ಶಬರಿಮಲೆಯ ಅಯ್ಯಪ್ಪನ ಸನ್ನಿಧಾನದಲ್ಲಿ 'ಕ್ರಾಂತಿ'ಗೆ ಆಲ್ ದಿ ಬೆಸ್ಟ್ ಎಂದ ದರ್ಶನ್ ಅಭಿಮಾನಿಗಳು

ಚಾಲೆಂಜಿಂಗ್ ಸ್ಟಾರ್ ಅಭಿಮಾನಿಗಳು ಕ್ರಾಂತಿ ಸಿನಿಮಾಗಾಗಿ ಕಾದು ಕೂತಿದ್ದಾರೆ. ದರ್ಶನ್ 55ನೇ ಸಿನಿಮಾ ಅದೂ, ಪ್ಯಾನ್ ಇಂಡಿಯಾ ಸಿನಿಮಾ ಹೇಗಿರುತ್ತೆ ಅಂತ ನೋಡುವ ಕೌತುಕ ಹೆಚ್ಚಾಗಿದೆ. ಇನ್ನೊಂದು ಕಡೆ 'ಕ್ರಾಂತಿ' ತಂಡ ಸದ್ದಿಲ್ಲದೆ ಸಿನಿಮಾ ಶೂಟಿಂಗ್ ಮಾಡುತ್ತಿದೆ. ಕೊರೊನಾ ಮೂರನೇ ಬಂದರೂ ಬೆಚ್ಚಿಬೀಳದ ತಂಡ ಕೊಂಚ ಗ್ಯಾಪ್ ಕೊಟ್ಟು ಮತ್ತೆ ಶೂಟಿಂಗ್ ಮಾಡುವುದಕ್ಕೆ ಸಜ್ಜಾಗಿ ನಿಂತಿದೆ. ಈ ಮಧ್ಯೆ ಅಭಿಮಾನಿಗಳು ಶಬರಿಮಲೆಗೆ ಪಯಣ ಬೆಳೆಸಿದ್ದಾರೆ.

Recommended Video

ದರ್ಶನ್ ಕ್ರಾಂತಿ ಶೂಟಿಂಗ್ ನಿಂತುಹೋಯ್ತಾ..?

ಯಜಮಾನ ಸಿನಿಮಾದಲ್ಲಿ ಅಡುಗೆ ಎಣ್ಣೆ 'ಕ್ರಾಂತಿ' ಮಾಡಿದ್ದ ದರ್ಶನ್, ಈ ಬಾರಿ ಅಕ್ಷರ ಕ್ರಾಂತಿ ಮಾಡಲಿದ್ದಾರೆ. 'ಯಜಮಾನ' ಸಿನಿಮಾದ ಬಳಿಕ ಮತ್ತದೇ ತಂಡ 'ಕ್ರಾಂತಿ' ಚಿತ್ರದಲ್ಲೂ ಒಂದಾಗಿದೆ. ಈ ಪ್ಯಾನ್ ಇಂಡಿಯಾ ಸಿನಿಮಾವನ್ನು ವಿ. ಹರಿಕೃಷ್ಣ ನಿರ್ದೇಶನ ಮಾಡುತ್ತಿದ್ದಾರೆ. ಐದು ಭಾಷೆಯಲ್ಲಿ ಬಿಡುಗಡೆಯಾಗಲಿರುವ ಈ ಸಿನಿಮಾ ಯಶಸ್ವಿಯಾಗಬೇಕು ಅಂತ ದರ್ಶನ್ ಅಭಿಮಾನಿಗಳು ಶಬರಿಮಲೆ ಅಯ್ಯಪ್ಪನ ಮುಂದೆ ಬೇಡಿಕೊಂಡಿದ್ದಾರೆ.

 ಅಯ್ಯಪ್ಪ ಸ್ವಾಮಿ ಮುಂದೆ 'ಕ್ರಾಂತಿ' ಪೋಸ್ಟರ್

ಅಯ್ಯಪ್ಪ ಸ್ವಾಮಿ ಮುಂದೆ 'ಕ್ರಾಂತಿ' ಪೋಸ್ಟರ್

ದರ್ಶನ್ ಅಭಿಮಾನಿಗಳ ಕಣ್ಣು ಕ್ರಾಂತಿ ಸಿನಿಮಾದ ಮೇಲಿದೆ. 'ರಾಬರ್ಟ್' ಸಿನಿಮಾ ಬಿಡುಗಡೆಯಾಗಿ ಹೆಚ್ಚು ಕಡಿಮೆ ಒಂದು ವರ್ಷ ಸಮೀಸುತ್ತಿದೆ. ಇಷ್ಟರೊಳಗೆ ಮತ್ತೊಂದು ರೆಡಿಯಾಗಿ ಬಿಡುತ್ತಿತ್ತು. ಆದರೆ, ಕೊರೊನಾದಿಂದಾಗಿ ಡಿ ಬಾಸ್ ಸಿನಿಮಾ ಕೊಂಚ ತಡವಾಗಿಯೇ ಸೆಟ್ಟೇರಿತ್ತು. ಆದರೂ 'ಕ್ರಾಂತಿ' ಸಿನಿಮಾದ ಶೂಟಿಂಗ್ ವೇಗವಾಗಿ ನಡೆಯುತ್ತಿದೆ. ಹೀಗಾಗಿ ಸಿನಿಮಾ ಯಾವುದೇ ಅಡಚಣೆ ಇಲ್ಲದೆ ನಡೆಯಬೇಕು ಅಂತ ಗುಬ್ಬಿಯ ಕರುನಾಡ ಏಕಚಕ್ರಾಧಿಪತಿ ದರ್ಶನ್ ಬಾಸ್ ಅಭಿಮಾನಿಗಳ ಸಂಘ ಶಬರಿಮಲೆ ಬೆಟ್ಟದ ಮೇಲೆ ದೇವರ ಸನ್ನಿದಿಯ ಬಳಿ 'ಕ್ರಾಂತಿ' ಚಿತ್ರಕ್ಕೆ ಆಲ್ ದಿ ಬೆಸ್ಟ್ ಎಂದಿದ್ದಾರೆ.

