ರಮೇಶ್ ಅರವಿಂದ್ ಕಾರಿನವರೆಗೂ ಬೀಳ್ಕೊಟ್ಟ ದರ್ಶನ್: "ಸರಳತೆಯ ಸರದಾರ ನಮ್ಮ ದಾಸ" ಎಂದ ಫ್ಯಾನ್ಸ್
ಅಭಿಷೇಕ್ ಅಂಬರೀಶ್ ಹಾಗೂ ಅವಿವಾ ಬಿದ್ದಪ್ಪ ಆರತಕ್ಷತೆ ಅದ್ಧೂರಿಯಾಗಿ ನಡೆದಿದೆ. ಚಿತ್ರರಂಗ ಹಾಗೂ ರಾಜಕೀಯ ಕ್ಷೇತ್ರದ ಗಣ್ಯರು ಆಗಮಿಸಿ ನವ ಜೋಡಿಗೆ ಶುಭಾಶಯಗಳನ್ನು ತಿಳಿಸಿದ್ದರು. ಅರಮನೆ ಮೈದಾನದಲ್ಲಿ ನಡೆದ ಆರತಕ್ಷತೆ ಸಿಕ್ಕಾಪಟ್ಟೆ ಸುದ್ದಿಯಾಗಿತ್ತು.
ಸ್ಯಾಂಡಲ್‌ವುಡ್‌ನಿಂದ ರಿಷಬ್ ಶೆಟ್ಟಿ, ರಮ್ಯಾ, ಪ್ರಜ್ವಲ್ ದೇವರಾಜ್ ದಂಪತಿ, ಶತ್ರುಘ್ನ ಸಿನ್ಹಾ ಸೇರಿದಂತೆ ದಿಗ್ಗಜರು ಆಗಮಿಸಿದ್ದರು. ಇದೇ ಆರತಕ್ಷತೆಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್, ರಮೇಶ್ ಅರವಿಂದ್ ಕೂಡ ಬಂದಿದ್ದರು.
ಅಭಿಷೇಕ್ ಅಂಬರೀಶ್ ಹಾಗೂ ಅವಿವಾ ಬಿದ್ದಪ್ಪ ಆರತಕ್ಷತೆ ಮುಗಿಸಿ ದರ್ಶನ್ ಹಿಂತಿರುಗುತ್ತಿದ್ದರು. ಇದೇ ವೇಳೆ ರಮೇಶ್ ಅರವಿಂದ್ ಕೂಡ ವಾಪಾಸ್ ಬರುತ್ತಿದ್ದರು. ಆಗ ದರ್ಶನ್ ತೋರಿದ ಗೌರವಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಕಳೆದೆರಡು ದಿನಗಳಿಂದ ಈ ವಿಡಿಯೋ ಯೂಟ್ಯೂಬ್‌ನಲ್ಲಿ ವೈರಲ್ ಆಗಿದೆ.

