ದರ್ಶನ್ ಎದೆ ಮೇಲೆ ಸೆಲೆಬ್ರೆಟೀಸ್ ಟ್ಯಾಟು: "ಗೆದ್ದಿರೋ ಮನಸ್ಸನ್ನು ಇನ್ನೂ ಎಷ್ಟು ಗೆಲ್ತೀರಾ ಬಾಸ್" ಎಂದ ಫ್ಯಾನ್ಸ್!

ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಅವರ ಅಭಿಮಾನಿಗಳ ನಡುವಿನ ಸಂಬಂಧವೇ ಬೇರೆ. ಅಭಿಮಾನ ತೋರಿಸುವುದರಲ್ಲಿ ಒಬ್ಬರಿಗಿಂತ ಒಬ್ಬರು ಮೇಲು. ಅದು ಈ ಹಿಂದೆನೂ ಅದೆಷ್ಟೋ ಸಂದರ್ಭಗಳಲ್ಲಿ ಗೊತ್ತಾಗಿದೆ.

ತಮ್ಮ ನೆಚ್ಚಿನ ನಟ ದರ್ಶನ್‌ಗಾಗಿ ಅಭಿಮಾನಿಗಳು ಪ್ರಾಣ ಬೇಕಾದ್ರೂ ಕೊಡ್ತಾರೆ. ದರ್ಶನ್ ಅಂದ್ರೆ ಫ್ಯಾನ್ಸ್‌ಗೆ ಅಷ್ಟೊಂದು ಪ್ರೀತಿ ಅಭಿಮಾನ. 'ಕ್ರಾಂತಿ' ಸಿನಿಮಾ ವೇಳೆನೂ ದರ್ಶನ್‌ ಬೆಂಬಲಕ್ಕೆ ನಿಂತಿದ್ದರು. ಇದೇ ಕಾರಣಕ್ಕೆ ಅವರಿಗೆ ಗೌರವ ಸೂಚಿಸಲು ದರ್ಶನ್ ಟ್ಯಾಟು ಹಾಕಿಸಿಕೊಂಡಿದ್ದಾರೆ.

'ನನ್ನ ಪ್ರೀತಿಯ ಸೆಲೆಬ್ರಿಟೀಸ್'

'ನನ್ನ ಪ್ರೀತಿಯ ಸೆಲೆಬ್ರಿಟೀಸ್'

ಚಾಲೆಂಜಿಂಗ್ ಸ್ಟಾರ್ ದರ್ಶನ್ ತನ್ನ ಎದೆಯ ಮೇಲೆ ಅಭಿಮಾನಿಗಳಿಗಾಗಿ ಟ್ಯಾಟು ಹಾಕಿಸಿಕೊಂಡಿದ್ದಾರೆ. ಬಹುಶ: ಅಭಿಮಾನಿಗಳಿಗಾಗಿ ಟ್ಯಾಟು ಹಾಕಿಸಿಕೊಂಡ ಸೂಪರ್‌ಸ್ಟಾರ್‌ಗಳಲ್ಲಿ ಇವರೇ ಮೊದಲಿಗರೇನೋ. ಆದರೆ, ದರ್ಶನ್ ಸೆಲೆಬ್ರಿಟೀಸ್‌ಗಳ ಹೆಸರಲ್ಲಿ ಟ್ಯಾಟು ಹಾಕಿಸಿಕೊಂಡಿದ್ದು, ಅಭಿಮಾನಿಗಳ ಹೃದಯವನ್ನು ಮತ್ತೊಮ್ಮೆ ಗೆದ್ದಿದ್ದಾರೆ. ತನ್ನ ಎದೆ ಮೇಲೆ "ನನ್ನ ಪ್ರೀತಿಯ ಸೆಲೆಬ್ರಿಟೀಸ್" ಎಂದು ಟ್ಯಾಟು ಹಾಕಿಸಿಕೊಂಡಿದ್ದಾರೆ.

ನಮ್ಮ ಸೆಲೆಬ್ರೆಟಿಗಳಿಗೋಸ್ಕರ ಈ ಟ್ಯಾಟು

ನಮ್ಮ ಸೆಲೆಬ್ರೆಟಿಗಳಿಗೋಸ್ಕರ ಈ ಟ್ಯಾಟು

ದರ್ಶನ್ ಟ್ಯಾಟು ಹಾಕಿಸಿಕೊಳ್ಳುವಾಗ ಅಪ್ತರು ವಿಡಿಯೋ ಮಾಡಿದ್ದಾರೆ. ಈ ವೇಳೆ ಟ್ಯಾಟು ಹಾಕಿಸಿಕೊಂಡಿದ್ದು ಯಾಕೆ ಅನ್ನೋದನ್ನು ಟ್ಯಾಟು ಕಲಾವಿದರ ಬಳಿ ಹೇಳಿಕೊಂಡಿದ್ದಾರೆ. ಅದು ವಿಡಿಯೋದಲ್ಲಿ ಸೆರೆಯಾಗಿದೆ. "ನಾನು ತೋರಿಸುವುದಕ್ಕಲ್ಲ. ನಮ್ಮ ಸೆಲೆಬ್ರೆಟಿಗಳಿಗೋಸ್ಕರ ಹಾಕಿಸಿಕೊಳ್ಳುತ್ತಿರೋದು. ಇದೊಂತರ ಅಡಿಕ್ಷನ್ ಇದು. ಆಕ್ಚ್ಯುಲಿ ಹಾಕಿಸೋಕೆ ಹೋಗಬಾರದು." ಎಂದು ದರ್ಶನ್ ಹೇಳಿದ್ದಾರೆ.