'ಕ್ರಾಂತಿ'ಗೆ ಶುಭ ಹಾರೈಸಿದ ದರ್ಶನ್ ಫ್ಯಾನ್ಸ್

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳು ಅಂದರೆ ಹಾಗೇ, ಅಭಿಮಾನ ಯಾವತ್ತೂ ಉತ್ತುಂಗದಲ್ಲಿರುತ್ತೆ. ದರ್ಶನ್ ಹಾಗೂ ಅವರ ಸಿನಿಮಾಗಳನ್ನು ಸದಾ ಇಷ್ಟ ಪಡುತ್ತಲೇ ಇರುತ್ತಾರೆ. ಹೀಗಾಗಿ ಶಬರಿಮಲೆ ಬೆಟ್ಟವೇರಿ, ಅಲ್ಲಿ ಅಯ್ಯಪ್ಪ ಸ್ವಾಮಿಯ ಮುಂದೆ 'ಕ್ರಾಂತಿ' ಸಿನಿಮಾದ ಪೋಸ್ಟರ್ ಹಿಡಿದು, ಸಿನಿಮಾಗೆ ಒಳ್ಳೆಯದಾಗಲಿ ಎಂದಿ ಬೇಡಿಕೊಂಡಿದ್ದಾರೆ. ಇದ ವಿಡಿಯೋವನ್ನೂ ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ಶೇರ್ ಮಾಡಿಕೊಂಡಿದ್ದಾರೆ.

 ಅಭಿಮಾನಕ್ಕೆ ಕೈ ಮುಗಿದ ಹರಿಕೃಷ್ಣ

ಅಭಿಮಾನಕ್ಕೆ ಕೈ ಮುಗಿದ ಹರಿಕೃಷ್ಣ

ದರ್ಶನ್ ಅಭಿಮಾನಿಗಳು ವಿಡಿಯೋವನ್ನು ಶೇರ್ ಮಾಡುತ್ತಿದ್ದಂತೆ 'ಕ್ರಾಂತಿ' ಸಿನಿಮಾದ ನಿರ್ದೇಶಕ ಪ್ರತಿಕ್ರಿಯೆ ನೀಡಿದ್ದಾರೆ. ಟ್ವೀಟರ್ ಅಭಿಮಾನಿಗಳ ವಿಡಿಯೋವನ್ನು ರೀ ಟ್ವೀಟ್ ಮಾಡಿ, ಕೈ ಮುಗಿಯುತ್ತಿರುವ ಎಮೊಜಿಯನ್ನು ಹಾಕಿದ್ದಾರೆ. ಅಭಿಮಾನಿಗಳ ಅಭಿಮಾನಕ್ಕೆ ನಿರ್ದೇಶಕ ವಿ ಹರಿಕೃಷ್ಣ ಫುಲ್ ಫಿದಾ ಆಗಿದ್ದಾರೆ. ಅಭಿಮಾನಿಗಳು ಕೂಡ ಈ ವಿಡಿಯೋವನ್ನು ಶೇರ್ ಮಾಡಿ ಅಭಿಮಾನವನ್ನು ಟ್ವಿಟರ್‌ನಲ್ಲಿ ಶೇರ್ ಮಾಡಿದ್ದಾರೆ.

 ಪ್ಯಾನ್ ಇಂಡಿಯಾ ಸಿನಿಮಾ 'ಕ್ರಾಂತಿ'

ಪ್ಯಾನ್ ಇಂಡಿಯಾ ಸಿನಿಮಾ 'ಕ್ರಾಂತಿ'

ದರ್ಶನ್ ಅಭಿಮಾನಿಗಳ ಹರ್ಷಕ್ಕೊಂದು ಕಾರಣವಿದೆ. ದರ್ಶನ್ ಸಿನಿಮಾ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಬಿಡುಗಡೆಯಾಗುತ್ತಿದೆ. ಹಿಂದಿ, ತಮಿಳು, ತೆಲುಗು, ಮಲಯಾಳಂ ಸೇರಿದಂತೆ ಐದು ಭಾಷೆಗಳಿಗೆ ಡಬ್ ಆಗುತ್ತಿದೆ. ಸಿನಿಮಾ ಮುಹೂರ್ತದ ವೇಳೆನೇ ಐದೂ ಭಾಷೆಯ 'ಕ್ರಾಂತಿ' ಚಿತ್ರದ ಪೋಸ್ಟರ್ ರಿಲೀಸ್ ಆಗಿತ್ತು. ಹೀಗಾಗಿ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಸಿನಿಮಾ ಹೇಗಿರುತ್ತೆ? ಹರಿಕೃಷ್ಣ ನಿರ್ದೇಶನ. ಮತ್ತೆ ದರ್ಶನ್ ಹಾಗೂ ರಚಿತಾ ರಾಮ್ ಕಾಂಬಿನೇಷನ್ ಅಭಿಮಾನಿಗಳಲ್ಲಿ ಕೌತುಕವನ್ನು ದುಪ್ಪಟ್ಟು ಮಾಡಿದೆ.

More from Filmibeat

English summary
Darshan fans prays for kannada movie Kranti in shabarimala. Challenging star Darshan fans went to shabarimal temple to pray for Kranti Kannada movie success.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X