ದರ್ಶನ್-ರಮೇಶ್ ಅರವಿಂದ್ ವಿಡಿಯೋ ವೈರಲ್
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳೊಂದಿಗೆ, ಸ್ನೇಹಿತರೊಂದಿಗೆ, ಚಿತ್ರರಂಗದ ಸೀನಿಯರ್‌ಗಳೊಂದಿಗೆ ನಡೆದುಕೊಳ್ಳುವ ರೀತಿ ಗೊತ್ತೇ ಇದೆ. ಜೊತೆಗಿರುವ ಸ್ನೇಹಿತರ ಜೊತೆ ಯಾವಾಗಲೂ ಇರುತ್ತಾರೆ. ಎರಡು ದಿನಗಳ ಹಿಂದೆ ಯೂಟ್ಯೂಬ್‌ನಲ್ಲಿ ಒಂದು ವಿಡಿಯೋ ಪೋಸ್ಟ್ ಮಾಡಿದ್ದಾರೆ. ಅದೇ ಈಗ ದರ್ಶನ್ ಅಭಿಮಾನಿ ವಲಯದಲ್ಲಿ ವೈರಲ್ ಆಗುತ್ತಿದೆ.
ದರ್ಶನ್ ಹಾಗೂ ರಮೇಶ್ ಅರವಿಂದ್ ಮಾತಾಡಿಕೊಂಡು ಹೊರಗೆ ಬರುತ್ತಿದ್ದರು. ಇಬ್ಬರ ಕಾರು ಕೂಡ ಅಕ್ಕಪಕ್ಕದಲ್ಲಿಯೇ ನಿಂತಿತ್ತು. ಈ ಸಂದರ್ಭದಲ್ಲಿ ರಮೇಶ್ ಅರವಿಂದ್ ತಾನು ಹೋಗುತ್ತೇನೆ ಅಂತ ಹೇಳಿದರೂ, ಸ್ವತ: ದರ್ಶನ್ ಕಾರಿನ ಬಳಿ ಬಂದು ಕೂರಿಸಿ ತಮ್ಮ ಕಾರಿನ ಕಡೆಗೆ ಹಿಂತಿರುಗುತ್ತಾರೆ. ಇದೇ ನೋಡಿ ದರ್ಶನ್ ಅಭಿಮಾನಿಗಳು ಹೊಗಳಿಕೊಂಡಾಡುತ್ತಿದ್ದಾರೆ.
"ಸರಳತೆಯ ಸರದಾರ ನಮ್ಮ ದಾಸ"
ಚಾಲೆಂಜಿಂಗ್ ಸ್ಟಾರ್ ದರ್ಶನ್ ಸ್ವಭಾವಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ. ತನ್ನ ನೆಚ್ಚಿನ ನಟನನ್ನು ಹೊಗಳಿ ಅಟ್ಟಕ್ಕೇರಿಸಿದ್ದಾರೆ. "ಜನ ಯಾರೇ ಇರಲಿ. ಜಾಗ ಯಾವುದೇ ಇರಲಿ. ಡಿಬಾಸ್ ಅನ್ನೋ ಸೌಂಡ್ ಅಂತಹದ್ದು ಎಲ್ಲಾ ಕಡೆ ಇರುತ್ತೆ. ಡಿಬಾಸ್ ಬರಿ ಹೆಸರಲ್ಲ ನಮ್ಮ ಉಸಿರು." ಎಂದು ದಾಸನ ಅಭಿಮಾನಿಯೊಬ್ಬ ಕಮೆಂಟ್ ಮಾಡಿದ್ದಾನೆ.
ಹಾಗೇ ಮತ್ತೊಬ್ಬ "ಸರಳತೆಯ ಸರದಾರ ನಮ್ಮ ದಾಸ ದರ್ಶನ್...ಡಿ ಬಾಸ್" ಎಂದು ಹೇಳಿದ್ದಾನೆ. " ಒನ್ ಅಂಡ್ ಓನ್ಲಿ ದರ್ಶನ್" ಅಂತ ಮತ್ತೊಬ್ಬರು ಕೇಳಿದ್ದಾರೆ. ಹೀಗೆ ವಿಡಿಯೋಗೆ ದರ್ಶನ್ ಅಭಿಮಾನಿಗಳು ಸಾಲು ಸಾಲಾಗಿ ಕಮೆಂಟ್‌ಗಳನ್ನು ಮಾಡಿದ್ದಾರೆ.

'ಕಾಟೇರ'ದಲ್ಲಿ ಬ್ಯುಸಿ ದರ್ಶನ್
ನಟ ರಮೇಶ್ ಅರವಿಂದ್ ಈಗಷ್ಟೇ 'ವೀಕೆಂಡ್ ವಿತ್ ರಮೇಶ್' ಸೀಸನ್ 5 ಕಾರ್ಯಕ್ರಮವನ್ನು ಮುಗಿಸಿದ್ದಾರೆ. ಇನ್ನೊಂದು ಕಡೆ ಅವರ ಸಿನಿಮಾ 'ಶಿವಾಜಿ ಸೂರತ್ಕಲ್' ಸಿನಿಮಾ 50 ದಿನಗಳನ್ನು ಪೂರೈಸಿದೆ. ಈಗ ಹೊಸ ಪ್ರಾಜೆಕ್ಟ್‌ಗಳ ಕಡೆ ಮುಖ ಮಾಡುತ್ತಿದ್ದಾರೆ. ಇತ್ತ ದರ್ಶನ್ ಕೂಡ ಬ್ಯುಸಿಯಾಗಿದ್ದಾರೆ.
ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡ 'ಕಾಟೇರ' ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ತರುಣ್ ಸುಧೀರ್ ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದು, ರಾಕ್‌ಲೈನ್ ವೆಂಕಟೇಶ್ ನಿರ್ಮಾಣ ಮಾಡುತ್ತಿದ್ದಾರೆ. ಈ ಸಿನಿಮಾ ಬಳಿಕ ಸಾಲು ಸಾಲು ಸಿನಿಮಾಗಳು ಶೂಟಿಂಗ್ ಹಂತದಲ್ಲಿವೆ.


Click it and Unblock the Notifications











