Devil: "ದರ್ಶನ್ ಕುಗ್ಗಿಲ್ಲ.. ತುಂಬಾನೇ ಕಾನ್ಫಿಡೆಂಟ್ ಆಗಿದ್ದ"; ದಿನಕರ್ ತೂಗುದೀಪ
ಇಂದು ರಾಜ್ಯಾದ್ಯಂತ ದರ್ಶನ್ ತೂಗುದೀಪ ನಟನೆಯ 'ಡೆವಿಲ್' ಸಿನಿಮಾ ರಿಲೀಸ್ ಆಗಿದೆ. ಅದ್ಧೂರಿಯಾಗಿ ಬಿಡುಗಡೆಯಾಗಿರುವ ಈ ಸಿನಿಮಾ ನೋಡುವುದಕ್ಕೆ ಪ್ರೇಕ್ಷಕರು ಕೂಡ ತುದಿಗಾಲಲ್ಲಿ ನಿಂತಿದ್ದರು. ಫಸ್ಟ್ ಡೇ ಫಸ್ಟ್ ಶೋ ಸಿನಿಮಾ ನೋಡಿ ಅವರ ಅಭಿಮಾನಿಗಳು ಕಣ್ತುಂಬಿಕೊಂಡಿದ್ದಾರೆ. ಇನ್ನು ದರ್ಶನ್ ಪತ್ನಿ ವಿಜಯಲಕ್ಷ್ಮಿ ಹಾಗೂ ಸಹೋದರ ದಿನಕರ್ ತೂಗುದೀಪ ಅಭಿಮಾನಿಗಳ ಜೊತೆ ಕೂತು ಸಿನಿಮಾ ನೋಡಿದ್ದಾರೆ.
ದರ್ಶನ್ ಜೈಲು ಸೇರಿದ ದಿನದಿಂದ ಬಿಡುಗಡೆಯಾಗುತ್ತಿರುವ ಮೊದಲ ಸಿನಿಮಾವಿದು. ಹೀಗಾಗಿ 'ಡೆವಿಲ್' ಭವಿಷ್ಯದ ಬಗ್ಗೆ ಈಗಾಗಲೇ ಲೆಕ್ಕಾಚಾರಗಳು ಶುರುವಾಗಿವೆ. ರೇಣುಕಾಸ್ವಾಮಿ ಪ್ರಕರಣದ ಬಳಿಕ ದರ್ಶನ್ ವೃತ್ತಿ ಬದುಕಿನ ಭವಿಷ್ಯದ ಸುಳಿವನ್ನು ಈ ಸಿನಿಮಾ ಕೊಡಬಹುದೆಂದು ಕಾದು ಕೂತಿದ್ದಾರೆ. 'ಡೆವಿಲ್' ರಿಲೀಸ್ ಆದ ಸಂಭ್ರಮದಲ್ಲಿ ಅವರ ಅಭಿಮಾನಿಗಳು ಇದ್ದರೆ, ಇನ್ನೊಂದು ಕಡೆ ದಿನಕರ್ ಅವರ ಖುಷಿಯಲ್ಲಿ ಭಾಗಿಯಾಗಿದ್ದರು.

ಇದೇ ವೇಳೆ ಜೈಲಿನಲ್ಲಿ ದರ್ಶನ್ ಕುಗ್ಗಿ ಹೋಗಿದ್ದಾರೆ. 'ಡೆವಿಲ್' ಸಿನಿಮಾ ಬಗ್ಗೆ ಅವರಿಗೆ ಆತಂಕ ಶುರುವಾಗಿದೆ ಎಂಬ ಸುದ್ದಿಗಳು ಕೂಡ ಹರಿದಾಡಿದ್ದವು. ಈ ಬಗ್ಗೆ ಸಿನಿಮಾ ನೋಡುವುದಕ್ಕೆ ಬಂದಿದ್ದ ದಿನಕರ್ ತೂಗುದೀಪ ಈ ಎಲ್ಲಾ ವಿಷಯಗಳ ಬಗ್ಗೆನೂ ಕ್ಲಾರಿಟಿ ಕೊಟ್ಟಿದ್ದಾರೆ. ದರ್ಶನ್ ಕುಗ್ಗಿಲ್ಲ. ಎರಡು ವಾರಗಳ ಹಿಂದಷ್ಟೇ ಭೇಟಿ ಮಾಡಿದ್ದು, ಇದೆಲ್ಲ ಮಾಧ್ಯಮಗಳ ಸೃಷ್ಟಿಯಷ್ಟೇ ಎಂದು ದಿನಕರ್ ಹೇಳಿದ್ದಾರೆ.
