"ನನ್ನ ಹಣೆಯಲ್ಲಿ ಏನು ಬರೆದಿದೆಯೋ ಅದೇ ಆಗುತ್ತೆ, ಇಲ್ಲಿಗೆ ಬರಬೇಡ"; ಪತ್ಮಿ ಮುಂದೆ ಭಾವುಕರಾದ ದರ್ಶನ್

ಚಾಲೆಂಜಿಂಗ್ ಸ್ಟಾರ್ ದರ್ಶನ್ ಎರಡನೇ ಬಾರಿ ಜೈಲು ಸೇರಿ ಕಷ್ಟ ಅನುಭವಿಸುತ್ತಿದ್ದಾರೆ. ಜೈಲಿನಲ್ಲಿ ಅವರನ್ನು ಹೊರಗಡೆ ಓಡಾಡುವುದಕ್ಕೆ ಬಿಡುತ್ತಿಲ್ಲ. ಮೂಲಭೂತ ಸೌಕರ್ಯಗಳನ್ನು ನೀಡುತ್ತಿಲ್ಲವೆಂದು ದರ್ಶನ್ ನ್ಯಾಯಾಧೀಶರ ಮುಂದೆ ಆರೋಪ ಮಾಡಿದ್ದರು. ಅಲ್ಲಿಂದ ದರ್ಶನ್ ಜೈಲು ವಾಸದ ಬಗ್ಗೆ ಅವರ ಕುಟುಂಬ ಹಾಗೂ ಅಭಿಮಾನಿಗಳು ಆತಂಕ ಹೊರ ಹಾಕುತ್ತಿದ್ದಾರೆ.

ಸತತ ಎರಡನೇ ವರ್ಷ ದರ್ಶನ್ ಅವರ ಅಚ್ಚು ಮೆಚ್ಚಿನ ದಸರಾ ಸಂಭ್ರಮವನ್ನು ಮಿಸ್ ಮಾಡಿಕೊಂಡಿದ್ದಾರೆ. ಮೈಸೂರಿನವರಾಗಿದ್ದರಿಂದ ದಸರಾ ಬಂತು ಅಂದರೆ, ದರ್ಶನ್ ವಾರಗಳ ಕಾಲ ಅಲ್ಲಿಯೇ ಬೀಡುಬಿಡುತ್ತಿದ್ದರು. ನಾಡ ಹಬ್ಬವನ್ನು ಸಂಭ್ರಮಿಸುತ್ತಿದ್ದರು. ಆದರೆ, ಈ ಬಾರಿ ಕೂಡ ಪರಪ್ಪನ ಅಗ್ರಹಾರ ಜೈಲು ಸೇರಿದ್ದರಿಂದ ದರ್ಶನ್‌ಗೆ ನಾಡ ಹಬ್ಬವನ್ನು ಸಂಭ್ರಮಿಸುವ ಭಾಗ್ಯ ಸಿಕ್ಕಿಲ್ಲ.

Darshan gets emotional in front of wife Vijayalakshmi in Parappana Agrahara Jail

ದಸರಾ ಮುಗಿದ ಬೆನ್ನಲ್ಲೇ ಪತ್ನಿ ವಿಜಯಲಕ್ಷ್ಮಿ ನಿನ್ನೆ (ಅಕ್ಟೋಬರ್ 3) ದರ್ಶನ್ ಭೇಟಿ ಮಾಡುವುದಕ್ಕೆ ಪರಪ್ಪನ ಅಗ್ರಹಾರ ಜೈಲಿಗೆ ಹೋಗಿದ್ದರು. ಅಲ್ಲಿ ಪತಿಯೊಂದಿಗೆ ಕೆಲ ಹೊತ್ತು ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. ಜೈಲಿನೊಳಗೆ ಸೌಲಭ್ಯಗಳು ಸಿಗದೆ ಕಂಗಾಲಾಗಿರುವ ದರ್ಶನ್ ಅವರ ಸ್ಥಿತಿಯನ್ನು ಕಂಡು ಪತ್ನಿ ವಿಜಯಲಕ್ಷ್ಮಿ ದರ್ಶನ್ ಭಾವುಕರಾಗಿದ್ದಾರೆಂದು ವರದಿಯಾಗಿದೆ. ಹಾಗೇ ದರ್ಶನ್ ಕೂಡ ತನ್ನ ಪರಿಸ್ಥಿತಿಯನ್ನು ಕಂಡು ಕಣ್ಣೀರು ಇಟ್ಟಿದ್ದಾರೆ.

