'ದಾಖಲೆ ಇರುವುದು ಡಿ ಬಾಸ್ ಹೆಸರಲ್ಲಿ': ಆಡಿಯೋ ಕಂಪೆನಿ ವಿರುದ್ಧ ದರ್ಶನ್ ಅಭಿಮಾನಿಗಳ ಆಕ್ರೋಶ
ಲಾಕ್‌ಡೌನ್ ಅವಧಿಯಲ್ಲಿ ಸಿನಿಮಾಗಳ ಬಿಡುಗಡೆ ಇಲ್ಲದಿರುವುದರಿಂದ ಸ್ಟಾರ್‌ಗಳು ಮತ್ತು ಅವರ ಫ್ಯಾನ್ಸ್ ನಡುವಿನ ಪೈಪೋಟಿ ಕಡಿಮೆಯಾಗಿತ್ತು. ಆದರೆ ಸ್ಯಾಂಡಲ್‌ವುಡ್‌ನಲ್ಲಿ ಮತ್ತೆ ಫ್ಯಾನ್ಸ್ ವಾರ್ ಶುರುವಾಗುವ ಲಕ್ಷಣ ಕಂಡುಬಂದಿದೆ.
Recommended Video
ಸೋಮವಾರ ಬಿಡುಗಡೆಯಾದ ಕೋಟಿಗೊಬ್ಬ 3 ಚಿತ್ರದ ಮೊದಲ ಲಿರಿಕಲ್ ವಿಡಿಯೋ ದಾಖಲೆಯ ವೀಕ್ಷಣೆ ಕಂಡಿದೆ ಎಂದು ಆಡಿಯೋ ಕಂಪೆನಿ ಆನಂದ್ ಆಡಿಯೋ ತಿಳಿಸಿದೆ. ಕನ್ನಡ ಚಿತ್ರರಂಗದ ಇತಿಹಾಸದಲ್ಲಿಯೇ ಲಿರಿಕಲ್ ವಿಡಿಯೋ ಅತಿ ವೇಗವಾಗಿ ಒಂದು ಮಿಲಿಯನ್ ಹಿಟ್ಸ್ ಪಡೆದಿರುವುದಾಗಿ ಅದು ತಿಳಿಸಿದೆ. ಯೂಟ್ಯೂಬ್‌ನಲ್ಲಿ ವಿಡಿಯೋ ಬಿಡುಗಡೆಯಾದ 3.20 ಗಂಟೆಯಲ್ಲಿಯೇ 1 ಮಿಲಿಯನ್ ವೀವ್ಸ್ ದಾಟಿರುವುದಾಗಿ ಹೇಳಿದೆ.
'ಆಕಾಶಾನೆ ಅದರಿಸುವ' ಹಾಡು ಯೂಟ್ಯೂಬ್‌ನಲ್ಲಿ ಸಕತ್ ಹಿಟ್ ಆಗಿದೆ. ಟ್ರೆಂಡಿಂಗ್‌ನಲ್ಲಿ ಮೊದಲ ಸ್ಥಾನದಲ್ಲಿದೆ. ಆದರೆ ದಾಖಲೆಯ ವೀಕ್ಷಣೆಯ ಬಗ್ಗೆ ಆನಂದ್ ಆಡಿಯೋ ನೀಡಿರುವ ಮಾಹಿತಿ ಬಗ್ಗೆ ದರ್ಶನ್ ಅಭಿಮಾನಿಗಳು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಮುಂದೆ ಓದಿ...

'ದಾಖಲೆ ಇರುವುದು ಡಿ ಬಾಸ್ ಹೆಸರಲ್ಲಿ'
ಈ ಹಿಂದಿನ ದಾಖಲೆಗಳ ಬಗ್ಗೆ ಸ್ಪಷ್ಟಪಡಿಸಿಕೊಳ್ಳಿ, ಬಳಿಕವೇ ಈ ರೀತಿ ಪೋಸ್ಟ್ ಮಾಡಿ. ಈಗಲೂ ಲಿರಿಕಲ್ ವಿಡಿಯೋವೊಂದು ಅತ್ಯಂತ ವೇಗವಾಗಿ 1 ಮಿಲಿಯನ್ ವೀವ್ಸ್ ಪಡೆದಿರುವ ದಾಖಲೆ ದರ್ಶನ್ ಅವರ ಹೆಸರಲ್ಲೇ ಇದೆ ಎಂದಿದ್ದಾರೆ.