ಫಸ್ಟ್ ಡೈಮ್ ಆದಾಗ ಭಯವಿತ್ತು
ದರ್ಶನ್ ಜೈಲು ಸೇರಿದ ವೇಳೆಯೇ 'ಡೆವಿಲ್' ಸಿನಿಮಾ ರಿಲೀಸ್ ಆಗಿದೆ. ಹೀಗಾಗಿ ಆತಂಕ ಆಗುತ್ತಿದೆಯೇ? ಎಂದು ಮಾಧ್ಯಮಗಳು ಪ್ರಶ್ನೆ ಮಾಡಿದ್ದವು. ಅದಕ್ಕೆ ದಿನಕರ್ ಕೊಟ್ಟ ಉತ್ತರ ಹೀಗಿದೆ. "ಫಸ್ಟ್ ಟೈಮ್ ಹಾಗೆ ಆದಾಗ ಏನಾಗುತ್ತೋ ಅಂತ ತುಂಬಾ ಭಯವಿರುತ್ತೆ. ಆ ವೇಳೆ ದರ್ಶನ್ ಸೆಲೆಬ್ರೆಟಿಗಳು ನಿಮ್ಮ ಜೊತೆ ನಾವಿದ್ದೀವಿ ಅಂತ ಪ್ರೂವ್ ಮಾಡಿಬಿಟ್ಟರು. ಈಗ ಅಷ್ಟೇನು ಭಯ ಆಗುವುದಿಲ್ಲ. ರೂಢಿಯಾಗಿ ಹೋಗಿದೆ." ಎಂದು ದಿನಕರ್ ತೂಗುದೀಪ್ ಹೇಳಿದ್ದಾರೆ.
"ಡಬಲ್ ರೋಲ್‌ನಲ್ಲಿ ಎಂಜಾಯ್ ಮಾಡ್ತಿದ್ದಾರೆ"
ಇನ್ನು 'ಡೆವಿಲ್' ಸಿನಿಮಾದಲ್ಲಿ ದರ್ಶನ್ ಡಬಲ್ ರೋಲ್‌ನಲ್ಲಿ ನಟಿಸಿದ್ದಾರೆ. ಇದನ್ನು ನೋಡಿ ಫ್ಯಾನ್ಸ್ ಏನಂದ್ರು? ಅನ್ನೋದನ್ನು ರಿವೀಲ್ ಮಾಡಿದ್ದಾರೆ. ಡೆವಿಲ್ ಹಾಗೂ ಧನುಷ್ ಎರಡೂ ಕ್ಯಾರೆಕ್ಟರ್‌ನಲ್ಲಿ ಯಾವುದು ಹೆಚ್ಚು ಎಂಜಾಯ್ ಮಾಡಿತ್ತಾರೆಂದು ಮಾಧ್ಯಮದವರು ಪ್ರಶ್ನೆ ಮಾಡಿದ್ದರು. ಆಗ ದಿನಕರ್ ಒಬ್ಬ ನಿರ್ದೇಶಕನ ಆಂಗಲ್‌ನಲ್ಲಿಯೇ ಉತ್ತರ ಕೊಟ್ಟಿದ್ದಾರೆ. "ನನಗೆ ಬಂದಿರೊ ಮಾಹಿತಿ ಪ್ರಕಾರ, ಎರಡೂ ಪಾತ್ರವನ್ನು ಬೇರೆ ಬೇರೆ ದರ್ಶನ್ ಮಾಡಿದ್ದಾರೆ ಅಂತ ಅನಿಸುತ್ತಿದೆ. ಒಬ್ಬರೇ ದರ್ಶನ್ ಎರಡೂ ಪಾತ್ರವನ್ನೂ ಮಾಡಿಲ್ಲ ಅಂತ ಅನಿಸುತ್ತಿಲ್ಲವೆಂದು ಹೇಳುತ್ತಿದ್ದಾರೆ" ಎಂದು ದಿನಕರ್ ಹೇಳಿದ್ದಾರೆ.
"ಸೆಲೆಬ್ರೆಟಿಗಳೇ ನಿಂತಿದ್ದಾರೆ"
"ಸಾರಥಿಯಲ್ಲಿ ನಾವೇ ನಿಂತಿದ್ವಿ ಪ್ರವೋಷನ್ ಮಾಡುವುದಕ್ಕೆ. ಸಿನಿಮಾ ರಿಲೀಸ್ ಆದ್ಮೇಲೆ ಫ್ಯಾನ್ಸ್ ಅದನ್ನು ಮುಂದಕ್ಕೆ ತೆಗೆದುಕೊಂಡು ಹೋದರು. ಈ ಸಿನಿಮಾದಲ್ಲಿ ಮೊದಲಿನಿಂದಲೂ ಅವರೇ ಕ್ಯಾರಿ ಮಾಡಿಕೊಂಡು ಹೋಗುತ್ತಿದ್ದಾರೆ. ದರ್ಶನ್ ಬೇಕಾಗಿಲ್ಲ. ಸಿನಿಮಾದ ನಿರ್ದೇಶಕರೂ ಬೇಕಾಗಿಲ್ಲ. ಸಿನಿಮಾದ ಹೀರೋಯಿನ್ ಕೂಡ ಬೇಕಾಗಿಲ್ಲ. ಟೆಕ್ನಿಷಿಯನ್ ಬೇಕಾಗಿಲ್ಲ. ಸೆಲೆಬ್ರೆಟಿಸ್ ಅಂದನ್ನು ಕ್ಯಾರಿ ಮಾಡುತ್ತಾರೆ. ಅವರು ಹೇಳಿದ್ದಾರೆ. ನಾವಿದ್ದೀವಿ. ಸಿನಿಮಾವನ್ನು ನಾವು ತೆಗೆದುಕೊಂಡು ಹೋಗುತ್ತೇವೆ ಎಂದಿದ್ದಾರೆ" ಎಂದು ದಿನಕರ್ ತೂಗುದೀಪ ಹೇಳಿದ್ದಾರೆ.
