ದರ್ಶನ್ ಅಪಘಾತದಿಂದ ನಿರಾಸೆಯಾಗಿದ್ದ ಫ್ಯಾನ್ಸ್ ಗೆ ಇಲ್ಲೊಂದು ಸಿಹಿ ಸುದ್ದಿ.!
Recommended Video

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಚಲಿಸುತ್ತಿದ್ದ ಆಡಿ ಕಾರು ಮೈಸೂರಿನ ಹಿನಕಲ್ ಬಳಿ ಅಪಘಾತವಾಗಿತ್ತು. ಈ ಆಕ್ಸಿಡೆಂಟ್ ನಲ್ಲಿ ದರ್ಶನ್ ಅವರ ಬಲಗೈಗೆ ಪೆಟ್ಟಾಗಿ, ಶಸ್ತ್ರ ಚಿಕಿತ್ಸೆ ಕೂಡ ಮಾಡಲಾಗಿತ್ತು.
ಶಸ್ತ್ರ ಚಿಕಿತ್ಸೆ ವೇಳೆ ಬಲಗೈಗೆ ಪ್ಲೇಟ್ ಹಾಕಲಾಗಿದ್ದು, ಕೆಲವು ದಿನಗಳ ಕಾಲ ವಿಶ್ರಾಂತಿ ಪಡೆಯಬೇಕೆಂದು ವೈದ್ಯರು ಸೂಚಿಸಿದ್ದಾರೆ. ಈ ಮಧ್ಯೆ ಗ್ರಾವೆಲ್ ಫೆಸ್ಟ್ 2018 ಕಾರ್ ರೇಸ್ ನಲ್ಲಿ ಭಾಗವಹಿಸಲು ದರ್ಶನ್ ಲೈಸನ್ಸ್ ಪಡೆದುಕೊಂಡಿರುವುದು ಕುತೂಹಲ ಮೂಡಿಸಿದೆ.
ದಸರಾ ಮಹೋತ್ಸವ ಅಂಗವಾಗಿ ಲಲಿತ್ ಮಹಲ್ ನ ಹೆಲಿಪ್ಯಾಡ್ ಮೈದಾನದಲ್ಲಿ ಅಕ್ಟೋಬರ್ 6 ಮತ್ತು 7ರಂದು ಕಾರ್ ರೇಸ್ ನಡೆಯಲಿದೆ. ಈ ರೇಸ್ ನಲ್ಲಿ ದರ್ಶನ್ ಭಾಗಿಯಾಗುವುದಕ್ಕಾಗಿ ತಯಾರಿ ಮಾಡಿಕೊಂಡಿದ್ದರು. ಈ ಮಧ್ಯೆ ಅಪಘಾತವಾಗಿತ್ತು.

ದರ್ಶನ್ ಅವರ ಕಾರ್ ರೇಸ್ ಲೈಸನ್ಸ್ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕಾರು ಅಪಘಾತದ ನಂತರ ದರ್ಶನ್ ಚಿಕಿತ್ಸೆ ನೀಡಿದ್ದ ವೈದ್ಯರು ಒಂದು ತಿಂಗಳು ವಿಶ್ರಾಂತಿಗೆ ಹೇಳಿದ್ದಾರೆ. ಈ ನಡುವೆ ಲೈಸನ್ಸ್ ಪಡೆದಿರುವುದು ಅಭಿಮಾನಿಗಳ ಥ್ರಿಲ್ ಹೆಚ್ಚಿಸಿದೆ.

ಬಲಗೈಗೆ ಪೆಟ್ಟಾಗಿರಯವ ದರ್ಶನ್ ಈ ಕಾರ್ ರೇಸ್ ನಲ್ಲಿ ಭಾಗವಹಿಸ್ತಾರಾ ಸದ್ಯಕ್ಕೆ ಗೊತ್ತಿಲ್ಲ. ಭಾಗಿಯಾದ್ರೆ ಡಿ ಬಾಸ್ ಅಭಿಮಾನಿಗಳಿಗೆ ದಸರಾ ಕಳೆ ಹೆಚ್ಚಾಗುತ್ತೆ. ಬರಿ ಡಿಎಲ್ ಪಡೆದು ಸುಮ್ಮನಾದರೇ ಸ್ವಲ್ಪ ನಿರಾಸೆಯಾಗುತ್ತೆ. ಏನಕ್ಕೂ ಕಾದುನೋಡೋಣ.


Click it and Unblock the Notifications











