ದರ್ಶನ್ ಮೇಲೆ ಕೊಲೆ ಆರೋಪ; ಮೈಸೂರಿನ ಫಾರ್ಮ್ ಹೌಸ್‌ನಲ್ಲಿ ಚಾಲೆಂಜಿಂಗ್ ಸ್ಟಾರ್ ಬಂಧನ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತೊಂದು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹಲವು ವರ್ಷಗಳಿಂದ ದರ್ಶನ್ ಹೆಸರು ನಟಿ ಪವಿತ್ರಾಗೌಡ ಜೊತೆ ತಳುಕು ಹಾಕಿಕೊಂಡಿತ್ತು. ಹಲವು ದಿನಗಳ ಹಿಂದಷ್ಟೇ ಪವಿತ್ರಾ ಗೌಡ ಹಾಗೂ ಪತ್ನಿ ವಿಜಯಲಕ್ಷ್ಮಿ ನಡುವೆ ದೊಡ್ಡ ಮಟ್ಟದಲ್ಲಿ ಕಿತ್ತಾಟ ನಡೆದಿತ್ತು. ಈಗ ದರ್ಶನ್ ಹೆಸರು ಕೊಲೆ ಪ್ರಕರಣದ ಹೆಸರಿನಲ್ಲಿ ಕೇಳಿ ಬಂದಿದೆ.

ದರ್ಶನ್ ಪ್ರೇಯಸಿ ಪವಿತ್ರಾ ಗೌಡ ಅವರಿಗೆ ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಎಂಬುವವರು ಅಶ್ಲೀಲ ಮೆಸೇಜ್ ಹಾಗೂ ಪೋಸ್ಟ್ ಮಾಡಿದ್ದರು. ಚಿತ್ರದುರ್ಗ ಮೂಲದವರಾದ ಇವರನ್ನು ಬೆಂಗಳೂರಿಗೆ ಕರೆದುಕೊಂಡು ಬರಲಾಗಿತ್ತು. ಬಳಿಕ ರಾಜರಾಜೇಶ್ವರಿ ನಗರದ ಶೇಡ್‌ನಲ್ಲಿ ಕರೆದ ತಂದು ದರ್ಶನ್ ಅಣತಿ ಮೇರೆಗೆ ಕೊಲೆ ಮಾಡಲಾಗಿದೆ ಎಂಬ ಆರೋಪ ಕೇಳಿ ಬರುತ್ತಿದೆ. ಈ ಸಂಬಂಧ ಮೈಸೂರಿನ ಫಾರ್ಮ್ ಹೌಸ್‌ನಲ್ಲಿ ದರ್ಶನ್ ಅವರನ್ನು ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ.

Darshan has arrested for the charges of killing Renuka Swamy

ಜೂನ್ 8ನೇ ತಾರೀಕು ರೇಣುಕಾಸ್ವಾಮಿ ಅವರ ಮರ್ಡರ್‌ ನಡೆದಿತ್ತು. ಕೊಲೆಯಾದ ಬಳಿಕ ಆ ದೇಹವನ್ನು ಕಾಮಾಕ್ಷಿ ಪಾಳ್ಯದ ಮೋರಿಗೆ ತಂದು ಹಾಕಲಾಗಿತ್ತು. ಈ ಪ್ರಕರಣ ಬೆಳಕಿಗೆ ಬಂದಾಗ ಜೂನ್ 9ನೇ ತಾರೀಕು ಡೆಡ್ ಬಾಡಿ ಪತ್ತೆಯಾಗಿತ್ತು. ಬಳಿಕ ಕಾಮಾಕ್ಷಿ ಪಾಳ್ಯ ಪೊಲೀಸರಿಗೆ ಡೆಡ್ ಬಾಡಿ ಸಿಕ್ಕಿತ್ತು. ಆ ಕ್ಷಣವೇ ಮೂರು ಮಂದಿ ಬಂದು ಪೊಲೀಸರಿಗೆ ಶರಣಾಗಿದ್ದರು.

ಪೊಲೀಸರಿಗೆ ರೇಣುಕಾಸ್ವಾಮಿ ಮರ್ಡರ್ ಮೇಲೆ ಸಂದೇಹ ಬಂದಿತ್ತು. ಹೀಗಾಗಿ ತನಿಖೆಯನ್ನು ಚುರುಕುಗೊಳಿಸಿದ್ದರು. ರೇಣುಕಾಸ್ವಾಮಿ ಕಾಲ್ ರೆಕಾರ್ಡ್ ಸೇರಿದಂತೆ ಹಲವು ರೀತಿಯಲ್ಲಿ ತನಿಖೆಯನ್ನು ಆರಂಭಿಸಿದ್ದರು. ಅಷ್ಟರಲ್ಲೇ ಈಗಾಗಲೇ ಶರಣಾಗಿದ್ದ ಮೂವರು ಒಂದೊಂದು ರೀತಿ ಹೇಳಿಕೆ ಕೊಟ್ಟಿದ್ದರು.

ಈ ವೇಳೆ ಮೂವರು ಕೊಟ್ಟ ಹೇಳಿಕೆಯಲ್ಲಿ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಹಾಗೂ ಪವಿತ್ರ ಗೌಡ ಇಬ್ಬರೂ ಹೆಸರು ಕೇಳಿ ಬಂದಿತ್ತು. ಈ ವಿಷಯ ಗೊತ್ತಾಗುತ್ತಿದ್ದಂತೆ ದರ್ಶನ್ ಮೈಸೂರಿನ ಫಾರ್ಮ್ ಹೌಸ್‌ಗೆ ಹೋಗಿದ್ದರು. ಅಲ್ಲಿ ದರ್ಶನ್ ಅವರನ್ನು ಕೊಲೆ ಪ್ರಕರಣದ ಆರೋಪದಲ್ಲಿ ಬಂಧಿಸಲಾಗಿದೆ.

ಪವಿತ್ರಾ ಗೌಡ ಅಶ್ಲೀಲ ಮೆಸೇಜ್ ಹಾಗೂ ಪೋಸ್ಟ್ ಮಾಡಿದ್ದರಿಂದ ರೇಣುಕಾಸ್ವಾಮಿಯರವನ್ನು ಕರೆಸಿ ತಳಿಸಿದ್ದರು. ರೇಣುಕಾಸ್ವಾಮಿ ಅವರನ್ನು ದರ್ಶನ್ ಹಾಗೂ ಪವಿತ್ರಾ ಗೌಡ ಎದುರೇ ಹಲ್ಲೆ ಮಾಡಲಾಗಿತ್ತು ಎಂಬ ಆರೋಪ ಕೇಳಿಬರುತ್ತಿದೆ.

More from Filmibeat

English summary
Darshan has arrested for the charges of killing Renuka Swamy
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X