ರೇಣುಕಾಸ್ವಾಮಿ ಕೇಸ್‌ಲ್ಲಿ ಈ ಮಟ್ಟಿಗೆ ತನ್ನ ಬದುಕನ್ನು ನರಕಕ್ಕೆ ತಳ್ಳಬಹುದೆಂದು ದರ್ಶನ್ ಎಣಿಸಿರಲಿಲ್ಲವೇನೋ. ಎರಡನೇ ಬಾರಿ ಜೈಲು ಸೇರಿರುವ ದರ್ಶನ್ ಜೈಲಿನಲ್ಲಿ ಸೌಲಭ್ಯಗಳು ಸಿಗುತ್ತಿಲ್ಲವೆಂದು ಆರೋಪಿಸುತ್ತಿದ್ದಾರೆ. ಹಾಸಿಗೆ ದಿಂಬು ಇಲ್ಲದೆ ಪರದಾಡುತ್ತಿದ್ದಾರೆ. ಜೈಲಿನ ಅಧಿಕಾರಿಗಳ ಮುಂದೆ ಎಷ್ಟೇ ಬೇಡಿಕೊಂಡರೂ ಸೌಲಭ್ಯಗಳನ್ನು ನೀಡುತ್ತಿಲ್ಲವೆಂದು ಹೇಳುತ್ತಿದ್ದಾರೆ. ಸದ್ಯ ನ್ಯಾಯಾಲಯದಲ್ಲಿ ಈ ಬಗ್ಗೆ ವಿಚಾರಣೆ ನಡೆಯುತ್ತಿದೆ.

ಪರಪ್ಪನ ಅಗ್ರಹಾರ ಜೈಲಿನ ಅಧಿಕಾರಿಗಳು ದರ್ಶನ್ ವಿಚಾರದಲ್ಲಿ ತುಂಬಾನೇ ಸ್ಟ್ರಿಕ್ಟ್ ಆಗಿದ್ದಾರೆ ಎನ್ನಲಾಗಿದೆ. ಹಾಸಿಗೆ, ದಿಂಬಿನ ಜೊತೆಗೆ ಕೂರುವುದಕ್ಕೆ ಖುಷಿಯಿಲ್ಲ. ಜೈಲಿನಲ್ಲಿ ದರ್ಶನ್‌ಗೆ ವಾಕ್ ಮಾಡುವುದಕ್ಕೂ ಬಿಡುತ್ತಿಲ್ಲ ಎಂದು ಆರೋಪಿಸಲಾಗಿದೆ. ಹೀಗಾಗಿ ದರ್ಶನ್ ತಮ್ಮ ಪತ್ನಿಯ ಮುಂದೆ ದೇಹಕ್ಕೆ ಆಕ್ಟಿವಿಟಿ ಇಲ್ಲದೆ ಪರದಾಡುವಂತಾಗಿದೆ ಎಂದು ಕಷ್ಟಗಳನ್ನು ಹೇಳಿಕೊಂಡು ಭಾವುಕರಾಗಿದ್ದಾರೆ ಎನ್ನಲಾಗಿದೆ.