"ದರ್ಶನ್ ಕುಗ್ಗಿ ಹೋಗಿಲ್ಲ"
"ಎರಡು ವಾರದ ಹಿಂದೆ ನಾನು ಭೇಟಿ ಮಾಡಿದ್ದೆ. ಆಗ ಅವನು ತುಂಬಾನೇ ಕಾನ್ಫಿಡೆಂಟ್ ಆಗಿದ್ದ. ಇಲ್ಲ ಬಿಡು ನನ್ನ ಸೆಲೆಬ್ರೆಟಿಸ್ ಇದ್ದಾರೆ ಅವರು ನೋಡಿಕೊಳ್ಳುತ್ತಾರೆ ಅಂದಿದ್ದ. ಆ ಕಾನ್ಫಿಡೆನ್ಸ್‌ನಲ್ಲಿ ಇದ್ದಾರೆ. ಅವನು ಕುಗ್ಗಿ ಹೋಗಿಲ್ಲ. ಸುಮ್ಮನೆ ಯಾವುದೋ ಮೀಡಿಯಾದಲ್ಲಿ ಬರುತ್ತಿದೆಯೋ ಗೊತ್ತಿಲ್ಲ. ಅವನು ತುಂಬಾ ಆತ್ಮವಿಶ್ವಾಸ ಇರುವ ವ್ಯಕ್ತಿ. ಏನಕ್ಕೆ ಅಂದರೆ, ಅವನ ಹಿಂದೆ ಸೆಲೆಬ್ರೆಟಿಗಳು ಇದ್ದಾರೆ." ಎಂದಿದ್ದಾರೆ.
"ದರ್ಶನ್‌ಗೆ ನೆಗೆಟಿವ್ ಪಾತ್ರ ಇಷ್ಟ"
"ಒಬ್ಬ ನಟನಿಗೆ ಸಾಮಾನ್ಯವಾಗಿ ಪಾಸಿಟಿವ್ ಪಾತ್ರದಲ್ಲಿ ವೇರಿಯೇಷನ್ ತೋರಿಸುವುದಕ್ಕೆ ಆಗುವುದಿಲ್ಲ. ನೆಗೆಟಿವ್ ಪಾತ್ರಗಳಲ್ಲಿಯೇ ತೋರಿಸುವುದಕ್ಕೆ ಇಷ್ಟ. ದರ್ಶನ್‌ಗೆ ನೆಗೆಟಿವ್ ಕ್ಯಾರೆಕ್ಟರ್ ಅನ್ನು ಪ್ಲೇ ಮಾಡಬೇಕು ಅನ್ನೋದೇ ಇಷ್ಟ. ನವಗ್ರಹ ಸಿನಿಮಾ ಮಾಡಿದಾಗಲೂ ಅಷ್ಟೇ ಜಗ್ಗು ಪಾತ್ರಕ್ಕೆ ದರ್ಶನ್ ಪ್ಲ್ಯಾನ್ ಮಾಡಿರಲಿಲ್ಲ. ಪೊಲೀಸ್ ಆಫೀಸರ್ ಪಾತ್ರ ಅಂದುಕೊಂಡಿದ್ದೆ. ವಿನೋದ್ ಪ್ರಭಾಕರ್ ಅನ್ನು ಜಗ್ಗು ಕ್ಯಾರೆಕ್ಟರ್ ಅಂದುಕೊಂಡಿದ್ದು. ಕಥೆ ಕೇಳಿದ ಬಳಿಕ ವಿನೋದ್ ಪ್ರಭಾಕರ್‌ಗೆ ಭಯ ಆಯ್ತು. ಆಗ ಅಲ್ಲೇ ಕೂತಿದ್ದ ದರ್ಶನ್ ನಾನು ಮಾಡುತ್ತೇನೆ ಎಂದು ಹೇಳಿದ್ರು. ಹಾಗೇ ನವಗ್ರಹ ಶುರುವಾಗಿದ್ದು." ಎಂದು ದಿನಕರ್ ಹೇಳಿದ್ದಾರೆ.


Click it and Unblock the Notifications