ಮೂರು ಗಂಟೆಯಲ್ಲಿಯೇ ಮುಟ್ಟಿತ್ತು...
ದರ್ಶನ್ ಅಭಿನಯದ 'ಯಜಮಾನ' ಚಿತ್ರದ ಶಿವನಂದಿ ಲಿರಿಕಲ್ ವಿಡಿಯೋ ಬಿಡುಗಡೆಯಾದ ಕೇವಲ 3 ಗಂಟೆಯಲ್ಲಿಯೇ 1 ಮಿಲಿಯನ್ ಆರ್ಗಾನಿಕ್ ವೀವ್ಸ್‌ಗಳನ್ನು ಪಡೆದುಕೊಂಡಿತ್ತು. ಇದು ಕನ್ನಡ ಚಿತ್ರರಂಗದ ಸಾರ್ವಕಾಲಿಕ ದಾಖಲೆ ಎಂದು ತಿಳಿಸಿದ್ದಾರೆ.

'ಈ ದಾಖಲೆಯನ್ನು ಮುರಿದಿಲ್ಲ'
ಆನಂದ್ ಆಡಿಯೋ ತಪ್ಪು ಮಾಹಿತಿ ನೀಡುವ ಮೂಲಕ ಅಭಿಮಾನಿಗಳ ದಾರಿ ತಪ್ಪಿಸುತ್ತಿದ್ದಾರೆ. ಆನಂದ್ ಆಡಿಯೋದ ಚಾನೆಲ್‌ನಲ್ಲಿ ಅದು ಅತಿ ವೇಗವಾಗಿ ಒಂದು ಮಿಲಿಯನ್ ವೀಕ್ಷಣೆ ಕಂಡಿರುವ ಲಿರಿಕಲ್ ವಿಡಿಯೋ ಇರಬಹುದು. ಆದರೆ ಡಿ ಬೀಟ್ಸ್‌ನಲ್ಲಿ ಪ್ರಸಾರವಾದ 'ಶಿವನಂದಿ' ಲಿರಿಕಲ್ ವಿಡಿಯೋದ ಹೆಸರಿನ ದಾಖಲೆಯನ್ನು ಮುರಿಯಲು ಸಾಧ್ಯವಿಲ್ಲ ಎಂದು ಆರೋಪಿಸಿದ್ದಾರೆ.

500K ವೀವ್ಸ್ ಯಾರು ಮೊದಲು?
ಅತಿ ವೇಗವಾಗಿ 500 ಕೆ ವೀವ್ಸ್ ಪಡೆದುಕೊಂಡಿದ್ದು ಕೋಟಿಗೊಬ್ಬ 3 ಚಿತ್ರದ ಟೈಟಲ್ ಟ್ರ್ಯಾಕ್. 46 ನಿಮಿಷದಲ್ಲಿ 500 ಕೆ ವೀವ್ಸ್ ಬಂದಿದೆ. 'ಯಜಮಾನ' ಚಿತ್ರದ 'ಶಿವನಂದಿ' ಈ ದಾಖಲೆಯನ್ನು 60 ನಿಮಿಷದಲ್ಲಿ ಪೂರ್ಣಗೊಳಿಸಿತ್ತು. ಆದರೆ ಒಂದು ಮಿಲಿಯನ್ ದಾಟಿದ್ದು ಮೊದಲು ಶಿವನಂದಿ ಹಾಡು ಎಂದು ಡಿ ಬಾಸ್ ಅಭಿಮಾನಿಗಳು ವಾದಿಸಿದ್ದಾರೆ.

ಟಾಪ್‌ನಲ್ಲಿದೆ ಕೋಟಿಗೊಬ್ಬ ಲಿರಿಕಲ್ ವಿಡಿಯೋ
24 ಗಂಟೆಯ ವೀವ್ಸ್ ಲೆಕ್ಕಾಚಾರದಲ್ಲಿ 'ಕೋಟಿಗೊಬ್ಬ 3' ಚಿತ್ರದ 'ಆಕಾಶಾನೆ ಅದರಿಸುವ' ಲಿರಿಕಲ್ ವಿಡಿಯೋ ಟಾಪ್‌ನಲ್ಲಿದೆ. ಒಂದೇ ದಿನದಲ್ಲಿ ಅದು 2.7 ಮಿಲಿಯನ್ ವೀವ್ಸ್ ಪಡೆದುಕೊಂಡಿದೆ. ಅದರ ನಂತರದಲ್ಲಿ 'ಯಜಮಾನ' ಚಿತ್ರದ 'ಶಿವನಂದಿ...' ಲಿರಿಕಲ್ ವಿಡಿಯೋ 2.5 ಮಿಲಿಯನ್ ವೀವ್ಸ್ ಪಡೆದಿತ್ತು. ಮೂರನೇ ಸ್ಥಾನದಲ್ಲಿಯೂ ದರ್ಶನ್ ಚಿತ್ರವಿದ್ದು, 'ರಾಬರ್ಟ್' ಚಿತ್ರದ 'ದೋಸ್ತಾ ಕಣೋ' 2.2 ಮಿಲಿಯನ್ ವೀವ್ಸ್ ಗಳಿಸಿದೆ.


Click it and Unblock the Notifications