ಇತ್ತ ದರ್ಶನ್ ನೋಡುವುದಕ್ಕೆ ಪತ್ನಿ ವಿಜಯಲಕ್ಷ್ಮಿ ಗಂಟೆಗಟ್ಟೆ ಜೈಲಿನ ಮುಂದೆ ನಿಲ್ಲಬೇಕಿದೆ. ಹೀಗಾಗಿ ದರ್ಶನ್ ತಮ್ಮ ಪತ್ನಿಗೆ ಇನ್ಮುಂದೆ ಇಲ್ಲಿಗೆ ಬಾರದೆ ಇರುವಂತೆ ಮನವಿ ಮಾಡಿದ್ದಾರೆಂದು ವರದಿಯಾಗಿದೆ. ಈ ಕಾರಣಕ್ಕೆ ದರ್ಶನ್ "ತನ್ನ ಹಣೆಬರಹದಲ್ಲಿ ಏನಿದೆಯೋ ಅದೇ ಆಗುತ್ತೆ. ಇನ್ಮುಂದೆ ನೀವು ಜೈಲಿಗೆ ಬರುವುದಕ್ಕೆ ಹೋಗಬೇಡ" ಎಂದು ದರ್ಶನ್ ತಮ್ಮ ಪತ್ನಿಯ ಬಳಿ ಮನವಿ ಮಾಡಿಕೊಂಡಿದ್ದಾರೆಂದೂ ಹೇಳಲಾಗಿದೆ.

ಮತ್ತೊಂದು ಕಡೆ ದರ್ಶನ್ ಜೈಲಿನಲ್ಲೂ ಕೂಡ ಒಂಟಿಯಾಗಿದ್ದಾರೆ ಎನ್ನಲಾಗಿದೆ. ಸುಪ್ರೀಂ ಕೋರ್ಟ್ ಆದೇಶದ ಮೇಲೆ ಎರಡನೇ ಬಾರಿ ಜೈಲು ಸೇರಿರುವ ದರ್ಶನ್ ಗ್ಯಾಂಗ್‌ನ ಸದಸ್ಯರು ಮುನಿಸಿಕೊಂಡಿರುವ ಬಗ್ಗೆನೂ ಸುದ್ದಿಯಾಗಿದೆ. ದರ್ಶನ್‌ರಿಂದಲೇ ಜೈಲು ಸೇರುವಂತಾಗಿರುವ ಬಗ್ಗೆ ಸಹಚರರು ಮಾತು ಬಿಟ್ಟಿದ್ದಾರೆ. ಹೀಗಾಗಿ ದರ್ಶನ್ ಜೈಲಿನಲ್ಲಿ ಒಂಟಿಯಾಗಿದ್ದಾರೆಂಬ ಮಾತು ಕೇಳಿ ಬರುತ್ತಿದೆ. ದರ್ಶನ್‌ಗೆ ಮತ್ತೊಮ್ಮೆ ಜಾಮೀನು ಸಿಗೋದು ಸದ್ಯಕ್ಕಂತೂ ಕಷ್ಟ ಎನ್ನಲಾಗುತ್ತಿದ್ದು, ಇನ್ನೂ ಕೆಲವು ತಿಂಗಳು ಇದೇ ಕಷ್ಟ ಅನುಭವಿಸಬೇಕಾಗಬಹುದು ಎನ್ನಲಾಗುತ್ತಿದೆ. ಸದ್ಯ ಸುಪ್ರೀಂ ಕೋರ್ಟ್ ಆದೇಶವನ್ನು ಪರಪ್ಪನ ಅಗ್ರಹಾರ ಅಧಿಕಾರಿಗಳು ಕಟ್ಟು ನಿಟ್ಟಾಗಿ ಪಾಲಿಸುತ್ತಿದ್ದಾರೆ ಅಂತೂ ವರದಿ ಮಾಡಲಾಗಿದೆ.

More from Filmibeat

English summary
Darshan gets emotional in front of wife Vijayalakshmi in Parappana Agrahara Jail.
Read more about: darshan vijayalakshmi sandalwood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X