'ನನ್ನ ಸೆಲೆಬ್ರೆಟಿಗಳಿಗೆ ಕೊಡುತ್ತಿರುವ ಗೌರವ'

'ನನ್ನ ಸೆಲೆಬ್ರೆಟಿಗಳಿಗೆ ಕೊಡುತ್ತಿರುವ ಗೌರವ'

ದರ್ಶನ್ ತನ್ನ ಎದೆ ಮೇಲೆ ಟ್ಯಾಟು ಹಾಕಿಸಿಕೊಂಡು ಅಭಿಮಾನಿಗಳಿಗೆ ಗೌರವ ಸೂಚಿಸಿದ್ದಾರೆ. ಇಷ್ಟು ವರ್ಷ ಅಭಿಮಾನಿಗಳು ತೋರಿದ ಪ್ರೀತಿಗೆ ದರ್ಶನ್ ಅಬಾರಿಯಾಗಿದ್ದಾರೆ. ಹೀಗಾಗಿ ಈ ಟ್ಯೂಟು ಹಾಕಿಸಿಕೊಂಡಿದ್ದಾರೆ. "ನನ್ನ ಸೆಲೆಬ್ರೆಟಿಗಳಿಗೆ ಕೊಡುತ್ತಿರುವ ಗೌರವವಿದು. ಹೌದಪ್ಪ, ನೀವೆಲ್ಲಾ ಇಲ್ಲಿ ಇದ್ದೀರಾ ಅಂತ. ಅವರು ನಮಗೆಲ್ಲ ಅಷ್ಟು ಮಾಡ್ತಾರೆ ಅಂದ್ರೆ, ನಾನು ಇಷ್ಟು ಮಾಡ್ಲಿಲ್ಲ ಅಂದ್ರೆ ಹೇಗೆ?" ಎಂದು ದರ್ಶನ್ ಆಡಿದ ಮಾತು ವಿಡಿಯೋದಲ್ಲಿ ಸೆರೆಯಾಗಿದೆ.

ದರ್ಶನ್ ಟ್ಯಾಟುಗೆ ಫ್ಯಾನ್ಸ್ ದಿಲ್ ಖುಷ್

ದರ್ಶನ್ ಟ್ಯಾಟುಗೆ ಫ್ಯಾನ್ಸ್ ದಿಲ್ ಖುಷ್

ದರ್ಶನ್ ಟ್ಯಾಟು ವಿಡಿಯೋ ನೋಡಿ ಕೆಲ ಅಭಿಮಾನಿಗಳು ಹರ್ಷ ವ್ಯಕ್ತಪಡಿಸಿದ್ರೆ, ಮತ್ತೆ ಕೆಲವರು ಫುಲ್ ಫಿದಾ ಆಗಿದ್ದಾರೆ. ಇನ್ನು ಕೆಲವರು ಕಣ್ಣೀರು ಬಂತು ಅಂತ ಕಮೆಂಟ್ ಮಾಡಿದ್ದಾರೆ. "ಅಭಿಮಾನಿಗಳ ಟ್ಯಾಟೂ ಹಾಕಿಸಿಕೊಂಡ,ಕನ್ನಡದ ಮೊದಲ ನಟ" ಅಂತ ಅಭಿಮಾನಿಯೊಬ್ಬ ಅಂದ್ರೆ, ಇನ್ನೊಬ್ಬರು "ದೇಹ ಮಣ್ಣಿಗೆ, ಉಸಿರು ಹೆತ್ತವರಿಗೆ, ಅಭಿಮಾನ ದರ್ಶನ ಅಣ್ಣಂಗೆ" ಎಂದಿದ್ದಾರೆ. "ಅಣ್ಣ ನಿಜವಾಗಿಯೂ ಕಣ್ಣೀರು ಬಂತು. ನಿಮಗೆ ಎಷ್ಟು ನೋವಾಗಿದ್ದರು ಮರೆತು, ಶತ್ರುಗಳಿಗೂ ಒಳ್ಳೆಯದೇ ಬಯಸುವ ನಗು ಮುಖದ ಸಾರಥಿ ನನ್ನ ದರ್ಶನ್ ಅಣ್ಣ" ಅಂತ ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ. "ಗೆದ್ದಿರೋ ಮನಸ್ಸನ್ನು ಇನ್ನು ಎಷ್ಟು ಅಂತ ಗೆಲ್ತೀರಾ ಬಾಸ್" ಎಂದು ಮತ್ತೊಬ್ಬ ಅಭಿಮಾನಿ ಅಭಿಮಾನ ವ್ಯಕ್ತಪಡಿಸಿದ್ದಾನೆ.

More from Filmibeat

English summary
Darshan Gives Tribute to his Fans by tattooed Celebrities Text on his Chest, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X