ಆಸ್ಪತ್ರೆಯಲ್ಲಿದ್ದ ರಾಯ್ ಆಂಟೋನಿ ಡಿಸ್ಚಾರ್ಜ್, ದರ್ಶನ್ ಯಾವಾಗ.?

Recommended Video

ಯಾವಾಗ ದರ್ಶನ್ ಆಸ್ಪತ್ರೆಯಿಂದ ಹೊರ ಬರೋದು..!? | Filmibeat Kannada

ಮೈಸೂರಿನ ಹಿನಕಲ್ ಬಳಿಯ ರಿಂಗ್ ರಸ್ತೆಯಲ್ಲಿ ನಡೆದ ಕಾರು ಅಪಘಾತದಲ್ಲಿ ದರ್ಶನ್, ದೇವರಾಜ್ ಸೇರಿದಂತೆ ನಾಲ್ಕು ಜನರಿಗೆ ಗಾಯಗಳಾಗಿತ್ತು. ನಂತರ ಮೈಸೂರಿನ ಕೊಲಂಬಿಯಾ ಏಷ್ಯಾ ಆಸ್ಪತ್ರೆಗೆ ಎಲ್ಲರೂ ದಾಖಲಾಗಿದ್ದರು.

ದೇವರಾಜ್, ಪ್ರಜ್ವಲ್ ದೇವರಾಜ್ ಈಗಾಗಲೇ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದರು. ಇದೀಗ, ದರ್ಶನ್ ಆಪ್ತ, ಅಪಘಾತ ನಡೆದ ವೇಳೆ ಕಾರು ಚಾಲನೆ ಮಾಡುತ್ತಿದ್ದ ರಾಯ್ ಆಂಟೋನಿ ಡಿಸ್ಚಾರ್ಜ್ ಆಗಿದ್ದಾರೆ.

ಕಾರು ಅಪಘಾತದಲ್ಲಿ ರಾಯ್ ಅಂಟೋನಿ ಕಾಲಿಗೂ ಮತ್ತು ಕೈಗೆ ಪೆಟ್ಟಾಗಿತ್ತು. ಅವರಿಗೂ ಕೂಡ ಶಸ್ತ್ರ ಚಿಕಿತ್ಸೆ ಮಾಡಲಾಗಿದೆಯಂತೆ. ಈಗ ಐದು ದಿನಗಳ ನಂತರ ಮನೆಗೆ ತೆರಳಿದ್ದಾರೆ.

Darshan friend Ray anthony Discharge from hospital

ದರ್ಶನ್ ಅವರು ಯಾವಾಗ ಡಿಸ್ಚಾರ್ಜ್ ಆಗ್ತಾರೆ ಎಂಬುದರ ಬಗ್ಗೆ ಇನ್ನು ನಿಖರವಾದ ಮಾಹಿತಿ ಸಿಕ್ಕಿಲ್ಲ. ದರ್ಶನ್ ಬಲಗೈಗೆ ಪೆಟ್ಟಾಗಿದ್ದು, ಶಸ್ತ್ರ ಚಿಕಿತ್ಸೆ ಮಾಡಿದ್ದಾರೆ. ಕೈಗೆ ಪ್ಲೇಟ್ ಹಾಕಿದ್ದು, ಏಂಟು ವಾರ ವಿಶ್ರಾಂತಿ ಪಡೆಯಬೇಕು ಎಂದು ವೈದ್ಯರು ಸೂಚಿಸಿದ್ದಾರೆ.

ಇನ್ನು ಈ ಅಪಘಾತ ಹಿನ್ನಲೆ ಕಾರು ಚಾಲನೆ ಮಾಡುತ್ತಿದ್ದ ರಾಯ್ ಆಂಟೋನಿ ಅವರ ವಿರುದ್ಧ ವಿವಿಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಕಾರು ಚಾಲಕನ ನಿರ್ಲಕ್ಷ್ಯವೇ ಈ ಅಪಘಾತಕ್ಕೆ ಕಾರಣ ಎಂದು ಅರೋಪಿಯನ್ನಾಗಿಸಲಾಗಿದೆ.

ಕಳೆದ ಭಾನುವಾರ ರಾತ್ರಿ (ಸೆಪ್ಟೆಂಬರ್ 23) ದರ್ಶನ್, ಹಿರಿಯ ನಟ ದೇವರಾಜ್, ಪ್ರಜ್ವಲ್ ದೇವರಾಜ್ ಮತ್ತು ರಾಯ್ ಆಂಟೋನಿ ಚಲಿಸುತ್ತಿದ್ದ ಆಡಿ ಕಾರು ನಿಯಂತ್ರಣ ತಪ್ಪಿ ಡಿವೈಡರ್ ಗೆ ಡಿಕ್ಕಿ ಹೊಡೆದಿತ್ತು. ದರ್ಶನ್ ಗೆ ಐದನೇ ದಿನವೂ ಚಿಕಿತ್ಸೆ ಮುಂದುವರೆದಿದೆ.

More from Filmibeat

English summary
Darshan friend Ray anthony has discharged from Columbia Asia Hospital today (September 28th).
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X