾವಣ ಲಂಕಾ' ಎಂಬ ಸಿನಿಮಾದ ಅಧಿಕೃತ ಟೀಸರ್ ಮೂರು ವಾರಗಳ ಹಿಂದೆ ಬಿಡುಗಡೆಯಾಗಿತ್ತು. ಸುಮಾರು 5,800 ವೀಕ್ಷಣೆಗಳನ್ನು ಯೂಟ್ಯೂಬ್‌ನಲ್ಲಿ ಪಡೆದುಕೊಂಡಿದೆ. ಆದರೆ ಟೀಸರ್‌ನಲ್ಲಿ ಬಳಕೆಯಾಗಿರುವ ಹಿನ್ನೆಲೆ ಸಂಗೀತ ಸಂಪೂರ್ಣವಾಗಿ ರಾಬರ್ಟ್ ಚಿತ್ರದ ಹಿನ್ನೆಲೆ ಸಂಗೀತದ ನಕಲಾಗಿದೆ.

  ಬಿಎನ್ಎಸ್ ರಾಜು ನಿರ್ದೇಶನದ ಚಿತ್ರ

  ಬಿಎನ್ಎಸ್ ರಾಜು ನಿರ್ದೇಶನದ ಚಿತ್ರ

  'ರಾವಣ ಲಂಕಾ' ಎಂಬ ತೆಲುಗು ಚಿತ್ರದ ಟೀಸರ್ ಫೆಬ್ರವರಿ 16ರಂದು ಬಿಡುಗಡೆಯಾಗಿದೆ. ಬಿಎನ್ಎಸ್ ರಾಜು ಎಂಬುವವರು ಈ ಚಿತ್ರದ ಕಥೆ, ಚಿತ್ರಕಥೆ ರಚಿಸಿ ನಿರ್ದೇಶನ ಮಾಡಿದ್ದಾರೆ. ಮುರಳಿ ಶರ್ಮಾ ಮತ್ತು ದೇವ್ ಗಿಲ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಇದು ಸಸ್ಪೆನ್ಸ್ ಕ್ರೈಂ ಥ್ರಿಲ್ಲರ್ ಕಥೆ ಎಂದು ಚಿತ್ರತಂಡ ಹೇಳಿಕೊಂಡಿದೆ. ಉಜ್ಜಲ್ ಎಂಬುವವರು ಸಂಗೀತ ನಿರ್ದೇಶನ ಮಾಡಿದ್ದಾರೆ.

  ಅರ್ಜುನ್ ಜನ್ಯಗೆ ಶ್ರೇಯಸ್ಸು

  ಅರ್ಜುನ್ ಜನ್ಯಗೆ ಶ್ರೇಯಸ್ಸು

  ಈ ಚಿತ್ರದ ಮೋಷನ್ ಪೋಸ್ಟರ್ ಹಾಗೂ ಟೀಸರ್ ಎರಡರಲ್ಲಿಯೂ 'ರಾಬರ್ಟ್' ಚಿತ್ರದ ಟೀಸರ್‌ನಲ್ಲಿನ ಹಿನ್ನೆಲೆ ಸಂಗೀತಕ್ಕೆ ಸಂಪೂರ್ಣ ಹೋಲಿಕೆ ಇದೆ. ಈ ಚಿತ್ರದ ಹಿನ್ನೆಲೆ ಸಂಗೀತದ ಶ್ರೇಯಸ್ಸು ಅರ್ಜುನ್ ಜನ್ಯ ಅವರಿಗೆ ಸೇರಬೇಕು. ಆದರೆ 'ರಾವಣ ಲಂಕಾ' ಚಿತ್ರದವರು ಅದನ್ನು ಕಾಪಿ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

  ಚಿತ್ರತಂಡದ ವಿರುದ್ಧ ಅಸಮಾಧಾನ

  ಚಿತ್ರತಂಡದ ವಿರುದ್ಧ ಅಸಮಾಧಾನ

  ರಾವಣ ಲಂಕಾ ಚಿತ್ರದಲ್ಲಿ 'ರಾಬರ್ಟ್' ಚಿತ್ರದ ಬಿಜಿಎಂ ಬಳಸಲಾಗಿದೆ ಎನ್ನುವುದು ತಿಳಿಯುತ್ತಿದ್ದಂತೆಯೇ ದರ್ಶನ್ ಅಭಿಮಾನಿಗಳು ತೆಲುಗು ಚಿತ್ರತಂಡವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಇದು ರಾಬರ್ಟ್ ಚಿತ್ರದ ಸಂಗೀತ. ಅದನ್ನು ಕದ್ದಿದ್ದೀರಿ ಎಂದು ಜಾಡಿಸಿದ್ದಾರೆ.

  ಚಿತ್ರ ಬಿಡುಗಡೆ ಮುಂದಕ್ಕೆ?

  ಚಿತ್ರ ಬಿಡುಗಡೆ ಮುಂದಕ್ಕೆ?

  ಏಪ್ರಿಲ್ 9ರಂದು ಚಿತ್ರತಂಡ 'ರಾಬರ್ಟ್' ಚಿತ್ರವನ್ನು ತೆರೆಗೆ ತರಲು ಉದ್ದೇಶಿಸಿತ್ತು. ಆದರೆ ಹಾಡುಗಳ ಚಿತ್ರೀಕರಣ ಮುಂದಕ್ಕೆ ಹೋಗಿರುವುದರಿಂದ ಸಿನಿಮಾ ಬಿಡುಗಡೆ ದಿನಾಂಕವೂ ಮುಂದಕ್ಕೆ ಹೋಗುವ ಸಾಧ್ಯತೆ ಇದೆ. ಅದಕ್ಕೂ ಮುನ್ನ ಅಭಿಮಾನಿಗಳಿಗೆ ಕಲಬುರಗಿಯಲ್ಲಿ ರಾಬರ್ಟ್ ಆಡಿಯೋದ ಗ್ರ್ಯಾಂಡ್ ರಿಲೀಸ್ ನಡೆಯಲಿದೆ ಎನ್ನಲಾಗಿದೆ. ಈ ಬಗ್ಗೆ ಚಿತ್ರತಂಡ ಇನ್ನೂ ಅಧಿಕೃತ ಮಾಹಿತಿ ನೀಡಿಲ್ಲ.

  English summary
  Fans of actor Darshan accused Telugu movie Ravana Lanka directed by RNS Raju has copied the BGM of Roberrt movie in its teaser.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X